Thursday 2nd, May 2024
canara news

ಸಿಮಂತೂರು ಚಂದ್ರಹಾಸ ಸುವರ್ಣ ಅವರ ಮಣ್ಣ್‍ದ ಮದಿಪು ಕಾದಂಬರಿಗೆ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ

Published On : 29 Jul 2018   |  Reported By : Rons Bantwal


 ಉಡುಪಿ: ತುಳುಕೂಟ ಉಡುಪಿ (ರಿ.) ಸಂಸ್ಥೆಯ ವತಿಯಿಂದ ನೀಡಲಾಗುವ ಈ ವರ್ಷದ (2017-18ನೇ ಸಾಲಿನ) ಪ್ರತಿಷ್ಠಿತ ಎಸ್.ಯು.ಪಣಿಯಾಡಿ ನೆನಪಿನ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಮುಂಬಯಿಯ ಕನ್ನಡ, ತುಳು ಸಾಹಿತಿ ಸಿಮಂತೂರು ಚಂದ್ರಹಾಸ ಸುವರ್ಣ ಅವರ ಮಣ್ಣ್‍ದ ಮದಿಪು ಕಾದಂಬರಿ ಆಯ್ಕೆಯಾಗಿದೆ. ಚಂದ್ರಹಾಸ ಸುವರ್ಣ ಅವರು ಓರಿಯಂಟಲ್ ಇನ್ಸೂರೆನ್ಸ್ ಕಂಪೆನಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿರುವ ಇವರು ಮುಂಬಯಿಯ ಖ್ಯಾತ ನಾಟಕಕಾರರಾಗಿ,ನಿರ್ದೇಶಕರಾಗಿ,ಸಾಹಿತಿಯಾಗಿ ಗುರುತಿಸಿಕೊಂಡು ತನ್ನ ಅಧ್ವಿತೀಯ ಸಾಧನೆಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

 

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಉಡುಪಿ ತುಳುಕೂಟ ತುಳು ಕಥಾ ಪ್ರಶಸ್ತಿ, ಮುಂಬಯಿ ಅಕ್ಷಯ ಮಾಸಪತ್ರಿಕೆ ಸಾಹಿತ್ಯ ಪ್ರಶಸ್ತಿ, ಬೆಹರಿನ್ ಕಾಂಚನ ಫೌಂಡೇಶನ್ ಪ್ರಶಸ್ತಿ ಪಡೆದಿರುವ ಸುವರ್ಣರು ಮುಂಬಯಿ ಪೊವಾಯಿ ಕನ್ನಡ ಸೇವಾ ಸಂಘದ ಕನ್ನಡ ಜ್ಯೋತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುವರ್ಣರ ಕೊರಲ್ ಮತ್ತು ಗಾಲ ಕೃತಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಗೌರವ ಪ್ರಶಸ್ತಿಯೂ ಲಭಿಸಿದೆ. ಸುರತ್ಕಲ್ ಗೋವಿಂದಾಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ ಬೆಂಗಳೂರಿನ ಕರ್ನಾಟಕ ಹೊಮಿಯೋಫಥಿ ಕಾಲೇಜಿನಲ್ಲಿ ವೈದ್ಯ ಪದವಿಯನ್ನು ಪಡೆದಿರುತ್ತಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಶಿಮಂತೂರು ಗ್ರಾಮದ ಚಂದ್ರಹಾಸ ಸುವರ್ಣ ಅವರು ಉದ್ಯೋಗ ನಿಮಿತ್ತ ಮುಂಬಯಿಯಲ್ಲಿ ನೆಲೆಸಿ, ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ಮುಂಬಯಿ ವ್ಯಾಮೋಹದ ನಡುವೆಯೂ ಸಿಮಂತೂರು ಚಂದ್ರಹಾಸ ಸುವರ್ಣ ಅವರ ಮಣ್ಣ್‍ದ ಮದಿಪು ಕಾದಂಬರಿ ತುಳುಮಣ್ಣಿನ ಅಪ್ಪಟ ತುಳು ಸೊಗಡಿನ ನವಿರಾದ ಕಥೆಯನ್ನೊಳಗೊಂಡ ಅಪರೂಪದ ಕಾದಂಬರಿಯಾಗಿ ಹಸ್ತಪ್ರತಿಯಲ್ಲಿ ಮೂಡಿಬಂದಿದೆ. ಪ್ರತಿಷ್ಠಿತ ಪಣಿಯಾಡಿ ಕಾದಂಬರಿ ಸ್ಪರ್ಧೆಯು ತುಳುಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯದೊಂದಿಗೆ ತುಳು ಚಳವಳಿಗೆ ಚಾಲನೆ ನೀಡಿದ ಹಾಗೂ ತುಳುವಿನ ಮೊತ್ತ ಮೊದಲ ಕಾದಂಬರಿಕಾರ ದಿ.ಎಸ್.ಯು.ಪಣಿಯಾಡಿ ಅವರನ್ನು ಸದಾ ನೆನವರಿಕೆ ಮಾಡುವ ನಿಟ್ಟಿನಲ್ಲಿ ಕಳೆದ 23ವರ್ಷಗಳಿಂದ ತುಳುಕೂಟ ಉಡುಪಿ ಈ ಪ್ರಶಸ್ತಿಯನ್ನು ಕೊಡಮಾಡುತ್ತಿದೆ. ಪ್ರಶಸ್ತಿಯು 8ಸಾವಿರ ರೂ. ನಗದು ಸಮೇತ ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ.

ಆಗಸ್ಟ್ 15ರಂದು ಉಡುಪಿಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಣ್ಣ್‍ದ ಮದಿಪು ಕಾದಂಬರಿ ಬಿಡುಗಡೆಯೊಂದಿಗೆ ಪಣಿಯಾಡಿ ಪ್ರಶಸ್ತಿಯನ್ನು ವಿತರಣೆ ಮಾಡಲಾಗುವುದು. ಕಾದಂಬರಿ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ. ನಿಕೇತನ, ಉಡುಪಿ ಮಹೇಶ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಗೀತಾ ಕುಮಾರಿ, ಸಾಹಿತಿ, ನಾಟಕಕಾರ ಗಂಗಾಧರ್ ಕಿದಿಯೂರು ಸಹಕರಿಸಿದ್ದರು ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕ ಪ್ರಕಾಶ ಸುವರ್ಣ ಕಟಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here