Friday 26th, April 2024
canara news

ಡಾ.ರಾಜಕುಮಾರ್ ಕನ್ನಡಿಗರ ಮನ ಮತ್ತು ಮನೆಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ : ಡಾ.ನರಸಿಂಹರಾಜು

Published On : 25 Apr 2015   |  Reported By : Rons Bantwal


ಕೃಷ್ಣರಾಜಪೇಟೆ. ಸಾಮಾಜಿಕ ಸಂದೇಶಗಳನ್ನು ನೀಡುವ ಚಿತ್ರಗಳಲ್ಲಿ ಅಭಿನಯಿಸಿ ಯುವಜನರ ಮನಪರಿವತಿ೯ಸಿ ಕನ್ನಡ ಚಲನಚಿತ್ರ ರಂಗದ ಅನಭಿಶಕ್ತದೊರೆಯಾಗಿ ಮಿಂಚಿದ ಡಾ.ರಾಜಕುಮಾರ್ ಕನ್ನಡಿಗರ ಮನ ಮತ್ತು ಮನೆಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಸಾಹಿತಿ ಡಾ.ನರಸಿಂಹರಾಜು ಅಭಿಪ್ರಾಯಪಟ್ಟರು.

ಅವರು ಇಂದು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಡಾ.ರಾಜ್ಕುಮಾರ್ ಕನ್ನಡ ಕಲಾ ಸಂಘವು ಆಯೋಜಿಸಿದ್ದ ಡಾ.ರಾಜ್ ಅವರ 87ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ರಂಗಭೂಮಿಯ ಮೂಲಕ ಅಭಿನಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಎಲ್ಲಾ ಬಗೆಯ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿ ಡಾಕ್ಟರೇಟ್ ಸೇರಿದಂತೆ ಚಿತ್ರರಂಗದ ಅತ್ಯುತ್ತಮ ಪ್ರಶಸ್ತಿ ಫಾಲ್ಕೆ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡು ಮಿಂಚಿದ್ದ ರಾಜಕುಮಾರ್ ಅವರು ಕನ್ನಡ ನೆಲ-ಜಲದ ಬಗ್ಗೆ ಇಟ್ಟಿದ ಪ್ರೇಮವು ಮಾದರಿಯಾದದ್ದು, ಕನ್ನಡ ನೆಲ-ಜಲಕ್ಕೆ ಅಪಾಯ ಎದುರಾಗಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಎದುರಾದಾಗ ಗೋಕಾಕ್ ಚಳವಳಿಯ ಮೂಲಕ ಬೀದಿಗಿಳಿದು ಹೋರಾಟ ಮಾಡಿ ಯುವಜನರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ಡಾ.ರಾಜಕುಮಾರ್ ಇತರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಲು ಸಾವಿರಾರು ಅವಕಾಶಗಳು ಸಿಕ್ಕರೂ ನಯವಾಗಿ ತಿರಸ್ಕರಿಸಿ ಕನ್ನಡ ಚಿತ್ರಗಳಲ್ಲಿ ಮಾತ್ರ ನಟಿಸಿ ತಮ್ಮ ಭಾಷಾ ಪ್ರೇಮವನ್ನು ಮೆರೆದ ಮೇರು ನಟ ಅಣ್ಣಾವ್ರ ಆದರ್ಶಗಳನ್ನು ಯುವಜನತೆ ಕಡ್ಡಾಯವಾಗಿ ಪಾಲಿಸುವ ಮೂಲಕ ಆರೋಗ್ಯವಂತ ಸಮಾಜದ ನಿ ಮಾ೯ಣಕ್ಕೆ ಮುಂದಾಗಬೇಕು. ನಡೆ-ನುಡಿ ಎರಡರಲ್ಲಿಯೂ ಮಾದರಿಯಾದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಎಲ್ಲಾ ಭಾಷೆಯ ನಟರು ಮತ್ತು ಅಭಿಮಾನಿಗಳ ಪ್ರೀತಿಗೆ ಭಾಜನರಾಗಿದ್ದ ರಾಜಕುಮಾರ್ ತಮ್ಮ ಚಿತ್ರಗಳು ಮತ್ತು ತಮ್ಮ ಪಾತ್ರಗಳ ಮೂಲಕ ಚಿತಸ್ಥಾಯಿಯಾಗಿ ನೆಲೆಸಿದ್ದಾರೆ ಎಂದು ನರಸಿಂಹರಾಜು ಕೊಂಡಾಡಿದರು.

