Friday 26th, April 2024
canara news

ತ್ರಾಸಿ ಅಪಘಾತದಲ್ಲಿ ಮರಣಪಟ್ಟ 5 ಕಂದಮ್ಮಗಳ ಗಂಗೊಳ್ಳಿಯಲ್ಲಿ ಅಂತಿಮ ಸಂಸ್ಕಾರ- ಜನಸ್ತೊಮನದ ಸಾಗರ

Published On : 23 Jun 2016   |  Reported By : Bernard J Costa


ಕುಂದಾಪುರ, ಜೂ.23: ತಾರೀಕು 21 ರಂದು ಬೆಳೆಗ್ಗೆ ನೆಡೆದ ಭೀಕರ ಅಪಘಾತದಲ್ಲಿ ಮರಣಪಟ್ಟ ಡಾನ್ ಬೊಸ್ಕೊ ಸ್ಕೂಲಿನ 5 ಮಕ್ಕಳ ಕ್ಯಾಲಿಸ್ಟಾ ಒಲಿವೇರಾ, ಕ್ಯಾಲಿಶಾ ಒಲಿವೇರಾ, ಅಲ್ವಿಟಾ ಒಲಿವೇರಾ, ಅನ್ಸಿಟಾ ಒಲಿವೇರಾ ಮತ್ತು ಡೆಲ್ವಿನ್ ಲೋಬೊ ಇವರ ಅಂತಿಮ ಸಂಸ್ಕಾರವು, ಉಡುಪಿ ಧರ್ಮಪ್ರ್ಯಾಂತ್ಯದ ಬಿಶಪ್ ಅತಿ ವಂದನೀಯ ಡಾ|ಐಸಾಕ್ ಜೆರಾಲ್ಡ್ ಲೋಬೊ ಇವರ ಪ್ರಧಾನ ಯಾಜಕತ್ವದಲ್ಲಿ ಗಂಗೊಳ್ಳಿಯ ಕೊಸೆಸಾಂವ್ ಮಾತೆಯ ಇಗರ್ಜಿಯಲ್ಲಿ ಪವಿತ್ರ ಬಲಿದಾನ ಮೂಲಕ, ಅಂತಿಮ ಸಂಸ್ಕಾರಗಳೊಂದಿಗೆ ನೇರವೇರಿತು.

ಈ ವೇಳೆ ಹೆತ್ತವರ, ಕುಂಟುಬಸ್ತರ ರೋಧನ ಮುಗಿಲು ಮುಟ್ಟಿತು. ಮಕ್ಕಳ ಶವವನ್ನು ದಫನಿಸುವಾಗ, ಇಡಿ ಜನಸ್ತೋಮ ಕಣ್ಣಿರ ಕೋಡಿ ಹರಿಸಿತು. ಹೆತ್ತವರು ತಮ್ಮ ಮಕ್ಕಳ ಶವವವನ್ನು ಅಪ್ಪಿ ಮುದ್ದಾಡಿ ಗೋಳಿಡುವುದನ್ನು ಕಲ್ಲ ಹ್ರದಯದವರನ್ನು ಕರಗಿಸುವಂತಿತ್ತು. ಮಳೆಯ ನೀರು ಧರೆಗೆ ಬೀಳತಲ್ಲೆ ಇರುವಾಗ ಜನರ ಕಣ್ಣಿರು ಕೂಡ ಧರೆಗಿಳಿಯುತು.

ವಲಯ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜ ಸಂದೇಶ ನೀಡಿದರು. ಗಂಗೊಳ್ಳಿಯ ಧರ್ಮಗುರು ವ|ಆಲ್ಬರ್ಟ್ ಕ್ರಾಸ್ತಾ ಶ್ರಂದಾಜಲಿ ಅರ್ಪಿಸಿದರು. ಭಕ್ತಿಕರ ಪರಾವಾಗಿ ಪಾಲನ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ ಶ್ರದ್ದಾಂಜಲಿ ಅರ್ಪಿಸಿದರು.

ಈ ಅಂತ್ಯ ಕ್ರಿಯೆಗೆ ಹಲವು ಸಾವಿರ ಜನರು ಹಾಜರಿದ್ದರು. ಶವಗಳ ದರ್ಶನಕ್ಕೆ ನೂಕುನುಗ್ಗಲೂಂಟಾಯ್ತು. ಹವಾವಾರು ಧರ್ಮಭಗಿನಿಯರು, ಹಲವಾರು ರಾಜಾಕೀಯ ದುರೀಣರು ಹಾಜರಿದ್ದರು. ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಎಮ್.ಎಲ್.ಸಿ. ಐವನ್ ಡಿಸೋಜಾ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಡಿ.ಎಸ್.ಪಿ. ಅಣ್ಣಾಮಲೈ, ಪ್ರಾರ್ಥಿವ ಶರೀರಗಳಿಗೆ ಪುಶ್ಪಗಳನ್ನಿಟ್ಟು ನಮಿಸಿದರು. ಡಿ.ವೈ.ಎಸ್.ಪಿ. ಮಂಜುನಾಥ್ ಶೆಟ್ಟಿ ಮತ್ತು ಗ್ರಹ ರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಪುಸ್ಪವನ್ನು ಅರ್ಪಿಸಿ ಪ್ರಾರ್ಥಿವ ಶರೀರಗಳಿಗೆ ಸೆಲ್ಯುಟ್ ಮಾಡಿ ಗೌರವ ಅರ್ಪಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಡಾ|ವನಿತಾ ತೊರವಿ,ಬಿಜೆಪಿ. ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಸುಕುಮಾರ್ ಶೆಟ್ಟಿ, ರಾಜು ಪೂಜಾರಿ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಾಯ್ ಕಾಸ್ಟೆಲಿನೊ ಇನ್ನಿತರ ಗಣ್ಯ ರಾಜಕೀಯ ವ್ಯಕ್ತಿಗಳು ಹಾಜರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comments

Anna Frank, mangalore    23 Jun 2016

Heart felt sympathy to the departed soul of these young minds. May their soul rest in peace.


Comment Here