Saturday 27th, April 2024
canara news

ಜಾಗತಿಕ ಮಹಿಳಾ ದಿನಾಚರಣೆ ತಾಯ್ತನ ಮೌಲ್ಯದ ಆಚರಣೆ

Published On : 08 Mar 2016   |  Reported By : Rons Bantwal


ಮಹಿಳೆಯರೇ ಸಮಾಜದ ಬಲಿಷ್ಠ ಬುನಾದಿ:ಮೇಡಂ ಗ್ರೇಸ್ ಪಿಂಟೋ

ಮುಂಬಯಿ, ಮಾ.08: ``ಸಮಾಜದ ವೇಗವಾದ ಬದಲಾವಣೆಗೆ ವಿಶ್ವದ ಮಹಿಳೆಯರನ್ನು ಸಜ್ಜುಗೊಳಿಸುವುದು'' ಈ ಸುಂದರವಾದ ಹೇಳಿಕೆಯನ್ನು ನೀಡಿದವರು ಸಂಯುಕ್ತ ರಾಷ್ಟ್ರಗಳ ಜನರಲ್ ಅಸೆಂಬ್ಲಿಯ ಮಾಜಿ ಅಧ್ಯಕ್ಷ ಚಾಲ್ರ್ಸ್ ಮಲಿಕ್. ಈ ಹೇಳಿಕೆ ಸಮಾಜದಲ್ಲಿ ಮಹಿಳೆಯ ಸ್ಥಾನದ ಮಹತ್ವವನ್ನು ತಿಳಿಸುತ್ತದೆ. ಇತಿಹಾಸ ತುಂಬಾ ಮಹಿಳೆಯ ಸಾಮಾಜಿಕ, ಆಥಿರ್üಕ ಮತ್ತು ಸಾಂಸ್ಕøತಿಕ ಕೊಡುಗೆಗಳ ಉದಾಹರಣೆಗಳಿಂದಲೇ ತುಂಬಿ ಹೋಗಿದೆ. ಮಹಿಳೆಯರು ದುಷ್ಟ ಆಚರಣೆಗಳ ವಿರುದ್ದ ಹೋರಾಡಿ ವಿಶ್ವದ ಬದಲಾವಣಾ ಹರಿಕಾರರಾಗಿ ಹೊರ ಹೊಮ್ಮಿದರು. ಹಾಗಾಗಿ ಅಂತರಾಷ್ಟ್ರೀಯ ಮಹಿಳಾ ದಿನ ಸಾಮಾನ್ಯ ಮಹಿಳೆಯರು ಸಮಾಜದ ಬದಲಾವಣೆಗಾಗಿ ನಿರ್ವಹಿಸಿದ ಅದ್ಭುತವಾದ, ಸ್ಪೂರ್ತಿದಾಯಕ, ಸಾಹಸಮಯ, ಅಸಾಮಾನ್ಯವಾದ ಕೆಲಸಗಳನ್ನು ಗುರುತಿಸಲು ಮತ್ತು ಗೌರವಿಸಲು ದೊರೆತಿರುವ ಒಂದು ಅದ್ಭುತವಾದ ಸುಸಂದರ್ಭ ಎಂದು ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ಪ್ರವರ್ತಕಿ-ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ತಿಳಿಸಿದರು.

ಮಹಿಳೆಯರು ಇದುವರೆಗೆ ಸಮಾಜಕ್ಕೆ ನೀಡಿದ ಅದ್ಭುತ ಕೊಡುಗೆಗಳ ಇತಿಹಾಸಗಳ ಪುಟಗಳನ್ನು ತಿರುಗಿ ನೋಡುವ ಹೆಮ್ಮೆಯ ದಿನವಿದು. ಈ ಅಸಾಮಾನ್ಯ ಸಾಧನೆಗಳನ್ನು ಮಾಡಿದ ಮಹಿಳೆಯರಿಗೆ ನಾವು ಸೆಲ್ಯೂಟ್ ಕೊಡುವ ದಿನ. ಅದೇ ರೀತಿ ಅದೆಷ್ಟೋ ತೆರೆಮರೆಯಲ್ಲಿ ಘಮಿಘಮಿಸುವ ಮಲ್ಲಿಗೆಯಂತೆ ಕಂಪು ಸೂಸಿ ಮರೆಯಾದ ಮಹಿಳೆಯರನ್ನು ಮತ್ತು ಅವರ ಸಾಮಥ್ರ್ಯವನ್ನು ಅರ್ಥೈಸಿಕೊಂಡು ಗೌರವ ಸೂಚಿಸುವ ದಿನ ಎಂದು ಕಾಂದಿವಿಲಿ ಪೂರ್ವದ ಆಶಾನಗರದಲ್ಲಿನ ರಾಯನ್ ಶಾಲೆಯಲ್ಲಿ ಇಂದಿಲ್ಲಿ ಜಾಗತಿಕ ಮಹಿಳಾ ದಿನಾಚರಣಾ ಕಾರ್ಯಕ್ರಮ ವನ್ನುದ್ದೇಶಿಸಿ ಮೇಡಂ ಪಿಂಟೋ ತಿಳಿಸಿದರು.

