Saturday 27th, April 2024
canara news

ಪಿಲಿಕುಳಕ್ಕೆ ಸಿಂಹ ಬಾಲದ ಕಪಿಗಳ ಸೇರ್ಪಡೆ

Published On : 24 Jan 2016   |  Reported By : Canaranews Network   |  Pic On: photo credit: The Hindu

ಮಂಗಳೂರು: ಅಪರೂಪದ ಒಂದು ಜೊತೆ ಸಿಂಹ ಬಾಲದ ಕಪಿಗಳು (ಲಯನ್ ಟೈಲ್ಡ್ ಮ್ಯಾಕೆವ್) ಪಿಲಿಕುಳ ಉದ್ಯಾನವನಕ್ಕೆ ಸೇರ್ಪಡೆಯಾಗಿವೆ. ಕೇರಳದ ಪರಶಿನಕಡವು ಮೃಗಾಲಯದಿಂದ ಇವುಗಳನ್ನು ತರಲಾಗಿದೆ.ಸಿಂಹಬಾಲದ ಕಪಿಗಳು ಅವಸಾನದ ಅಂಚಿನಲ್ಲಿರುವ ಪ್ರಬೇಧವಾಗಿದ್ದು, ಇವು ಪಶ್ಚಿಮ ಘಟ್ಟಕ್ಕೆ ಮಾತ್ರ ಸೀಮಿತವಾಗಿವೆ.

ನಿತ್ಯಹರಿದ್ವರ್ಣದ ಕಾಡಿನಲ್ಲಿ ಕಾಣಸಿಗುವ ಇವು ಕೇರಳದ ಸೈಲೆಂಟ್ ವ್ಯಾಲಿ, ಆಗುಂಬೆ ಇತ್ಯಾದಿ ಕೆಲವೇ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಇವು ಅರಣ್ಯದಲ್ಲಿ ಎತ್ತರದ ಮರಗಳ ತುದಿಗಳಲ್ಲಿ ಹಿಂಡಾಗಿ ವಾಸಿಸುತ್ತವೆ. ಒಂದು ವಾರದ ಅನಂತರ ಪಿಲಿಕುಳದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇದನ್ನು ತೆರೆದಿಡಲಾಗುವುದು ಎಂದು ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.

More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here