Monday 29th, April 2024
canara news

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ

Published On : 24 Sep 2023   |  Reported By : Rons Bantwal


`ಸುವರ್ಣಯುಗ' ಕೃತಿ ಬಿಡುಗಡೆ ಮತ್ತು ಗೌರವಾರ್ಪಣೆ ಸಮಾರಂಭ

ಮುಂಬಯಿ (ಆರ್‍ಬಿಐ), ಸೆ.24: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಸ್ವರ್ಗೀಯ ಜಯ ಸಿ.ಸುವರ್ಣ ಅವರ ಸಂಸ್ಮರಣೆ, ಸಮಾರಂಭವನ್ನು ಸಾಂತಾಕ್ರೂಜ್ ಪೂರ್ವದ ವಿದ್ಯಾನಗರಿಯ ಕಲೀನಾ ಕ್ಯಾಂಪಸ್‍ನ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಇದೇ ಸೆ.30ರ ಶನಿವಾರ ಮಧ್ಯಾಹ್ನ 2:30 ಗಂಟೆಗೆ ಆಯೋಜಿಸಿದೆ.

ಅಂದು ನಾಡಿನ ಹೆಸರಾಂತ ಕವಿ ಅನಿತಾ ಪಿ.ತಾಕೊಡೆ ಅವರು ಜಯ ಸುವರ್ಣರ ಜೀವನ ಸಾಧನೆಯ ಕುರಿತು ರಚಿಸಿದ `ಸುವರ್ಣಯುಗ' ಕೃತಿ ಲೋಕಾರ್ಪಣೆ ಹಾಗೂ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರ ಮ ನೆರವೇರಲಿದೆ. ಮುಂಬಯಿ ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಕೃತಿಯನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ| ಉಮಾ ರಾಮರಾವ್ ಕೃತಿಯನ್ನು ಪರಿಚಯಿಸಲಿದ್ದಾರೆ.

ಅನಿತಾ ಪಿ.ತಾಕೊಡೆ 

ಗೋಪಾಲ ಸಿ.ಶೆಟ್ಟಿ

ಸ್ವರ್ಗೀಯ ಜಯ ಸಿ.ಸುವರ್ಣ

ಮಧು ಬಂಗಾರಪ್ಪ

ಪ್ರಧಾನ ಅತಿಥಿüಗಳಾಗಿ ಹಿರಿಯ ಸಾಹಿತಿ ಡಾ. ವಿಶ್ವನಾಥ ಕಾರ್ನಾಡ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕಾರಾಂ ಪೂಜಾರಿ, ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ ಮುಂಬಯಿ ಇದರ ಆಡಳಿತ ನಿರ್ದೇಶಕ ರವಿ ಎಸ್.ಶೆಟ್ಟಿ, ಗೌರವಾನ್ವಿತ ಅತಿಥಿüಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ, ಜಯ ಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ವಿಶ್ವದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್‍ಭಾಗವಹಿಸಲಿದ್ದಾರೆ.

ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ಸೂರ್ಯಕಾಂತ್ ಜಯ ಸುವರ್ಣ, ಭಾಸ್ಕರ್ ಎಂ.ಸಾಲಿಯನ್ ಆಗಮಿಸಲಿದ್ದು ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಮತ್ತು ಹೆಸರಾಂತ ನಿರೂಪಕ, ಸಾಹಿತಿ, ಕಲಾವಿದ ಅಶೋಕ ಪಕ್ಕಳ ಇವರನ್ನು ಗೌರವಿಸಲಾಗು ವುದು ಹಾಗೂ ಜಯಲೀಲಾ ಟ್ರಸ್ಟ್ ವತಿಯಿಂದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಅರ್ಹ ಸಂಶೋಧನ ವಿದ್ಯಾಥಿರ್üಗಳಿಗೆ ಶಿಷ್ಯವೇತನ ನೀಡಲಾಗುವುದು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಎಸ್.ಶೆಟ್ಟಿ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಕಾರ್ಯಕ್ರಮವನ್ನು ಸಂಯೋಜಿಸಲಿದ್ದಾರೆ.

