Wednesday 1st, May 2024
canara news

ವಾ'ಸ್ ಹೇರ್ ಡಿಝೈನರ್ಸ್ ಪರಿವಾರ ಸಂಭ್ರಮಿಸಿದ 32ನೇ ವಾರ್ಷಿಕ ಸ್ನೇಹಮಿಲನ ಸಾಧನೆಗೆ ಪರಿಶ್ರಮವೇ ಪ್ರಧಾನವಾದುದು : ಮಧುರ್ ಭಂಡಾರ್ಕರ್

Published On : 26 Jan 2020   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.21: ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿನಲ್ಲಿ ಹೇರ್ ಸ್ಟೈಲೋ ಮೂಲಕ ಸೆಲೆಬ್ರಟಿ ವ್ಯಕ್ತಿಯಾಗಿ ಪ್ರತಿಷ್ಠೆಗೆ ಪಾತರರಾದ ತುಳು-ಕನ್ನಡಿಗ ಡಾ| ಶಿವರಾಮ ಕೃಷ್ಣ ಭಂಡಾರಿ ಅತ್ತೂರು ಆಡಳಿತ್ವದ ಪ್ರಸಿದ್ಧ ಕೇಶ ವಿನ್ಯಾಸ ಸಂಸ್ಥೆ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತನ್ನ 32ನೇ ವಾರ್ಷಿಕ ಸ್ನೇಹಮಿಲನವನ್ನು ಇಂದಿಲ್ಲಿ ಮಂಗಳವಾರ ಸಂಜೆ ಅಂಧೇರಿ ಪೂರ್ವದ ಪೆನಿನ್ಸೂಲಾ ಗ್ರ್ಯಾಂಡ್ ಹೊಟೇಲು ಸಭಾಗೃಹದಲ್ಲಿ ಸಂಭ್ರಮಿಸಿತು.

 

ಭಂಡಾರಿ ಕುಲದೇವರು ಶ್ರೀ ಕಚ್ಚೂರು ನಾಗೇಶ್ವರ ದೇವರಿಗೆ ಆರತಿ ಬೆಳಗಿಸಿ ಶಿವಾ'ಸ್ ಪರಿವಾರದ ಮೂವತ್ತ ಎರಡು ಸಂವತ್ಸರಗಳ ಸೇವಾ ಸಫಲತೆಯ ಸಂಭ್ರ್ರಮಕ್ಕೆ ಡಾ| ಶಿವರಾಮ ಕೆ.ಭಂಡಾರಿ ಚಾಲನೆಯನ್ನಿತ್ತರು. ಮಧ್ಯಾಂತರದಲ್ಲಿ ಕಾರ್ಯಕ್ರಮದದಲ್ಲಿ ವಿಶೇಷ ಆಹ್ವಾನಿತರಾಗಿ ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ಕರ್, ನಟಿ ರಿಷಿತಾ ಭಟ್, ಅಶೋಕ್ ಪಂಡಿತ್, ವಿನೋದ್ ಛೋಫ್ರಾ, ನೀರಾಜ್ ಗುಪ್ತಾ, ತುಳು ಚಿತ್ರರಂಗದ ನಟ, ತೌಳವ ಸೂಪರ್‍ಸ್ಟಾರ್ ಸೌರಭ್ ಸುರೇಶ್ ಭಂಡಾರಿ, ಮುಂಬಯಿ ದಕ್ಷಿಣ ಮಧ್ಯ ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಆರ್.ಶೆವಾಲೆ, ಭಂಡಾರಿ ಮಹಾ ಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, `ಸ್ಟೈಲಿಂಗ್ ಅಟ್ ದ ಟಾಪ್' ಕೃತಿಕರ್ತೆ ಜಯಶ್ರೀ ಜಿ.ಶೆಟ್ಟಿ, ರಾಷ್ಟ್ರೀಯ ಪತ್ರಿಕಾ ಛಾಯಾಚಿತ್ರಕಾರ ಗೋಪಾಲ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಶುಭ ಕೋರಿದರು.

