Monday 29th, April 2024
canara news

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ

Published On : 24 Sep 2023   |  Reported By : Rons Bantwal


ಮುಂಬಯಿ(ಆರ್‍ಬಿಐ), ಸೆ.24: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಬಿ. ಎಸ್. ಕೆ.ಬಿ. ಎಸೋಸಿಯೇಶನ್ ಸಹಯೋಗದೊಂದಿಗೆ ಶ್ರೀ ಗಣೇಶ ಚತುಥಿರ್sಯನ್ನು ಕಳೆದ ಮಂಗಳವಾರ ವಾಮನ್ ಹೊಳ್ಳ, ಜಯಲಕ್ಷ್ಮಿ ಹೊಳ್ಳ ದಂಪತಿಯ ಯಜಮಾನತ್ವದಲ್ಲಿ ವೇ| ಮೂ| ಗಣೇಶ್ ಭಟ್ ಅವರ ಪ್ರಧಾನ ಪೌರೋಹಿತ್ಯದಲ್ಲಿ, ಗಣಹೋಮವನ್ನು ಆಚರಿಸುವುದರೊಂದಿಗೆ ಮೂರು ದಿನಗಳ ಶ್ರೀ ಗಣೇಶೋತ್ಸವಕ್ಕೆ ಚಾಲನೆ ನೀಡಿತು.

ಸೋಮವಾರ ದಿನಾಂಕ (ಸೆ.18) ರಂದು ವೈಭವದ ಮೆರವಣಿಗೆಯಲ್ಲಿ ಪರಿಸರ ಪ್ರೇಮಿ ಗಣೇಶ ಮೂರ್ತಿಯನ್ನು ತಂದು ಗೋಕುಲ ಸಭಾಗೃಹದಲ್ಲಿ ಅಲಂಕೃತ ಮಂಟದಲ್ಲಿರಿಸಿ, ಮಂಗಳವಾರ ವೇ| ಮೂ. ಗಣೇಶ್ ಭಟ್ ಅವರು ವಿಧಿವತ್ತಾಗಿ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೈದು ಮಂಗಳಾರತಿ ಬೆಳಗಿದರು. ಮುಂದಿನ ಎರಡು ದಿವಸಗಳಲ್ಲಿ ಅವಿನಾಶ್ ಶಾಸ್ತ್ರಿ ಮತ್ತು ಶ್ಯಾಮಲಾ ಶಾಸ್ತ್ರಿ ಹಾಗೂ ಲಕ್ಷ್ಮೀನಾರಾಯಣ ಶಿವತ್ತಾಯ ಮತ್ತು ನಿರ್ಮಲಾ ಶಿವತ್ತಾಯ ದಂಪತಿ ಯಜಮಾನತ್ವದಲ್ಲಿ ಗಣಹೋಮ ನೆರವೇರಿತು. ಪ್ರತಿದಿನ ಶ್ರೀ ಗಣೇಶ ಮೂರ್ತಿಗೆ ಅರ್ಚಕ ವರ್ಗದವರು ಮಂಗಳಾರತಿ ಬೆಳಗಿದ ನಂತರ, ಯುವ ವಿಭಾಗದವರ ನೇತೃತ್ವದಲ್ಲಿ ಮಹಾರಾಷ್ಟ್ರದ ಸಾಂಪ್ರದಾಯಿಕ ಗಣೇಶ ಆರತಿ ಹಾಡಿನೊಂದಿಗೆ ಸಾರ್ವಜನಿಕ ಆರತಿ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಕುಲ ಭಜನಾ ಮಂಡಳಿ, ಗೋಪಾಲಕೃಷ್ಣ ಭಜನಾ ಮಂಡಳಿ, ವಿಠ್ಠಲ ಭಜನಾ ಮಂಡಳಿ, ಮದ್ವೇಷ ಭಜನಾ ಮಂಡಳಿ ಮತ್ತು ಹರಿಕೃಷ್ಣ ಭಜನಾ ಮಂಡಳಿಯವರಿಂದ ಭಜನೆ, ಸೂರಜ್ ಅವರಿಂದ ಮ್ಯಾಜಿಕ್ ಪ್ರದರ್ಶನ, ವಿದುಷಿ ರೇವತಿ ಶ್ರೀನಿವಾಸನ್ ಅವರ ಶಿಷ್ಯ ವೃಂದದವರಿಂದ ಭರತನಾಟ್ಯ, ಶ್ರೀ ರಂಜನ್ ದೇಬನಾಥ್ ಅವರಿಂದ ಭಕ್ತಿ ಗಾನ, ರೇಶ್ಮಾ ಶೆಟ್ಟಿಯವರಿಂದ ಭರತನಾಟ್ಯ ವಿದ್ವಾನ್ ಪ್ರಾದೇಶ್ ಆಚಾರ್ಯ, ಹರೀಶ್ ಪೂಜಾರಿ, ವೆಂಕಟೇಶ್, ಮತ್ತು ಪದ್ಮರಾಜ್ ಉಪಾಧ್ಯಾಯರವರಿಂದ ಸಂಗೀತೋಪಕರಣಗಳಾದ ವಾಯಲಿನ್, ಸಾಕ್ಸೋಪೆÇೀನ್, ಮೃದಂಗ, ತಬಲಾಗಳ ತಾಳ ವಾದ್ಯ ಕಚೇರಿ ಹಾಗೂ ಕೊನೆಯಲ್ಲಿ ಯೋಗೇಶ್ ಅವರಿಂದ ತೊಗಲು ಗೊಂಬೆಯಾಟ ಪ್ರದರ್ಶನ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಜರಗಿದವು. 6 ರಿಂದ 15 ವರ್ಷದವರೆಗಿನ ಮಕ್ಕಳಿಗಾಗಿ ಯುವ ವಿಭಾಗದವರು ಆಯೋಜಿಸಿದ್ದ ಡ್ರಾಯಿಂಗ್ ಸ್ಪರ್ಧೆಯಲ್ಲಿ ಸುಮಾರು 40 ಕ್ಕೂ ಮಿಕ್ಕಿ ಭಾಗವಹಿಸಿದ್ದು, ವಿಜೇತ ಮಕ್ಕಳಿಗೆ ಸಂಘದ ಅಧ್ಯಕ್ಷರು ಡಾ| ಸುರೇಶ್ ಎಸ್. ರಾವ್ ಅವರು ಬಹುಮಾನ ವಿತರಿಸಿದರು.

ಗುರುವಾರ (ಸೆ.21) ರಂದು ಸಂಜೆಯ ಆರತಿಯಾದ ನಂತರ, ಅತ್ಯಂತ ವೈಭವದ ಮೆರವಣಿಗೆಯ ಮೂಲಕ ಶ್ರೀ ಗಣೇಶ ಮೂರ್ತಿಯನ್ನು ಗೋಕುಲ ವಠಾರದಲ್ಲಿ ವಿಸರ್ಜಿಸುವುದರೊಂದಿಗೆ ಮೂರು ದಿನಗಳ ಗಣೇಶೋತ್ಸವ ಸಂಪನ್ನಗೊಂಡಿತು. ಮೂರು ದಿನಗಳಲ್ಲಿ ಶ್ರೀ ದೇವರ ದರ್ಶನಕ್ಕೆ ಆಗಮಿಸಿದ ಸರ್ವ ಭಕ್ತಾದಿಗಳಿಗೆ ತೀರ್ಥ ಹಾಗೂ ಲಡ್ಡು ಪ್ರಸಾದ ವಿತರಿಸಲಾಯಿತು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here