Friday 26th, April 2024
canara news

ಜನಪ್ರಿಯ ಕಾರ್ಯಕ್ರಮಗಳು ಪ್ರಕೃತಿ ಪರವಾಗಲಿ

Published On : 27 Jul 2016   |  Reported By : Rayee Rajkumar


ಪ್ರತೀ ವರ್ಷ ಪ್ರತೀ ಸರಕಾರಗಳು ನವ ನೂತನ ಕಾರ್ಯಕ್ರಮಗಳನ್ನು ಹೊಸೆದುಕೊಂಡು ನವ ನವೋನ್ಮೇಷದ ಹಣೆ ಪಟ್ಟಿಯೊಂದಿಗೆ ಜನರ ಎದುರು ಪ್ರತ್ಯಕ್ಷಗೊಳ್ಳುತ್ತಿವೆ. ಆದರೆ ಅಂತಹ ಕಾರ್ಯಕ್ರಮಗಳಿಂದ ಎಷ್ಟು ಜನರಿಗೆ ಉಪಯೋಗವಾಗುತ್ತದೆ ಎಂದು ಯೋಚಿಸುವುದಕ್ಕೆ ಮೊದಲು ಎಷ್ಟು ಪ್ರಕೃತಿಯ ವಿಭಾಗಗಳಾದ ನೆಲ, ಜಲ, ಗಾಳಿ, ಕಾಡು, ಮೇಡು ಹಾಳಾಗುತ್ತದೆಂದು ಯೋಚಿಸಿ ಲೆಕ್ಕೆ ಹಾಕ ಬೇಕಾಗಿದೆ. ಪ್ರತಿಯೊಂದು ಸರಕಾರ ಈ ರೀತಿಯಾಗಿ ಲೆಕ್ಕ ಹಾಕಿದರೆ ಜನಪರ ಕಾರ್ಯಕ್ರಮಗಳನ್ನು ಪ್ರಕೃತಿ ಪರ ಕಾರ್ಯಕ್ರಮಗಳಾಗಿ ಪರಿವರ್ತಿಸಲು ಮನ ಮಾಡುತ್ತವೆಂದು ಲೆಕ್ಕಿಸಬಹುದಾಗಿದೆ.

ಹೆದ್ದಾರಿ ಅಗಲೀಕರಣ: ಈ ಸಂದರ್ಭದಲ್ಲಿ ಸಾವಿರಾರು ಬೃಹತ್ ಮರಗಳು ಹನನ ಗೊಳ್ಳುತ್ತವೆ. ಪ್ರಸ್ತುತ ಇರುವ ಹೆದ್ದಾರಿಯ ಎರಡೂ ಬದಿಗಳಲ್ಲಿ ಸಾಕಷ್ಟು ವರ್ಷಗಳ ಹಿಂದೆ ನೆಟ್ಟು ಬೆಳೆಸಿದ ಸಾಕಷ್ಟು ಬಲಿತ, ದೊಡ್ಡ ಬೆಲೆಬಾಳುವ ಮರಗಳಿವೆ. ಅವುಗಳನ್ನು ಕೇವಲ ಹೆದ್ದಾರಿ ಅಗಲೀಕರಣದ ಹೆಸರಲ್ಲಿ ಕೊಡಲಿ, ಗರಗಸದ ಹೊಡೆತಕ್ಕೆ ಸಿಲುಕಿಸುವ ಬದಲು ಅವನ್ನು ಹಾಗೂ ಇರುವ ರಸ್ತೆಯನ್ನು ಹಾಗೇ ಉಳಿಸಿಕೊಂಡು ಅದರ ಒಂದು ಬದಿಯಲ್ಲಿಯ ಖಾಸಗೀ ಪ್ರದೇಶವನ್ನು ಮಾತ್ರ ವಶಪಡಿಸಿಕೊಂಡು ಇನ್ನೊಂದು ರಸ್ತೆಯನ್ನು ನಿರ್ಮಿಸಬಹುದು. ಇದರಿಂದಾಗಿ ಇರುವ ರಸ್ತೆ ಹಾಗೇ ಮೇಲ್ದರ್ಜೆಗೆ ಏರಿ ಉತ್ತಮಗೊಳ್ಳಲು ಸಾಧ್ಯವಿದೆ. ಈಗ ಎಲ್ಲೆಲ್ಲಿ ಕ್ರಾಸ್‍ಗಳಿವೆಯೋ ಅಲ್ಲೆಲ್ಲಾ ರಸ್ತೆಯನ್ನು ಸಾಧ್ಯವಾದಷ್ಟು ನೇರ ಮಾಡಲು ಯಾವ್ಯಾವ ಬದಿಗಳಲ್ಲಿ ಅಗತ್ಯವೋ ಅಲ್ಲೆಲ್ಲಾ ಅಗತ್ಯ ಇರುವಷ್ಟು ಖಾಸಗೀ ಪ್ರದೇಶವನ್ನು ಮಾತ್ರ ವಶಪಡಿಸಿಕೊಂಡು ನೇರಗೊಳಿಸಬಹುದಾಗಿದೆ.