ಮಹಿಳೆ ಸಮಾಜದ ಮಹತ್ವದ ಕಂಬ. ಈ ಮಹಿಳೆ ಸಮಾಜದಲ್ಲಿ ಬಹುಪಾತ್ರಗಳನ್ನು ನಿರ್ವಹಿಸುವ ಸಾಮಥ್ರ್ಯವುಳ್ಳವಳು. ಅದನ್ನು ಆಕೆ ಒಬ್ಬ ತಾಯಿಯಾಗಿ, ಅರ್ಧಾಂಗಿಯಾಗಿ, ಸಹೋದರಿಯಾಗಿ, ಮಗಳಾಗಿ, ಗೆಳತಿಯಾಗಿ ಸಮರ್ಥವಾಗಿ ನಿರ್ವಹಿಸಿ ತೋರಿಸಿದ್ದಾಳೆ. ಇಷ್ಟು ಮಾತ್ರವಲ್ಲ ಆಕೆ ಕೆಲಸದ ಸ್ಥಳದಲ್ಲಿ ಒಬ್ಬ ಜವಾಬ್ದಾರಿಯುವ ಉದ್ಯೋಗಿಯಾಗಿ ಕೂಡ ತನ್ನ ಕೆಲಸವನ್ನು ನಿರ್ವಹಿಸುತ್ತಾಳೆ. ಒಬ್ಬ ಮಹಿಳೆ ರಚನೆ, ಪಾಲನೆ, ಪರಿವರ್ತನೆಯ ಶಕ್ತಿಯನ್ನು ಹೊಂದಿದ್ದಾಳೆ. ಇದಕ್ಕಾಗಿಯೇ ಮಹಿಳೆಯ ಮೇಲೆ ಹುಟ್ಟಿಕೊಂಡ ನಾಣ್ಣುಡಿಯೊಂದು ಹೀಗೆ ಹೇಳುತ್ತದೆ ``ಮಹಿಳೆ ಸಾಮಥ್ರ್ಯ ಮತ್ತು ಘನತೆಯ ವಸ್ತ್ರ''ಎಂದು. ಮಹಿಳೆ ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಅಪಾರವಾದ ಕೊಡುಗೆಗಳಿಗಾಗಿ ಆಕೆಯನ್ನು ಸುಸ್ಥಿರವಾದ ಅಭಿವೃದ್ದಿಯ ಕೀಲಿ ಕೈ, ಪ್ರಗತಿಯ ಮೂಲ ಎಂದು ಪರಿಗಣಿಸಲಾಗಿದೆ.

ಮಹಿಳೆಯರು ನಿರ್ವಹಿಸಿದ ಪಾತ್ರದಿಂದ ಸಮಾಜದಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಾಣಬಹುದು. ಈ ಬದಲಾವಣೆ ವಿವಿಧ ಕ್ಷೇತ್ರಗಳಲ್ಲಿ ಕಂಡುಬರುತ್ತದೆ. ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಹೀಗೆ ಮಹಿಳೆಯರ ಸಾಧನಾ ಕ್ಷೇತ್ರ ವಿಶಾಲವಾಗಿದೆ. ತನ್ನ ಹಕ್ಕುಗಳು, ಘನತೆ ಮತ್ತು ಸಾಮಥ್ರ್ಯದ ಬಗ್ಗೆ ಅರಿತು ಕೊಂಡಿದ್ದಾಳೆ. ನನ್ನ ಸ್ವಂತ ಅನುಭವದ ಪ್ರಕಾರ ಹೇಳಬೇಕೆಂದರೆ, ಒಬ್ಬ ಮಹಿಳೆ ಇಡೀ ಸಮಾಜವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದ್ದಾಳೆ ಎಂದು ನಾನು ನಂಬಿದ್ದೇನೆ.

