Wednesday 1st, May 2024
canara news

ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ ವಾರ್ಷಿಕ ಪ್ರಶಸ್ತಿ ಪ್ರದಾನ

Published On : 23 Sep 2018   |  Reported By : Rons Bantwal


ವ್ಯವಹಾರದ ಲಾಭಾಂಶ ಸಮಾಜದೊಂದಿಗೆ ಹಂಚಿಕೊಳ್ಳಿರಿ : ಬಿಷಪ್ ಆಲ್ವಿನ್ ಡಿ'ಸಿಲ್ವಾ

(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)

ಮುಂಬಯಿ,ಸೆ.22: ವ್ಯಾಪರಸ್ಥರು ವಿಶ್ವಸ್ಥರಾಗಿ ಉದ್ಯಮದಲ್ಲಿ ತೊಡಗಿಸಿ ಕೊಂಡಾಗ ಅವರ ವ್ಯವಹಾರದಲ್ಲಿ ತನ್ನೀತಾನೇ ಅಭಿವೃದ್ಧಿ ಆಗುವುದು. ಪೆÇೀಪ್ ಫ್ರಾನ್ಸಿಸ್ ಅವರೂ ಈ ಬಗ್ಗೆ ವಿಶ್ವಸನೀಯ ಸಂದೇಶ ನೀಡಿದ್ದಾರೆ. ವ್ಯಾಪಾರ ವ್ಯವಹಾರದ ಲಾಭಾಂಶವನ್ನು ಸಮಾಜ ಮತ್ತು ಬಲ್ಲಿದ ಜನತೆಯೊಂದಿಗೆ ಹಂಚಿಕೊಂಡಾಗ ಅದು ಪುಣ್ಯಾಧಿ ವರವಾಗಿ ಪರಿಣಮಿಸುವುದು. ಆವಾಗಲೇ ನಿಮ್ಮ ವ್ಯವಹಾರ ನಿಮ್ಮ ಪರಿವಾರದ ನೆಮ್ಮದಿಯೊಂದಿಗೆ ಸಮಗ್ರ ಸಮಾಜದ ಒಳಿತಿಗೂ ಪೂರಕವಾಗುವುದು. ಪ್ರಾಮಾಣಿಕ ಮತ್ತು ನಿಷ್ಠಾವಂತರಾಗಿ ವ್ಯಾಪಾರ ವ್ಯವಹಾರದಲ್ಲಿ ಮಗ್ನರಾಗಿ ಸಮೃದ್ಧಿಯನ್ನು ಸಾಧಿಸಿ ನೆಮ್ಮದಿಯಿಂದ ಬಾಳಿರಿ ಎಂದು ಜಸ್ಟೀಸ್ ಎಂಡ್ ಪೀಸ್ ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಫೆಡರೇಶನ್ ಆಫ್ ಏಷಿಯಾ ಬಿಷಪ್'ಸ್ ಕಾನ್ಫರೇನ್ಸ್ (ಎಫ್‍ಎಬಿಸಿ) ಕ್ಲೈಮೇಟ್ ಚೇಂಜ್ ಡೆಸ್ಕ್‍ನ ಕಾರ್ಯದರ್ಶಿ, ಮುಂಬಯಿ ಧರ್ಮಪ್ರಾಂತ್ಯದ ಸಹಾಯಕ ಬಿಷಪ್ ಆಲ್ವಿನ್ ಡಿ'ಸಿಲ್ವಾ ತಿಳಿಸಿದರು.

ಇಂದಿಲ್ಲಿ ಶನಿವಾರ ಅಂಧೇರಿ ಪೂರ್ವದ ಹೊಟೇಲ್ ಕೊಹಿನೂರು ಕಾಂಟಿನೆಂಟಲ್‍ನ ಸಭಾಗೃಹದಲ್ಲಿ ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ (ಸಿಸಿಸಿಐ) ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಅಧ್ಯಕ್ಷತೆಯಲ್ಲಿ ಜರಗಿದÀ 13ನೇ ವಾರ್ಷಿಕ ಸಿಸಿಸಿಐ ಪ್ರಶಸಿ-2018 ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಬಿಷಪ್ ಡಿ'ಸಿಲ್ವಾ ಮಾತನಾಡಿದರು.