ಇದಕ್ಕೆ ಹೊರತಾಗಿ ಯೋಚಿಸಿದರೆ ಹೆದ್ದಾರಿಗೆ ಸಮಾಂತರವಾಗಿ ಒಳ ಪ್ರದೇಶದಲ್ಲಿ ಸಾಧಾರಣ ಮಟ್ಟದ ರಸ್ತೆಯೊಂದು ಇದ್ದೇ ಇರುತ್ತದೆ. ಆ ಇರುವ ರಸ್ತೆಯನ್ನೇ ಅಲ್ಲಿಯೇ ಅಗಲಗೊಳಿಸಿಕೊಂಡು ಪೂರ್ಣವಾಗಿಲ್ಲದಲ್ಲಿ ಪೂರ್ಣಗೊಳಿಸಿಕೊಂಡು ರಾಷ್ಟ್ರೀಯ ಏಕಮುಖ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದರೆ ಉತ್ತಮ ರಸ್ತೆಯಾಗಿ ಮಾರ್ಪಾಡಾಗಲು ಸಾಧ್ಯವಿದೆ. ಇದರಿಂದಾಗಿ ಇರುವ ರಸ್ತೆ ಹಾಗೇ ಉತ್ತಮಗೊಂಡು ನೂತನ ರಸ್ತೆಯೂ ಕೂಗಳತೆ ದೂರದಲ್ಲಿ ನಿರ್ಮಾಣಗೊಳ್ಳಲು ಸಾಧ್ಯವಾಗುತ್ತದೆ. ಇದು ಎರಡೂ ಏಕಮುಖ ಹೆದ್ದಾರಿಯ ರಸ್ತೆ ಬದಿಗಳಲ್ಲಿರುವ ಹೆಚ್ಚಿನ ಮೆನೆಗಳವರಿಗೆ ವ್ಯಾಪಾರ, ವಹಿವಾಟು ಇತ್ಯಾದಿಗಳಿಗೆ ಅನುಕೂಲ ಒದಗಿ ಅಭಿವೃದ್ಧಿಯಾಗಲು ಅವಕಾಶ ದೊರಕಲಿದೆ. ಇರುವ ರಸ್ತೆಯನ್ನು ಹಾಳುಗೆಡವಿ ನೂತನ ರಸ್ತೆಗೆ ಮತ್ತಷ್ಟು ವೆಚ್ಚ ಹೆಚ್ಚಿಸÀುವ ಬದಲು ಇರುವ ರಸ್ತೆಯನ್ನೇ ಉನ್ನತೀಕರಿಸಿ, ಇರುವ ಬೆಳೆದ ಮರಗಳೆಲ್ಲವನ್ನೂ ಹಾಗೇ ಉಳಿಸಿಕೊಂಡು ಪ್ರಕೃತಿಯನ್ನು ಕಾಪಾಡಿ ನೂತನ ರಸ್ತೆ ನಿರ್ಮಿಸುವುದು ಯುಕ್ತವಲ್ಲವೇ??

ಹೆದ್ದಾರಿ ಅಗಲೀಕರಣಕ್ಕಾಗಿ ಕೋಟಿಗಟ್ಟಲೆ ಹಣವನ್ನು ವ್ಯಯಿಸುತ್ತಿರುವುದೇನೋ ಸರಿ. ಆದರೆ ಅಂತಹ ಅಗಲೀಕರಣದ ತರುವಾಯ ಆ ಮಾರ್ಗವನ್ನು ಉಪಯೋಗಿಸುವವರಿಗೆ, ವಾಹನಿಗರಿಗೆ ಹಾಕುತ್ತಿರುವ ಕಂದಾಯ/ ಟೋಲ್ ಮಾತ್ರ ಯುಕ್ತವಾದುದಲ್ಲ. ಏಕೆಂದರೆ ಅಂತಹ ಮಾರ್ಗಗಳ ಬದಿಗಳಲ್ಲಿ ಹಾಕುವ ಲಕ್ಷಗಟ್ಟಲೆ ಜಾಹೀರಾತುಗಳಿಂದ ಸರಕಾರ, ಸ್ಥಳಿಯ ಸ್ವ ಸರ್ಕಾರಗಳಿಗೆ ವರ್ಷಂಪ್ರತಿ ಲಕ್ಷಗಟ್ಟಲೆ ಹಣ ದೊರಕುತ್ತದೆ. ಜನರೂ ಕೂಡಾ ಸೇವಾ ತೆರಿಗೆ ರೂಪದಲ್ಲಿ ಪ್ರತಿಯೊಂದಕ್ಕೂ ನೂರಾರು ವಿಧದ ತೆರಿಗೆಯನ್ನು ಕಟ್ಟುತ್ತಿರುತ್ತಾರೆ. ಹೀಗಾಗಿ ಮÀಗದೊಮ್ಮೆ, ಪ್ರತೀಯೊಂದು ತಿರುಗಾಟಕ್ಕೆ ಟೋಲ್ ರೂಪದಲ್ಲಿ ಹಣ ಪೀಕಿಸುವುದು ಎಷ್ಟರ ಮಟ್ಟಿಗೆ ಸರಿ?? ಯಾರೂ ಕೂಡಾ ಸುಮ್ಮ ಸುಮ್ಮಗೆ ಅನಗತ್ಯವಾಗಿ ಯಾವ ಮಾರ್ಗದಲ್ಲೂ ಸಂಚರಿಸುವುದಿಲ್ಲ. ಪ್ರತೀ ವಾಹನ ಕೊಳ್ಳುವಾಗಲೂ, ಪ್ರತೀ ಲೀಟರ್ ನಲ್ಲೂ, ಪ್ರತೀ ವ್ಯಕ್ತಿಗಳಿಂದ ಕಂದಾಯ, ತೆರಿಗೆ ಇತ್ಯಾದಿ ವಸೂಲಿ ಮಾಡುತ್ತಿರುವಾಗ ರಸ್ತೆ ವ್ಯವಸ್ಥೆ ಮಾಡಿಕೊಡುವುದು ಸರಕಾರದ ಜವಾಬ್ದಾರಿಯಾಗಿರುವಾಗ ಪ್ರತೀ ಹೆಜ್ಜೆ-ಹೆಜ್ಜೆಯಲ್ಲೂ, ಪ್ರತೀ ಬಾರಿಯೂ ಪ್ರಯಾಣಕ್ಕಾಗಿ ಟೋಲ್ ಸಂಗ್ರಹಿಸುವುದು ಎಷ್ಟಕ್ಕೂ ಯುಕ್ತವಲ್ಲ. ಆದಷ್ಟು ಶೀಘ್ರ ಎಲ್ಲಾ ಟೋಲ್ ಗಳನ್ನೂ ನಿವಾರಿಸಿ ಟೋಲ್ ಸಂಗ್ರಹದ ಸಂದರ್ಭದಲ್ಲಾಗುವ ಅನವಶ್ಯಕ ಇಂಧನ ಪೋಲನ್ನು ನಿವಾರಿಸಿ ದೇಶದ ಇಂಧನ ಶೇಖರಣೆಯನ್ನು ಅನಗತ್ಯ ಪೋಲಿನಿಂದ ರಕ್ಷಿಸಬೇಕಾಗಿದೆ.