ಮಹಿಳೆಯನ್ನು ದೇವರು ವಿಶೇಷ ಯೋಜನೆಯಿಂದ ಸೃಷ್ಟಿಸಿದ್ದಾನೆ. ಅದಕ್ಕಾಗಿ ಇಂದು ನಾನು ಭಗವಂತ ಜೀಸಸ್‍ಗೆ ಕೃತಜ್ಞಳಾಗಿದ್ದೇನೆ. ಆತನ ನಿರಂತವಾದ ಆಶೀರ್ವಾದಿಂದ ನಮ್ಮ ದೇಶದ ಮಕ್ಕಳು, ಬಡವರ್ಗ ಮತ್ತು ಅವಶ್ಯಕತೆ ಉಳ್ಳವರು ಅವರ ದೃಷ್ಟಿಕೋನಗಳನ್ನು ತಲುಪಲು ಸಮರ್ಥರಾಗಿದ್ದಾರೆ. ನಾನು 20% ಕ್ಕೂ ಅಧಿಕ ವಿದ್ಯಾಥಿರ್üಗಳಿಗೆ ಉಚಿತ ಶಿಕ್ಷಣ ನೀಡುವುದರಲ್ಲಿ ಸಂತೋಷ ಕಾಣುತ್ತಿದ್ದೇನೆ. ಇವರಲ್ಲಿ ನಿರ್ಗತಿಕರು, ವಿಧವಾ ಮಕ್ಕಳು, ಏಕ ಹೆತ್ತವರನ್ನು ಹೊಂದಿರುವವರು, ಮೂಲ ಸೌಕರ್ಯದ ಕೊರತೆಯಿಂದ ಬಳಲುತ್ತಿರುವವರು ಮತ್ತು ನಮ್ಮ ಎಲ್ಲಾ ನಾಲ್ಕನೇ ದರ್ಜೆಯ ಉದ್ಯೋಗಿಗಳ ಮಕ್ಕಳು ಸೇರಿದ್ದಾರೆ. ಒಬ್ಬ ಮಹಿಳಾ ನಾಯಕಿಯಾಗಿ ನನ್ನಿಂದ ಈ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿರುವುದು ಆ ಭಗವಂತ. ಹಾಗಾಗಿ ನನ್ನ ಈ ಎಲ್ಲಾ ಕೆಲಸಗಳ ಗೌರವವೆಲ್ಲವನ್ನೂ ನಾನು ಭಗವಂತನಿಗೆ ಅರ್ಪಿಸುತ್ತೇನೆ ಎಂದೂ ಮೇಡಂ ಗ್ರೇಸ್ ತಿಳಿಸಿದರು.

