Saturday 27th, April 2024
canara news

ತೊಡಕುಗಳನ್ನು ಸವಾಲಾಗಿ ಸ್ವೀಕರಿಸಿ-ಕೆ.ಪ್ರತಾಪಚಂದ್ರ ಶೆಟ್ಟಿ

Published On : 25 May 2016   |  Reported By : Rons Bantwal


ಬೈಂದೂರು: ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ದುಡಿಯುವವರಿಗೆ ಹತ್ತಾರು ತೊಡಕುಗಳು ಎದುರಾಗುವುದು ಸಹಜ. ಅವುಗಳನ್ನು ಸವಾಲಿನಂತೆ ಸ್ವೀಕರಿಸಿ ಮುನ್ನುಗ್ಗಿದರೆ ಗುರಿ ಸಾಧನೆ ಸಾಧ್ಯವಾಗುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ಫಲಾಪೇಕ್ಷೆ ನುಸುಳದಿದ್ದರೆ ಮಾತ್ರ ಅವುಗಳು ಸೇವೆ ಎನಿಸುತ್ತವೆ. ಕಂಬದಕೋಣೆಯ `ಪ್ರೀತಿ ಸೇವಾ ಸಂಸೆ'್ಥ ಸಮುದಾಯದ ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ತೋರುತ್ತಿರುವ ಕಾಳಜಿ ಅನುಕರಣೀಯ ಎಂದು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು. ಕಂಬದಕೋಣೆ ಪ್ರೀತಿ ಸೇವಾಪೌಂಡೇಶನ್‍ನ 2ನೇ ವಾರ್ಷಿಕೋತ್ಸವದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

 

ಯಕ್ಷಗಾನ ಭಾಗವತ ಸುಬ್ರಮಣ್ಯ ಧಾರೇಶ್ವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸೇವಾ ಕಾರ್ಯದಲ್ಲಿ ಹೊಂದಿರುವ ಪ್ರೀತಿಗೆ ಸಮಾನವಾದ ತೃಪ್ತಿ ಮಾಡಿದವನಿಗೆ ಲಭಿಸುತ್ತದೆ ಎಂದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ , ಹಾಲಿ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ಮಹೇಂದ್ರ ಪೂಜಾರಿ, ಗ್ರಾಮ ಪಂಚಾಯತ ಅಧ್ಯಕ್ಷ ರಾಜೇಶ ದೇವಾಡಿಗ, ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ನಾವುಂದ ಶುಭದಾ ಆಂಗ್ಲಮಾಧ್ಯಮ ಶಾಲೆ ಸಂಸ್ಥಾಪಕ ಡಾ.ಎನ್.ಕೆ.ಬಿಲ್ಲವ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಾಕಬ್ ಡಿ`ಸೋಜಾ ಕಾರ್ಯಕ್ರಮವನ್ನು ಶ್ಲಾಘಿಸಿ ಶುಭ ಹಾರೈಸಿದರು.