ಸಾಧನೆಗೆ ಪರಿಶ್ರಮವೇ ಪ್ರಧಾನವಾದುದು ಇದಕ್ಕೆ ನಿದರ್ಶನವೇ ಶಿವರಾಮ ಕೆ.ಭಂಡಾರಿ. ಓರ್ವ ಸಾಮಾನ್ಯ ನೌಕರನಾಗಿದ್ದು ಇಂದು 20 ಶಾಖೆಗಳಳ್ಳ ಅಂತರಾಷ್ಟ್ರೀಯ ಮಾನ್ಯತೆಯ ಸಲೂನ್‍ಗಳ ಒಡೆಯನಾಗಿರುವುದೇ ಸಾಕ್ಷಿ. ಈ ಸಾಧನೆಯ ಹಿಂದೆ ತುಂಬಾ ಕಠಿಣ ಶ್ರಮವಿದೆ. ತನ್ನ ಸಂಸ್ಥೆಯ ಇಡೀ ಸಮುದಾಯವನ್ನು ಬೆಳೆಸಿ ತಾನು ಬೆಳೆಯುವಂತಹ ನಿರ್ಮಲ ಮನಸ್ಸಿನ, ಹೃದಯಶ್ರೀಮಂತಿಕೆಯಿಂದ ಇದೆಲ್ಲಾ ಸಾಧ್ಯವಾಗಿದೆ. ನಾವೂ ಅಷ್ಟೇ ಯಾವೊತ್ತೂ ಗಡಿಯಾರದ ಸಮಯ ನೋಡದೆ ವಸ್ತುನಿಷ್ಠೆಯಾಗಿ ಶ್ರಮದಲ್ಲಿ ತೊಡಗಿಸಿದಾಗ ಇಂತಹ ಸಾಧನೆ ಸಿದ್ಧಿಸಲು ಸಾಧ್ಯ ಎಂದು ಮಧುರ್ ಭಂಡಾರ್ಕರ್ ತಿಳಿಸಿದರು.

ಶಿವರಾಮ ಭಂಡಾರಿ ಅವರು ತನ್ನ ನೌಕರವೃಂದದಲ್ಲಿ ಅಪಾರ ವಿಶ್ವಾಸಹೊಂದಿ ಅವರನ್ನು ಬಂಧುಗಳಾಗಿಸಿ ಸ್ವತಃ ಅವರೊಂದಿಗೆ ಬೆಳೆದ ಸದ್ಗುಣ ಸಂಪನ್ನರು. ಎಲ್ಲಿ ಸಂಸ್ಥೆಯ ಅಧಿಕಾರಸ್ಥರ ನಂಬಿಕೆಗೆ ಯಜಮಾನ ಪಾತ್ರನಾಗುವನೋ ಆ ಸಿಬ್ಬಂದಿವರ್ಗವೂ ಪ್ರಾಮಾಣಿಕ ಮತ್ತು ಶ್ರಮದಾಯವಾಗಿ ದುಡಿಯುತ್ತಾರೆ. ಇವೆಲ್ಲದರ ಪರಿಣಾಮವೇ ಫಲವತ್ತಾದ ಫಲಿತಾಂಶ, ಉದ್ಯಮದ ಶ್ರೇಯಸ್ಸು. ಇದನ್ನೇ ಶಿವರಾಮ ಭಂಡಾರಿ ತೋರಿಸಿಕೊಟ್ಟು ಎಲ್ಲ ಉದ್ಯಮಿಗಳಿಗೂ ಮಾದರಿಯಾಗಿದ್ದಾರೆ. ಇಂತಹ ಸಾಧಕನ ಅದೂ ಕೇಶವೃತ್ತಿಯ ವ್ಯಕ್ತಿಯೋರ್ವನ ಜೀವನಶೈಲಿ ಕೃತಿರೂಪ ಪಡೆದು ಜಾಗತಿಕವಾಗಿ ಬಂದಿದ್ದರೆ ಅದು ಶಿವರಾಮ ಭಂಡಾರಿ ಅವರದ್ದು ಮಾತ್ರ ಅಂತನಿಸಿದ್ದೇನೆ. ಆ ಮೂಲಕ ಅಖಂಡ ಭಂಡಾರಿ ಸಮುದಾಯದ ಶಿರೋಭೂಷಣರಾಗಿರುವುದು ನಮ್ಮ ಹಿರಿಮೆಯಾಗಿದೆ ಎಂದು ಸುರೇಶ್ ಭಂಡಾರಿ ಹರ್ಷ ವ್ಯಕ್ತಪಡಿಸಿದರು.

