Thursday 2nd, May 2024
canara news

ವಿಶ್ವ ತುಳು ಸಮ್ಮೇಳನ-ದುಬಾಯಿ ಅಧಿಕೃತ ಲಾಂಛನ ಲೋಕಾರ್ಪಣೆ

Published On : 29 Jul 2018   |  Reported By : Rons Bantwal


ದುಬಾಯಿ ಸಭೆಯಲ್ಲಿ ಸ್ಮರಣ ಸಂಚಿಕೆಗೆ `ವಿಶ್ವ ತುಳು ಐಸಿರಿ' ಹೆಸರು ಆಯ್ಕೆ

ಮುಂಬಯಿ, ಜು.29: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ "ವಿಶ್ವ ತುಳು ಸಮ್ಮೇಳನ ದುಬಾಯಿ" 2018 ನವೆಂಬರ್23ನೇ ತಾರೀಕು ಶುಕ್ರವಾರ ಮತ್ತು24ನೇ ಶನಿವಾರ ದುಬಾಯಿಯಅಲ್ ನಾಸರ್ ಲೀಸರ್ ಲ್ಯಾಂಡ್‍ಐಸ್‍ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಆ ನಿಮಿತ್ತ ವಿಶ್ವ ತುಳು ಸಮ್ಮೇಳನದ ಸಲಹಾ ಸಮಿತಿಯ ಸರ್ವ ಸದಸ್ಯರ ಸಭೆ ಕಳೆದ ಶುಕ್ರವಾರ ಪೂರ್ವಾಹ್ನ ದುಬಾಯಿ ಮಾರ್ಕೊಪೆÇೀಲ್ ಹೋಟೆಲ್ ಸಭಾಂಗಣದಲ್ಲಿ ಸಾಗರೋತ್ತರ ತುಳುವರ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸರ್ವೋತ್ತಮ ಶೆಟ್ಟಿ ಮಾತನಾಡಿ ವಿಶ್ವ ತುಳು ಸಮ್ಮೇಳನ ದುಬಾಯಿ-2018ರ ವಿವರಗಳನ್ನು ಸಂಕ್ಷಿಪ್ತವಾಗಿ ವಿವರಿಸಿ, ಸಮ್ಮೇಳನದ ಪೂರ್ವತಯಾರಿಗೆ ಸೂಕ್ತ ಮಾರ್ಗದರ್ಶ ನೀಡಿದರು. ಸರ್ವ ಸದಸ್ಯರು ಪೂರ್ಣ ಸಹಕಾರ ನೀಡಿ ಅತ್ಯಂತ ಜವಬ್ಧಾರಿಯುತವಾಗಿ ಕಾರ್ಯ ನಿರ್ವಹಿಸಿ, ಸಮ್ಮೇಳನ ಯಶಸ್ವಿ ಗೊಳಿಸುವಂತೆ ವಿನಂತಿಸಿ ಕೊಂಡರು.

ಸಭೆಯಲ್ಲಿ ಸಲಹ ಸಮಿತಿ ಸದ್ಯರುಗಳಾದ ಬಿ.ಕೆ ಗಣೇಶ್‍ರೈ, ಶೋಧನ್ ಪ್ರಸಾದ್, ದೇವ್‍ಕುಮಾರ್ ಕಾಂಬ್ಲಿ, ಅಜ್ಮಲ್, ಸತೀಶ್ ಪೂಜಾರಿ, ಯೋಗೇಶ್ ಪ್ರಭು, ನೋವೆಲ್ ಡಿ'ಅಲ್ಮೇಡಾ, ಜ್ಯೋತಿಕಾ ಹರ್ಷ ಶೆಟ್ಟಿ, ಸ್ಮಿತಾ ಪ್ರಸನ್ನ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಲಹಾ ಸಮಿತಿಯ ಸದಸ್ಯ ಶೋಧನ್ ಪ್ರಸಾದ್ ಸ್ವಾಗತಿಸಿದರು. "ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ" ಪ್ರಾರ್ಥನೆಯೊಂದಿಗೆ ಸಭೆಗೆ ಚಾಲನೆ ನೀಡಲಾಯಿತು.

