Friday 26th, April 2024
canara news

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟಿ ಪ್ರಥಮ ಪ್ರತಿ ಸಂಪಾದಕರಿಂದ ಅಧ್ಯಕ್ಷರಿಗೆ ಹಸ್ತಾಂತರ

Published On : 27 Jan 2016   |  Reported By : Rons Bantwal


ಮಂಗಳೂರು. ಜ, 27: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಹತ್ವಾಕಾಂಕ್ಷೆ ಯೋಜನೆಯಾದ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟಿನ ತಯಾರಿಯು ಕಳೆದ 14 ತಿಂಗಳುಗಳಿಂದ ಪ್ರಗತಿಯಲ್ಲಿದ್ದು, ಅದರ ಪ್ರಥಮ ಕರಡು ಪ್ರತಿಯನ್ನು ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಮತ್ತು ರಿಜಿಸ್ಟ್ರಾರ್ ಉಮರಬ್ಬರವರಿಗೆ ಸಂಪಾದಕ ಪೆÇ್ರ. ಬಿ.ಎಂ. ಇಚ್ಲಂಗೋಡು, ಸಹ-ಸಂಪಾದಕರಾದ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಹಾಗೂ ಝೊಹರಾ ಅಬ್ಬಾಸ್ ಸೇರಿ ಹಸ್ತಾಂತರಿಸಿದರು.

ಅಕಾಡೆಮಿಯ ಅಧ್ಯಕ್ಷರಾದ ಬಿ.ಎ. ಮುಹಮ್ಮದ್ ಹನೀಫ್ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಸ್ವೀಕರಿಸಿ ಮಾತನಾಡಿ, ಪೆÇ್ರ. ಬಿ.ಎ. ವಿವೇಕ ರೈ ನೇತೃತ್ವದ ಸಲಹಾ ಮಂಡಳಿಯ ಸಹಕಾರದೊಂದಿಗೆ ಸಾಕಷ್ಟು ಹೆಚ್ಚಿನ ಬ್ಯಾರಿ ಶಬ್ಧಗಳನ್ನು ಸಂಗ್ರಹಿಸಿ ಅದರ ಕನ್ನಡ ಹಾಗೂ ಇಂಗ್ಲಿಷ್ ಅರ್ಥಗಳೊಂದಿಗೆ ಕರಡು ಪ್ರತಿ ತಯಾರಿಸಲಾಗಿದ್ದು, 2016ರ ಸೆಪ್ಟೆಂಬರ್ 30ರ ಒಳಗೆ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟನ್ನು ಪ್ರಿಂಟಿಂಗ್‍ಗೆ ನೀಡಿ ನಂತರದ ಎರಡು ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಹಮೀದ್ ಪಡುಬಿದ್ರಿ, ಕೆ.ಇದಿನಬ್ಬ ಬ್ಯಾರಿ, ಯೂಸುಫ್ ವಕ್ತಾರ್, ಎ.ಎ. ಆಯಿಶಾ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here