Friday 26th, April 2024
canara news

ಬಜ್ಪೆ ಯುವ ವಾಹಿನಿ ಘಟಕದ ವತಿಯಿಂದ ಬಿಸು ಪರ್ಬ ಆಚರಣೆ

Published On : 21 Apr 2016   |  Reported By : Rons Bantwal


ಮುಂಬಯಿ, ಎ.21: ನಮ್ಮ ಆಚರಣೆಗಳು ಹಬ್ಬ ಹರಿದಿನಗಳ ಅನುಸರಣೆಗಳ ಹಿಂದೆ, ಒಂದು ಮಹತ್ವದ ಉದ್ದೇಶ ಸಕರಾತ್ಮಕವಾದ ಆಶಯ ಸ್ವಷ್ಟಕಾರಣ ಮಾತ್ರವಲ್ಲದೆ ಅದರ ವೈóಜಾÐನಿಕತೆಯ ಚಿಂತನೆಗಳು ಅಡಗಿದೆ. ಯಾವುದೇ ಒಂದು ಕ್ರೀಯೆಯನ್ನು ಅಂಧರಾಗಿ ಅನುಸರಿಸುವುದರ ಬದಲು ವೈಚಾರಿನ ದೃಷ್ಟಿಕೋನದ ಮೂಲಕ ಅರ್ಥೈಸಿಕೊಂಡು ಆ ಮೂಲಕ ಆಚರಣೆಗಳಲ್ಲಿ ಜೀವಂತಿಕೆಯನ್ನು ಕಾಪಾಡಿಕೊಳ್ಳಬಹುದಾಗಿದೆಯೆಂದು ಕೇರಳ ಶಿವಗಿರಿ ಮಠದ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರು ಇತ್ತೀಚೆಗೆ ಬಜಿಪೆ ಯುವ ವಾಹಿನಿ ಘಟಕ(ರಿ) ದ ವತಿಯಿಂದ ವಿನೂತನವಾಗಿ ಆಯೋಜಿಸಲಾದ ಬಿಸು ಪರ್ಬ ಹೊಸ ವರ್ಷಾಚರಣೆಯನ್ನು ಕಣೆ ಇಟ್ಟು ದೀಪ ಬೆಳಗಿಸಿ ಉದ್ಘಾಟಿಸುತ್ತಾ ತನ್ನ ಅನುಗ್ರಹ ಭಾಷಣದಲ್ಲಿ ಸಮಯೋಚಿತವಾಗಿ ಮಾತನಾಡುತ್ತಾ ಹೇಳಿದರು.

ಬಿಸು ಪರ್ಬ ಅಚರಣೆಯ ಒಟ್ಟು ಆಶಯದ ಬಗ್ಗೆ ದಿಕ್ಸೂಚಿ ಉಪನ್ಯಾಸವನ್ನೂ ನೆರವೇರಿಸಿದ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ| ಯೋಗೀಶ್ ಪೂಜಾರಿ ಕೈರೋಡಿ ಇವರು - ಬೇಸಾಯ ವ್ಯವಸಾಯದ ಬದುಕಿನಿಂದ ಇಂದು ನಾವು ವಿಮುಖರಾಗುತ್ತಾ, ಸಂಸ್ಕತಿಯ ಆವಸಾನಕ್ಕೆ ಕಾರಣಾರಾಗುತ್ತಾ ಈ ನಡುವೆಯು ಹೊಸ ವರುಷದ ಈ ತೆರೆದ ವಿಶೇಷತೆಗಳನ್ನೂ ಸಾಮೂಹಿಕ ನೆಲೆಯಲ್ಲಿ ಸಂದ ಯವವಾಹಿನಿ ಘಟಕ ಕಾದಿಟ್ಟುಕೊಳ್ಳುತ್ತಾ ಮುಂದಿನ ಜನಾಂಗಕ್ಕೆ ಅದನ್ನು ಪರಿಚಯಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯವೆಂದರು.