ಮನೆಗೊಂದು ಇಂಗು ಗುಂಡಿ/ ಕೃಷಿ ಹೊಂಡ: ನೈಸರ್ಗಿಕವಾದ ತಗ್ಗು ಪ್ರದೇಶಗಳೆಲ್ಲವನ್ನೂ ಹಿಂದಿನ ಕಾಲದಲ್ಲಿ ಕೆರೆ, ಮದಗ, ತೋಡು, ಕಲ್ಯಾಣಿ, ಇತ್ಯಾದಿ ಹೆಸರುಗಳಲ್ಲಿ ರಕ್ಷಿಸಿ ಪ್ರಾಕೃತಿಕವಾಗಿ ನೀರು ಶೇಖರಣೆಗೊಳ್ಳಲು ಅಗತ್ಯ ಇರುವ ವ್ಯವಸ್ಥೆಗಳನ್ನು ಮಾಡಿದ್ದರು. ಅದರಿಂದಾಗಿ ಯಾವುದೇ ಊರಿನಲ್ಲೂ ನೀರಿನ ಕೊರತೆ ಸಂಭವಿಸುತ್ತಿರಲಿಲ್ಲ. ಆದರೆ ಮನುಷ್ಯರ ಸಂಖ್ಯೆ ಬೆಳೆದಂತೆಲ್ಲಾ

ಮತ್ತು ಸ್ವಾರ್ಥ ಭಾವನೆ ಹೆಚ್ಚಿದಂತೆಲ್ಲಾ ಇರುವ ಹೊಂಡ-ಗುಂಡಿ, ಕೆರೆ-ನಾಲೆ, ಮದಗ,-ಕಲ್ಯಾಣಿಗಳೆಲ್ಲದಕ್ಕೂ ಮಣ್ಣು ತುಂಬಿ ತಮಗೆ ಬೇಕಾದಂತೆ ಉಪಯೋಗಿಸಲು, ಬಳಸಲು; ವ್ಯಕ್ತಿ, ಸರಕಾರಗಳು ಪ್ರಾರಂಭಿಸಿ ಇಲ್ಲದ ತೊಂದರೆಗಳನ್ನು ತಂದೊಡ್ಡಿವೆ. ನೈಸರ್ಗಿಕ ನೀರು ಶೇಖರಣಾಗಾರಗಳು ಕಾಣೆಯಾದಾಗ ಬಂದ ನೀರು ಒಟ್ಟಾಗಲು ಸ್ಥಳವಿಲ್ಲದೆ ಮಳೆಗಾಲದಲ್ಲಿ ಕೆಳ ಪ್ರದೇಶದಲ್ಲಿರುವ ಮನೆ, ಅಂಗಡಿ-ಮುಂಗಟ್ಟುಗಳಿಗೆ ನುಗ್ಗಿ ನೆರೆಯಲ್ಲಿ ಎಲ್ಲವೂ ತೇಲಾಡಲು ಪ್ರಾರಂಭವಾಯಿತು. ಹಾಗೆಯೇ ಇದ್ದ ತಗ್ಗು ಪ್ರದೇಶಗಳು ಇಲ್ಲವಾದುದರಿಂದ ನೀರು ಇಂಗುವಿಕೆ ಕಡಿಮೆಯಾಗುತ್ತಾ ಹೋದಂತೆ, ಛಳಿಗಾಲ ಮುಗಿಯುತ್ತಿದ್ದಂತೆ ಬರಗಾಲವೂ, ನೀರಿಗೆ ಹಾಹಾಕಾರವೂ ಪ್ರಾರಂಭವಾಗಿದೆ.