ಅಂತಾರಾಷ್ಟ್ರೀಯ ಮಟ್ಟದ ಅತ್ಲೆಟ್ ಶಂಕರ್ ಪೂಜಾರಿ ಕಾಡಿನತಾರು ಅವರಿಗೆ 2016ನೇ ಸಾಲಿನ ಪ್ರೀತಿಯ `ಸಾಧನಶ್ರೀ'ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಮತ್ತು ಎತ್ತರ ಜಿಗಿತದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಅಕ್ಷತಾ ಪೂಜಾರಿ ಗುಡ್ಡಿಮನೆ, ಅಂತಾರಾಷ್ಟ್ರ ಮಟ್ಟದ ಗಣಿತ ಪ್ರತಿಭೆ ವಿಘ್ನೇಶ್ ಶ್ರೀಧರ ಪೂಜಾರಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜಿಪಂ ಹಾಲಿ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ಮಹೇಂದ್ರ ಪೂಜಾರಿ ಅವರನ್ನು ಗೌರವಿಸಲಾಯಿತು. ಕಂಬದಕೋಣೆ ಗ್ರಾಪಂ ಹಾಲಿ ಸದಸ್ಯರುಗಳನ್ನು ಮತ್ತು ನಾವುಂದ ಗ್ರಾಪಂ. ಸದಸ್ಯ ರಾಮ ಪೂಜಾರಿ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಅಂಗ ವೈಕಲ್ಯಕ್ಕೊಳಗಾಗಿರುವ ಕಂಬದಕೋಣೆಯ ಬಟ್ರಹಿತ್ಲು ಸುರೇಶ ದೇವಾಡಿಗ ಮತ್ತು ಪಡುವಾಯಿನಮನೆ ನಾಗರಾಜ ದೇವಾಡಿಗರಿಗೆ ನೆರವು ವಿತರಣೆ, ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನಡೆಯಿತು. ಸಂಸ್ಥೆಯ ಆಡಳಿತ ವಿಶ್ವಸ್ಥ ರಂಗ ಎಸ್. ಪೂಜಾರಿ, ಉಪಾಧ್ಯಕ್ಷ ಚಂದ್ರ ಅಮೀನ್ ಮತ್ತು ಆಡಳಿತ ಮಂಡಳಿಯ ಸದಸ್ಯರುಗಳಾದ ಕೃಷ್ಣ ಪೂಜಾರಿ, ಸಂತೋಷ ಪೂಜಾರಿ, ಸುರೇಶ ವಿ.ಕೆ., ಜಾನಕಿ ಪೂಜಾರಿ, ನಾಗರಾಜ ಅಪ್ಪೇಡಿ, ರಾಮ ಪೂಜಾರಿ ನಾಯ್ಕನಕಟ್ಟೆ, ರಾಮ ಪೂಜಾರಿ ನಾವುಂದ, ಭಾಸ್ಕರ ಪೂಜಾರಿ ಬಳ್ಕೂರು, ಲಕ್ಷ್ಮಣ ಕೊಡೇರಿ, ಬೇಬಿ ರಂಗ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯ ಮತ್ತು ಸದಸ್ಯೆಯರು ಉಪಸ್ಥಿತರಿದ್ದರು.

ಸ್ಥಳೀಯ ಪುಟಾಣಿಗಳಿಂದ ನಾಟ್ಯ ವೈವಿದ್ಯ, ಮುಂಬಯಿಯ ಅಂಕಿತಾ ನಾಯಕ್, ಸೌಜನ್ಯಾ ಬಿಲ್ಲವ ಮತ್ತು ಪೃಥ್ವಿ ಸುಧಾಕರ ಪುಜಾರಿಯವರಿಂದ ನೃತ್ಯತರಂಗ ಹಾಗೂ ಜಾನಪದ ನೃತ್ಯ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು. ಭಾಗವತ ಸುಬ್ರಮಣ್ಯ ಧಾರೇಶ್ವರ ಮತ್ತು ಬೈಂದೂರು ರಿದಂ ಡ್ಯಾನ್ಸ್ ಸಂಸ್ಥೆಯ ನಾಗೇಂದ್ರ ದೇವಾಡಿಗ ತೀರ್ಪುಗಾರರಾಗಿ ಭಾಗವಹಿಸಿದ್ದರು. ಅನುಶಾ, ಶಾಂತಿ, ಜ್ಯೋತಿ ಪ್ರಾರ್ಥನೆ ಗೈದರು. ಸಂಸ್ಥೆಯ ಟ್ರಸ್ಟಿ ನಾಗರಾಜ ಅಪ್ಪೆಡಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಇನ್ನೊಬ್ಬ ಟ್ರಸ್ಟಿ ಸುರೇಶ ವಿ.ಕೆ. ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಚಂದ್ರ ಅಮಿನ್ ವಂದಿಸಿದರು. ಶಿಕ್ಷಕ ಸುಬ್ರಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here