Friday 26th, April 2024
canara news

ರಸ್ತೆ ಅಗಲೀಕರಣಕ್ಕೆ ಸ್ಪಂದಿಸಿ ಉದಾರಾವಾಗಿ ಪುರಸಭೆಗೆ ಸ್ಥಳವನ್ನು ಬಿಟ್ಟುಕೊಟ್ಟ ಕುಂದಾಪುರ ಹೋಲಿ ರೋಜರಿ ಚರ್ಚ್ – ಕುಂದಾಪುರ ದೇವರ ನಾಡೆಂಬ್ಬ ಕೀರ್ತಿ ಗಳಿಸಲಿ

Published On : 09 Jun 2016   |  Reported By : Bernard J Costa


ಕುಂದಾಪುರ, ಜೂ.9: ಕುಂದಾಪುರ ನಗರದಲ್ಲಿ ಇವತ್ತು ಭೂಮಿಯ ಬೆಲೆಗಗನಕ್ಕೆರಿದ ಈ ಸಮಯದಲ್ಲಿ ಕುಂದಾಪುರದ ಅಭಿವ್ರದ್ದಿ, ರಸ್ತೆ ಅಗಲೀಕರಣಾಕ್ಕೆ ಹಾಗೂ ಒಳಚರಂಡಿಯ ವ್ಯವಸ್ಥೆಗಾಗಿ ಕುಂದಾಪುರದ ಹೋಲಿ ರೋಜರಿ ಚರ್ಚ್, ಸಮಾಜ ಕಲ್ಯಾಣದ ಚಿಂತನೆಯೊಂದಿಗೆ, ಇತರರಿಗೆ ಅನುಕರಣಿಯವಾಗುವಂತೆ ಹೆಜ್ಜೆ ಇಟ್ಟು, ತಮ್ಮ ಸ್ವಾಧಿನದ ಭೂಮಿಯನ್ನು ಉಚಿತವಾಗಿ ಕುಂದಾಪುರದ ಪುರಸಭೆಗೆ ಬಿಟ್ಟುಕೊಟ್ಟ ಮಹತ್ವದ ನಿರ್ಧಾರವನ್ನು ಕೈಗೊಂಡ್ಡಿದ್ದು ಮಾತ್ರವಲ್ಲದೆ ಪುರ ಸಭೆ ಭೂಮಿಯನ್ನು ಸ್ವಾಧಿನ ಪಡಿಸಿಕೊಂಡು ರಸ್ತೆ ಅಗಲೀಕರಣ ಮಾಡುವ ಕೆಲಸವನ್ನು ಆರಂಭಿಸಿದೆ.

ಕುಂದಾಪುರ ಹೋಲಿ ರೋಜರಿ ಚರ್ಚಿನ ಬಲಕ್ಕೆ ಮದ್ದುಗುಡ್ಡೆ ಸಂಪರ್ಕ ರಸ್ತೆ ತೀರ ಇಕ್ಕಟ್ಟಿನಿಂದ ಕೂಡಿದ್ದು ರಸ್ತೆಯ ಅಗಲೀಕರಣದ ಚಿಂತನೆಯೊಂದಿಗೆ ಪುರಸಭೆ ಕೆಲವು ತಿಂಗಳ ಹಿಂದೆ ರಸ್ತೆಗಾಗಿ ಸ್ಥಳ ನೀಡುವಂತೆ ಚರ್ಚಿಗೆ ಮನವಿ ಸಲ್ಲಿಸಿತ್ತು.

ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ನಗರದ ಅಭಿವ್ರದ್ದಿ ವಿಚಾರದಲ್ಲಿ ನಿಜಕ್ಕೂ ಸಕರಾತ್ಮಕ ಸ್ಪಂದಿಸಿ ಹೋಲಿ ರೋಜರಿ ಚರ್ಚಿನ ಆಡಳಿತ ಮಂಡಳಿ ಹಾಗೂ ಕ್ರೈಸ್ತ ಭಾಂದವರು ಸುಮಾರು 200 ಅಡಿ ಉದ್ದ, 3.3 ಅಡಿ ಅಗಲದ ಸ್ಥಳವನ್ನು ದರ್ಮಾರ್ಥವಾಗಿ ಪುರಸಭೆಗೆ ಹಸ್ತಾಂತರಿಸಿದೆ. ಬೆಳೆಯುತ್ತಿರುವ ಕುಂದಾಪುರದ ನಗರದ ಅಭಿವ್ರದ್ಧಿಗಾಗಿ ಹಾಗೂ ಸಾರ್ವಜನಿಕ ಉಪಯೋಗದ ದಿಶೆಯಲ್ಲಿ, ಈ ನಿರ್ಧಾರ ಬೇರೆಯವರಿಗೂ ಆದರ್ಶಪ್ರಾಯವಾಗಿದ್ದು ಸರ್ವತ್ರವಾಗಿ ಇದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.

ಹೋಲಿ ರೋಜರಿ ಚರ್ಚ್‍ಗೆ ಸುಮಾರು 450 ವರ್ಷಗಳ ಇತಿಹಾಸ ಇದ್ದು, 1570 ರಲ್ಲಿ ಕುಂದಾಪುರದ ಕೋಟೆ ಬಾಗಿಲು ಎಂಬಲ್ಲಿ (ಖಾರ್ವಿ ಕೇರಿ ನದಿ ತೀರದ, ಜಿ.ಎಸ್.ಬಿ. ಹನುಮಾನ್ ದೇವಾಲಯದ ಪಕ್ಕ) ಸ್ಥಾಪನೆಗೊಂಡಿತ್ತು. ಕೊಂಕಣಿಗರ (ಖಾರ್ವಿ) ಮೂರು ದೆವಾಲಯಗಳೂ ಕೂಡ ಒಂದೇ ಕಾಲದಲ್ಲಿ ಸ್ಥಾಪಿತವಾಗಿದ್ದೆಂದು ಪ್ರತೀತಿ ಇದೆ. ನಮ್ಮ ಕುಂದಾಪುರ ಹೋಲಿ ರೋಜರಿ ಚರ್ಚ್ ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಅತ್ಯಂತ ಪ್ರಾಚೀನ ಇಗರ್ಜಿಯಾಗಿದ ಹೆಗ್ಗಳಿಕೆ ಕುಂದಾಪುರಕ್ಕೆ ಇದೆ.

ಕುಂದಾಪುರದ ಕೈಸ್ತ ಸಭೆಯಲ್ಲಿ, ಭಾರತದ ಕೆಲವೇ ಕೆಲವು ಕ್ರೈಸ್ತ ಸಂತ ಪದವಿಗೇರಿದವರಲ್ಲಿ, ಮಹಾನ್ ಪವಾಡ ಪುರುಷರಾದಂತಹ ಸಂತ ಜೊಸೇಫ್ ವಾಜ್ ಇದೇ ಕುಂದಾಪುರದ ಕೈಸ್ತ ಸಭೆಯಲ್ಲಿ ಸೇವೆ ಸಲ್ಲಿಸಿದ್ದು ಮಹತ್ವದ ವಿಚಾರಾವಾಗಿದೆ. ಅಂದು ಕುಂದಾಪುರದಿಂದ ಬಹೂ ದೂರದ ಪ್ರದೇಶದ ವರೆಗೂ ಅವರ ವ್ಯಾಪ್ತಿ ಹರಡಿಕೊಂಡಿತ್ತು.

