Friday 26th, April 2024
canara news

ವಿದ್ಯಾದಾನ ನೀಡುವುದು ಪರಮ ಕರ್ತವ್ಯ : ಡಾ| ಸುರೇಂದ್ರ ಶೆಟ್ಟಿ

Published On : 21 Jul 2014   |  Reported By : Ronida Mumbai


ಕನಾ೯ಟಕ ಸಂಘ ಕಲ್ಯಾಣ ವತಿಯಿಂದ ಡಾ| ಸುರೇಂದ್ರ ವಿ.ಶೆಟ್ಟಿ ಅವರಿಗೆ ಸತ್ಕಾರ

ಮುಂಬಯಿ, ಜು.21: ಕನಾ೯ಟಕ ಸಂಘ ಕಲ್ಯಾಣ ಸಂಸ್ಥೆಯುಮಾಡಿದ ಸತ್ಕಾರ ನನ್ನ ಮನೆಮಂದಿಯ ಸತ್ಕಾರ ಎಂದು ಮನಪೂರ್ವಕವಾಗಿ ಸ್ವೀಕರಿಸಿದ್ದೇನೆ. ಇದರಿಂದ ನಾನು ಸಂತೋಷನಾಗಿದ್ದೇನೆ. ಗಳಿಕೆಯ ಹಣದಿಂದ ಸ್ವಲ್ಪ ಆಥಿ೯ಕವಾಗಿ ಹಿಂದುಳಿದವರಿಗೆ, ವಿದ್ಯೆಯಿಂದ ವಂಚಿತರಾದವರಿಗೆ ವಿದ್ಯಾದಾನ ನೀಡುವುದು ನಮ್ಮ ಪರಮ ಕರ್ತವ್ಯವೆಂದು ತಿಳಿದಿದ್ದೇನೆ. ಮನೆಯಲ್ಲಿ ಹೋಳಿಗೆ ಮಾಡಿ ಹಸಿದ ಬಿಕ್ಷುಕನಿಗೆ ನೀಡುವುದನ್ನು ಬಿಟ್ಟು ಹುಲ್ಲು ತಿನ್ನುವ ದನಗಳಿಗೆ ಕೊಟ್ಟರೆ ಏನು ಫಲ ಎಂದ ಡಾ| ಸುರೇಂದ್ರ ವಿ.ಶೆಟ್ಟಿ ಕಲ್ಯಾಣ್ ಅವರು ತಾವು ತಮ್ಮ ಕೃತಿಯಿಂದ ಪ್ರಯತ್ನಪಟ್ಟರೆ ತಮಗೂ ಡಾಕ್ಟರೇಟ್ ಸಿಗಬಹುದು ಎಂದು ನುಡಿದರು.

ಕಳೆದ ಭಾನುವಾರ ಕಲ್ಯಾಣ್ ಪಶ್ಚಿಮದ ಜೋಕರ್ ಪ್ಲಾಜ್ಹಾದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಕನಾ೯ಟಕ ಸಂಘ ಕಲ್ಯಾಣಸಂಘವು ಶಿಕ್ಷಣ ಪ್ರೇಮಿ, ಸಮಾಜ ಸೇವಕ, ಸಂಘದ ಮಾರ್ಗದರ್ಶನ ಹಾಗೂ ಮಹಾದಾನಿ ಆಗಿದ್ದು, ಇತ್ತೀಚೆಗೆ ಮಲೇಷಿಯಾದಲ್ಲಿ ಡಾಕ್ಟರೇಟ್ ಗೌರವ ಪಡೆದ ಡಾ| ಸುರೇಂದ್ರ ಶೆಟ್ಟಿ ಅವರನ್ನು ಸನ್ಮಾನಿಸಿದ ಶುಭಾವಸರದಲ್ಲಿ ಸಭಿಕರನ್ನುದ್ದೇಶಿಸಿ ಸುರೇಂದ್ರ ಶೆಟ್ಟಿ ನುಡಿದರು.