ಜೈ ಭುವನೇಶ್ವರಿ ರಂಗಕಲಾ ಸಂಘದ ಅಧ್ಯಕ್ಷ ಕೆ.ಎನ್.ತಮ್ಮಯ್ಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಡಾ.ರಾಜ್ಕುಮಾರ್ ಅವರ ಸಾಧನೆಗಳನ್ನು ಕುರಿತು ಮಾತನಾಡಿದರು. ಡಾ.ರಾಜ್ಕುಮಾರ್ ಕನ್ನಡ ಕಲಾಸಂಘದ ಅಧ್ಯಕ್ಷ ದೇವರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಗಮಸಂಗೀತ ಗಾಯಕ ಸುರೇಶ್ ಹರಿಜನ ಅವರು ಡಾ.ರಾಜ್ ಅಭಿನಯದ ಚಿತ್ರಗಳ ಗೀತೆಗಳನ್ನು ಹಾಡುವ ಮೂಲಕ ಡಾ.ರಾಜ್ ಅವರನ್ನು ಸ್ಮರಣೆ ಮಾಡಿದರು. ರಂಗನಿದೇ೯ಶಕ ಶಿವಕುಮಾರ್, ಹೊಸಹೊಳಲು ದೇವರಾಜು, ಕೆ.ಎನ್.ಕುಮಾರ್, ಕಾಳಪ್ಪ, ಸುನಿಲ್ಕುಮಾರ್, ಹೊಸಹೊಳಲು ರಘು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಯಕನರ್ಾಟಕ ಸಂಘಟನೆ: ಕೆ.ಆರ್.ಪೇಟೆ ತಾಲೂಕು ಜಯಕನಾ೯ಟಕ ಸಂಘಟನೆಯ ವತಿಯಿಂದ ಡಾ.ರಾಜ್ಕುಮಾರ್ ಅವರ 87ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪಟ್ಟಣದ ಮೈಸೂರು-ಚನ್ನರಾಯಪಟ್ಟಣ ರಸ್ತೆಯ ಬೊಮ್ಮೇಗೌಡ ವೃತ್ತದಲ್ಲಿ ಡಾ.ರಾಜ್ ಅವರ ಕಟೌಟ್ಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಪಟಾಕಿಗಳನ್ನು ಸಿಡಿಸಿದ ತಾಲೂಕು ಘಟಕದ ಅಧ್ಯಕ್ಷ ಎಸ್.ವಿ.ವಿನಯ್ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು-ಹಂಫಲು ವಿತರಿಸಿದರು. ನಂತರ ನಡೆದ ಸರಳ ಸಮಾರಂಭದಲ್ಲಿ ಕನ್ನಡಾಭಿಮಾನಿಗಳನ್ನು ಉದ್ಧೇಶಿಸಿ ಮಾತನಾಡಿದ ವಿನಯ್ ನಡೆ-ನುಡಿ ಎರಡರಲ್ಲಿಯೂ ಆದರ್ಶತನವನ್ನು ಮೈಗೂಡಿಸಿಕೊಂಡು ಇತರರಿಗೆ ಮಾದರಿಯಾಗಿ ಜೀವನ ನಡೆಸಿದ ಡಾ.ರಾಜ್ ಕನ್ನಡ ಚಿತ್ರರಂಗದ ಬೆಲೆಕಟ್ಟಲಾಗದ ಮಾಣಿಕ್ಯ. ಕನ್ನಡಿಗರ ಮನೆ-ಮನಗಳಲ್ಲಿ ಶಾಶ್ವತವಾದ ಸ್ಥಾನಪಡೆದು ಧೃವತಾರೆಯಂತೆ ಮಿನುಗುತ್ತಿರುವ ರಾಜ್ಕುಮಾರ್ ಅವರಂತೆ ಯುವಜನರು ಕನ್ನಡ ಭಾಷೆ ಮತ್ತು ನೆಲ-ಜಲದ ಬಗ್ಗೆ ಅಭಿಮಾನ ಬೆಳೆಸಿಕೊಂಡು ದೇಶಕಟ್ಟುವ ಕಾಯಕದಲ್ಲಿ ತಮ್ಮನ್ನು
ತೊಡಗಿಸಿಕೊಳ್ಳಬೇಕು ಎಂದು ವಿನಯ್ ಕರೆ ನೀಡಿದರು. ಸಂಘಟನೆಯ ತಾಲೂಕು ಘಟಕದ ಪದಾಧಿಕಾರಿಗಳಾದ ಕೆ.ಚಂದ್ರಶೇಖರ್, ಕೆ.ಆರ್.ನೀಲಕಂಠ, ವರುಣ್ಗೌಡ, ಸೈಯ್ಯದ್ಖಲೀಲ್, ಅಬ್ದುಲ್, ರಫೀಕ್ ಅಹಮದ್, ಅನುಸೂಯ ಮತ್ತಿತರರು ಭಾಗವಹಿಸಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here