Saturday 27th, April 2024
canara news

ಕುಂದಾಪುರ ಕಥೊಲಿಕ್ ಸಭಾ ಮತ್ತು ಇತರ ಸಂಘಟನೆಗಳಿಂದ ರಕ್ತ ದಾನ ಶಿಭಿರ

Published On : 04 Jul 2016   |  Reported By : Bernard J Costa


ಕುಂದಾಪುರ, ಜು.3:  ಕುಂದಾಪುರ ಕಥೊಲಿಕ್ ಸಭಾ ಮತ್ತು ಆರೋಗ್ಯ ಆಯೋಗದ ಪ್ರಾಯೋಜಕತ್ವದಲ್ಲಿ ಕುಂದಾಪುರ ಇಗರ್ಜಿಯ ಸಂಘಟನೆಗಳಾದ, ಕಥೊಲಿಕ್ ಸ್ತ್ರೀ ಸಂಘಟನೆ, ಐ.ಸಿ.ವಾಯ್. ಎಮ್. , ಕ್ರೈಸ್ತ ತಾಯಂದಿರ ಒಕ್ಕೂಟ, ಸಂತ ಫ್ರಾನ್ಸಿಸ್ಕನ್ ಸಭಾ ಮತ್ತು ಎಸ್.ವಿ.ಪಿ. ಸಂಘಟನೆಗಳ ಸಹಕಾರದೊಂದಿಗೆ ಕುಂದಾಪುರ ಇಗರ್ಜಿಯ ಸಭಾಭವನದಲ್ಲಿ ರಕ್ತ ದಾನ ಶಿಭಿರ ನೆಡೆಯಿತು.

‘ಯಾವುದೆ ತಾಲೂಕು ಕೇಂದ್ರದಲ್ಲಿ ಬ್ಲಡ್ ಬ್ಯಾಂಕ್ ಬಹಳ ಅವಶ್ಯವಾಗಿ ಬೇಕಾಗಿದೆ, ಇಂದು ನಮಗೆ ಅವಶ್ಯಕತೆಕಿಂತ ಶೇಕಡ 10 ರಸ್ಟು ಕೂಡ ರಕ್ತ ನಮಗೆ ಸಿಗುವುದಿಲ್ಲಾ, ಕುಂದಾಪುರದಲ್ಲಿ ಬ್ಲಡ್ ಬ್ಯಾಂಕ್ ಯಾವತ್ತೊ ಆಗಬೇಕಿತ್ತು ಆದರೆ ಸ್ಥಾಪನೆ ಆಗಲಿಲ್ಲಾ, ಆದರೆ ಬಹಳಸ್ಟು ಜನರ ಉದಾರ ಮನಸ್ಸಿನಿಂದ ಟ್ರಸ್ಟ್ ಒಂದನ್ನು ಆರಂಭಿಸಿ ರೆಡ್ ಕ್ರಾಸ್ ಸಂಸೆಯ್ಥ ಸಹಯೋಗದಿಂದ ಬ್ಲಡ್ ಬ್ಯಾಂಕ್ ಆರಂಭವಾಗಿದೆ, ನಮ್ಮ ದೇಶದಲ್ಲಿ ಅಪಘಾತಗಳ ಸಂಖ್ಯೆ ಎಲ್ಲೆ ಮಿರಿದೆ, ಹಾಗೆ ಬೇರೆ ಥರದ ರೋಗಿಗಳ ಪ್ರಾಣವನ್ನು ರಕ್ಷಿಸುವ ಸಲುವಾಗಿ ರಕ್ತ ದಾನದ ಬಹಳ ಅವಶ್ಯಕತೆ ಇದೆ’ ಎಂದು ಆದರ್ಶ ಆಸ್ಪತ್ರೆಯ ವೈದ್ಯ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಕುಂದಾಪುರ ಶಾಖೆಯ ಟ್ರಸ್ಟಿ ಡಾ|ಆದರ್ಶ ಹೆಬ್ಬಾರ್ ದೀಪ ಬೆಳಗಿಸಿ ರಕ್ತದಾನ ಶಿಬಿರವನ್ನು ಉದ್ಘಾಟಿಸುತ್ತಾ ಹೇಳಿದರು. 

ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ವಂದನೀಯ ಅನೀಲ್ ಡಿಸೋಜಾ ‘ಕ್ರಿಶ್ಚನಿಯರಿಗೆ ಈ ವರ್ಷ ಕರುಣೆಯ ವರ್ಷ, ಇಂತಹ ಸಂದರ್ಭದಲ್ಲಿ, ನಾವು ಪರರಿಗೆ ಉಪಕಾರ ಅಗುವಂತ ರಕ್ತದಾನವನ್ನು ಮಾಡುವ ಕ್ರತ್ಯವನ್ನು ಉದಾರ ಮನಸ್ಸಿನಿಂದ ನಾವು ಮಾಡ ಬೇಕೆಂದು ಹೇಳಿ ಆಶಿರ್ವದಿಸಿದರು. ಚಿನ್ಮಯಿ ಆಸ್ಪತ್ರೆಯ ವೈದ್ಯ ಬ್ಲಡ್ ಬ್ಯಾಂಕ್ ಟ್ರಸ್ಟಿಯ ಉಪ ಚೇಯೆರ್‍ಮೇನ್ ಡಾ|ಉಮೇಶ್ ಪುತ್ರನ್ ‘ನಾವು ರಕ್ತದಾನ ಮಾಡಿ ಉಪಕಾರ ಮಾಡಿದ್ದೆವೆ ಎನ್ನುವುದಕಿಂತ್ತ ಹೆಚ್ಚು ರಕ್ತ ದಾನ ಮಾಡಿದವರಿಗೆನೆ ಹೆಚ್ಚು ಉಪಕಾರವಾಗುವುದು, ರಕ್ತ ತೆಳುವಾಗಿ ಅಪಾಯಕಾರಿ ರೋಗಗಳನ್ನು ತಡೆಕಟ್ಟಬಹುದು’ ಎಂದು ಅವರು ಮಾಹಿತಿ ನೀಡಿದರು.

ಕಥೊಲಿಕ್ ಸಭಾದ ಅಧ್ಯಕ್ಷರಾದ ಶ್ರೀ ವಿಲ್ಸನ್ ಆಲ್ಮೇಡಾ ಸ್ವಾಗತ ಕೋರಿದರು. ವೇದಿಕೆಯಲ್ಲಿ ವೈದ್ಯಾಧಿಕಾರಿ ಡಾ|ಮಲ್ಲಿ ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷ ಜಾನ್ಸನ್ ಆಲ್ಮೇಡಾ, ಕಾರ್ಯದರ್ಶಿ ಫೆಲ್ಸಿಯಾನಾ ಡಿಸೋಜಾ, ಕಾರ್ಯಕ್ರಮದ ಸಂಚಾಲಕಾರಾದ ವಿನೋದ್ ಕ್ರಾಸ್ಟೊ ವೇದಿಕೆಯಲ್ಲಿ ಉಪಸ್ಥಿರಾಗಿದ್ದರು. ಬ್ಲಡ್ ಬ್ಯಾಂಕನ್ ಶಿಬಂದಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ, ಕಾರ್ಯದರ್ಶಿ, ಸೀತಾರಾಮ್ ಶೆಟ್ಟಿ, ಕೋಶಾಧಿಕಾರಿ ಶಿವರಾಮ್ ಶೆಟ್ಟಿ ಹಾಜರಿದ್ದರು

ಕಾರ್ಯದರ್ಶಿ ಶ್ರೀಮತಿ ಶೈಲಾ ಆಲ್ಮೇಡಾ ವಂದಿಸಿದರು. ಜೇಕಬ್ ಡಿಸೋಜಾ ಕಾರ್ಯಕ್ರಮವನ್ನು ನಿರ್ವಹಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here