Saturday 27th, April 2024
canara news

"ಏಕರೂಪದ ನಾಗರಿಕ ಸಂಹಿತೆಯಿಂದ ದೇಶ ಚೂರು'

Published On : 03 Jul 2016   |  Reported By : Canaranews Network


ಮಂಗಳೂರು: ಬಿಜೆಪಿ ಮತ್ತು ಕೇಂದ್ರ ಸರಕಾರದ ಉದ್ದೇಶಿತ ಏಕರೂಪದ ನಾಗರಿಕ ಸಂಹಿತೆ ಮಸೂದೆ ಜಾರಿಗೆ ಬಂದರೆ ದೇಶ ಚೂರು ಚೂರಾಗಲಿದೆ. ಆದ್ದರಿಂದ ಇದನ್ನು ಕಾಂಗ್ರೆಸ್‌ ಪಕ್ಷವು ಖಂಡಾತುಂಡವಾಗಿ ವಿರೋಧಿಸುತ್ತದೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಉತ್ತರ ಪ್ರದೇಶ ಸಹಿತ 5 ರಾಜ್ಯಗಳಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕೇಂದ್ರ ಸರಕಾರ ಈ ಮಸೂದೆಯನ್ನು ತರುತ್ತಿದೆ; ಇದು ವೋಟ್‌ ಬ್ಯಾಂಕ್‌ ರಾಜಕಾರಣ ಎಂದವರು ಶನಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.ಭಾರತದಲ್ಲಿ ಹಲವಾರು ಜಾತಿ, ಧರ್ಮಗಳಿವೆ. ಎಲ್ಲ ಧರ್ಮಗಳಿಗೂ ಅವುಗಳದ್ದೇ ಆದ ಆಚಾರ ವಿಚಾರಗಳಿವೆ.

ಗುಡ್ಡಗಾಡು ಜನರಲ್ಲಿ ಪ್ರತ್ಯೇಕ ಆಚರಣೆಗಳಿವೆ. ಹಾಗಿರುವಾಗ ಸಮಾನ ನಾಗರಿಕ ಸಂಹಿತೆ ತರುವುದು ಎಷ್ಟು ಸರಿ? ಕಾಂಗ್ರೆಸ್‌ ಪಕ್ಷವು ಕಳೆದ 50 ವರ್ಷಗಳಿಂದ ಸಮಾನ ನಾಗರಿಕ ಸಂಹಿತೆ ಅನಗತ್ಯ ಎಂದು ವಾದಿಸಿ ವಿರೋಧಿಸುತ್ತಾ ಬಂದಿದೆ ಎಂದವರು ವಿವರಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here