Wednesday 1st, May 2024
canara news

ಡಿ.18: ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ಭಾರತಿ ಕಾರ್ಯಕ್ರಮ

Published On : 15 Dec 2018   |  Reported By : Rons Bantwal


ಸಂಘದ ಮಹಿಳಾ ಸದಸ್ಯೆಯರಿಂದ `ಹರಿ ದರ್ಶನ'ಯಕ್ಷಗಾನ ತಾಳಮದ್ದಳೆ

ಮುಂಬಯಿ, ಡಿ.12: ಗೋರೆಗಾಂವ್ ಕರ್ನಾಟಕ ಸಂಘದ ವಜ್ರ ಮಹೋತ್ಸವದ ಪ್ರಯುಕ್ತ ಸಂಘದ ಮಹಿಳಾ ವಿಭಾಗವು ಸ್ತ್ರೀ ಜಗತ್ತು : ವರ್ತಮಾನ-ಭವಿಷ್ಯ ವಿಚಾರವಾಗಿಸಿ ಮಹಿಳಾ ಭಾರತಿ ಕಾರ್ಯಕ್ರಮವನ್ನು ಇದೇ ಡಿ.16ನೇ ಭಾನುವಾರ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 5.00 ಗಂಟೆ ವರೆಗೆ ಗೋರೆಗಾಂವ್ ಪಶ್ಚಿಮದ ಆರೇ ರೋಡ್‍ನ ಅಂಬಾಬಾಯಿ ದೇವಸ್ಥಾನದ ಸನಿಹದ ಕೇಶವ ಗೋರೆ ಸ್ಮಾರಕ ಟ್ರಸ್ಟ್ ಸಭಾಗೃಹದಲ್ಲಿ ಆಯೋಜಿಸಿದೆ.

     

    Geeta L.Bhat                       Bhaskar Shetty Devalkunda                          Shakuntala Prabhu

   

Jayakara D.Poojary.                 Mundkuru Surendra

ಅಂದು ಪೂರ್ವಾಹ್ನ 11.00 ಗಂಟೆಗೆ ಸಂಧ್ಯಾ ರವಿ ಪಿಲಾರ್ ಮತ್ತು ಸುಧಾ ಮಧು ಪ್ರಭು (ಅಮೇರಿಕಾ) ಪ್ರಾಯೋಜಕತ್ವದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಗೋರೆಗಾಂವ್ ಕರ್ನಾಟಕ ಸಂಘದ ಪೂರ್ವಾಧ್ಯಕ್ಷೆ ಶಂಕುಂತಳಾ ರಾಮಕೃಷ್ಣ ಪ್ರಭು ಉದ್ಘಾಟಿಸಲಿದ್ದಾರೆ. ಲೇಖಕಿ, ಸಮಾಜಮುಖಿ ಚಿಂತಕಿ ಡಾ| ಇಂದಿರಾ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಆಶಯ ಭಾಷಣ ಮಾಡುವರು.

ಮಧ್ಯಾಹ್ನ 12.15 ಗಂಟೆಗೆ ವಿಚಾರಗೋಷ್ಠಿ ನಡೆಯಲಿದ್ದು ಮುಖ್ಯ ಅತಿಥಿüಯಾಗಿ ಹಿರಿಯ ಯಕ್ಷಗಾನ ಕಲಾವಿದೆ ನ್ಯಾಯವಾದಿ ಗೀತಾ ಆರ್.ಎಲ್ ಭಟ್ ಆಗಮಿಸಲಿದ್ದು ಸಂಸ್ಕೃತಿ ಮತ್ತು ಮಹಿಳೆ ವಿಚಾರವಾಗಿ ರೇಖಾ ವಿ.ಬನ್ನಾಡಿ ಮತ್ತು ಸಮಾಜ ಸೇವೆ-ಸವಾಲುಗಳು ವಿಷಯದಲ್ಲಿ ಆತ್ರಾಡಿ ಅಮೃತಾ ಶೆಟ್ಟಿ ವಿಚಾರ ಮಂಡಿಸುವರು.

