Saturday 27th, April 2024
canara news

ಅಂತರಾಜ್ಯ ದರೋಡೆಕೋರರ ಬಂಧನ

Published On : 20 Mar 2016   |  Reported By : Rons Bantwal


ವಿಟ್ಲ: ಖಚಿತ ಮಾಹಿತಿ ಮೇರೆಗೆ ದ ಕ ಜಿಲ್ಲೆಯಲ್ಲಿ 12ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾದ ಮೂರು ಮಂದಿ ಅಂತರಾಜ್ಯ ದರೋಡೆಕೋರರನ್ನು ಬಂಟ್ವಾಳ ವೃತ್ತ ನಿರೀಕ್ಷಕರ ನೇತೃತ್ವದ ವಿಟ್ಲ ಪೆÇಲೀಸರ ತಂಡ ಬಂಧಿಸಿದ ಘಟನೆ ಗುರುವಾರ ಬೆಳಗ್ಗಿನ ಜಾವ ಕಲ್ಲಡ್ಕ ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಸಾರಡ್ಕ ಚೆಕ್‍ಪೆÇೀಸ್ಟ್ ಬಳಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಚಂದ್‍ಕೂರು ನಿವಾಸಿ ಕೆಂಪಯ್ಯ ಯಾನೆ ಹರೀಶ್ ಶೆಟ್ಟಿ ಯಾನೆ ರವಿ (45), ಮಂಜೇಶ್ವರ ಬೇಕೂರು ಅಗರ್ತಮೂಲೆ ನಿವಾಸಿ ಫಾರೂಕ್ ಯಾನೆ ಉಮ್ಮರ್ ಫಾರೂಕ್ (30), ಮಂಗಳೂರು ಕಲ್ಲಬೆಟ್ಟು ಸುವರ್ಣನಗರ ನಿವಾಸಿ ಸತೀಶ್ ಭಂಡಾರಿ ಯಾನೆ ಸತೀಶ್ (52) ಬಂಧಿತ ಆರೋಪಿಗಳಾಗಿದ್ದಾರೆ. ಮೀಯಪದವು ನಿವಾಸಿ ಆಶ್ರಫ್ ಯಾನೆ ಚಿಲ್ಲಿ ಅಶ್ರಫ್ ಪ್ರಕರಣದ ಇನ್ನೊಬ್ಬ ಆರೋಪಿಯಾಗಿದ್ದು ವಿದೇಶಕ್ಕೆ ಪಲಾಯನ ಮಾಡಿದ್ದಾನೆ. ಇವರಿಂದ ಕಳವುಗೈದ ಒಟ್ಟು ಮೂರು ಕಾರು, ಎರಡು ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಹಲವು ಪ್ರಕರಣದ ಆರೋಪಿಗಳು:
ವಿಟ್ಲ ಠಾಣಾ ವ್ಯಾಪ್ತಿಯ ಅನಂತೇಶ್ವರ ದೇವಸ್ಥಾನ ಸಮೀಪ ಅಡಿಕೆ ವ್ಯಾಪಾರಿಗೆ ಮೆಣಸಿನ ಪುಡಿಎರಚಿ ನಾಲ್ಕೂವರೆ ಲಕ್ಷ ದರೋಡೆ ಯತ್ನ, ಸಾಲೆತ್ತೂರು ವೈನ್ ಶಾಫ್ ಬಾಗಿಲು ಮುರಿದು ನಗದು ಕಳುವು, ಕನ್ಯಾನ ಕುಡ್ಪಲ್ತಡ್ಕ ಬೈಕ್ ಕಳ್ಳತನ ಪ್ರಕರಣ, ಮೂಡಬಿದ್ರೆ ಠಾಣಾ ಸರಹದ್ದಿನಲ್ಲಿ ವ್ಯಾಪಾರಿಯೊಬ್ಬರಮೇಲೆ ಹತ್ಯಾರಿನಿಂದ ಹಲ್ಲೆ ನಡೆಸಿ ಹಣ ದರೋಡೆ, ಕ್ಯಾಂಟೀನ್ ವ್ಯಾಪಾರಿಯ ಚಿನ್ನದ ಸರ ಹಾಗೂ ಹಣ ದರೋಡೆ, ಎರಡು 800 ಕಾರು ಹಾಗೂ ಬೈಕ್ ಕಳವು ಮಾಡಿದ ಪ್ರಕರಣ, ಉಳ್ಳಾಲ ಠಾಣೆಯ ನಾಟೆಕಲ್ಲು ಸಮಿಪ ವಾಹನ ನಿಲ್ಲಿಸಿ ನಾಲ್ಕೂವರೆ ಲಕ್ಷ ದರೋಡೆ, ತೊಕ್ಕೊಟ್ಟು ಬಳಿ ವಾಹನ ತಡೆದು ಹಲ್ಲೆ ನಡೆಸಿ ಒಂದುವರೆ ಲಕ್ಷ ದರೋಡೆ, ಮಾರುತಿ 800 ಕಳವು ಪ್ರಕರಣ, ಮಂಗಳೂರು ಗ್ರಾಮಾಂತರ ಠಾಣೆಯ ಕುಲಶೇಖರದಲ್ಲಿ 800 ಕಾರು ಕಳವು ಮಾಡಿದ ಪ್ರಕರಣ ಈ ತಂಡ ಮೇಲಿದೆ.

