Friday 26th, April 2024
canara news

ಮಕ್ಕಳಿಗೆ ಪೋಲಿಯೋ ಲಸಿಕೆಯ ಜತೆಗೆ ಚುಚ್ಚುಮದ್ದು

Published On : 08 Apr 2016   |  Reported By : Canaranews Network


ಮಂಗಳೂರು: ಮಕ್ಕಳಿಗೆ ಪೋಲಿಯೋ ಲಸಿಕೆ ಜತೆಗೆ ಚುಚ್ಚುಮದ್ದು ರೂಪದಲ್ಲೂ ನೀಡುವ ಪ್ರಕ್ರಿಯೆ ಎ. 7ರಿಂದ ಪ್ರಾರಂಭಗೊಂಡಿದೆ.ಪೋಲಿಯೋ ನಿರ್ಮೂಲನಾ ಕಾರ್ಯಕ್ರಮದಡಿ ಪ್ರಸ್ತುತ ಲಸಿಕೆ ಹಾಕಲಾಗುತ್ತಿದ್ದು, ಇನ್ನು ಮುಂದೆ ಮಕ್ಕಳಿಗೆ ಪೋಲಿಯೋ ಹನಿ (ಒಪಿವಿ) ಹಾಕಿಸುವುದರ ಜತೆಗೆ ಚುಚ್ಚುಮದ್ದು ರೂಪದಲ್ಲಿಯೂ (ಐಪಿವಿ) ನೀಡಲಾಗುತ್ತದೆ. ವಿಶ್ವ ಆರೋಗ್ಯ ದಿನವಾದ ಎ. 7ರಂದು ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್ ತಿಳಿಸಿದ್ದಾರೆ.

ಚುಚ್ಚುಮದ್ದು ಮೂಲಕ ಪೊಲಿಯೋ ಲಸಿಕೆಯನ್ನು (ಐಪಿವಿ)ಹುಟ್ಟಿದ ಮಗುವಿಗೆ 6ನೇ ವಾರದಲ್ಲಿ ಮತ್ತು 14ನೇ ವಾರದಲ್ಲಿ ನಿಗದಿತ ಲಸಿಕೆ ಜೊತೆಗೆ ನೀಡಲಾಗುತ್ತದೆ. ಲಸಿಕೆ ಪ್ರಮಾಣ 0.1 ಎಂಎಲ್ ಆಗಿರುತ್ತದೆ.ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ,ಸಮುದಾಯ ಆಸ್ಪತ್ರೆ, ಸರಕಾರಿಆಸ್ಪತ್ರೆಗಳಲ್ಲಿ ಇದನ್ನು ಕೊಡಲಾಗುವುದು.ಚುಚ್ಚುಮದ್ದು ನೀಡುವುದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಚುಚ್ಚುಮದ್ದು ಮತ್ತು ಬಾಯಿ ಮೂಲಕ ಪೋಲಿಯೋ ಲಸಿಕೆ ನೀಡು ವುದರಿಂದ ಪೋಲಿಯೋ ವಿರುದ್ಧ ಎರಡು ಪಟ್ಟು ರಕ್ಷಣೆ ಲಭಿಸಿದಂತಾ ಗುತ್ತದೆ. ಒಂದು ವೇಳೆ ಪೋಲಿಯೋ ರೋಗ ದೇಶದಲ್ಲಿ ಮತ್ತೆ ಕಾಣಿಸಿ ಕೊಂಡರೂ ಒಪಿವಿ ಮತ್ತು ಐಪಿವಿ ಲಸಿಕೆ ನೀಡುವುದರಿಂದ ತೊಂದರೆ ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here