ಇದೀಗ ಮನೆಗೊಂದು ಇಂಗು ಗುಂಡಿ ತೆಗೆದು, ಛಾವಣಿ ನೀರನ್ನು ಸಂಗ್ರಹಿಸಿ ಬಾವಿ, ಬೋರ್ವೆಲ್ ಗಳಿಗೆ ಕಳುಹಿಸಿ ಅಲ್ಲಲ್ಲೇ ನೀರನ್ನು ಇಂಗಿಸುವ ಪ್ರಯತ್ನಕ್ಕೆ ಕೆಲವರು ಮುಂದಾಗಿದ್ದಾರೆ. ಅದೇ ರೀತಿ ಕೆಲವಾರು ಕಡೆಗಳಲ್ಲಿರುವ ಸ್ವ ಸರ್ಕಾರಗಳು ಈ ರೀತಿ ನೀರಿಂಗಿಸಿದವರಿಗೆ ತೆರಿಗೆಗಳಲ್ಲಿ ಸ್ವಲ್ಪಾಂಶದ ಕಡಿತವನ್ನೂ ಘೋಷಿಸಿವೆ. ಒಂದು ವೇಳೆ ಸರಕಾರಕ್ಕೆ ಈಗಲಾದರೂ ಎಚ್ಚರವಾಗಿದ್ದರೆ ಕನಿಷ್ಠ ಪಕ್ಷ ಎಲ್ಲೆಲ್ಲಿಯ ಕೆರೆ, ತೋಡು, ಮದಗ, ಕಲ್ಯಾಣಿ, ಹೊಳೆಗಳಲ್ಲಿರುವ ಹೂಳು ತೆಗೆದು ಆಳ, ಅಗಲಗೊಳಿಸಿ ಹಿಂದಿಗಿಂತ ಹೆಚ್ಚು ನೀರು ನೈಸರ್ಗಿಕವಾಗಿ ಒಟ್ಟಾಗಲು, ಶೇಖರಗೊಳ್ಳುವಂತೆ ಮಾಡಲು ಕ್ರಮ ಕೈಗೊಳ್ಳಲಿ. ತೆಗೆದ ಹೂಳು ಇತ್ಯಾದಿಗಳು ತೋಟ, ಗದ್ದೆಗಳಿಗೆ ಅತ್ಯÀುತ್ತಮ ಗೊಬ್ಬರವಾಗಿ ಉಪಯೋಗಿಸಲು ಅತ್ಯಂತ ಉಪಯುಕ್ತವಾದುದರಿಂದ ಅದನ್ನು ಏಲಂ ಹಾಕಿದರೆ ಸ್ವತ: ಕೃಷಿಕರು, ತೋmಗಳವರು ಕೊಂಡು ಹೋಗಿ ಆದಾಯವೂ ಲಭಿಸಿ ನೈಸರ್ಗಿಕ ನೀರು ಶೇಖರಣಾಗಾರಕ್ಕೆ ದಂಡೆ ಇತ್ಯಾದಿ ನಿರ್ಮಿಸಲು ಸಾಕಷ್ಟು ಹಣವೂ ಇದರಿಂದ ಒಟ್ಟಾಗಿ ಬೇರೆ ಸಹಾಯಧನಕ್ಕಾಗಿ ಕಾಯುವ ಪ್ರಮೇಯ ಇರಲಾರದು. ಇದಕ್ಕಾಗಿ ಆಯಾ ಊರಿನಲ್ಲಿರುವ ಯುವ ಶಕ್ತಿ ಸಂಘಗಳು, ಪಂಚಾಯತ್, ಲಯನ್ಸ್, ರೋಟರಿ, ರೋಟರ್ಯಾಕ್ಟ್, ಇನ್ನರ್ ವೀಲ್‍ಕ್ಲಬ್ ಗಳನ್ನೇ ಮುಂದೊತ್ತಿ ಅಭಿವೃದ್ಧಿಗೊಳಿಸಲು ಪ್ರೇರೇಪಿಸ¨ಹುದಾಗಿದೆ.

ಸರಕಾರ ಕೂಡಾ ನಿರ್ದಾಕ್ಷಿಣ್ಯವಾಗಿ ಎಲ್ಲಾ ರೆವೆನ್ಯೂ ವಿಭಾಗದವರ ಸಹಕಾರ ಪಡೆದು ಜಿಲ್ಲಾಧಿಕಾರಿಗಳ ಮೂಲಕ ಪೋಲೀಸ್ ಮತ್ತ್ಯು ಅಗತ್ಯ ಬಿದ್ದರೆ ಸೈನ್ಯದ ಸಹಕಾರವನ್ನೂ ಕೂಡಾ ಪಡೆದು ಈಗಾಗಲೇ ಅತಿಕ್ರಮಿಸಿರುವ ಎಲ್ಲಾ ಅಕ್ರಮ ಪ್ರವೇಶ, ಕಟ್ಟಡಗಳನ್ನೂ ನಿವಾರಿಸಿ ನೀರು ಶೇಖರಣಾಗಾರಗಳನ್ನು ಪುನರಪಿ ಪುನರುಜ್ಜೀವನಗೊಳಿಸಬೇಕಾಗಿದೆ. ಎಲ್ಲೆಲ್ಲಿಯ ನೀರು ಸಂಗ್ರಹಾಗಾರಗಳು ಇನ್ನೂ ಹಾಗೆಯೇ ಇವೆಯೋ ಅವೆಲ್ಲವನ್ನೂ ಮೇಲ್ಕಂಡ ಅಲ್ಲಲ್ಲಿಯ ಸಂಘ, ಸಂಸ್ಥೆಗಳ ಮೂಲಕ ರಕ್ಷಿಸಿ ಸೂಕ್ತ ತಡೆಗೋಡೆಗಳನ್ನು ನಿರ್ಮಿಸಬೇಕಾಗಿದೆ. ಹೀಗೆ ಎಲ್ಲರೂ ಸಹಕರಿಸಿದg,É ಮತ್ತು ಇರುವ ಎಲ್ಲಾ ನೈಸರ್ಗಿಕ ಆಗರಗಳು ಯಥಾವತ್ತಾಗಿದ್ದರೆ, ಅತಿಕ್ರಮಿಗಳು ಅವರಾಗೇ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿದg,É ಮನೆಗೊಂದು ಇಂಗುಗುಂಡಿ, ಕೃಷಿಹೊಂಡಗಳ ಅಗತ್ಯವಾದರೂ ಏನಿಹುದು??