ಸಂತ ಜೊಸೇಫ್ ವಾಜ್ ಕುಂದಾಪುರದಲ್ಲಿ ಸೇವೆ ಸಲ್ಲಿಸುತ್ತಿರುವಾಗ, ಅವರು ಪ್ರಾರ್ಥನೆಯಲ್ಲಿ ಮಗ್ನರಾಗಿದ್ದಾಗ, ದಿವ್ಯ ಬೆಳಕಿನಲ್ಲಿ ದೇವರು ಅವರನ್ನು ಗಾಳಿಯಲ್ಲಿ ಮೇಲೆತ್ತಿಕೊಂಡು (ಯಾವ ಆಧಾರವೂ ಇಲ್ಲದೆ ಗಾಳಿಯಲ್ಲಿ ತೇಲುತ್ತಾ ಇದ್ದರು) ಅವರ ಪ್ರಾಥನೆಯನ್ನು ಆಲಿಸಿ ಪವಾಡ ನೆಡೆದದ್ದು, ನಮ್ಮ ಕುಂದಾಪುರ ಮಣ್ಣಿನ ಭಾಗ್ಯವೇ ಸರಿ. ಇದು ಕುಂದಾಪುರದ ಜನತೆ ಸುವಾರ್ಣಕ್ಷರಗಳಿಂದ ಬರೆದಿಡಬೇಕಾದ ಸಂಗತಿ. ಕುಂದಾಪುರದ ಈ ನೆಲ “ಪಾವಿತ್ರ್ಯದ ನೆಲ” ಅನ್ನುತ್ತಾರೆ ಇವತ್ತಿನ ಬಿಶಪ್ ಅ|ವ|ಡಾ|ಜೆರಾಲ್ಡ್ ಐಸಾಕ್ ಲೋಬೊ. ಇಂದೂ ಕೂಡ ಕುಂದಾಪುರದಲ್ಲಿ ಸಂತ ಜೋಸೆಫ್ ವಾಜರು ಅವರ ಭಕ್ತಾಧಿಗಳಿಗೆ ಉಪಕಾರಗಳನ್ನು ಮಾಡುತ್ತಲೇ ಇದ್ದಾರೆ ಎಂಬುದು ಗಮನಾರ್ಹ ಆಗಿದ್ದು. ಇದು ಕುಂದಾಪುರದವರೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.

ಯಾರೋ ಒಬ್ಬ ಕ್ರೈಸ್ತರು ಮೇರಿಮಾತೆಗೆ ಜಪ ಮಾಡುತಿದ್ದ, ಜಪಮಾಲೆಯೊಂದು, ಅಕಸ್ಮಾತ್ ಅನ್ಯ ಜಾತಿಯವರಿಗೆ ಸಿಕ್ಕಿ, ಅದರಿಂದ ಅವರಿಗೆ ತೊಂದರೆಯಾದಗ, ಅವರ ಸ್ವಾಮಿಯವರ ಎಲ್ಲಿ ಈ ಜಪ ಮಾಲೆಗೆ ಪೂಜ್ಯತೆ ಗೌರವ ಸಿಗುತ್ತೊ, ಅಲ್ಲಿಗೆ ನೀಡಿ ಎಂಬ ಸಲಹೆಯಂತೆ, ಅವರು ಅದನ್ನು ರೋಜರಿ ಇಗರ್ಜಿಗೆ ಅರ್ಪಿಸಿದ, ಪವಾಡದ ಜಪಮಾಲೆ ಕೂಡ ಇಲ್ಲಿ ಇದೆ ಎಂಬುದು ಈ ಚರ್ಚಿನ ಹಿರಿಮೆಯಾಗಿದೆ.

