Friday 26th, April 2024
canara news

ಮುಲುಂಡ್ ಪಶ್ಚಿಮದ ಶ್ರೀನಗರದಲ್ಲಿ 94ನೇ ಶಾಖೆ ಸೇವಾರಂಭಿಸಿದ ಭಾರತ್ ಬ್ಯಾಂಕ್

Published On : 02 Jul 2016   |  Reported By : Rons Bantwal


ಬಿಸಿಬಿ ಭೌಗೋಳಿಕ ಪ್ರಸಿದ್ಧಿಯ ಸಹಕಾರಿ ಬ್ಯಾಂಕ್ : ಹೆರಾಲ್ಡ್ ಬೆಳ್ಮಣ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.02: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ತನ್ನ 94ನೇ ಶಾಖೆಯನ್ನು ಇಂದಿಲ್ಲಿ ಶನಿವಾರ ಬೆಳಿಗ್ಗೆ ಮುಂಬಯಿ ಉಪನಗರದ ಮುಲುಂಡ್ ಪಶ್ಚಿಮದ ಶ್ರೀನಗರದ ಬಿ.ಆರ್ ರಸ್ತೆಯಲ್ಲಿನ ವೈಶಾಲಿ ನಗರದ ಅರಿಹಂತ್ ರಿಯಲ್‍ಟರ್ಸ್ ಕಟ್ಟಡದಲ್ಲಿ ಸೇವಾರಂಭಿಸಿದ್ದು, ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ರಿಬ್ಬನ್ ಬಿಡಿಸಿ ನೂತನ ಶಾಖೆಯನ್ನು ಸೇವಾರಂಭ ಗೊಳಿಸಿದರು.

ಗೌರವ ಅತಿಥಿüಗಳಾಗಿ ಸಮಾಜ ಸೇವಕ ಹಾಗೂ ಸಾಗರ್ ಇಂಜಿನೀಯರಿಂಗ್ ಎಂಡ್ ಸೊಲ್ಯೂಶನ್ಸ್ ಸಂಸ್ಥೆಯ ಮಾಲೀಕ ಹೆರಾಲ್ಡ್ ಡಿ'ಸೋಜಾ ಬೆಳ್ಮಣ್ ಮತ್ತು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾರ್ಯಾಧ್ಯಕ್ಷ ಕೆ.ಸುರೇಶ್ ಕುಮಾರ್ ಉಪಸ್ಥಿತರಿದ್ದು, ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಶಾಖೆಯನ್ನು ಉದ್ಘಾಟಿಸಿದರು. ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆಗೆ, ಬ್ಯಾಂಕ್‍ನ ಹಿರಿಯ ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್ ಭದ್ರತಾ ಖಜಾನೆಗೆ ಚಾಲನೆ ನೀಡಿದರು.