ಅಂತರ್ಜಲ ವೃದ್ಧಿಗಾಗಿ ಸರಕಾರ ಇಂದು ಇನ್ನಿಲ್ಲದಂತೆ ಹಲವಾರು ಕಾರ್ಯಕ್ರಮ, ಕಾರ್ಯ ಯೋಜನೆಗಳ ಮೂಲಕ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಮಹಾ ನಗರಗಳಲ್ಲಿ “ಮನೆ ಛಾವಣಿ ನೀರು ಸಂಗ್ರಹ, ಓಡುವ ನೀರನ್ನು ನಡೆಯುವಂತೆ ಮಾಡಿ, ಮಳೆ ನೀರನ್ನು ಬಾವಿ-ಬೋರ್ ವೆಲ್ ಗಳಿಗೆ ತುಂಬಿಸಿ” ಎಂಬಿತ್ಯಾದಿ ಹಲವಾರು ವೈವಿಧ್ಯಮಯ ಶಿರೋನಾಮೆಯ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಒಂದು ವೇಳೆ ಸರಕಾರ ಮೊದಲೇ ಎಚ್ಚೆತ್ತು ಯಾವದೇ ನೈಸರ್ಗಿಕ/ ಪ್ರಾಕೃತಿಕ ನೀರು ಶೇಖರಣೆಗಳನ್ನು ಹೂಳು ತುಂಬಲು, ಆಕ್ರಮಿಸಲು ಬಿಡದಿರುತ್ತಿದ್ದಲ್ಲಿ, ಮುಖ್ಯವಾಗಿ ಕೊಳವೆ ಬಾವಿಗಳನ್ನು ಕೊರೆಯಲು ಅವಕಾ±ವನ್ನೇ Àಕೊಡದಿರುತ್ತಿದ್ದಲ್ಲಿ, ಪೇಟೆಯ ಮಂದಿಗೆ ಮೀಟರ್‍ನ ಆಧಾರದಲ್ಲೇ ನೀರು ಒದಗಿಸುತ್ತಿದ್ದಲ್ಲಿ ಮತ್ತು ನಿರ್ದಿಷ್ಟ ಮಿತಿಗಿಂತ ಹೆಚ್ಚು ಬಳಸುವವರಿಗೆ ದುಪ್ಪಟ್ಟು ತೆರಿಗೆ, ಕ್ರಯ ಹಾಕುತ್ತಿದ್ದಲ್ಲಿ ಖಂಡಿತಕ್ಕೂ ನೀರಿನ ಕೊರತೆ ಉಂಟಾಗುತ್ತಿರಲಿಲ್ಲ. ಯಾವಾಗ ಸಾರ್ವಜನಿಕ ನಲ್ಲಿ, ಬೇಕಾಬಿಟ್ಟಿ ಸಂಪರ್ಕ, ದಾಖಲೆ ರಹಿತ ಕನೆಕ್ಷನ್ ಇತ್ಯಾದಿಗಳು ಪ್ರಾರಂಭಗೊಂಡವೋ ನೀರಿನ ವ್ಯರ್ಥ, ದುರ್ಬಳಕೆ ಹೆಚ್ಚಾಗಿ ನೀರಿಗಾಗಿ ಹಾಹಾಕಾರ ಹೆಚ್ಚ ತೊಡಗಿತು.

