Friday 26th, April 2024
canara news

ಮಂಗಳೂರು ತಾ. ಪಂ.: ಅಧ್ಯಕ್ಷ ಮಹಮ್ಮದ್, ಉಪಾಧ್ಯಕ್ಷೆ ಪೂರ್ಣಿಮಾ

Published On : 09 May 2016   |  Reported By : Canaranews Network


ಮಂಗಳೂರು: ಮಂಗಳೂರು ತಾಲೂಕು ಪಂಚಾಯತ್ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ನ ಮಹಮ್ಮದ್ ಮೋನು ಹಾಗೂ ಉಪಾಧ್ಯಕ್ಷರಾಗಿ ಪೂರ್ಣಿಮಾ ಗಣೇಶ್ ಪೂಜಾರಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನ "ಸಾಮಾನ್ಯ' ಹಾಗೂ ಉಪಾಧ್ಯಕ್ಷ ಸ್ಥಾನ "ಸಾಮಾನ್ಯ ಮಹಿಳೆ'ಗೆ ಮೀಸಲಾಗಿದ್ದು ಶನಿವಾರ ಚುನಾವಣೆ ಜರಗಿತು. ಮಹಮ್ಮದ್ ಮೋನು ಅವರು ಪಾವೂರು ಹಾಗೂ ಪೂರ್ಣಿಮಾ ಅವರು ಮೂಡುಪೆರಾರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.ಒಟ್ಟು 39 ಸದಸ್ಯಬಲದ ಮಂಗಳೂರು ತಾ.ಪಂ.ನಲ್ಲಿ ಕಾಂಗ್ರೆಸ್ನ 20 ಹಾಗೂ ಬಿಜೆಪಿಯ 19 ಸದಸ್ಯರಿದ್ದು ಕಾಂಗ್ರೆಸ್ ಸರಳ ಬಹುಮತವನ್ನು ಹೊಂದಿದೆ.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ಮಹಮ್ಮದ್ ಮೋನು ಹಾಗೂ ಬಿಜೆಪಿಯಿಂದ ತಾ.ಪಂ. ಮಾಜಿ ಅಧ್ಯಕ್ಷ ರಾಮಚಂದ್ರ ಕುಂಪಲ ಅವರು ನಾಮಪತ್ರ ಸಲ್ಲಿಸಿದ್ದರು. ಮಹಮ್ಮದ್ ಮೋನು ಅವರು 1 ಮತದ ಅಂತರದಿಂದ ಜಯ ಸಾಧಿಸಿದರು. ಅವರು 20 ಮತಗಳನ್ನು ಪಡೆದರೆ ರಾಮಚಂದ್ರ ಕುಂಪಲ 19 ಮತಗಳನ್ನು ಗಳಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪೂರ್ಣಿಮಾ ಅವರು ತಾ.ಪಂ. ಮಾಜಿ ಅಧ್ಯಕ್ಷೆ ವಜ್ರಾಕ್ಷಿ ಪಿ. ಶೆಟ್ಟಿ ಅವರ ವಿರುದ್ಧ ಜಯ ಗಳಿಸಿದರು. ಪೂರ್ಣಿಮಾ ಅವರು 20 ಮತಗಳನ್ನು ಗಳಿಸಿದರೆ ವಜ್ರಾಕ್ಷಿ ಶೆಟ್ಟಿ ಅವರು 19 ಮತಗಳನ್ನು ಪಡೆದರು. ಕೈಎತ್ತುವ ಮೂಲಕ ಮತದಾನ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ಮಂಗಳೂರು ಉಪವಿಭಾಗಾಧಿಕಾರಿ ಡಾ| ಆಶೋಕ್ ಕಾರ್ಯನಿರ್ವಹಿಸಿದ್ದರು.ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರಾವಧಿ 5 ವರ್ಷಗಳಾಗಿರುತ್ತವೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here