ಸಾಗರ್ ಇಂಜಿನೀಯರಿಂಗ್‍ನ ಹೆರಾಲ್ಡ್ ಡಿ'ಸೋಜಾ ಬೆಳ್ಮಣ್ ಮಾತನಾಡಿ ಭಾರತ್ ಬ್ಯಾಂಕ್ ಉದ್ಯೋಗಸ್ಥರಿಗೆ ಪ್ರೇರಣೆಯ ಕರ್ತವ್ಯಸ್ನೇಹಿಬ್ಯಾಂಕ್ ಆಗಿದೆ. ಗ್ರಾಹಕರಲ್ಲಿ ಭಿನ್ನತೆ ಸೃಷ್ಠಿಸಿದ ಈ ಬ್ಯಾಂಕ್ ಸಾವಿರಾರು ಉದ್ಯಮಿ ಸಾಧಕರನ್ನು ರೂಪಿಸಿದೆ ಅದರಲ್ಲಿ ನಾನೋಬ್ಬ ಎನ್ನುವುದೇ ನನ್ನ ಅಭಿಮಾನ. ದಿನೇಶ್ ಸಾಲ್ಯಾನ್, ಶ್ಯಾನ್‍ಭಾಗ್ ಮಾತ್ರವಲ್ಲದೆ ಇನ್ನಿತರ ದಕ್ಷ ಮತ್ತು ಅರ್ಹ ಉನ್ನತಾಧಿಕಾರಿಗಳ ಸದಾ ಮಂದಹಾಸÀದ ಸೇವೆ ಇಲ್ಲಿನ ವೈಶಿಷ್ಟ ್ಯತೆ. ಸಮಗ್ರ ಗ್ರಾಹಕರ ಆಥಿರ್üಕ ಸುಧಾರಣೆಗೆ ತ್ವರಿತವಾಗಿ ಸ್ಪಂದಿಸುವ ಈ ಬ್ಯಾಂಕ್‍ನಲ್ಲಿ ಬಹುಶಃ ಜಯ ಸುವರ್ಣರಲ್ಲಿನ ವ್ಯಕ್ತಿಗತಗುಣ ಪ್ರತೀಯೋರ್ವ ಸ್ಟಾಫ್‍ಗಳಲ್ಲಿ ಕಾಣಬಹುದು. ಅತ್ಯಂತ ಪ್ರಬುದ್ಧ ಗ್ರಾಹಕವರ್ಗ ಬ್ಯಾಂಕ್‍ನ ಆಸ್ತಿಯಾಗಿದ್ದು, ಆದುದರಿಂದಲೇ ಬಿಸಿಬಿ ಭೌಗೋಳಿಕ ಪ್ರಸಿದ್ಧಿಯ ಸಹಕಾರಿ ಬ್ಯಾಂಕ್ ಎಂದೆಣಿಸಿದೆ. ಎಂದರು.

ಈ ಬ್ಯಾಂಕನ್ನು ನಾವೆಲ್ಲರೂ ನಮ್ಮ ಬ್ಯಾಂಕ್ ಎಂದೆಣಿಸಿದ್ದೇವೆ ಗ್ರಾಹಕರಲ್ಲಿನ ಇಂತಹ ವಿಶ್ವಾಸ ನಮ್ಮೆಲ್ಲರಿಗೆ ಅಭಿಮಾನದಾಯಕವಾಗಿದೆ. ನಾವಂತೂ ಭಂಡಾರಿ ಬ್ಯಾಂಕ್ ಅಂದುಕೊಂಡಿದ್ದೇವೆ. ಶ್ರೀ ಅಂದರೆ ಶುಭ ಎಂದಾದರೆ ನಗರ (ಶಹರ) ಅಂದರೆ ಸಡಗರವಾಗಿದೆ. ಅಂತೆಯೇ ಶ್ರೀನಗರದಲ್ಲಿನ ಈ ಶಾಖೆ ಶ್ರೇಯಸ್ಸುದಾಯಕ ವಾಗಿ ಮುನ್ನಡೆಯಲಿ ಎಂದು ಭಂಡಾರಿ ಸಮಾಜದ ಮುಂದಾಳು ನವೀನ್‍ಚಂದ್ರ ಬಾಂಧ್ವೇಡ್ಕರ್ ನುಡಿದರು.