ಜನಕ್ಕೊಂದು ಸಸಿ/ ಲಕ್ಷ/ ಕೋಟಿ ಸಸಿ ನೆಡು: ನೂರಾರು ವರ್ಷಗಳ ಹಿಂದಿನ ನೈಸರ್ಗಿಕ ಕಾಡು, ಮೇಡು, ಗಿಡ, ಮರಗಳನ್ನು ಕಡಿದು ತೆಗೆದು ಹೆಚ್ಚು ಉಪಯೋಗಕ್ಕೆ ಬಾರದ, ಪಕ್ಷಿ-ಪ್ರಾಣಿಗಳಿಗೆ ಏನೊಂದೂ ಹಣ್ಣು ಹಂಪಲು ನೀಡದ ಮ್ಯಂಜಿಯಮ್, ನೀಲಗಿರಿ, ಮೇಫ್ಲವರ್, ಸುಬಾಬುಲ್, ಗಾಳಿಯಂತಹ ಸಸಿಗಳನ್ನು ನೆಡುವುದರಿಂದ ಏನು ತಾನೇ, ಯಾರಿಗೆ ತಾನೇ ಉಪಯೋಗ? ಅವುಗಳಿಂದ ನೆರಳೂ ದೊರಕದು, ಹಣ್ಣು-ಹಂಪಲುಗಳೂ ದೊರಕವು. ಅದಕ್ಕೆ ಬದಲು ಹಿಂದಿನ ಜನರು ನೆಟ್ಟು ಬೆಳೆಸಿದಂತೆ ಹಲಸು, ಆಲ, ಬೇಲ, ನೇರಳೆ, ಮಾವು, ಅಥವಾ ಇತರ ಔಷಧಿಯ ಗಿಡಗಳನ್ನಾದರೂ ನೆಟ್ಟರೆ ಅದರಿಂದ ಹಣ್ಣು- ಹಂಪಲು, ಉತ್ತಮ ನೆರಳು ಅಥವಾ ಔಷಧಿಯ ಉಪಯೋಗಕ್ಕಾದರೂ ಸಾಧ್ಯವಾಗುತ್ತಿತ್ತು. ಆದ್ದರಿಂದ ಅರಣ್ಯ ಇಲಾಖೆ ಮೇಲ್ಕಂಡಂತೆ ಪಶು-ಪಕ್ಷಿಗಳಿಗೆ, ಮನುಷ್ಯರಿಗೆ ಅನುಕೂಲವಾಗುವ ಗಿಡ-ಮರಗಳನ್ನು ಮಾತ್ರ ಬೆಳೆಸಲು ಪ್ರಯತಿಸಿದರೆ ಹೆಚ್ಚು ಉಪಯೋಗಕರವೂ, ಪಶು-ಪಕ್ಷಿಗಳಿಗೆ ಆಲಯವೂ ಆಗಲು ಸಾಧ್ಯವಿದೆ.

ಹಿಂದಿನ ಕಾಲದಲ್ಲಿ ಬೆಳೆದಿದ್ದ, ನೂರಾರು ವರ್ಷದ ಬೆಳವಣಿಗೆ ಕಂಡಿದ್ದಂತಹ ಮರಗಳನ್ನು ಕಾಣಬೇಕಿದ್ದಲ್ಲಿ, ಮನುಷ್ಯ ಪ್ರಾಮಾಣಿಕವಾಗಿ ಗಿಡ ನೆಟ್ಟು ನೂರಾರು ವರ್ಷ ಕಾಲ ಕೈಕಟ್ಟಿ ಸುಮ್ಮಗಿರಬೇಕಾಗುತ್ತದೆ. ಅದು ಈ ಪ್ರಪಂಚದ ಆಸೆ ಬುರುಕ ಮನುಷ್ಯನಿಂದ ಸಾಧ್ಯವೇ? ಗಂಧದ ನಾಡು ಎಂದು ಹೆಸರುವಾಸಿಯಾಗಿರುವ ಕರ್ನಾಟಕದಲ್ಲಿ ಇಂದು ಬೆಳೆದ ಚಂದನ-ಗಂಧದ ಕೊರಡಿಗಾಗಿ ದುರ್ಬೀನು ಹಿಡಿದು ಹುಡುಕಬೇಕಾದೀತು. ಹೀಗಿರುವಾಗ ಇರುವ ಮರ-ಗಿಡಗಳನ್ನು ಕನಿಷ್ಠ ಉಳಿಸಿಕೊಂಡು ನೂತನ ಬಹು ಉಪಯೋಗಕಾರೀ ಗಿಡಗಳನ್ನು ಬೆಳೆಸಿ ಪ್ರಕೃತಿಯನ್ನು ಉಳಿಸಬೇಕಾಗಿದೆ.

ಗ್ರಾಮಗಳು ಬೆಳೆದಂತೆಲ್ಲಾ ಐದು ಸೆಂಟ್ಸ್, ಎರಡೂವರೆ ಸೆಂಟ್ಸ್, ಒಂದೂವರೆ ಸೆಂಟ್ಸ್ ಸ್ಥಳಗಳನ್ನು ಬಡವರು, ನಿರ್ಗತಿPರು, ಪರಿಶಿಷ್ಟÀರಿಗೆ ನೀಡಿ ಒಂದು, ಎರಡು ಎಕರೆ ಪ್ರದೇಶದಲ್ಲಿ ಸಿಮೆಂಟ್ ಕಾಡನ್ನು ನಿರ್ಮಿಸಲು ಅನುವು ಮಾಡಿಕೊಟ್ಟ ಸರಕಾರ, ಸ್ವ-ಸರ್ಕಾರಗಳು ಈಗ ತಮ್ಮ ವ್ಯಾಪ್ತಿಯಲ್ಲಿ ಅಂತಹ ಪ್ರದೇಶ ಸಿಗದಿರುವದರಿಂದ ಹತ್ತಿರದ ಗ್ರಾಮಗಳಿಗೆ ಲಗ್ಗೆ ಇಟ್ಟು ಅವನ್ನೂ ತಮ್ಮ ವಶಕ್ಕೆ ಎಳೆದುಕೊಂಡು ಅಲ್ಲೂ ತಮ್ಮ ಕೊಳಚೆ, ಕಶ್ಮಲವನ್ನು ಕೊಂಡು ಹೋಗಿ ಸುರುವಿ, ರಾಡಿ ಎಬ್ಬಿಸಿವೆ. ಮಾತ್ರವಲ್ಲ ಅಲ್ಲೂ ತಮ್ಮ ಸಿಮೆಂಟ್ ಕಾಡಿನ ವಿಸ್ತರಣೆಗೆ ಪ್ರಯತ್ನಿಸುತ್ತಿದ್ದಾವೆ. ಇದು ಶುದ್ಧ ಗಾಳಿ, ನೀರು, ಪ್ರದೇಶ ಹೊಂದಿರುವ ಗ್ರಾಮಗಳನ್ನೂ ಹಾಳು ಮಾಡಿದಂತಲ್ಲವೇ? ಅಲ್ಲಲ್ಲಿಯ ಗ್ರಾಮಸ್ಥರು ಆಗಾಗ ವಿರೋಧಿಸುತ್ತಿದ್ದರೂ ಕೂಡಾ ಸರಕಾರ ಅದನ್ನು ದಮನಿಸುತ್ತಿರುವುದು ಶೋಚನೀಯ. ಇದು ಎಲ್ಲಿಗೆ ಹೋಗಿ ನಿಲ್ಲಬಹುದು? ಹೇಳುವವರಾರು? ತಿಳುವಳಿಕೆ ನೀಡುವವರಾರು??