ಸಾಹಿತ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಯ ಸಿ.ಸುವರ್ಣ: 1991ರಿಂದ ಸುಮಾರು ಇಪ್ಪತ್ತೊಂದು ವರ್ಷಗಳ ಕಾಲ ಬಿಲ್ಲವರ ಅಸೋಸಿಯೇಶನ್ ಮುಂಬಯಿಇದರ ಅಧ್ಯಕ್ಷರಾಗಿದ್ದು ಮುಂಬಯಿ ಬಿಲ್ಲವ ಸಮುದಾಯಕ್ಕೆ ಉನ್ನತ ಸ್ಥಾನಮಾನವನ್ನು ಕಲ್ಪಿಸಿ ಕೊಟ್ಟವರು. 32 ವರ್ಷಗಳಿಂದ ಭಾರತ್ ಬ್ಯಾಂಕ್‍ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು 18 ವರ್ಷ ಕಾರ್ಯಾಧ್ಯಕ್ಷರಾಗಿ ಅವಿರತವಾಗಿ ಶ್ರಮಿಸಿ ಬ್ಯಾಂಕ್‍ನ ಶಾಖೆಗಳನ್ನು ಐದರಿಂದ 102ಕ್ಕೇರಿಸಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೊಸ ಮೆರುಗನ್ನು ತಂದು ಕೊಟ್ಟವರು. ಮುಂಬಯಿಯಲ್ಲಿ ಸ್ಥಾಪನೆಯಾದ ಬಿಲ್ಲವರ ಅಸೋಸಿಯೇಶನ್‍ನ ಆಶ್ರಯದಲ್ಲಿರುವ ಇಪ್ಪತ್ತೆರಡು ಸ್ಥಳೀಯ ಕಚೇರಿಗಳು ಜಯ ಸುವರ್ಣರ ಸಂಘಟನೆಯ ಶಕ್ತಿಗೆ ಸಾಕ್ಷಿಯಾಗಿವೆ. `ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮುಲ್ಕಿ' ಇದರ ಸ್ಥಾಪಕರಾಗಿ, ಅಧ್ಯಕ್ಷರಾಗಿ ಇನ್ನೂರ ಎಪ್ಪತ್ತೆರಡಕ್ಕೂ ಸಂಘಸಂಸ್ಥೆಗಳನ್ನು ಒಟ್ಟುಗೂಡಿಸಿದ್ದು ಇವರ ಅರ್ಹ ನಾಯಕತ್ವದ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಜಯ ಸುವರ್ಣರ ಮುಂದಾಳುತನದಲ್ಲಿ ನಿರ್ಮಾಣಗೊಂಡ, `ಬಿಲ್ಲವ ಭವನ' ಬಿಲ್ಲವ ಸಮುದಾಯಕ್ಕೆ ಮಾತ್ರವಲ್ಲದೆ ಸರ್ವ ಜಾತಿ, ಜನಾಂಗಕ್ಕೂ ಸೇರಿದ ಹೆಮ್ಮೆಯ ಭವನ ಆಗಿದೆ.

ಅನಿತಾ ಪಿ.ತಾಕೊಡೆ: ಇವರು ಕವಿಯಾಗಿ, ಕಥೆಗಾರರಾಗಿ, ಲೇಖಕರಾಗಿ ಅಂಕಣಕಾರರಾಗಿ ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕೆಎಸ್‍ಒಯು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ ಅನಿತಾ ಅವರು, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿಯನ್ನು ಚೊಚ್ಚಲ ಎಂ.ಬಿ ಕುಕ್ಯಾನ್ ಬಂಗಾರದ ಪದಕ ಹಾಗೂ ಮೊದಲ ರ್ಯಾಂಕ್‍ನೊಂದಿಗೆ ಗಳಿಸಿಕೊಂಡರು. ಇದೀಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಾ.ಜಿ. ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ `ಮುಂಬಯಿ ಬಿಲ್ಲವರು ಸಾಂಸ್ಕೃತಿಕ ಅಧ್ಯಯನ' ಈ ವಿಷಯದ ಕುರಿತು ಪಿಎಚ್.ಡಿ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಇವರ ಒಟ್ಟು ಏಳು ಕೃತಿಗಳು ಬೆಳಕು ಕಂಡಿವೆ. ಇವರ ಕತೆ ಕವಿತೆಗಳಿಗೆ ಲಭಿಸಿದ ಹಲವಾರು ಬಹುಮಾನ ಪುರಸ್ಕಾರಗಳು ಇವರ ಸಾಹಿತ್ಯ ಶಕ್ತಿಗೆ ಸಾಕ್ಷಿಯಾಗಿವೆ.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here