ಶೋಭಾ ಸುರೇಶ್ ಭಂಡಾರಿ, ಮೇಘ ಸೌರಭ್ ಭಂಡಾರಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ, ಉಪಾಧ್ಯಕ್ಷ ಪ್ರಭಾಕರ್ ಪಿ.ಭಂಡಾರಿ, ಬ್ರೈಟ್ ಪಬ್ಲಿಸಿಟಿಯ ಆಡಳಿತ ನಿರ್ದೇಶಕ ಯೋಗೇಶ್ ಲಕಾನಿ, ಉದ್ಯಮಿಗಳಾದ ಭರತ್ ಶೆಟ್ಟಿ, ಜಿತೇಂದ್ರ ಕೋಂಡೆ, ಪೆÇ್ರ| ಎಂ.ಪಿ ಶ್ರೀನಾಥ್ ಅರಸಿನಮಕ್ಕಿ (ಉಜಿರೆ), ರತ್ನಾ ಎ.ಭಂಡಾರಿ, ಕೃಷ್ಣ ಎಸ್.ಭಂಡಾರಿ, ಸುಮನಾ ಕೆ.ಭಂಡಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಶುಭ ಕೋರಿದರು.

ಶಿವಾ'ಸ್ ನಿರ್ದೇಶಕಿ ಅನುಶ್ರೀ ಎಸ್.ಭಂಡಾರಿ, ಮಾ| ರೋಹಿಲ್ ಎಸ್.ಭಂಡಾರಿ ಹಾಗೂ ಕು| ಆರಾಧ್ಯ ಎಸ್. ಭಂಡಾರಿ ಅವರನ್ನೊಳಗೊಂಡು ಡಾ| ಶಿವರಾಮ ಕೆ.ಭಂಡಾರಿ ಅವರನ್ನು ಶಿವಾ'ಸ್ ಹೇರ್ ಡಿಝೈನರ್ಸ್ ಪರಿವಾರವು ಸನ್ಮಾನಿಸಿ ಅಭಿನಂದಿಸಿದರು.

ಶಿವಾ'ಸ್ ಪರಿವಾರದ ರವಿ ಭಂಡಾರಿ, ಸವಿತಾ ಆರ್.ಭಂಡಾರಿ ರಾಘವ ವಿ.ಭಂಡಾರಿ, ನಿರಂಜನ ಭಂಡಾರಿ, ರೋಹಿತ್ ಭಂಡಾರಿ, ಪ್ರಕಾಶ್ ಭಂಡಾರಿ, ಜಯಶೀಲ್ ಭಂಡಾರಿ, ವಿಜಯ್ ಭಂಡಾರಿ, ಅರುಣ್ ಭಂಡಾರಿ ಸೇರಿದಂತೆ ಮತ್ತಿ ಶಿವಾ'ಸ್ ಸಂಸ್ಥೆಯ ಪರಿವಾರದ ಬಹುತೇಕ ನೌಕರವೃಂದ ಉಪಸ್ಥಿತರಿದ್ದು, ಶಿವಾ'ಸ್‍ನ ಶಾಖೆಗಳ ಕಲಾವಿದರು ಮನಾಕರ್ಷಕ ನೃತ್ಯಗಳನ್ನು ಪ್ರಸ್ತುತ ಪಡಿಸಿ ರಂಜಿಸಿದರು. ಹೆಸರಾಂತ ಕೋರಿಯೋಗ್ರಾಫರ್ ಮಿಥಾಲಿ ಗಿರೀಶ್ ದಂಪತಿ ಮತ್ತು ಶಿವಾ'ಸ್‍ನ ಶ್ವೇತಾ ಆರ್.ಭಂಡಾರಿ ಸಂಯೋಜನೆಯಲ್ಲಿ ಕೇಶವೈವಿಧ್ಯತಾ ಫ್ಯಾಶನ್ ಶೋ ಪ್ರದರ್ಶಿಸಿದರು.

ಶಿವರಾಮ ಕೆ.ಭಂಡಾರಿ ಮಾತನಾಡಿ 32ರ ಸಾಧಕ ಸೇವೆಗೆ ಸಹಕರಿಸಿದ ಸರ್ವ ಗ್ರಾಹಕರು, ಹಿತೈಷಿಗಳನ್ನು ಅಭಿವಂದಿಸಿದರು. ಶ್ವೇತಾ ತಿವಾರಿ ಮತ್ತು ಶಿವಾ'ಸ್ ಡೊಂಬಿವಿಲಿ ಶಾಖೆಯ ಸರಿತಾ ಬಂಗೇರ ಕಾರ್ಯಕ್ರಮ ನಿರ್ವಾಹಿಸಿದ್ದು ಶ್ವೇತಾ ಆರ್.ಭಂಡಾರಿ ವಂದಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here