ಸರಕಾರವು ಸರಕಾರೀ ಸ್ಥಳವನ್ನು ಮುಫತ್ತಾಗಿ ಕೊಡುತ್ತಿರುವದರೊಂದಿಗೆ ಆ ಎಲ್ಲಾ ಮಂದಿಗೆ ಮನೆ ಕಟ್ಟಲು ಸಾಕಷ್ಟು ಸಹಾಯಧನ, ಸಬ್ಸಿಡಿ ಇತ್ಯಾದಿಗಳನ್ನು ನೀಡಿ ಕೋಟಿಗಟ್ಟಲೆ ಹಣವನ್ನು ಅವರಿಗಾಗಿ ವ್ಯಯಿಸುತ್ತಿದೆ. ಎಕರೆಗಟ್ಟಲೆ ಪ್ರದೇಶದಲ್ಲಿ ಆ ರೀತಿ ಸಿಮೆಂಟ್ ಕಾಡನ್ನು ನಿರ್ಮಿಸಲು ತಾವೇ ಹಣ ನೀಡಿ ಬೆಂಬಲಿಸುವ ಬದಲು ಅದೇ ಹಣದಿಂದ ಸರಕಾರವೇ ಅವರೆಲ್ಲರಿಗೆ ಬಹಳ ಕಡಿಮೆ ಪ್ರದೇಶದಲ್ಲಿ ಫ್ಲ್ಯಾಟ್‍ನ್ನು ಬಹಳ ಕಡಿಮೆ ಹಣದಲ್ಲಿ ನಿರ್ಮಿಸಿಕೊಟ್ಟು ಉಳಿದ ಸ್ಥಳದಲ್ಲಿ ಗಿಡ-ಮರ ನೆಟ್ಟು ಕಾಡನ್ನು ಬೆಳೆಸಬಹುದಲ್ಲವೇ? ಇದರಿಂದಾಗಿ ಸ್ಥಳ, ಹಣ ಎಲ್ಲವೂ ಉಳಿತಾಯವಾಗುತ್ತಿತ್ತು. ಫ್ಲ್ಯಾಟುಗಳಲ್ಲಿರುವ ಮಂದಿಗೇ, ಗಿಡ ನೆಟ್ಟು ಕಾಡು ಬೆಳೆಸಲು ಅನಿವಾರ್ಯ ಮಾಡಿದ್ದರೂ ಅದು ಸಫಲವಾಗುತ್ತಿತ್ತು. ಇದು ಒಂದೇ ಹೊಡೆತಕ್ಕೆ ಎರಡೆರಡು ಲಾಭ ಮಾಡಿಕೊಂಡಂತಾಗುತ್ತಿತ್ತು. ಮಾತ್ರವಲ್ಲ ಫ್ಲ್ಯಾಟುಗಳಲ್ಲಿರುವ ಮಂದಿಗೇ ಅವರವರು ನೆಟ್ಟು ಬೆಳೆಸಿದ ಒಂದು/ ಅರ್ಧ ಸೆಂಟ್ಸ್ ಸ್ಥಳದಲ್ಲಿರುವ ಮರಗಳ ಫಲಗಳನ್ನು ಉಪಯೋಗಿಸಲು ಅವಕಾಶವನ್ನು ಕೊಟ್ಟಿದ್ದಲ್ಲಿ ಅವರೆಲ್ಲರೂ ಬಹಳ ಸಂತಸದಿಂದ ಕೃಷಿ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದರು. ಇದಕ್ಕೆ ಪೂರಕವಾಗಿ ಕೃಷಿ ಮಾಡಿದವರಿU, ಗಿಡ-ಮರ ನೆಟ್ಟು ಪೋಷಿಸಿದವರಿಗೆÉ ಮನೆ ತೆರಿಗೆಯಲ್ಲಿ ಕಡಿತ ಒದಗಿಸಿದರೆ ಹೆಚ್ಚೆಚ್ಚು ಪ್ರದೇಶದಲ್ಲಿ ಕೃಷಿ ಮಾಡಿ, ಗಿಡ-ಮರ ನೆಟ್ಟು ಹಸಿರನ್ನು ಉಳಿಸುತ್ತಿದ್ದರು. ಆದರೆ ಸರಕಾರ ಅಂತಹ ಯಾವ ಉಪಕ್ರಮವನ್ನೂ ಮಾಡದ್ದರಿಂದ ಅವೆಲ್ಲವೂ ಇಂದು ಸಿಮೆಂಟಿನ ಕಾಡುಗಳಾಗಿ ಹಸುರಿನ ಲವಲೇಶವೂ ರಹಿತ ಪ್ರದೇಶಗಳಾಗಿರುವುದು ಸರಕಾರದ ಸೋಲೇ? ಅಧಿಕಾರಿಗಳಲ್ಲಿರುವ ಯೋಚನೆಯ ಕೊರತೆಯೇ ? ಜನರ ಹತಾಶೆಯೇ? ಪ್ರಕೃತಿಯ ವಿನಾಶದ ಪ್ರಾರಂಭವೇ?? ಇನ್ನೂ ಕಾಲ ಮಿಂಚಿಲ್ಲ ಈ ಮೇಲಿನಂತೆ ಈಗಾಗಲೇ ಸೆಂಟ್ಸ್ ಲೆಕ್ಕದಲ್ಲಿ ನೀಡಿರುವ, ನೀಡುತ್ತಿರುವ ಎಲ್ಲಾ ಪ್ರದೇಶಗಳಲ್ಲೂ ಗಟ್ಟಿ ಮುಟ್ಟಾದ, ಉತ್ತಮ ಗುಣಮಟ್ಟದ, ಎಲ್ಲಾ ಸೌಲಭ್ಯವಿರುವ ಫ್ಲ್ಯಾಟ್ ನಿರ್ಮಿಸಿ ಉಚಿತವಾಗಿ ನೀಡಿ ಕೆಳಗಿನ ಒಂದೆರಡು ಅಂತಸ್ತುಗಳಲ್ಲಿ ಸಾಕಷ್ಟು ಅಂಗಡಿ-ಮುಂಗಟ್ಟುಗಳನ್ನು ನಿರ್ಮಿಸಿ ಸಾಕಷ್ಟು ಹಣಕ್ಕೆ ನೀಡಿದರೆ; ಫ್ಲ್ಯಾಟ್ ನಿರ್ಮಾಣಕ್ಕಾಗಿ ಖರ್ಚು ಮಾಡಿದ ಎಲ್ಲಾ ಹಣವೂ ಆ ಅಂಗಡಿಗಳಿಂದ ಬರಲು ಸಾಧ್ಯವಿದೆ. ಏಕೆಂದರೆ ನೂರಾರು ಮನೆಗಳ ನಿರ್ಮಾಣ ಇರುವದರಿಂz,À ವ್ಯಾಪಾರ ಸಾಕಷ್ಟು ಆಗುವದರಿಂದ, ಅಂಗಡಿ-ಮುಂಗಟ್ಟುಗಳಿಗೆ ಬಹು ಬೇಡಿಕೆ ಖಂಡಿತ ಇರಲಿದೆ.