ಹಾಗೇ ಬಹಳ ಹಿಂದಿನಿಂದಲೂ ಕ್ರೈಸ್ತ ಧರ್ಮಗುರುಗಳು, ಧರ್ಮ ಭಗಿನಿಯರು ಸಮಾಜ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಕುಂದಾಪುರದಲ್ಲಿ ಕ್ರೈಸ್ತ ದರ್ಮಗುರುಗಳು ಶಿಕ್ಷಣದಲ್ಲಿ ಹಾತೊರೆದು, ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಶ್ರಮಿಸಿ ಹೆಸರು ಗಳಿಸಿದ್ದಾರೆ. ಈಗ ಚರ್ಚಿನ ಅಧಿನದಲ್ಲಿ ಬಹಳಸ್ಟು ಶಿಕ್ಷಣ ಸಂಸ್ಥೆಗಳಿವೆ, ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ, ಸಂತ ಮೇರಿಸ್ ಹೈಸ್ಕೂಲು, ಹೋಲಿ ರೋಜರಿ ಆಂಗ್ಲಾ ಮಾಧ್ಯಮ ಶಾಲೆ, ಸಂತ ಮೇರಿಸ್ ಪಿ.ಯು.ಕಾಲೇಜ್, ಹೋಲಿ ರೋಜರಿ ಕಿಂಡರ್ ಗಾರ್ಟ್‍ನ್ ಶಾಲೆ ಹೀಗೆ ಸಂಸ್ಥೆಗಳು ಬೆಳೆದು ಇಂದು ಸಂತ ಮೇರಿಸ್ ಸಮೂಹ ಸಂಸ್ಥೆಯಾಗಿ ಬೆಳೆದು ಖ್ಯಾತಿ ಗಳಿಸುವುದರ ಜೊತೆ ಕುಂದಾಪುರಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಮ್ಹತ್ವದ ಕೊಡುಗೆಯನ್ನು ನೀಡಿದೆ.

ಇದು ಮಾತ್ರವಲ್ಲದೆ ಬಹಳ ಹಿಂದೆಯೆ, ಕುಂದಾಪುರ ಹೋಲಿ ರೋಜರಿ ಧರ್ಮ ಕೇಂದ್ರ ಬಡ ಹೆಣ್ಣು ಮಕ್ಕಳ ವಿಷಯದಲ್ಲಿ ಬಹಳ ಆಸಕ್ತಿ ತಳೆದು, ಇಲ್ಲಿನ ಧರ್ಮಗುರುಗಳ ಯೋಜನೆಯಂತೆ, ಮಂಗಳೂರು ಧರ್ಮ ಪ್ರಾಂತ್ಯದ ಆಗಿನ ಬಿಶಪರ ಅನುಮತಿಯೊಂದಿಗೆ, ಶಾಲೆಯನ್ನು ಕಾರ್ಮೆಲ್ ಭಗಿನಿಯರಿಗೆ ನೆಡೆಸುವಂತೆ ಕೋರಿಕೆ ಸಲ್ಲಿಸಿದಂತೆ ಕುಂದಾಪುರದಲ್ಲಿ ಕಾರ್ಮೆಲ್ ಸಂಸ್ಥೆಯ ಭಗಿನಿಯರು ಶಾಲೆಯನ್ನು ಚರ್ಚನ ಜಾಗದಲ್ಲಿ ಆರಂಭಿಸಿದರು.

ಆದರೆ ಆ ಕಾಲದಲ್ಲಿ ಹೆಣ್ಣು ಮಕ್ಕಳು ದೊಡ್ಡವರಾದ ಮೇಲೆ, ಗಂಡು ಮಕ್ಕಳ ಜೊತೆ ಹೆಣ್ಣು ಮಕ್ಕಳಿಗೆ ವಿಧ್ಯಾಬಾಸಕ್ಕಾಗಿ ಕಳುಹಿಸಿ ಕೊಡುವ ವಿಚಾರದಲ್ಲಿ ಜನ ಹಿಂದಡಿ ಇಡುತಿತ್ತು. ಹಾಗಾಗಿ ಹೆಣ್ಣು ಮಕ್ಕಳಿಗೆ ಕೂಡ ಶಿಕ್ಷಣ ದೊರೆಯ ಬೇಕು, ಅವರ ಏಳಿಗೆ ಆಗಬೇಕೆಂದು ಮನ ಗಂಡು ಹೆಣ್ಣು ಮಕ್ಕಳಿಗಾಗಿಯೆ ಹೈಸ್ಕೂಲು ಶಾಲೆ ತೆರೆಯಲು ಯೋಚಿಸಿ, ಕೇವಲ ಹೆಣ್ಣು ಮಕ್ಕಳಿಗಾಗಿಯೆ ಶಾಲೆಯನ್ನು ಕಾರ್ಮೆಲ್ ಭಗಿನಿಯರು ಆರಂಭಿಸಿದರು. ಮುಂದೆ ಅದೇ ಶಾಲೆ ಸಂತ ಜೋಸೆಫ್ ಕಾನ್ವೆಂಟ್ ಶಾಲೆಯೆಂದು ಖ್ಯಾತಗೊಂಡಿತು.