ಡಾ| ಬಾತ್ರಾ'ಸ್ ಹೊಮಿಯೋಪತಿ ಸ್ಥಾಪಕ ಕಾರ್ಯಾಧ್ಯಕ್ಷ ಡಾ| ಮುಖೇಶ್ ಬಾತ್ರಾ ಮುಖ್ಯ ಅತಿಥಿüಯಾಗಿದ್ದು ಸಿಸಿಸಿಐ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ, ಪ್ರಶಸ್ತಿಗಳ ಪ್ರಾಯೋಜಕರಾದ ವಿನ್ಸೆಂಟ್ ಮಥಾಯಸ್, ಕ್ಲೋಟಿಲ್ಡಾ ಸಿಕ್ವೇರಾ, ಫ್ರಾನ್ಸಿಸ್ ಫೆರ್ನಾಂಡಿಸ್, ಆಲ್ಬರ್ಟ್ ಡಿ'ಸೋಜಾ ಅವರನ್ನೊಳಗೊಂಡು ಆಯ್ದ ಸಾಧಕರಿಗೆ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.

ಸಿಸಿಸಿಐನ ಇಲೆಕ್ಟ್ರೋಪೆನೆಮೆಟಿಕ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದ ಉತ್ಕೃಷ್ಟ ಸಾಧಕ ಉದ್ಯಮಿ ಪುರಸ್ಕಾರವನ್ನು ರೋಬರ್ಟ್ ಹೆನ್ರಿ ಮೆಡೋನ್ಸಾ ಅವರಿಗೆ (ಪರವಾಗಿ ಸೊಸೆ ಡಾ| ಸುಹಾನಿ ಮೆಡೋನ್ಸಾ), ವೆಲ್‍ವಿನ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದ ಸಮಾಜ ಸೇವಾ ಪುರಸ್ಕಾರವನ್ನು ಸಿ| ಮರಿಯಾ ಗೋರಟ್ಟಿ ಅವರಿಗೆ, ರಿಲಾಯಬಲ್ ಎಕ್ಸ್‍ಪೆÇೀರ್ಟ್ಸ್ ಪ್ರಾಯೋಜಕತ್ವದ ಉತ್ಕೃಷ್ಟ ಶೈಕ್ಷಣಿಕ ಸಾಧನಾ ಪುರಸ್ಕಾರವನ್ನು ಶಿಕ್ಷಕಿ ಜೆಸ್ಸಿ ವಾಸ್ ಅವರಿಗೆ, ಡೇನಿಯಲ್ ಎಂಡ್ ಸನ್ಸ್ ಪ್ರಾಯೋಜಕತ್ವದ ಸಾರ್ವಜನಿಕ ಸೇವಾ ಪುರಸ್ಕಾರವನ್ನು ಕಮಾಂಡರ್ ಸಿರಿಲ್ ಫೆರ್ನಾಂಡಿಸ್ ಅವರಿಗೆ, ಪಟಥು ಬ್ರದರ್ಸ್ ಪ್ರಾಯೋಜಕತ್ವದ ಮಹಿಳಾ ಉದ್ಯಮಿ ಸಾಧಕ ಪುರಸ್ಕಾರವನ್ನು ಕೊಲೆಟ್ ಡಿ'ಲಿಮಾ ಅವರಿಗೆ ಮತ್ತು ಆಲ್ಡೇಲ್ ಎಜ್ಯುಕೇಶನ್ ಟ್ರಸ್ಟ್ ಪ್ರಾಯೋಜಕತ್ವದ ಯುವ ಉದ್ಯಮಿ ಸಾಧಕ ಪುರಸ್ಕಾರವನ್ನು ಜೋಸೆಫ್ ಸಿಕ್ವೇರಾ ಅವರಿಗೆ ಅತಿಥಿs ಅಭ್ಯಾಗತರು ಸಾಧಕ ಪುರಸ್ಕಾರ ಪ್ರದಾನಿಸಿ ಶುಭಾರೈಸಿದರು. ಪುರಸ್ಕೃತರು ಸಂದರ್ಭೋಚಿತವಾಗಿ ಮಾತನಾಡಿ ಸಿಸಿಸಿಐಗೆ ಅಭಿವಂದಿಸಿದರು.

