Friday 26th, April 2024
canara news

ರೋಟರಿ 17 ನೇ ವಾರ್ಷಿಕ ಅನಾಥಾಶ್ರಮ ಮಕ್ಕಳ ಕ್ರೀಡಾ ಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆ

Published On : 10 Jan 2016   |  Reported By : Mallya M V


“ಅಪರೂಪದ ಅವಕಾಶಕ್ಕೆ ಸ್ಪಂದಿಸಿ, ಪ್ರತಿಭೆಯನ್ನು ಪ್ರದರ್ಶಿಸಿ, ಯಶಸ್ವಿಯಾಗಿ” – ಜೆ.ಆರ್.ಲೋಬೋ

ಮಂಗಳೂರು. ಜ.10: ನಗರದಲ್ಲಿ ಕಾರ್ಯಾಚರಿಸುತ್ತಿರುವ 10 ಅನಾಥಾಶ್ರಮದ 600 ಮಕ್ಕಳಿಗೆ ಒಂದು ಅವಿಸ್ಮರಣೀಯ ದಿನ. ಪೋಷಕರ ಪ್ರೀತಿ ವಾತ್ಸಲ್ಯ ವಂಚಿತರಾದವರು ಒಟ್ಟಿಗೆ ಬೆರೆತು, ಇತರ ಆಶ್ರಮದ ಮಕ್ಕಳೊಂದಿಗೆ ಮುಕ್ತವಾಗಿ ತಮ್ಮ ಚಿಂತೆ ಮತ್ತು ನೋವನ್ನು ಮರೆತು, ಹುರುಪು ಹಾಗೂ ಉತ್ಸಾಹದಿಂದ ನಕ್ಕು ನಲಿದಾಡಿದರು, ಸ್ನೇಹ ಮತ್ತು ಒಡನಾಟವನ್ನು ಸ್ಮರಿಸಿ ವಿವಿಧ ಅನುಭವಗಳನ್ನು ಹಂಚಿಕೊಂಡರು. ಅದಲ್ಲದೇ ತಮ್ಮಲ್ಲಿ ಹುದುಗಿದ ಕ್ರೀಡಾ ಸಾಮಥ್ರ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದರು. ಪ್ರತಿಯೊಬ್ಬರ ಮುಖದ ಮೇಲೆ ಮಂದಹಾಸ ಎದ್ದು ಕಾಣುತ್ತಿತ್ತು.

 

ರೋಟರಿ ಚ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ಒಂದು ದಿನದ ರೋಟರಿ 17 ನೇ ವಾರ್ಷಿಕ ಅನಾಥಾಶ್ರಮ ಮಕ್ಕಳ ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧಾ ಕೂಟ ಹಾಗೂ ಉತ್ಸವವನ್ನು ತಾ.10.01.16 ರಂದು ನಗರದ ಉರ್ವ ಕೆನರಾ ಪ್ರೌಢಶಾಲೆಯ ಪ್ರಾಂಗಣದಲ್ಲಿ ಆಯೋಜಿಸಲಾಗಿತ್ತು.

ಶಾಸಕ ಶ್ರೀ ಜೆ.ಆರ್. ಲೋಬೋ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಸಮಾಜವು ಅಪರೂಪವಾಗಿ ಒದಗಿಸಿದ ಸೂಕ್ತ ಅವಕಾಶ ಮತ್ತು ಪ್ರೋತ್ಸಾಹವನ್ನು ಸೂಕ್ತವಾಗಿ ಬಳಸಿ, ಕ್ರಿಯಾಶೀಲರಾಗಿ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಪ್ರದರ್ಶಿಸಿ ಯಶಸ್ಸು ಸಾಧಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು. ರೋಟರಿ ಸಂಸ್ಥೆಯ ಸ್ವಹಿತ ಮೀರಿದ ನಿಸ್ವಾರ್ಥ ಸೇವೆ, ಸಾಮಾಜಿಕ ಸೇವೆ ಮತ್ತು ಜನ ಹಿತ ಚಟುವಟಿಕೆಗಳು ಶ್ಲಾಘನೀಯ ಮತ್ತು ಅನುಕರಣೀಯ ಎಂದು ನುಡಿದರು. ರೋಟರಿ ಸಂಸ್ಥೆಯು 1998 ರಲ್ಲಿ ಪಿಲಿಕುಳದÀ ವಿಜ್ಞಾನ ಕೇಂದ್ರಕ್ಕೆ ನೀಡಿದ ರೂ.18 ಲಕ್ಷ ದೇಣಿಗೆಯನ್ನು ಸ್ಮರಿಸಿದರು. ರೋಟರಿ ವಲಯ 4ರ ಸಹಾಯಕ ಗವರ್ನರ್ ರೊ. ಕೆ.ಆರ್. ಕಾಮತ್ ರವರು ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು.

ಸಂಘಟನಾ ಅಧ್ಯಕ್ಷ ರೊ ಡಾ. ದೇವದಾಸ್ ರೈ ಯವರು ತಮ್ಮ ಭಾಷಣದಲ್ಲಿ ಈ ವಾರ್ಷಿಕ ಕಾರ್ಯಕ್ರಮವು ತಮ್ಮ ಸಂಸ್ಥೆಯ ಪ್ರತಿóಷ್ಠಿತ ಸಮಾಜ ಸೇವಾ ಚಟುವಟಿಕೆಯ ಅಂಗವಾಗಿದ್ದು, ಅನಾಥಾಶ್ರಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಒದಗಿಸಿ ಪ್ರೋತ್ಸಾಹಿಸುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಎಂದು ನುಡಿದರು.

ಸಂಸ್ಥೆಯ ಅಧ್ಯಕ್ಷ ರೊ. ಇಲಾಯಸ್ ಸ್ಯಾಂಕ್ಟಿಸ್ ಸ್ವಾಗತಿಸಿದರು, ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ರೊ. ರಾಜೇಶ್ ದೇವಾಡಿಗ ವಂದಿಸಿದರು. ರೊ. ಕೆ.ಎಮ್. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ರೊ. ಪ್ರಸಾದ್ ಶಟ್ಟಿ ಮತ್ತು ರೊ. ಯತೀಶ್ ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here