ವೇದಿಕೆಯಲ್ಲಿ ಬಜ್ಪೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಲ್.ವಿ.ಅಮೀನ್ ಚಲನಚಿತ್ರ ರಂಗಕರ್ಮಿಗಳಾದ ಶ್ರೀ ನವೀನ್ ಡಿ. ಪಡೀಲ್ ಮತ್ತು ಶ್ರೀ ಅರ್ಜುನ್ ಕಾಪಿಕಾಡ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಆತ್ಮಶಕ್ತಿ ಪತ್ರಿಕೆಯ ಸಂಪಾದಕರಾದ ಶ್ರೀ ವಾಮನ ಕೆ. ಘಟಕದ ಸಲಹೆಗಾರರಾದ ಶ್ರೀ ತುಕರಾಮ್ ಮತ್ತು ಶ್ರೀ ಸಂಜೀವ ಪೂಜಾರಿ, ಗ್ಲೋಬಲ್ ಇನ್‍ಟ್ಯೂಟ್ ಆಫ್ ಕಂಪ್ಯೂಟರ್‍ನ ಮಾಲಕರಾದ ಶ್ರೀ ಪ್ರಕಾಶ್ ಕೋಟ್ಯಾನ್, ಉಪಮೇಯರ್ ಶ್ರೀ ಪುರುಷೋತ್ತಮ, ಚಿತ್ರಾಪುರ, ಯುವವಾಹಿನಿ ಬಜ್ಪೆ ಘಟಕದ ಅಧ್ಯಕ್ಷರಾದ ಶ್ರೀ ರವೀಂದ್ರ ಸುವರ್ಣ, ಶ್ರೀ ಸುಧಾಕರ ಮುಕ್ಕೊಡಿ ಕಾರ್ಯದರ್ಶಿ ಶ್ರೀ ಜಯಂತ್ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕರಾಟೆ ಪಟು ಶ್ರೀ ನಿತಿನ್ ಎನ್. ಸುವರ್ಣ, ಅಂತರಾಷ್ಟೀಯ ಮಟ್ಟದಲ್ಲಿ ಭರತನಾಟ್ಯ ಕಲೆಯನ್ನು ಪ್ರಸ್ತುತಪಡಿಸಿದ್ದ ಅವಳಿ ಸಹೋದರಿಯರಾದÀ ಕು| ಶ್ರೇಯ ಎಸ್. ಮತ್ತು ಶ್ರಾವ್ಯ ಎಸ್. ಇತ್ತೀಚೆಗೆ ಜರುಗಿದ ಜಿಲ್ಲಾ ಮತ್ತು ತಾಲ್ಲೂಕ್ ಪಂಚಾಯತ್ ಚುನಾವಣೆಯಲ್ಲಿ ಸ್ಥಳೀಯವಾಗಿ ವಿಜೇತರಾದ ಶ್ರೀಮತಿ ವಸಂತಿ ಕಿಶೋರ್, ಶ್ರೀಮತಿ ಉಷಾ ಸುವರ್ಣ, ಶ್ರೀಮತಿ ಪೂರ್ಣಿಮ ಗಣೇಶ್, ಇವರುಗಳನ್ನು ಸನ್ಮಾನಿಸಲಾಯಿತು. ಹಾಗೆಯೇ ಶ್ರೀ ವಾಮನ್ ಕೆ. ಶ್ರೀ ನವೀನ್ ಡಿ. ಪಡೀಲ್, ಶ್ರೀ ಡಾ| ಯೋಗೇಶ್ ಕೈರೋಡಿ, ಶ್ರೀ ಅರ್ಜುನ್ ಕಾಪಕಾಡ್ ಇವರುಗಳನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಬಿಸು ಪರ್ಬ ವೈವಿಧ್ಯತೆಗೆ ಸಮಾನಂತರವಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಜರುಗಿದವು. ಘಟಕದ ಅಧ್ಯಕ್ಷರಾದ ರವೀಂದ್ರ ಸುವರ್ಣ ಸರ್ವªರನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಚಾಲಕರಾದ ಶ್ರೀ ಗೋಪಾಲಕೃಷ್ಣ ಕೆ. ಪ್ರಾಸ್ತವಿಕವಾಗಿ ಮಾತನಾಡಿದರು. ಶ್ರೀ ಚಂದ್ರಶೇಖರ್, ಶ್ರೀಮತಿ ನಿಮಾಲಾ ಗೋಪಾಲ್, ಶ್ರೀ ಅಶೋಕ್ ಇವರುಗಳನ್ನು ಸನ್ಮಾನಿಕರ ಅಭಿನಂದನಾ ಪತ್ರ ವಾಚಿಸಿದರು. ಕಾರ್ಯದರ್ಶಿÀ ಶ್ರೀ ಜಯಂತ್ ವಂದಿಸಿದರು. ಶ್ರೀಮತಿ ಸಂಧ್ಯಾ ಕುಳಾಯಿ ಮತ್ತು ಶ್ರೀ ವಿಶ್ವನಾಥ ಪೂಜಾರಿ ಕಿಂದಾಳ ಕಾರ್ಯಕ್ರಮ ನಿರೂಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here