ಡಾ| ಮುಖೇಶ್ ಮಾತನಾಡಿ ಅನುಭವೀ ಚಿಂತನೆಯ ವ್ಯವಹಾರದಿಂದ ಉದ್ಯಮದ ಯಶಸ್ಸು ಸಾಧ್ಯ. ಸಾಧನೆ ಸಿದ್ಧಿಗೆ ಅಪಾರವಾದ ಪರಿಶ್ರಮ ಅಗತ್ಯವಾಗಿದೆ. ಆಧುನಿಕ ಯುಗಕ್ಕೆ ತಕ್ಕಂತೆ ಮಾರ್ಪಾಟು ಮಾಡಿದ ಕಲ್ಪನೆಗಳು ಉದ್ಯಮಕ್ಕೆ ಪೂರಕವಾಗಿವೆ. ಸ್ವಇಚ್ಛಿತ, ದೂರದೃಷ್ಠಿತ್ವದ ಕನಸುಗಳ ಮತ್ತು ಚಾತುರ್ಯತಾ ಮುನ್ನಡೆಯಿಂದ ಸಾಗಿದಾಗ ಸ್ವ್ವದ್ಯಮಿಗಳಾದಾಗ ಯಶಸ್ಸು ತನ್ನೀತಾನೇ ಫಲಿಸುವುದು. ಇಂದು ಸಾಹಸೋದ್ಯಮ ಕಷ್ಟಕರ ಅಣಿಸಿಬಲ್ಲದು ಆದರೆ ಮುಂದೊಂದು ದಿನ ಅತ್ಯಾಕರ್ಷಕವಾಗಿ ಸ್ನೇಹಮಯವಾಗಿ ಬದುಕನ್ನೇ ಬಂಗಾರಮಯ ಆಗಿಸಬಹುದು. ಮೊದಲಾಗಿ ಆರೋಗ್ಯದತ್ತ ಚಿತ್ತವನ್ನರಿಸಿ ಉದ್ಯಮಶೀಲತ್ವದ ಭಾಗ್ಯವನ್ನು ರೂಪಿಸಿಕೊಳ್ಳಿರಿ ಎಂದÀು ಸಲಹಿದರು.


ಸದಸ್ಯರು ಸಿಸಿಸಿಐ ಆ್ಯಪ್‍ನ್ನು ಬಳಸಿ ಕೊಳ್ಳಬೇಕು. ಇದೀಗಲೇ ಸಿಸಿಸಿಐ ಸಂಸ್ಥೆ ಅನೇಕ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿದ್ದು ಆ್ಯಪ್ ಬಳಸಿ ರಿಯಾಯತಿ ದರದ ಲಾಭ ಮತ್ತು ಸಂಸ್ಥೆಯ ಧರ್ಮಾರ್ಥ ಮಾಹಿತಿ ಕಾರ್ಯಗಾರಗಳ ಸದುಪಯೋಗ ಪಡೆಯಬೇಕು. 2018-2021ನೇ ಅವಧಿಗೂ ಮತ್ತೆ ನನ್ನನ್ನೇ ಕಾರ್ಯಧ್ಯಕ್ಷನಾಗಿ ಮರು ಆಯ್ಕೆ ನಡೆಸಿರುವುದು ನನ್ನ ಸೇವೆ ಇಷ್ಟಾರ್ಥವಾಗಿದೆ ಅಂದುಕೊಂಡಿದ್ದೇನೆ ಅದಕ್ಕಾಗಿ ಅಭಿವಂದಿಸುವೆ. ಪ್ರಾಮಾಣಿಕ ಸೇವೆಯೊಂದಿಗೆ ಸಂಸ್ಥೆಯನ್ನು ಇನ್ನಷ್ಟು ಶಿಖರಕ್ಕೇರಿಸುವಲ್ಲಿ ಶ್ರಮಿಸುವೆ ಎಂದÀು ಅಧ್ಯಕ್ಷೀಯ ಭಾಷಣದಲ್ಲಿ ಆ್ಯಂಟನಿ ಸಿಕ್ವೇರಾ ನುಡಿದರು.