ಶಿವಾನಿ ಚೈಲ್ಡ್‍ಕೇರ್ ಹಾಸ್ಪಿಟಲ್‍ನ ಮುಖ್ಯಸ್ಥ ಡಾ| ಸತ್ಯಪ್ರಕಾಶ್ ಎಸ್.ಶೆಟ್ಟಿ ಮಾತನಾಡಿ ಧುರೀಣತ್ವವೇ ಗುಣಧರ್ಮವಾಗಿದೆ. ಇಂತಹ ಸದ್ಗುಣತೆಯ ಅಸಮಾನ್ಯ ವ್ಯಕ್ತಿಯೇ ಜಯಸುವರ್ಣರು.ಅವರಲ್ಲಿ ವಾಸ್ತವಿಕತೆಯ ಭಾವನೆವಿದ್ದು ಎಲ್ಲರಲ್ಲೂ ಸಮಾನತೆಯನ್ನು ಕಂಡವರಾಗಿದ್ದಾರೆ. ಇಂತಹ ಚಿಂತನೆಯಿಂದಲೇ ಭಾರತ್ ಬ್ಯಾಂಕನ್ನು ಗ್ರಾಹಕಸ್ನೇಯಿಯಾಗಿಸಿದ್ದಾರೆ. ಈ ಸಂಸ್ಥೆಯೊಡನೆ ನನ್ನದು ಸುಮಾರು ಎರಡುವರೆ ದಶಕಗಳ ಅವಿನಾಭಾವ ಸಂಬಂಧವಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಐದು ರಾಷ್ಟ್ರೀಕೃತ ಬ್ಯಾಂಕುಗಳನ್ನು ನೀಡಿದ್ದು ಅದಕ್ಕೆ ಪೂರಕ ಎಂಬಂತೆ ಸಹಕಾರಿ ರಂಗದಲ್ಲಿ ಸ್ವಂತಿಕೆಯ ಪ್ರತಿಷ್ಠೆ ರೂಪಿಸಿದ ಹೆಗ್ಗಳಿಕೆ ಭಾರತ್ ಬ್ಯಾಂಕ್‍ಗಿದೆ ಇದು ಸತ್ಯಸ್ಥಿತಿ ಎಂದರು.

1990ರಲ್ಲಿ ಸಾಲವಾಗಿ ಪಡೆದ ನನಗೆ ಭಾರತ್ ಬ್ಯಾಂಕ್ ವೃತ್ತಿಬದುಕು ರೂಪಿಸುವಲ್ಲಿ ಸಹಯೋಗವನ್ನೀಡಿದೆ. ಸದ್ಯ ಬ್ಯಾಂಕ್‍ನ ಪ್ರಗತಿ ಕೇಳಲು ಹಿತಕರವಾಗುತ್ತಿದೆ. ಇದು ಪ್ರತೀಯೋರ್ವ ಭಾರತೀಯರ ಬ್ಯಾಂಕ್ ಆಗುತ್ತಾ ರಾಷ್ಟ್ರದ ವಿಸ್ತೃತ ಬ್ಯಾಂಕ್ ಆಗಲಿ ಎಂದು ಸೆಂಟ್ರಲ್ ಹೆಲ್ತ್ ಹೋಮ್‍ನ ಮುಖ್ಯಸ್ಥ ಡಾ| ಕೆ.ರತ್ನಾಕರ್ ಆರ್.ಶೆಟ್ಟಿ ತಿಳಿಸಿದರು.

ಮಳೆಯ ಮಧ್ಯೆಯೂ ಇಂಷ್ಟೋಂದು ಗ್ರಾಹಕ, ಹಿತೈಷಿಗಳ ಮೇಳವಾಗಿ ಉದ್ಘಾಟಿಸಲ್ಪಡುವ ಈ ಶಾಖೆಯಿಂದ ಬ್ಯಾಂಕ್‍ನ ಕಾರ್ಯಸಿದ್ಧಿ ತನ್ನಷ್ಟಕ್ಕೆನೇ ತಿಳಿಯ ಬಹುದು. ಇದೇ ಭಾರತ್ ಬ್ಯಾಂಕ್‍ನ ಆತ್ಮಸ್ಥೈರತೆಯಾಗಿದೆ ಎಂದು ಉದ್ಯಮಿ ಪದ್ಮಾಕರ್ ಕೋಟ್ಯಾನ್ ನುಡಿದರು.

