Friday 26th, April 2024
canara news

ಮಂಪರು ಪರೀಕ್ಷೆಗೆ ನರೇಶ್‌ ಶೆಣೈ ಅಸಮ್ಮತಿ

Published On : 16 Jul 2016   |  Reported By : Canaranews Network

ಮಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಿ. ಬಾಳಿಗಾ ಹತ್ಯೆ ಪ್ರಕರಣದ ಆರೋಪಿ ನರೇಶ್‌ ಶೆಣೈ ನ್ಯಾಯಾಲಯದಲ್ಲಿ ಮಂಪರು ಪರೀಕ್ಷೆಗೆ ಸಮ್ಮತಿ ನೀಡಿಲ್ಲ.

ನರೇಶ್‌ ಶೆಣೈಗೆ ಸುಳ್ಳು ಪತ್ತೆ ಪರೀಕ್ಷೆ, ಮಂಪರು ಪರೀಕ್ಷೆ ಹಾಗೂ ಬ್ರೈನ್‌ ಮ್ಯಾಪಿಂಗ್‌ಗೆ ಅವಕಾಶ ನೀಡುವಂತೆ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.ಕಾನೂನು ಪ್ರಕಾರ ಆರೋಪಿ ಮಂಪರು ಪರೀಕ್ಷೆಗೆ ಸಮ್ಮತಿ ಸೂಚಿಸಿದರೆ ಮಾತ್ರ ನ್ಯಾಯಾಲಯ ಅನುಮತಿ ನೀಡುತ್ತದೆ.ನೇರವಾಗಿ ನ್ಯಾಯಾಲಯ ಅನುಮತಿ ನೀಡಲು ಅವಕಾಶ ಇರುವುದಿಲ್ಲ.

ಈ ಕಾನೂನು ಜಾರಿಯಾದ ಬಳಿಕ ಮಂಪರು ಪರೀಕ್ಷೆಯ ಪ್ರಮಾಣ ಇಳಿಮುಖಗೊಂಡಿದೆ.ಪಂಜಿಮೊಗರು ಜೋಡಿ ಕೊಲೆ ಪ್ರಕರಣದಲ್ಲಿ ಮಂಪರು ಪರೀಕ್ಷೆಗೆ ಸಮ್ಮತಿ ಸೂಚಿಸಿದ್ದರು. ಕೊಲೆಯಾದ ಮಹಿಳೆಯ ಪತಿ ಹಾಗೂ ತಮ್ಮ ಮಂಪರು ಪರೀಕ್ಷೆ ನಡೆಸುವಂತೆ ಸಮ್ಮತಿ ಸೂಚಿಸಿದ್ದರು.ಆದರೆ ಇದುವರೆಗೆ ಮಂಪರುಪರೀಕ್ಷೆ ಆಗಿಲ್ಲ ಎಂದು ಮೂಲಗಳು ವಿವರಿಸಿವೆ.

More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here