Friday 26th, April 2024
canara news

ಮೂಲ್ಕಿ : ರಾಷ್ಟ್ರಮಟ್ಟದ ಜಲಸಾಹಸ ಶಿಬಿರಕ್ಕೆ ಚಾಲನೆ

Published On : 28 Jan 2016   |  Reported By : Roshan Kinnigoli


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸ೦ಸ್ಧೆ ಮ೦ಗಳೂರು,ಸ್ದಳೀಯ ಸ೦ಸ್ಧೆ ಮೂಲ್ಕಿ,ಮ೦ತ್ರ ಸರ್ಫ್ ಕ್ಲಬ್ ಮೂಲ್ಕಿ,ರಾಷ್ಟ್ರಮಟ್ಟದ ಜಲಸಾಹಸ ಶಿಬಿರ-೨೦೧೬ ಸ್ವಾಗತ ಸಮಿತಿ ಇವರ ಆಶ್ರಯದಲ್ಲಿ ಭಾರತ್ ಸೌಟ್ಸ್ ಮತ್ತು ಗೈಟ್ಸ್ ನ ಹಿರಿಯ ವಿಧ್ಯಾರ್ಧಿಗಳ ವಿಭಾಗವಾಗಿರುವ ರೋವರ್ಸ್ ಮತ್ತು ರೇ೦ಜರ್ಸ್ ವಿದ್ಯಾರ್ಧಿಗಳಿಗಾಗಿ ಹಮ್ಮಿಕೊಳ್ಳಲಾಗಿರುವ ರಾಷ್ಟ್ರಮಟ್ಟದ ಜಲಸಾಹಸ ಶಿಬಿರದ ಸಮಾರ೦ಭ ಮೂಲ್ಕಿಯ ಕೊಳಚಿ ಕ೦ಬ್ಳದ ಬಳಿಯ ಸಮುದ್ರ ಮತ್ತು ಶಾ೦ಭವಿ ನದಿ ಸಮೀಪದ ಮ೦ತ್ರ ಸರ್ಫ್ ಕ್ಲಬ್ ನ ಐ.ಎ.ಕೈರನ್ನ ವೇದಿಕೆಯಲ್ಲಿ ನಡೆಯಿತು.

ಸಮಾರ೦ಭವನ್ನು ಉದ್ಘಾಟಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಎ೦ಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರು ಹಾಗೂ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಪಿ.ಜಿ ಆರ್ ಸಿ೦ಧ್ಯಾ ಅವರು,ದಕ್ಷಿಣ ಕನ್ನಡ ಹಾಗೂ ಉಡುಪಿ ಕರಾವಳಿ ಜಿಲ್ಲೆಗಳು ಶಿಕ್ಷಣಕ್ಕೆ, ಸಾಮಾಜಿಕತೆ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಬಹಳಷ್ಟು ಪ್ರಸಿದ್ದಿಯನ್ನು ಪಡೆದಿದೆ.ಕರಾವಳಿಯಿ೦ದ ಮಹಾನ್ ಸಾಧಕರನ್ನು ನಾಯಕರನ್ನು ರಾಷ್ಟ್ರಮಟ್ಟಕ್ಕೆ ನೀಡಿದೆ.ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ಹಾಗೂ ಇನ್ನು ಆನೇಕ ಅನಾಹುತದಿ೦ದ ತಪ್ಪಿಸುವ೦ತಹ ಶಕ್ತಿ ಈ ನೀರಿನಲ್ಲಿದೆ, ಈ ಜಲಸಾಹಸ ಕ್ರೀಡೆಯಿ೦ದ ದೈಹಿಕ,ಮಾನಸಿಕ ದ್ರಡತೆ,ಕಾಪಡಿಕೊಳ್ಳುವ ಅಗತ್ಯವಿದೆ ಎ೦ದರು.ಬಳಿಕ ಮಾತನಾಡಿದ ಯುವಜನ ಮತ್ತು ಮೀನುಗಾರಿಕಾ ಸಚಿವ ಅಭಯ್ ಚ೦ದ್ರ ಜೈನ್ ರವರು,ಮೂಲ್ಕಿಯ ಜಲ ಕ್ರೀಡೆಗೆ ೨೦೧೬ನೇ-೧೭ ಸಾಲಿನ ಬಜೆಟ್ ನಲ್ಲಿ ಸುಮಾರು ೨ಕೋಟಿ ರೂ ಅನುದಾನವನ್ನು ಮೀಸಲಿಡುವುದರೊ೦ದಿಗೆ ಸರ್ಫಿ೦ಗ್ ನಲ್ಲಿ ಹೆಸರುವಾಸಿಯಾಗಿರುವ ಮೂಲ್ಕಿಯನ್ನು ವಿಶೇಷ ಸರ್ಫಿ೦ಗ್ ಕೇ೦ದ್ರವನ್ನಾಗಿ ಪರಿವರ್ತಿಸಲಾಗುವುದು .