ಈಗ ಇದೇ ಸಂಸ್ಥೆಯ, ಚರ್ಚ್ ಸ್ವಾಧಿನದ ಜಾಗವನ್ನು ಲಕ್ಷಾಂತರ ಬೆಲೆ ಬಾಳುವ ಜಾಗವನ್ನು ಕುಂದಾಪುರ ಅಭಿವ್ರದ್ದಿಗಾಗಿ ಉದಾರವಾಗಿ ನಿಡಿದ್ದು. ಕುಂದಾಪುರ ಅಭಿವ್ರದ್ದಿಯ ಪಥದಲ್ಲಿ ಸಾಗುವಾಗ ಪ್ರಜ್ನಾವಂತ ನಾಗರಿಕರಲ್ಲಿ ಇಂತಹ ಚಿಂತನೆಗಳ ಸಹಕಾರ ಮನೋಭಾವ ಬೆಳೆದು ತಮ್ಮ ನಾಡು ಅಭಿವ್ರದ್ದಿಶೀಲ ನಾಡಾಗಿ ಮಾರ್ಪಡಿಸಲು ಸಾಧ್ಯವಾಗುತ್ತದೆ. ಈ ಮೊದಲು ಕೂಡ, ಚರ್ಚ್ ರಸ್ತೆ ಹಾದು ಹೋಗಲು, ಮದ್ದುಗುಡ್ಡೆಗೆ ಸಾಗಲು ಕಾನ್ವೆಂಟ್ ರಸ್ತೆಯಾಗಲೂ, ರೋಜರಿ ಚರ್ಚ್ ತಮಗೆ ಸಂಬಧ್ದ ಪಟ್ಟ ಜಾಗದಲ್ಲಿ ಉದಾರತ್ವ ತೊರಿದ್ದು, ಸ್ಮರಿಸ ಬೇಕಾದ ಸಂಗತಿಯಾಗಿದೆ.

ಶೈಕ್ಷಣಿಕವಾಗಿ, ಸಮಾಜದ ಕ್ರೈಸ್ತ ಸಮಾಜವು ಕುಂದಾಪುರ ಪರಿಸರಕ್ಕೆ ಉದಾರವಾದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು. ಕಂದಾಪುರದ ಬೆಳವಣಿಗೆಯ ದ್ರಷ್ಟಿಯಿಂದ ನಾವು ಯಾವುದೇ ಫಲಾಪೇಕ್ಷೆಯಿಲ್ಲದೆ ರಸ್ತೆ ಅಗಲೀಕರಣಾಕ್ಕಾಗಿ ಬಿಟ್ಟು ಕೊಡುತಿದ್ದೇವೆ. ಇದು ಏಸುವಿನ ಪ್ರೇರಣೆಯಾಗಿದ್ದು, ಈ ವರ್ಷ ಪೆÇೀಪ್ ಸ್ವಾಮಿಗಳ ಆಶಯದ ‘ದಯಾಮಯಿ’ ವರ್ಷವಾಗಿ ಆಚರಣೆಗಾಗುತ್ತಿರುವ ಸಂದರ್ಭದಲ್ಲಿ ಅಭಿವ್ರದ್ದಿಗಾಗಿ ಈ ಕೊಡುಗೆ ನೀಡುತಿದ್ದೆವೆ’ -ವ|ಅನಿಲ್ ಡಿಸೋಜ, ಹೋಲಿ ರೋಜರಿ ಚರ್ಚ್ ಪ್ರಧಾನ ಧರ್ಮಗುರುಗಳು, ಪಾಲನ ಮಂಡಳಿ ಅಧ್ಯಕ್ಷರು ಹಾಗೂ ಕುಂದಾಪುರ ವಲಯದ ಪ್ರಧಾನ ಧರ್ಮಗುರುಳು .

