Friday 26th, April 2024
canara news

ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಏರಿಕೆ

Published On : 26 May 2016   |  Reported By : Canaranews Network


ಮಂಗಳೂರು: ಮಂಗಳೂರಿಗೆ ನೀರನ್ನೊದಗಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಸುಮಾರು 15 ದಿನಗಳ ಬಳಿಕ ಮತ್ತೆ ನೀರಿನ ಮಟ್ಟ 6 ಅಡಿ ದಾಟಿದೆ. ರವಿವಾರ 5.4 ಅಡಿ ಇದ್ದ ನೀರಿನ ಮಟ್ಟ ಸೋಮವಾರ 6.2 ಅಡಿಗೇರಿದೆ.ಮೇ 6ರಂದು ನೀರಿನ ಮಟ್ಟ 6.2 ಅಡಿ ಇತ್ತು. ಬಳಿಕ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗಿ ಮೇ 20ರಂದು ಕನಿಷ್ಠ 3.7 ಅಡಿಗೆ ತಲುಪಿತ್ತು. ಆದರೆ ಮೇ 21ರಿಂದ ನೆಕ್ಕಿಲಾಡಿ ಡ್ಯಾಂನ ನೀರು ತುಂಬೆಗೆ ತಲುಪಿದ ಪರಿಣಾಮ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ತುಂಬೆ ಡ್ಯಾಂನಿಂದ ರವಿವಾರ ಬೆಳಗ್ಗೆ 11 ಗಂಟೆಯಿಂದ ಮಂಗಳವಾರ ಬೆಳಗ್ಗಿನವರೆಗೂ ಸತತವಾಗಿ ಪಂಪ್‌ ಮಾಡಲಾಗುತ್ತಿದೆ.

ಆದರೂ ಸೋಮವಾರ ಸಂಜೆ ನೀರಿನ ಪ್ರಮಾಣ 6.2 ಅಡಿಗೆ ಏರಿಕೆಯಾಗಿರುವುದರಿಂದ ಸದ್ಯಕ್ಕೆ ನೀರಿನ ತೊಂದರೆ ಇರಲಿಕ್ಕಿಲ್ಲ ಎಂದು ಮನಪಾ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ ಹೇಳುತ್ತಾರೆ.ರವಿವಾರದಿಂದ ಸತತವಾಗಿ ನೀರು ಪಂಪಾಗುತ್ತಿರುವುದರಿಂದ ಪಾಲಿಕೆಯ ಎಲ್ಲ ಕಡೆಗೂ ನೀರನ್ನೊದಗಿಸಲಾಗುತ್ತಿದೆ. ಮಂಗಳವಾರ ಬೆಳಗ್ಗೆ ಪಂಪ್‌ ಮಾಡುವುದನ್ನು ನಿಲ್ಲಿಸಿ ಬಳಿಕ ನೀರಿನ ಮಟ್ಟವನ್ನು ನೋಡಿಕೊಂಡು 2 ದಿನಕ್ಕೊಮ್ಮೆ ನೀರನ್ನು ಪೂರೈಕೆ ಮಾಡುವ ಕುರಿತು ತೀರ್ಮಾನಿಸಲಾಗುವುದು ಎಂದು ಮೇಯರ್‌ ಎಂ. ಹರಿನಾಥ್‌ ತಿಳಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here