ಬ್ಯಾಂಕಿಂಗ್‍ನಲ್ಲಿ ಶಿಸ್ತುಪಾಲನೆವೊಂದಿದ್ದರೆ ಅದು ಭಾರತ್ ಬ್ಯಾಂಕ್‍ನಲ್ಲಿ ಮಾತ್ರ ಕಂಡಿದ್ದೇನೆ. ಇಲ್ಲಿನ ನಿರ್ದೇಶಕರಿಂದ ಉನ್ನತಾಧಿಕಾರಿಗಳು, ಸಾಮಾನ್ಯ ಉದ್ಯೋಗಸ್ಥರಲ್ಲೂ ಒಂದೇ ಪ್ರಮಾಣದ ಮಮತೆಯಿದ್ದು ಯಾವುದೇ ಕೆಲಸವನ್ನು ಶಿಸ್ತುಬದ್ಧವಾಗಿ ನಿರ್ವಹಿಸಿ ಗ್ರಾಹಕರನ್ನು ಗೌರವಿಸಿ ಸಮಜಾಯಿಸುವ ವಿನಯತೆ ಇವರಲ್ಲಿದೆ. ಎಲ್ಲರಿಗೂ ಸಮಾನತೆಯ ಉಪಚಾರ ನೀಡುವ ನಡೆತೆ ವಿಶಿಷ್ಟವಾದದ್ದು. ಅಂತರಾಷ್ಟ್ರೀಯ ಮಟ್ಟವನ್ನು ಸೇವೆಯಲ್ಲಿ ಕಾಯ್ದಿರಿಸಿರುವ ಈ ಬ್ಯಾಂಕನ್ನು ಕೋ.ಅಪರೇಟಿವ್ ಬ್ಯಾಂಕ್ ಅನ್ನುವಾಗಿಲ್ಲ ಎಂದು ಮಳಾಯಲಂ ಸಮಾಜದ ಧುರೀಣ ಕುಮಾರನ್ ನಾಯರ್ ಅಭಿಪ್ರಾಯ ಪಟ್ಟರು.

ಸಮುದಾದದಿಂದ ಇಡೀ ಸಮಾಜ ಮುನ್ನಡೆಸಬಹುದು ಎಂದು ತೋರ್ಪಡಿಸಿದ ಜಯ ಸುವರ್ಣರು ಭಾರತ್ ಬ್ಯಾಂಕ್ ಮೂಲಕ ಲಕ್ಷಾಂತರ ಜನತೆಗೆ ಜೀವನ ಪಾವನಗೊಳಿಸಿದ್ದಾರೆ. ಬ್ಯಾಂಕ್‍ನ ಮಧುರತೆಯ ಸೇವೆ ಎಲ್ಲರಿಗೂ ಹಿತದಾಯಕವಾದದ್ದು ಎಂದು ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ ತಿಳಿಸಿದರು.

ನೌಕರವೃಂದದ ಮುಗುಳ್ನಗೆಯ ಸೇವೆ ಗ್ರಾಹಕರ ಮನದಾಸೆ ಸಂಪನ್ನಗೊಳಿಸಿದೆ. ಬ್ಯಾಂಕ್ ಬಿಲ್ಲವ ಸಮುದಾಯದ ಪ್ರತಿಷ್ಠೆಯಾಗಿದ್ದು ಬ್ರಹ್ಮಶ್ರೀ ನಾರಾಯಣ ಸ್ವಾಮಿಗಳ ತತ್ವಾನುಗ್ರಹದಿಂದ ಸಮಾಜಕ್ಕೆ ವರವಾಗಿದೆ ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ ರಾಜಾ ವಿ.ಸಾಲ್ಯಾನ್ ತಿಳಿಸಿದರು.

ಬಿಲ್ಡರ್ ಪಿಯೂಸ್ ಗುಲ್ಸಾರ್, ಉದ್ಯಮಿ ಸೋಮಶೇಖರ್ ಭಟ್, ಸಂದರ್ಭೋಚಿತವಾಗಿ ಮಾತನಾಡಿ ಶುಭೇಚ್ಛ ಕೋರಿದರು.