ಸಿಸಿಸಿಐ ಸಂಸ್ಥಾಪಕಧ್ಯಕ್ಷ ವಿನ್ಸೆಂಟ್ ಮಥಾಯಸ್, ಮಾಜಿ ಕಾರ್ಯಾಧ್ಯಕ್ಷ ಹೆನ್ರಿ ಲೊಬೋ, ಪುರಸ್ಕಾರ ಸಮಿತಿ ಸಂಚಾಲಕ ಜಾನ್ ಡಿ'ಸಿಲ್ವಾ, ಉಪ ಕಾರ್ಯಾಧ್ಯಕ್ಷರಾದ ಆಲ್ಬರ್ಟ್ ಡಬ್ಲ್ಯೂ.ಡಿ'ಸೋಜಾ ಮತ್ತು ಜೋನ್ ಮಾಥ್ಯು ವೇದಿಕೆಯಲ್ಲಿ ಆಸೀನರಾಗಿದ್ದು, ಸಮಾರಂಭದಲ್ಲಿ ಸಿಸಿಸಿಐ ಪದಾಧಿಕಾರಿಗಳು, ನಿರ್ದೇಶಕರು, ಉಪ ಸಮಿತಿಗಳ ಸಂಚಾಲಕರುಗಳು ಸೇರಿದಂತೆ ಸದಸ್ಯರನೇಕರು ಉಪಸ್ಥಿತರಿದ್ದರು.

ಸಿಸಿಸಿಐ ನಿರ್ದೇಶಕರಾದ ನ್ಯಾ| ಪಿಯೂಸ್ ವಾಸ್, ಹೆನ್ರಿ ಲೋಬೊ, ಗ್ರೆಗೋರಿ ಡಿ'ಸೋಜಾ, ಲಾರೇನ್ಸ್ ಕುವೆಲ್ಲೊ, ವಾಲ್ಟರ್ ಬುಥೆಲೋ ಪುರಸ್ಕೃತರನ್ನು ಪರಿಚಯಿಸಿ ಸನ್ಮಾನ ಪತ್ರ ವಾಚಿಸಿದರು. ಆಲ್ಬರ್ಟ್ ಡಿ'ಸೋಜಾ ಮತ್ತು ವಿನ್ಸೆಂಟ್ ಮಥಾಯಸ್ ಅತಿಥಿüಗಳನ್ನು ಪರಿಯಯಿಸಿದರು. ಜೀನ್ ಎ.ಸಿಕ್ವೇರಾ ಮತ್ತು ಫಿಲೋಮೆನಾ ಲೊಬೋ ಅತಿಥಿüಗಳಿಗೆ ಪುಷ್ಫಗುಪ್ಚ ನೀಡಿ ಗೌರವಿಸಿದರು. ತಾನಿಯಾ ಬುಥೆಲೋ ಮತ್ತು ಗ್ಲೆನ್ ಡಿ'ಸೋಜಾ ಕಾರ್ಯಕ್ರಮ ನಿರೂಪಿಸಿದರು. ಆಗ್ನೇಲ್ಲೋ ರಾಜೇಶ್ ಅಥೈಡೆ ಧನ್ಯವದಿಸಿದರು.

ಆರಂಭದಲ್ಲಿ ಸಿಸಿಸಿಐ 20ನೇ ವಾರ್ಷಿಕ ಮಹಾಸಭೆಯು ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಅಧ್ಯಕ್ಷತೆಯಲ್ಲಿ ಜರುಗಿದ್ದು, ಸಭೆಯು 2018-2021ನೇ ಸಾಲಿನ ಕಾರ್ಯಧ್ಯಕ್ಷರನ್ನಾಗಿ ಆ್ಯಂಟನಿ ಸಿಕ್ವೇರಾ ಅವರನ್ನೇ ಪುನಾರಾಯ್ಕೆ ಗೊಳಿಸಿತು. ನಿರ್ದೇಶಕರಾಗಿ ನ್ಯಾ| ಪಿಯೂಸ್ ವಾಸ್, ಜಾನ್‍ಸನ್ ಥೆರಟಿಲ್, ವಾಲ್ಟರ್ ಬುಥೆಲೋ, ಆಗ್ನೇಲ್ಲೋ ರಾಜೇಶ್ ಅಥೈಡೆ, ಗ್ರೆಗೋರಿ ಡಿ'ಸೋಜಾ ಆಯ್ಕೆಗೊಂಡರು. ಸಿಸಿಸಿಐ ಕಾರ್ಯನಿರ್ವಾಹಕ ಕಾರ್ಯದರ್ಶಿ ಫೆಲಿಕ್ಸ್ ಡಿ'ಸೋಜಾ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಶಾಂತಿ ಕಾರ್ಡೋಜಾ ಉಪಸ್ಥಿತರಿದ್ದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here