‘ಊರು ಅಭಿವ್ರದ್ದಿಯಾಗುತ್ತಿರುವಾಗ ಸಕಾರತ್ಮವಾಗಿ ಸ್ಪಂದಿಸುವುದು ನಮ್ಮ ಧರ್ಮ, ಆ ದಿಶೆಯಲ್ಲಿ ಸಮಸ್ತ ಕ್ರೈಸ್ತ ಭಾಂದವರ ತಿರ್ಮಾನದಂತೆ ಚರ್ಚ್‍ಗೆ ಸಂಬಧ್ದ ಪಟ್ಟ ಸ್ಥಳವನ್ನು ಉಚಿತವಾಗಿ ಬಿಟ್ಟು ಕೊಡುತಿದ್ದೇವೆ. ಅಭಿವ್ರದ್ದಿ ಒತ್ತು ನೀಡುವುದು ನಮ್ಮ ಆಶಯ – ಜಾನ್ಸನ್ ಡಿ’ಆಲ್ಮೇಡಾ, ಉಪಾಧ್ಯಕ್ಷರು.

ಇಂದು ಅತೀ ತಿವ್ರತೆಯಲ್ಲಿ ಬೆಳೆಯುತ್ತಿರುವ ನಗರ ಕುಂದಾಪುರವಾಗಿದೆ, ಇಲ್ಲಿ ಸಂಚರಿಸುವ ಜನ, ವಾಹನಗಳ ದಟ್ಟಣೆ ದಿನೇ ದಿನೆ ಎರುತ್ತಲೆ ಇವೆ. ನಗರದ ಮುಖ್ಯ ರಸ್ತೆಗಳಲ್ಲದೆ, ಒಳಗಿನ ರಸ್ತೆಗಳು ಅಗಲೀಕರಣ ಕರಿಸುವ ಅವಶ್ಯಕತೆ ಬಹಳ ಇದೆ. ಇದೇ ನಿಟ್ಟಿನಲ್ಲಿ ಪ್ರಯತ್ನಗಳು ನೆಡೆಯುತ್ತಿವೆ, ರಸ್ತೆ ಅಗಲೀಕರಣಾ ಆಗುವೆದೆಂದು ಸುದ್ದಿಗಳು ಹರಡುತ್ತಲೆ ಇರುತ್ತವೆ. ಆದರೆ ಅಗಲೇ ಬೇಕೆಂಬ ಇಚ್ಚಾಶಕ್ತಿ ಸಂಬಂದ್ದ ಪಟವರಲ್ಲಿ ಕಾಣುವುದಿಲ್ಲಾ.

ರಾಜಾಕಾರಣಿಗಳು, ಉದ್ಯಮಿಗಳು, ಶ್ರೀಮಂತರು, ಕಟ್ಟಡಗಳನ್ನು ಕಟ್ಟುವರು ಇದಕ್ಕೆ ಕ್ಯಾರೆ ಅನ್ನುತ್ತಿಲ್ಲಾ. ರಾಜಾಕಾರಣಿಗಳು, ಸಮಾಜ ಉದ್ದಾರಕರು ಎನ್ನುವಂತವರು, ನಾವು ಅಭಿವ್ರದ್ದಿ ಮಾಡುತ್ತೇವೆ, ನಮ್ಮಿಂದಲೆ ಅಭಿವ್ರದ್ದಿಯಾಗುವುದು ಹಾಗೇ ಮಾಡಿದ್ದೆವೆ, ಹೀಗೆ ಮಾಡಿದ್ದೆವೆ ಎಂದು ಕೇವಲ ಉದ್ದುದ್ದ ಭಾಷಣವನ್ನು ಬಿಗಿದು ತಮ್ಮ ಉದ್ದಾರಕರೆಂಬ ಹೆಸರು ಗಳಿಸುತ್ತಾರೆ. ಇದೇ ಜನಕ್ಕೆ ನಗರಕ್ಕಾಗಿ, ಸಾರ್ವಜನಿಕ ಉಪಯೋಗಕ್ಕಾಗಿ ನಿಮ್ಮ ಜಾಗದಲ್ಲಿ ಎರಡು ಫಿಟು ಜಾಗ ಬಿಟ್ಟು ಕೊಡಿ ಅಂದರೆ, ದರ್ಪ ತೋರಿ ನ್ಯಾಯಲಯ ಇದೆಯೆಂದು ಬೆದರಿಸುತ್ತಾರೆ.