ಈ ಸಂದರ್ಭದಲ್ಲಿ ಸ್ಥಳಿಯ ನಗರ ಸೇವಕ, ಕಾಂಗ್ರೇಸ್ ನಾಯಕ ಮನೋಜ್ ಶಿಂಧೆ, ಜಾಗದ ಮಾಲೀಕ ರವಿ ಶೆಟ್ಟಿ, ಉದ್ಯಮಿಗಳಾದ ಸುಂದರ್ ಶೆಟ್ಟಿ ವಿದ್ಯಾವಿಹರ್, ಜಯರಾಮ್ ರೈ, ಲೀನಾ ಹೆರಾಲ್ಡ್ ಮಿಯಾರ್, ಬಿಲ್ಲವ ಮುಂದಾಳುಗಳಾದ ಸದಾನಂದ್ ಅಂಚನ್ ಥಾಣೆ, ಡಿ.ಕೆ ಪೂಜಾರಿ ಘಾಟ್ಕೋಪರ್, ದೇವರಾಜ್ ಪೂಜಾರಿ ಡೊಂಬಿವಿಲಿ, ರಾಘವ ಕೆ.ಕುಂದರ್ ವಿಕ್ರೋಲಿ, ಸಮಾಜ ಸೇವಕರುಗಳಾದ ಉಷಾ ಹೆಗ್ಡೆ ಥಾಣೆ, ಜಯಪ್ರಕಾಶ್ ಐಯ್ಯಾರ್, ನಿವೃತ್ತ ಉನ್ನತಾಧಿಕಾರಿಗಳಾದ ಸದಾನಂದ್ ಪೂಜಾರಿ, ಭಾಸ್ಕರ್ ಟಿ.ಪೂಜಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ನೂತನ ಶಾಖೆಯ ಸರ್ವೋನ್ನತಿ ಬಯಸಿದರು.

ಜಯ ಸುವರ್ಣ, ರೋಹಿಣಿ ಸಾಲ್ಯಾನ್, ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ, ಬ್ಯಾಂಕ್‍ನ ನಿರ್ದೇಶಕರುಗಳಾದ ಕೆ.ಎನ್ ಸುವರ್ಣ, ಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ಹರೀಶ್ಚಂದ್ರ ಜಿ.ಮೂಲ್ಕಿ, ದಾಮೋದರ ಸಿ.ಕುಂದರ್, ಆರ್.ಡಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಅಶೋಕ್ ಎಂ.ಕೋಟ್ಯಾನ್, ಜ್ಯೋತಿ ಕೆ.ಸುವರ್ಣ, ಸಿ.ಟಿ ಸಾಲ್ಯಾನ್, ಮಾಜಿ ನಿರ್ದೇಶಕರುಗಳಾದ ಎನ್.ಎಂ ಸನೀಲ್, ಎಂ.ಬಿ ಸನೀಲ್, ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ಅನಿಲ್‍ಕುಮಾರ್ ಆರ್.ಅವಿೂನ್, ಮಹಾ ವ್ಯವಸ್ಥಾಪಕ ನಿತ್ಯಾನಂದ ಡಿ.ಕೋಟ್ಯಾನ್, ನಿವೃತ್ತ ಮಹಾ ವ್ಯವಸ್ಥಾಪಕಿ ಶೋಭಾ ದಯಾನಂದ್ ಉಪಸ್ಥಿತರಿದ್ದು, ಶಾಖೆಯ ಮುಖ್ಯಸ್ಥ ಹರೀಶ್ ಕೆ.ಪೂಜಾರಿ, ಸಹಾಯಕ ಪ್ರಬಂಧಕಿ ಹೇಮಲತಾ ಆರ್.ಸಾಲ್ಯಾನ್, ಸಹೋದ್ಯೋಗಿಗಳಾದ ದಿವ್ಯಾ ವಿ.ಶೆಟ್ಟಿ, ಸ್ಮೀತಾ ಕೆ. ವೈಷ್ಣವ್, ಶಿಪ್ರಾ ಪೂಜಾರಿ, ಎಸ್.ಮುಖೇಶ್ ಅವರಿಗೆÉ ಪುಷ್ಫಗುಪ್ಚವನಿತ್ತು ಶುಭಾರೈಸಿದರು.