ಸಂಘದ ಅಧ್ಯಕ್ಷ ಟಿ.ಎಸ್. ಉಪಾಧ್ಯಾಯ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು, ಮುಖ್ಯ ಅತಿಥಿಯಾಗಿ ಕಲ್ಯಾಣ್ ವಲಯದ ಉಪ ಪೊಲೀಸ್ ಆಯುಕ್ತ ಸಂಜಯ ಜಾಧವ ಹಾಗೂ ಗೌರವ ಅತಿಥಿಗಳಾಗಿ ಜಯಂಟ್ಸ್ ಇಂಟರ್ನ್ಯಾಷನಲ್ ಇದರ ಪ್ರಮುಖ ಸದಸ್ಯರಾದ ಅಶೋಕ್ ಹುಕ್ಕೇರಿ ಸೇರಿದಂತೆ ಸಂಘದ ಸ್ಥಾಪಕಾಧ್ಯಕ್ಷ ನಂದಾ ಶೆಟ್ಟಿ, ಸಲಹೆಗಾರರಾದ ಭಾಸ್ಕರ ಶೆಟ್ಟಿ ಗುರುಗೇವ್, ರಮೇಶ ಡಿ.ಶೆಟ್ಟಿ ರಾಮದೇವ್, ಉಪಾಧ್ಯಕ್ಷರುಗಳಾದ ಗೋಪಾಲ ಹೆಗ್ಡೆ, ಶ್ರೀಮತಿ ಅಹಲ್ಯಾ ಶೆಟ್ಟಿ ಅವರು ಉಪಸ್ಥಿತರಿದ್ದು ಶಾಲು, ಫಲ, ಸ್ಮರಣಿಕೆ ಹಾಗೂ ಪುಷ್ಪಗುಚ್ಛವನ್ನು ನೀಡಿ ಡಾ| ಸುರೇಂದ್ರ ಶೆಟ್ಟಿ ಅವರನ್ನು ಸತ್ಕರಿಸಿದರು. ಅಂತೆಯೇ ಶ್ರೀಮತಿ ಬೇಬಿ ಸುರೇಂದ್ರ ಶೆಟ್ಟಿ ಅವರನ್ನು ಮಹಿಳಾ ವಿಭಾಗದ ಕಾಯ೯ಧ್ಯಕ್ಷೆ ಶ್ರೀಮತಿ ದರ್ಶನಾ ಸೋನಕರ್, ಉಪಾಧ್ಯಕ್ಷೆ ಶ್ರೀಮತಿ ಅಹಲ್ಯಾ ಶೆಟ್ಟಿ, ಗೌ| ಕಾರ್ಯದಶಿ೯ ನ್ಯಾ| ನೂತನ ಹೆಗ್ಡೆ, ಶ್ರೀಮತಿ ಗೀತಾ ಪೂಜಾರಿ, ಶ್ರೀಮತಿ ಪ್ರಶಾಂತಿ ಪೂಜಾರಿ ಮತ್ತಿತರರು ಸತ್ಕರಿಸಿದರು.

ಈ ಸಂದರ್ಭದಲ್ಲಿ ಡಾ| ಸುರೇಂದ್ರ ಶೆಟ್ಟಿ ಅವರ ಬಗ್ಗೆ ಭಾಸ್ಕರ ಶೆಟ್ಟಿ, ನಂದಾ ಶೆಟ್ಟಿ, ಡಾ| ಉಲ್ಲಾಸ್ ಮಲ್ಯ ಮಾತನಾಡಿದರು. ರಾಮಣ ಶೆಟ್ಟಿ ರೆಂಜಾಳ ಅವರ ಬಗ್ಗೆ ಬರೆದ ಕವಿತೆಯನ್ನು ಓದಿ ಹೇಳಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸದಸ್ಯರಿಂದ ಮತ್ತು ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನೇರವೇರಿತು.

ಕುಂದ ಬಳಗದ ಪ್ರೊ| ವೆಂಕಟೇಶ ಪೈ ಹಾಗೂ ಸದಸ್ಯರು ಡಾ| ಸುರೇಂದ್ರ ಶೆಟ್ಟಿ ಅವರನ್ನು ಅಭಿನಂದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ಮಹಾಪೋಷಕರಾದ ವಾಮನ ಶೆಟ್ಟಿ ಅಂಬರನಾಥ, ಜಗನ್ನಾಥ್ ಶೆಟ್ಟಿ ಮತ್ತು ಸುಂದರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ವಿಭಾ ದೇಶಮುಖ್, ಮಹಾಲಕ್ಷ್ಮೀ ತೋವಿ೯ ಪ್ರಾರ್ಥನೆಗೈದು ಸ್ವಾಗತ ಗೀತೆಯನ್ನು ಹಾಡಿದರು. ಅಧ್ಯಕ್ಷ ಟಿ.ಎಸ್. ಉಪಾಧ್ಯಾಯ ಸ್ವಾಗತಿಸಿದರು. ಉಪಾಧ್ಯಕ್ಷೆ ಗೋಪಾಲ ಹೆಗ್ಡೆ ಮತ್ತು ಪ್ರಕಾಶ್ ಬನಾರೆ ಅವರು ಅತಿಥಿಗಳನ್ನು ಪರಿಚಯಿಸಿದರು. ಪ್ರಶಾಂತಿ ಪೂಜಾರಿ ಮತ್ತು ಗೀತಾ ಪೂಜಾರಿ ಸಹಕರಿಸಿದರು. ದರ್ಶನಾ ಸೋನಕರ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here