ಅಪರಾಹ್ನ 2.15 ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು ಮುಖ್ಯ ಅತಿಥಿüಯಾಗಿ ಕೆನರಾ ಬ್ಯಾಂಕ್ ವಕೋಲಾ ಶಾಖೆಯ ಪ್ರಬಂಧಕಿ ನಿರ್ಮಲಾ ತಿನಯ್‍ಕರ್ ಆಗಮಿಸಲಿದ್ದು ಲತಾ ಎಸ್.ಶೆಟ್ಟಿ ಮುದ್ದುಮನೆ, ಸುಗುಣ ಎಸ್.ಬಂಗೇರ, ರಜನಿ ವಿ.ಪೈ, ರಜನಿ ತೋಳಾರ್, ನಳಿನಿ ಎಸ್.ಬಂಗೇರ, ಶೈಲಾ ಎಸ್.ನಾಯಕ್, ಸುಜತಾ ಯು.ಶೆಟ್ಟಿ, ರಕ್ಷಿತಾ ಆರ್.ನಾಯಕ್ ಪಾಲ್ಗೊಂಡು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸುವರು.

ಸಂಜೆ 3.30 ಗಂಟೆಗೆ ಡಾ| ಇಂದಿರಾ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ ಮುಖ್ಯ ಅತಿಥಿüಯಾಗಿ ಭಾಗವಹಿಸುವರು.

ಬೆಳಿಗ್ಗೆ 9.40 ಗಂಟೆಯಿಂದ ಸಂಘದ ಸದಸ್ಯರು, ಮುಂಬಯಿಯ ವಿವಿಧ ಸಂಘ-ಸಂಸ್ಥೆಗಳ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಸಂಜೆ 4.45 ಗಂಟೆಯಿಂದ ದೇವಲ್ಕುಂದ ಭಾಸ್ಕರ್ ಶೆಟ್ಟಿ ನಿರ್ದೇಶನದಲ್ಲಿ ಸುಮಿತ್ರಾ ಕುಂದರ್, ಉಷಾ ಪಿ.ಶೆಟ್ಟಿ, ವಾಣಿ ಶೆಟ್ಟಿ, ರಮಾ ದೇವಿ, ಲೀಲಾ ಗಣೇಶ್, ಪ್ರೇಮ ಗೌಡ, ವನಿತಾ ಪಾಲನ್, ನಮ್ರತಾ ಕರ್ಕೇರ, ಸಹನಾ ಶೆಟ್ಟಿ ಅರ್ಥಧಾರಿಗಳಾಗಿದ್ದು, ಸಂಘದ ಮಹಿಳಾ ಸದಸ್ಯೆಯರು `ಹರಿ ದರ್ಶನ' ಯಕ್ಷಗಾನ ತಾಳಮದ್ದಳೆ ಪ್ರದರ್ಶಿಸುವರು.

ಆ ಪ್ರಯುಕ್ತ ನಾಡಿನ ಕಲಾಭಿಮಾನಿಗಳು ಮತ್ತು ಕನ್ನಢಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಿನಪೂರ್ತಿಯಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸುವಂತೆ ಸಂಘದ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಜಯಕರ ಡಿ.ಪೂಜಾರಿ, ವಜ್ರ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಮಹಿಳಾ ವಿಭಾಗಧ್ಯಕ್ಷೆ ಸರಿತಾ ಸುರೇಶ್ ನಾಯಕ್, ಮಹಿಳಾ ವಿಭಾಗದ ಸಂಚಾಲಕಿಯರಾದ ಇಂದಿರಾ ಮೊೈಲಿ ಮತ್ತು ಉಷಾ ಪಿ.ಶೆಟ್ಟಿ ಈ ಮೂಲಕ ವಿನಂತಿಸಿದ್ದಾರೆ. :ರೋನಿಡಾ ಮುಂಬಯಿ

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here