ಈ ಶುಭಾವಸರದಲ್ಲಿ ಬ್ಯಾಂಕ್‍ನ ಉಪ ಮಹಾ ಪ್ರಂಬಧಕರುಗಳಾದ ಸುರೇಶ್ ಎಸ್.ಸಾಲ್ಯಾನ್, ವಿ.ಎಸ್ ಶ್ಯಾನ್‍ಭಾಗ್, ವಿದ್ಯಾನಂದ್ ಎಸ್.ಕರ್ಕೇರ, ನಿತ್ಯಾನಂದ್ ಎಸ್.ಕಿರೋಡಿಯನ್, ನವೀನ್‍ಚಂದ್ರ ಎಸ್.ಬಂಗೇರ
ಸಹಾಯಕ ಮಹಾ ಪ್ರಂಬಧಕರುಗಳಾದ ಸತೀಶ್ ಎಂ.ಬಂಗೇರ, ಪ್ರಭಾಕರ್ ಜಿ.ಪೂಜಾರಿ, ಪ್ರವೀಣ್ ಎಸ್. ಸುವರ್ಣ, ಅಭಿವೃದ್ಧಿ ಇಲಾಖಾಧಿಕಾರಿಗಳಾದ ಸುನೀಲ್ ಗುಜರನ್, ವಿಜಯ ಪಾಲನ್, ವಿವಿಧ ಶಾಖೆಯ ಮುಖ್ಯಸ್ಥರುಗಳಾದ ರತ್ನಾಕರ್ ಆರ್.ಸಾಲ್ಯಾನ್ (ಘಾಟ್ಕೋಪರ್), ರವೀಂದ್ರನಾಥ್ ಕೆ.ಕೋಟ್ಯಾನ್ (ಭಾಂಡೂ ಪ್), ಸಂತೋಷ್ ಎಸ್.ಸಾಲ್ಯಾನ್ (ನಾಶಿಕ್), ಜನಾರ್ದನ್ ಅಮೀನ್ (ದಾದರ್) ಮತ್ತಿತರರು ಉಪಸ್ಥಿತರಿದ್ದರು.

ಉಳ್ಳೂರು ದಿನೇಶ್ ಶಾಂತಿ ಅವರು ಗಣಹೋಮ, ಲಕ್ಷ್ಮೀಸತ್ಯನಾರಾಯಣ ಪೂಜೆಯನ್ನು, ಉಳ್ಳೂರು ಶೇಖರ್ ಶಾಂತಿ ಅವರು ವಾಸ್ತುಪೂಜೆ ಮತ್ತು ಹೋಮ, ವಾಸ್ತು ಬಲಿ, ದ್ವಾರಪ್ರವೇಶ ಪೂಜೆಗೈದÀÀು ಅನುಗ್ರಹಿಸಿದರು. ಗಂಗಾಧರ್ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಶಿಪ್ರಾ ತುಷಾರ್ ಪೂಜಾರಿ ದಂಪತಿ ಪೂಜಾವೃತ ಕೈಗೊಂಡದರು. ಬ್ಯಾಂಕ್‍ನ ಉಪ ಮಹಾ ಪ್ರಂಬಧಕ ಹಾಗೂ ಶಾಖಾ ಉಸ್ತುವರಿ ಅಧಿಕಾರಿ ದಿನೇಶ್ ಬಿ.ಸಾಲ್ಯಾನ್ ಸ್ವಾಗತಿಸಿದರು.ಬ್ಯಾಂಕ್‍ನ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ (ಡಿಜಿಎಂ) ಬ್ಯಾಂಕ್‍ನ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಮುಖ್ಯಸ್ಥ ಹರೀಶ್ ಕೆ.ಪೂಜಾರಿ ಕೃತಜ್ಞತೆ ಸಲ್ಲಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here