Friday 26th, April 2024
canara news

ನಾಳೆ ಬರೋಡಾದಲ್ಲಿ ತುಳು ಸಂಘ ಬರೋಡಾ ವತಿಯಿಂದ ಗಣ್ಯರ ಸಮ್ಮುಖದಲ್ಲಿ ತುಳು ಚಾವಡಿ ಸಂಭ್ರಮ

Published On : 15 Jul 2016   |  Reported By : Rons Bantwal


ಮುಂಬಯಿ, ಜು.15: ತುಳು ಸಂಘ ಬರೋಡಾ ಇದರ ವತಿಯಿಂದ ತುಳು ಚಾವಡಿ ಸಂಭ್ರಮವನ್ನು ನಾಳೆ (ಜು.17) ಆದಿತ್ಯವಾರ ಅಪರಾಹ್ನ 2.00 ಗಂಟೆಗೆ ಗುಜರಾತ್ ರಾಜ್ಯದ ಬರೋಡಾ ರೈಲ್ವೆ ಸ್ಟೇಷನ್ ಸನಿಹದಲ್ಲಿರುವ ಗುಜರಾತ್ ಬಿಲ್ಲವ ಸಂಘ ಇದರ ಸಭಾಗೃಹದಲ್ಲಿ ನೇರವೇರಿಸಲಾಗುವುದು.

Dr. Ganesh Sankamaar

-Chandrahasa M. Rai

Shashidhar Shetty Baroda

Dayananda Bontra Baroda

ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗುವ ಸಂಭ್ರಮದಲ್ಲಿ ಗೌರವ ಅತಿಥಿsಗಳಾಗಿ ಮಂಗಳೂರುನ ಸೈಂಟ್ ಅಲೋಸಿಯಸ್ ಕಾಲೇಜು ಉಪನ್ಯಾಸಕ, ನಾಡಿನ ಹೆಸರಾಂತ ಸಾಹಿತಿ, ವಾಗ್ಮಿ ಡಾ| ಗಣೇಶ್ ಅವಿೂನ್ ಸಂಕಮಾರ್ ಡಾ| ಗಣೇಶ್ ಅಮೀನ್ ಸಂಕಮಾರ್, ಸೂಪರ್‍ಕೇರ್ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮುಂಬಯಿ ಇದರ ನಿರ್ದೇಶಕ ಬೊಳ್ನಾಡುಗುತ್ತು ಚಂದ್ರಹಾಸ ಎಂ.ರೈ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಉಪಸ್ಥಿತರಿರುವರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುರುನಾರಯಣ ಯಕ್ಷಗಾನ ಮಂಡಳಿ ಮುಂಬಯಿ ಕಲಾವಿದರು ದೇವು ಪೂಂಜಾ ಪ್ರತಾಪ ಯಕ್ಷಗಾನ ಪ್ರದರ್ಶಿಸಿದರು ಎಂದು ತುಳು ಸಂಘ ಬರೋಡಾ ಇದರ ಗೌ| ಅಧ್ಯಕ್ಷ ದಯಾನಂದ ಬೋಂಟ್ರಾ, ಕೋಶಾಧಿಕಾರಿ ವಾಸು ಪೂಜಾರಿ ತಿಳಿಸಿದ್ದಾರೆ. ಗುಜರಾತ್‍ನಾದಾದ್ಯಂತ ನೆಲೆಯಾಗಿರುವ ಸರ್ವ ತುಳು-ಕನ್ನಡಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ತುಳು ಚಾವಡಿ ಸಂಭ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವಂತೆ ಗೌ| ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಈ ಮೂಲಕ ವಿನಂತಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here