ಇಂತವರಿಗೆ ಹೋಲಿ ರೋಜರಿ ಚರ್ಚ್‍ನ ನಿರ್ಧಾರ ಅನುಕರಣಿಯವಾಗಲಿ, ಉದಾರ ಮನಸ್ಸಿನಿಂದ ರಸ್ತೆ ಬದಿಯಲ್ಲಿರುವರು ಸ್ವಲ್ಪ ಜಾಗವನ್ನು ಬಿಟ್ಟು ಕೊಟ್ಟರೆ, ನಗರ ಅಭಿವ್ರದ್ದಿಯಾಗುವುದರಲ್ಲಿ ಅನುಮಾನವಿಲ್ಲಾ. ಇದಕ್ಕಾಗಿ ರಸ್ತೆ ಅಗಲೀಕರಣಕ್ಕೆ ಸಂಬಂಧ್ದ ಪಟ್ಟವರು, ಆಯಾಯ ರಸ್ತೆಯ ನಿವಾಸಿಗಳ ಜನರ ಸಮಿತಿಗಳನ್ನು ಮಾಡ ಬೇಕು. ವಿರೋಧ ಮಾಡುವರ ಮಿತ್ರರನ್ನು ಸಮಿತಿಗೆ ಸೇರಿಸಿಕೊಳ್ಳಿ, ಕೆಲವೊಂದು ಸಲ ಮಿತ್ರರ ಮಾತುಗಳನ್ನು ಮಿತ್ರರು ಕೇಳುತ್ತಾರೆ, ಹೀಗೆ ಮಾತು ಕತೆ ನೆಡೆಸಿ, ರಾಜಿ ಸಂಧಾನಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಂಡು, ರಸ್ತೆ ಅಗಲೀಕರಣಕ್ಕೆ ಶ್ರಮಿಸ ಬೇಕು. ರಸ್ತೆ ಅಗಲೀಕರಣವಾದರೆ, ಜಾಗದ ಬೆಲೆಯು ಎರುವುದನ್ನು ಮನದಟ್ಟು ಮಾಡಿ ಕೊಡಿ.

ಸ್ವಲ್ಪವೆ ಜಾಗ ಇರುವುವರಿಗೆ ಮಾತ್ರ ತೊಂದರೆಯಾಗ ಬಹುದು, ಅದಕ್ಕೆ ಬೇರೊಂದು ಪರಿಹಾರ ನೀತಿ ಅಳವಡಿಸಿ ಕೊಳ್ಳಿ. ಹೀಗೆ ನಗರದ ಅಭಿವ್ರದ್ದಿಗೆ ಪ್ರಯತ್ನ ಪಡೋಣ. ಕುಂದಾಪುರ ನಗರ ಹಿಂದಾಪುರ ಆಗದೆ ಅಭಿವ್ರದ್ದಿಯತ್ತ ಸಾಗಲಿ. ಕುಂದಾಪುರ ಎಲ್ಲಾ ರಸ್ತೆಗಳು, ಸುಧಾರಣೆ ಗೊಳ್ಳಲಿ, ಸ್ವಚ್ಚ ನಗರವಾಗಲಿ, ಅಭಿವ್ರದ್ದಿಯ ನಗರವಾಗಲಿ, ಎಲ್ಲಾ ಧರ್ಮದವರ ದೇವಾಲಯಗಳು ಖ್ಯಾತಿ ಗೊಂಡು ಕುಂದಾಪುರ ದೇವರ ನಾಡೆಂಬ್ಬ ಕೀರ್ತಿ ಗಳಿಸಲಿ.

- ಬರ್ನಾಡ್ ಡಿಕೋಸ್ತಾ




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here