Friday 26th, April 2024
canara news

ಮಳೆ ನೀರು ಕೊಯ್ಲು ಕಡ್ಡಾಯ:ದ.ಕ. ಜಿ.ಪಂ.ನಿಂದ ನಿರ್ಣಯ

Published On : 08 Jun 2016   |  Reported By : Canaranews Network


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,000 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಮನೆಗಳು ಹಾಗೂ ವಾಣಿಜ್ಯ ಕೇಂದ್ರಗಳಿಗೆ ಗ್ರಾಮ ಪಂಚಾಯತ್‌ಗಳಲ್ಲಿ ಪರವಾನಿಗೆ ನೀಡುವಾಗ ಶೌಚಾಲಯ ಹೊಂದಿರುವುದು ಹಾಗೂ ಮಳೆ ನೀರು ಕೊಯ್ಲು ಅಳವಡಿಕೆಯನ್ನು ಕಡ್ಡಾಯಗೊಳಿಸಿ ದ.ಕ. ಜಿಲ್ಲಾ ಪಂಚಾಯತ್‌ ನಿರ್ಣಯ ಕೈಗೊಂಡಿದೆ.ದ.ಕ. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಧಿಯಲ್ಲಿ ಮಂಗಳವಾರ ನಡೆದ ಈ ಬಾರಿಯ ಮೊದಲ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯಕ್ಕೆ ಅನುಮೋದನೆ ನೀಡಲಾಯಿತು.ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಹೆಚ್ಚಿನ ಕಡೆ ಜಲಕ್ಷಾಮ ಹೆಚ್ಚುತ್ತಿದೆ. ಸ್ವಚ್ಛತೆ ಖಾತರಿಪಡಿಸಿಧಿಕೊಂಡು ನಿರ್ಮಲ ಗ್ರಾಮ ಪುರಸ್ಕಾರ ಪಡೆದಿರುವ ಜಿಲ್ಲೆಯಲ್ಲಿ ಇನ್ನೂ 1,589 ಶೌಚಾಲಯಗಳ ನಿರ್ಮಾಣ ನಡೆಯಬೇಕಾಗಿದೆ ಎಂದು ಜಿ.ಪಂ. ಸಿಇಒ ಶ್ರೀವಿದ್ಯಾ ಹೇಳಿದರು.

ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾಯಗೊಳಿಸುವ ಜತೆಗೆ ಬೋರ್‌ವೆಲ್‌ಗ‌ಳಿಗೆ ಕಡಿವಾಣ ಹಾಕಧಿಬೇಕು ಹಾಗೂ ಈಗಾಗಲೇ ಸ್ವತ್ಛ ಗ್ರಾಮದ ಪರಿಕಲ್ಪನೆಯಡಿ ಗ್ರಾಮಗಳಲ್ಲಿ ಪೈಪ್‌ ಕಾಂಪೋಸ್ಟ್‌ ರಚನೆ ಮಾಡಲಾಗಿದ್ದರೂ ಮನೆಗಳಲ್ಲಿ ಸಂಗ್ರಹವಾದ ಕಸ ಸಂಗ್ರಹದ ಬಗ್ಗೆ ಕಾಳಜಿ ವಹಿಸಲಾಗುತ್ತಿಲ್ಲ. ಈ ಬಗ್ಗೆ ಗ್ರಾ.ಪಂ.ಗಳ ಪಂಚಾಧಿಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿ ವ್ಯವಸ್ಥೆ ಮಾಡಬೇಕು ಎಂದು ಸದಸ್ಯೆ ಆಶಾ ತಿಮ್ಮಪ್ಪ ಗೌಡ ಆಗ್ರಹಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here