ನನ್ನ ಜೀವನಕ್ಕೆ ಆದರ್ಶ ಮಹಿಳೆಯಾದ ಮದರ್ ತೆರೆಸಾ ಹೇಳಿದ ಈ ಅರ್ಥಪೂರ್ಣವಾದ ಮಾತೊಂದನ್ನು ನಾನು ಇಲ್ಲಿ ನೆನಪಿಸಲು ಇಷ್ಟಪಡುತ್ತೇನೆ. ``ನನಗೆ ಗೊತ್ತು, ನನಗೆ ನಿರ್ವಹಿಸಲಾಗುವುದಿಲ್ಲ ಎಂದಾದರೆ ದೇವರು ನನಗೆ ಏನೂ ಕೊಡುವುದಿಲ್ಲ ಎಂದು ನನಗೆ ಗೊತ್ತು. ನಾನು ಆಶಿಸುವುದೇನೆಂದರೆ ನನ್ನಲ್ಲಿ ಅಷ್ಟೊಂದು ನಂಬಿಕೆಯಿಡುವುದು ಬೇಡ''ಎಂದು. ಅಪರಿಮಿತ ಉತ್ಸಾಹ, ಕರುಣೆ ಮತ್ತು ನಿರ್ಣಯಗಳಿಂದಾಗಿ ನಾವು ನಮ್ಮ ಶಾಲೆಗಳ ಮುಖಾಂತರ ಮೌಲ್ಯಯುತವಾದ ಶಿಕ್ಷಣ ಮತ್ತು ಜೀವನ ಪರ್ಯಂತ ಶಿಕ್ಷಣದಿಂದ ವಿದ್ಯಾಥಿರ್üಗಳನ್ನು ಅಭಿವೃದ್ದಿಪಡಿಸಲು ಸಾಧ್ಯವಾಗಿದೆ. ಒಬ್ಬ ಮಹಿಳೆಯಾಗಿ ಇಷ್ಟು ವರ್ಷಗಳಿಂದ ನಾನು ಕಲಿತಿರುವುದನ್ನು ಅರ್ಥೈಸಲು ಎಲಿಯನರ್ ರೂಸ್‍ವೆಲ್ಟ್ ಹೇಳಿದ ಮಾತಿನಿಂದಲೇ ವರ್ಣಿಸುವುದು ಹೆಚ್ಚು ಅರ್ಥಗರ್ಭಿತವೆನಿಸುತ್ತದೆ. ``ನಿಮ್ಮ ಅರಿವಿಲ್ಲದೆ ಯಾರೊಬ್ಬರೂ ತಮ್ಮ ಭಾವನೆಗಳನ್ನು ಕೀಳು ಮಾಡಲು ಸಾಧ್ಯವಿಲ್ಲ'' ಮಹಿಳೆ ಬಗ್ಗೆ ಹೆಮ್ಮೆಯಾಗುತ್ತಿದೆ. ಏಕೆಂದರೆ ಒಬ್ಬ ಮಹಿಳೆ ಕುಟುಂಬದ ಮತ್ತು ಸಮಾಜದ ತಳಪಾಯ. ಎಲ್ಲೆಡೆಯಲ್ಲಿಯೂ ಆಕೆ ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತಿದ್ದಾಳೆ.

ಶತಮಾನಗಳಿಂದಲೂ ಮಹಿಳೆಯರು ಪ್ರವರ್ತಕರಾಗಿ, ಪ್ರತಿನಿಧಿಗಳಾಗಿ ಪ್ರತಿಯೊಂದು ಕ್ಷೇತ್ರಕ್ಕೂ ಜ್ಞಾನ ಮತ್ತು ಕೌಶಲ್ಯವನ್ನು ನೀಡುತ್ತಾ ಬಂದಿದ್ದಾರೆ. ಈ ಅಂತರಾಷ್ಟ್ರೀಯ ಮಹಿಳಾ ದಿನದಂದು ಜಗತ್ತಿನಾದ್ಯಂತದ ಲಕ್ಷಗಟ್ಟಲೆ ಮಹಿಳೆಯರು ಶಿಕ್ಷಣ, ಆರೋಗ್ಯ ಕೇಂದ್ರ ಮತ್ತು ಇತರ ಅನೇಕ ಕ್ಷೇತ್ರಗಳಲ್ಲಿ ನೀಡುತ್ತಿರುವ ಅವರ ಅದ್ಭುತವಾದ ಸಾಧನೆಯನ್ನು ನೆನಪಿಸುತ್ತದೆ. ಮಾತ್ರವಲ್ಲ ಈ ದಿನ ಈ ಎಲ್ಲಾ ಮಹಿಳೆಯರನ್ನು ಸಂಪರ್ಕಿಸಿಕೊಳ್ಳುವುದರೊಂದಿಗೆ ತಮ್ಮ ಈ ದಿನವನ್ನು ಉಜ್ವಲವಾದ ಭವಿಷ್ಯ, ಸಮಾನತೆ, ಸುರಕ್ಷತೆ ಭರವಸೆಯೊಂದಿಗೆ ಆಚರಿಸಲು ಸ್ಪೂರ್ತಿಯಾಗಲಿ ಎಂಬುದು ನನ್ನ ಆಶಯ. ಮಹಿಳಾ ದಿನಾಚರಣೆಯ ಸಂಭ್ರಮದಲ್ಲಿರುವ ಎಲ್ಲಾ ಮಹಿಳೆಯರಿಗೆ ನಾನು ನೀಡುವ ಸಂದೇಶವೇನೆಂದರೆ ``ಯಾವಾಗಲೂ ಮುಂದುವರಿಯಿರಿ, ಯಾವತ್ತೂ ಹಿಂದೆ ಸರಿಯಬೇಡಿ'' ಎಂದೂ ಮೇಡಂ ಗ್ರೇಸ್ ಪಿಂಟೋ ಸಮಗ್ರ ಮಹಿಳೆಯರಿಗೆ ಕರೆಯನ್ನಿತ್ತರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here