Saturday 4th, May 2024
canara news

ಜೇಸಿ ಯಿಂದ ನಮ್ಮ ಜೀವನ ಬದಲಾಯಿಸಲು ಸಾಧ್ಯ : ಜೆಸಿ ಸಂದೀಪ್ ಕುಮಾರ್

Published On : 29 Jan 2019   |  Reported By : Steevan Colaco


ಉಡುಪಿಯಲ್ಲಿ ಸಣ್ಣಮಟ್ಟದಲ್ಲಿ ಆರಂಭಿಸಿದ ನನ್ನ ಉದ್ಯಮವು, ಇಂದು ದೊಡ್ಡ ಮಟ್ಟಕ್ಕೇರಿದೆ. ಇದಕ್ಕೆಲ್ಲಾ ಕಾರಣ ಜೇಸಿಐ. ಸಿಕ್ಕಂತಹ ಅವಕಾಶಗಳನ್ನು ಉಪಯೋಗಿಸಿಕೊಂಡು, ಜೆಸಿ ಯಲ್ಲಿ ನಾನು ಅತಿ ಚಿಕ್ಕ ಸ್ಥಾನದಿಂದ ರಾಷ್ಟ್ರಮಟ್ಟದವರೆಗೆ ಬೆಳೆ ಬೆಳೆದಿದ್ದೇನೆ. ಮಾತ್ರವಲ್ಲದೆ ನನ್ನ ಉದ್ಯಮವೂ ಈಗ ದೊಡ್ಡ ಮಟ್ಟಕ್ಕೆ ತಲುಪಿದೆ ಎಂದು ಜೇಸಿಐ ರಾಷ್ಟ್ರೀಯ ಕಾರ್ಯಕ್ರಮಗಳ ನಿರ್ದೇಶಕರಾದ ಜೇಸಿ ಸಂದೀಪ್ ಕುಮಾರ್ ತಿಳಿಸಿದರು.

ಜೇಸಿಐ ಉದ್ಯಾವರ- ಕುತ್ಪಾಡಿಯ ಪದಗ್ರಹಣ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಗಳಾಗಿ ಆಗಮಿಸಿ, ಜೆಸಿಐ ಸಂಸ್ಥೆಗೆ ಯುವಕರು ಹೆಚ್ಚು ಸಂಘಟಿತರಾದರೆ ತಮ್ಮ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಲು ಸಾಧ್ಯವಿದೆ ಎಂದು ನೂತನ ಅಧ್ಯಕ್ಷರಾದ ಜೇಸಿ ರಾಘವೇಂದ್ರ ಮತ್ತು ತಂಡಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಮಾಜ ಸೇವಕರಾದ ಶ್ರೀ ನಿತ್ಯಾನಂದ ಒಳಕಾಡು, ವಲಯ ಹದಿನೈದರ ಉಪಾಧ್ಯಕ್ಷರಾದ ಜೇಸಿ ಮಕರಂದ ಸಾಲ್ಯಾನ್, ನೂತನ ಕಾರ್ಯದರ್ಶಿ ಜೇಸಿ ಸುಪ್ರೀತ್ ಸುವರ್ಣ, ಜೇಸಿರೆಟ್ ಅಧ್ಯಕ್ಷೆ ಜೇಸಿ ರೋಶ್ನಿ ಕುಲಾಸೊ ಉಪಸ್ಥಿತರಿದ್ದರು.

ಜಮ್ಮು ಕಾಶ್ಮೀರದ ಗಡಿಯಲ್ಲಿ ದೇಶ ಸೇವೆಯಲ್ಲಿರುವ ವೀರಯೋಧ ಪ್ರಶಾಂತ್ ಎಚ್ ಎಸ್ ರವರನ್ನು ಈ ಸಂದರ್ಭದಲ್ಲಿ ಅತಿಥಿಗಳು ಸಮ್ಮಾನಿಸಿ ಶುಭ ಹಾರೈಸಿದರು.

ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಸ್ಟೀವನ್ ಕುಲಾಸೊ, ನೂತನ ಅಧ್ಯಕ್ಷರಾದ ಜೇಸಿ ರಾಘವೇಂದ್ರ ರವರಿಗೆ ಅಧಿಕಾರ ಹಸ್ತಾಂತರಿಸಿದರು.

ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಸ್ಟೀವನ್ ಕುಲಾಸೊ ರವರು ಸ್ವಾಗತಿಸಿ, ವರ್ಷದ ವರದಿಯನ್ನು ಮಂಡಿಸಿ, ಸಹಕರಿಸಿದವರಿಗೆ ಸನ್ಮಾನಿಸಿದರು.

ನೂತನ ಅಧ್ಯಕ್ಷರಾದ ದೇಸಿ ರಾಘವೇಂದ್ರರವರು ಪ್ರಸ್ತುತ ವರ್ಷ ಸರ್ವರ ಸಹಕಾರವನ್ನು ಯಾಚಿಸಿದರು.

ನೂತನ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಿಗೆ ರಾಷ್ಟ್ರೀಯ ನಾಯಕರು ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಹಲವಾರು ಯುವಕರು ಜೇಸಿಐ ಉದ್ಯಾವರ ಕುತ್ಪಾಡಿ ಘಟಕಕ್ಕೆ ಸೇರ್ಪಡೆಗೊಂಡರು.

ಜೇಸಿಐ ಉದ್ಯಾವರ ಕುತ್ಪಾಡಿ ಸರ್ವ ಸದಸ್ಯರು ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಸ್ಟೀವನ್ ಕುಲಾಸೊ ದಂಪತಿಗಳನ್ನು ಸನ್ಮಾನಿಸಿದರು.

ನೂತನ ಕಾರ್ಯದರ್ಶಿ ಜೇಸಿ ಸುಪ್ರೀತ್ ಸುವರ್ಣ ವಂದಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here