ರವಿ ಪೂಜಾರಿ ಸಹಚರ:
ಕೆಂಪಯ್ಯ ಯಾನೆ ಹರೀಶ್ ಶೆಟ್ಟಿಯ ಮೇಲೆಹೈದರಬಾದ್ ರಾಜಲಕ್ಷ್ಮೀ ಜುವೆಲ್ಲರ್ಸ್ 25 ಕೆಜಿ ಬಂಗಾರ ಕಳವು, ಬೆಂಗಳೂರು ಬಣಸವಾಡಿ ಚೆಮ್ಮನ್ನೂರು ಜುವೆಲ್ಲರ್ಸ್ 21ಕೆಜಿ ಬಂಗಾರ ಕಳವು, ಆರ್ ಟಿ ನಗರ ಕಾಪೆರ್Çರೇಷನ್ ಬ್ಯಾಂಕ್ 1.91ಕೋಟಿ ದರೋಡೆ, ಮುಂಬೈಯಲ್ಲಿ 5 ದರೋಡೆ ಪ್ರಕರಣಗಳಿದೆ. 8 ವರ್ಷಗಳ ಕಾಲ ಜೈಲಿನಲ್ಲಿದ್ದ ಆರೋಪಿಯಾಗಿರುತ್ತಾನೆ. ಅಲ್ಲದೇ ದರೋಡೆ ಪ್ರಕರಣದಲ್ಲಿ ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡವನಾಗಿರುತ್ತಾನೆ. ಈತ ಭೂಗತ ಪಾತಕಿ ರವಿ ಪೂಜಾರಿಯ ಸಹಚರನಾಗಿದ್ದಾನೆ.

ಸತೀಶ್ ಭಂಡಾರಿಯ ಮೇಲೆ ಮುಂಬೈಯಲ್ಲಿ ದರೋಡೆ, ಕೊಲೆ ಪ್ರಕರಣದ ಆರೋಪಿಯಾಗಿದ್ದು, ಪಣಂಬೂರು ಕೂಳೂರುನಲ್ಲಿ ಸುಮಾರು 6 ವರ್ಷಗಳ ಹಿಂದೆ ನಡೆದ ಶೂಟೌಟ್ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಉಮ್ಮರ್ ಫಾರೂಕ್ ಕೇರಳದ ಕುಂಬಳೆ ಮತ್ತು ಮಂಜೇಶ್ವರ ಪೆÇಲೀಸ್ ಠಾಣಾ ವ್ಯಾಪ್ತಿಯ ದರೋಡೆ ಹಾಗು ಕೊಲೆ ಪ್ರಕರಣದ ಆರೋಪಿಯಾಗಿರುತ್ತಾನೆ.ಈ ತಂಡವನ್ನು ಬಂಧಿಸುವ ಮೂಲಕ ದಕ್ಷಿಣ ಕನ್ನಡ, ಬೆಂಗಳೂರು, ಕಾಸರಗೋಡು, ಹೈದರಾಬಾದ್, ಮುಂಬಯಿ ಮೂಲದಸುಮಾರು 24 ಪ್ರಕರಣಗಳನ್ನು ವಿಟ್ಲ ಪೆÇಲೀಸರು ಬೇಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ಅಧೀಕ್ಷಕಡಾ.ಶರಣಪ್ಪ ಎಸ್.ಡಿ., ಹೆಚ್ಚುವರಿ ಪೆÇಲೀಸ್ ಅಧೀಕ್ಷಕವಿನ್ಸಂಟ್ ಶಾಂತಕುಮಾರ್, ಬಂಟ್ವಾಳ ಡಿವೈಎಸ್‍ಪಿ ಭಾಸ್ಕರ ರೈ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಪೆÇಲೀಸ್ ವೃತ್ತ ನಿರೀಕ್ಷಕಕೆ.ಯು.ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ವಿಟ್ಲ ಪೆÇಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಹಾಯಕ ಉಪನಿರೀಕ್ಷಕರಾದ ಕಿಟ್ಟುಮೂಲ್ಯ, ರುಕ್ಮಯ, ಸಿಬ್ಬಂದಿಗಳಾದ ಬಾಲಕೃಷ್ಣ, ಪ್ರವೀಣ್ ರೈ, ರಕ್ಷಿತ್ ರೈ, ಭವಿತ್ ರೈ, ಲೋಕೇಶ್, ಪ್ರವೀಣ್ ಕುಮಾರ್, ರಮೇಶ್, ಬಂಟ್ವಾಳ ಪೆÇಲೀಸು ವೃತ್ತ ನಿರೀಕ್ಷಕರ ತಂಡದ ಗಿರೀಶ್, ಜನಾರ್ಧನ, ನರೇಶ್ ಶೆಟ್ಟಿ, ಇಲಾಖಾ ಚಾಲಕನಾರಾಯಣ, ಕಂಪ್ಯೂಟರ್ ವಿಭಾಗದ ಪ್ರಶಾಂತ, ಸಂಪತ್ ಭಾಗವಹಿಸಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here