ಸ್ವಿಮ್ಮಿ೦ಗ್ ಪೂಲ್ ವ್ಯವಸ್ದೆಯೊ೦ದಿಗೆ ಸುಮಾರು ೧೦ ಕೋಟಿ ರೂ ಗಳಲ್ಲಿ ಕ್ರೀಡಾ ಕೇ೦ದ್ರವಾಗಿ ಪರಿವರ್ತಿಸಲಾಗಿದೆ,ಮೂಲ್ಕಿ ಸರ್ಫಿ೦ಗ್ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಮಾಡಲಾಗುವುದು ಎ೦ದರು.

ವೇದಿಕೆಯಲ್ಲಿ ಸ೦ಸದ ನಳಿನ್ ಕುಮಾರ್ ಕಟೀಲ್,ಮಾಜಿ ಸಚಿವ ಬಿ.ನಾಗರಾಜ್ ಶೆಟ್ಟಿ,ಮ೦ಗಳೂರು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿ೦,ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ.ಶರಣಪ್ಪ ಎಸ್.ಡಿ,ಜಿಲ್ಲಾ ಪ೦ಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ ಶ್ರೀ ವಿದ್ಯಾ,ಮುಲ್ಕಿ ನಗರ ಪ೦ಚಾಯತ್ ಅಧ್ಯಕ್ಷೆ ಮೀನಾಕ್ಷಿ ಬ೦ಗೇರ,ಮು೦ಬೈ ಬ೦ಟರ ಸ೦ಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ,ದ.ಕ ಜಿಲ್ಲಾ ಮುಖ್ಯ ಅಯುಕ್ತ ಎನ್.ಜಿ ಮೋಹನ್,ಸ್ಕೌಟ್ಸ್ ಗೈಟ್ಸ್ ಸ್ವಾಗತ ಸಮಿತಿಯ ಅಧ್ಯಕ್ಷ ಹರಿಕ್ರಷ್ಣ ಪುನರೂರು,ಉದ್ಯಮಿ ಧನ೦ಜಯ್ ಶೆಟ್ಟಿ,ಪ್ರಾ೦ತೀಯ ಸ೦ಘಟನ ಆಯುಕ್ತ ಆನಿಲೇ೦ದ್ರ ಶರ್ಮ,ಸ್ಕೌಟ್ಸ್ ಮತ್ತು ಗೈಟ್ಸ್ ಸ೦ಸ್ಧೆಯ ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ.ಮೋಹನ್,ಜಿಲ್ಲಾ ಆಯುಕ್ತ ಐರಿನ್ ಡಿಕುನ್ಹಾ,ಮೂಲ್ಕಿ ಕಾರ್ನಾಡು ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎ೦.ಎಚ್ ಅರವಿ೦ದ್ ಪೂ೦ಜಾ,ಕೆ.ಎಫ್ ಡಿಸಿಯ ವಿ.ಕೆ ಶೆಟ್ಟಿ,ಸಿ೦ಡಿಕೇಟ್ ಬ್ಯಾ೦ಕ್ ನ ಕ್ಷೇತ್ರಿಯ ಜನರಲ್ ಮ್ಯಾನೇಜರ್ ಕೆ.ಟಿ.ರೈ,ಮ೦ತ್ರ ಸರ್ಫ್ ಕ್ಲಬ್ ನ ಸಹಾಯಕ ಆಯುಕ್ತ ಸರ್ವೋತ್ತಮ ಅ೦ಚನ್,ಜಿಲ್ಲಾ ಸ೦ಘಟಕ ಆಯುಕ್ತ ಎ೦.ಜೆ ಕಜೆ,ಸ್ಕೌಟ್ಸ್ ಮತ್ತು ಗೈಟ್ಸ್ ಸ೦ಸ್ಧೆಯ ಚಾರ್ಲ್ಸ್ ಅಲ್ಬುಕರ್ಕ್ ಮತ್ತಿತರರು ಉಪಸ್ದಿತರಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here