ಯು.ಎ.ಇ ಎಕ್ಸೇಂಜ್ ಗ್ಲೋಬಲ್ ಅಪರೇಶನ್ಸ್ ಅಧ್ಯಕ್ಷ ಸುಧೀರ್‍ಕುಮಾರ ಶೆಟ್ಟಿ "ವಿಶ್ವ ತುಳು ಸಮ್ಮೇಳನ ದುಬಾಯಿ2018" ಅಧಿಕೃತ ಲಾಂಛನ ಲೋಕಾರ್ಪಣೆ ಮಾಡಿ ಸಮ್ಮೇಳನದ ಪೂರ್ವತಯಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯಶಸ್ಸಿಗೆ ಶುಭವನ್ನು ಹಾರೈಸಿದರು.

ಈ ಲಾಂಛನವನ್ನು ತುಳುನಾಡಿನ ಮತ್ತು ಗಲ್ಫ್ ನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ಸಂಯೋಜಿಸಿ ಪರಿಕಲ್ಪನೆಯಲ್ಲಿ ವಿನ್ಯಾಸಗೊಳಿಸಿರುವ ಕ್ರಿಯಾತ್ಮಕ ಕಲಾ ನಿರ್ದೇಶಕ ಬಿ. ಕೆ ಗಣೇಶ್‍ರೈ ಲಾಂಚನದ ಬಗ್ಗೆ ಅತೀ ಸೂಕ್ಷ ್ಮವಾಗಿ ವಿವರಿಸಿದರು.

ಸ್ಮರಣ ಸಂಚಿಕೆಗೆ ಹೆಸರು ಸೂಚಿಸುವ ಸ್ಪರ್ಧೆಯಲ್ಲಿ "ವಿಶ್ವ ತುಳು ಐಸಿರಿ" ಆಯ್ಕೆ

ಅರಬ್ ಸಂಯುಕ್ತ ಸಂಸ್ಥಾದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ "ವಿಶ್ವ ತುಳು ಸಮ್ಮೇಳನ ದುಬಾಯಿ - 2018" ಸಮ್ಮೇಳನದ ಸವಿ ನೆನಪಿಗಾಗಿ ಲೋಕಾರ್ಪಣೆ ಗೊಳ್ಳಲಿರುವ ಸ್ಮರಣ ಸಂಚಿಕೆಗೆ ಹೆಸರು ಸೂಚಿಸಿ ಪ್ರಕಟಣೆ ನೀಡಿ ಆಹ್ವಾನಿಸಲಾಗಿದ್ದು ಈ ವರೆಗೆ 166 ಹೆಸರುಗಳು 22 ಮಂದಿ ತುಳು ಅಭಿಮಾನಿಗಳಿಂದ ಹೆಸರುಗಳನ್ನು ಸ್ವೀಕರಿಸಲಾಗಿತ್ತು.

ಹಿರಿಯ ಸಾಹಿತಿಗಳು ತುಳು ಜ್ಞಾನ ಭಂಡಾರ ಡಾ|ಬಿ.ಎ ವಿವೇಕ್ ರೈ ಮತ್ತು ಮುಂಬಯಿಯಲ್ಲಿ ನೆಲೆಸಿರುವ ಡಾ| ಸುನಿತಾ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಬಿ. ಕೆ ಗಣೇಶ್ ರೈ ಸೂಚಿಸಿದ್ದ ಹೆಸರು "ವಿಶ್ವ ತುಳು ಐಸಿರಿ" ಹೆಸರನ್ನು ಆಯ್ಕೆ ಮಾಡಲಾಯಿತು. ಶೋಧನ್ ಪ್ರಸಾದ್ ಸಮ್ಮೇಳನದ ಸಂದರ್ಭದಲ್ಲಿ ವಿವಿಧ ಹಂತದ ಕಾರ್ಯಯೋಜನೆಯನ್ನು ಆಕರ್ಷಕ ವೈವಿಧ್ಯಮಯ ಚಿತ್ರದೊಂದಿಗೆ ಡಿಜಿಟಲ್‍ಡಿಸ್ ಪ್ಲೆಯೊಂದಿಗೆ ವಿವರಿಸಿದರು. ಅಶೋಕ್ ಬೆಳ್ಮಣ್ ಅವರ ಛಾಯಚಿತ್ರ ಕೃಪೆಯೊಂದಿಗೆ ಬಿ.ಕೆ ಗಣೇಶ್ ರೈ (ಯು.ಎ.ಇ) ಪತ್ರಿಕಾ ಪ್ರಕಟನೆ ನೀಡಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here