Friday 26th, April 2024
canara news

ಬಸ್ ನಿಲ್ದಾಣದಲ್ಲಿ ನೇಣು ಬಿಗಿದು ಆತ್ಮಹತ್ಯೆ

Published On : 15 Apr 2016   |  Reported By : Roshan Kinnigoli


ಕಿನ್ನಿಗೋಳಿ ಸಮೀಪದ ಮೂರುಕಾವೇರಿಯ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೋರ್ವನು ನೇಣು ಬಿಗಿದುಕೊ೦ಡು ಆತ್ಮಹತ್ಯೆ ಮಾಡಿಕೊ೦ಡಿರುವ ಘಟನೆ ನಡೆದಿದೆ. ಸುಮಾರು ೫೦ ವರ್ಷ ವಯಸ್ಸಾಗಿರುವ ಈ ವ್ಯಕ್ತಿ ಕೆಲವು ದಿನಗಳಿ೦ದ ಇದೇ ಬಸ್ ನಿಲ್ದಾಣವನ್ನು ತನ್ನ ಆಶ್ರಯತಾಣವನ್ನಾಗಿ ಮಾಡಿಕೊ೦ಡಿದ್ದ ಎನ್ನಲಾಗಿದೆ.

ಯಾರು ಕೂಡ ಬ೦ದು ಕೇಳಿದರೆ ಯಾವುದೇ ಮಾತನ್ನು ಆಡುತ್ತಿರಲಿಲ್ಲ ಎ೦ದು ಸ್ದಳೀಯರು ತಿಳಿಸಿದ್ದಾರೆ. ಆತನ ಪೋಷಾಕು ಗಮನಿಸಿದರೆ ಉತ್ತರ ಕನ್ನಡ ಮೂಲದವನ೦ತೆ ಕಾಣುತ್ತಿದ್ದು,ಮೂಲ್ಕಿ ಪೋಲಿಸರು ಮೂಲ್ಕಿ ಬಳಿಯ ಕೆ.ಎಸ್ ರಾವ್ ನಗರದ ಲಿ೦ಗಪ್ಪಯ್ಯಕಾಡಿನ ಪರಿಸರದಲ್ಲಿ ಮ್ರತ ವ್ಯಕ್ತಿಯ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ಇತ್ತಿಚಿನ ದಿನಗಳಲ್ಲಿ ಮೂಲ್ಕಿ ಹಾಗೂ ಕಿನ್ನಿಗೋಳಿ ಪ್ರದೇಶದ ಬಸ್ ನಿಲ್ದಾಣಗಳಲ್ಲಿ ಅಪರಿಚಿತ ವ್ಯಕ್ತಿಗಳು ಹೆಚ್ಚಾಗಿದ್ದು.ಪೋಲಿಸರು ರಾತ್ರಿ ಗಸ್ತು ತಿರುವಾಗಲು ಈ ಬಗ್ಗೆ ಗಮನ ಹರಿಸದೇ ಇರುವುದು ವಿಪರ್ಯಾಸವೇ ಸರಿ.

ರಾತ್ರಿಯಲ್ಲಿ ಆರಾಮವಾಗಿ ಮಲಗುವ ಇ೦ತವರು ಕಳ್ಳತನ ಹಾಹೂ ಇನ್ನಿತರ ಕ್ರತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.ಈ ಬಗ್ಗೆ ಮೂಲ್ಕಿ ಪೋಲಿಸರು ಕ್ರಮ ಕೈಗೊಳ್ಳಬೇಕೆ೦ದು ನಾಗರಿಕರು ಆಗ್ರಹಿಸಿದ್ದಾರೆ.ಮೂಲ್ಕಿ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here