ಬದಲಿ ಗಿಡ ಬೆಳೆಸಲಿ: ದೇಶದ ಅಭಿವೃದ್ಧಿಗಾಗಿ ಪ್ರಯಾಣದ ಮಾಧ್ಯಗಳೆಲ್ಲವೂ ಮೇಲ್ದರ್ಜೆಗೇರುತ್ತಿವೆ. ಹೆದ್ದಾರಿ ಅಗಲೀಕರಣವೂ ಅದರಲ್ಲಿ ಸಾಮಾನ್ಯ. ಆದರೆ ಈ ಸಂದರ್ಭದಲ್ಲಿ ಹನನ ಗೈದ ಹೆಮ್ಮರಗಳಿಗೆ ಬದಲಾಗಿ ಎಷ್ಟು ಗಿಡಗಳನ್ನು ನೆಟ್ಟು ಪೋಷಿಸಿ ಕನಿಷ್ಠ ಮರಗಳನ್ನಾಗಿ ಬೆಳೆಸಲಾಗಿದೆ? ಈ ಪ್ರಶ್ನೆಗೆ ಉತ್ತರವಾಗಿ ಶೇಕಡಾ ಒಂದು ಎಂಬಷ್ಟೂ ಕೂಡಾ ಉತ್ತರ ಸಿಗಲಾರದು. ಅದಕ್ಕೆ ಬದಲಾಗಿ ಆ ಎಲ್ಲಾ ರಸ್ತೆಗಳ ಬದಿಗಳಲ್ಲಿ ಕೇವಲ ವ್ಯಾಪಾರೀ ವಹಿವಾಟುಗಳು ಮಾತ್ರ ಬೆಳೆದಿವೆ. ಆದುದರಿಂದ ಇದುವರೆವಿಗೆ ನಿರ್ಮಿಸಿದ ಎಲ್ಲಾ ಚತುಷ್ಪಥ, ಷಟ್ಪಥ ಹೆದ್ದಾರಿಗಳ ನಡುವಿನ ಸ್ಥಳದಲ್ಲಿ ಚಿಕ್ಕ/ ಅಲಂಕಾರಿಕ ಗಿಡಗಳು, ಪೊದರುಗಳನ್ನು ಬೆಳೆಸಿ, ಬದಿಗಳಲ್ಲಿ ಗಿಡ ನೆಟ್ಟು ಮರ, ಹೆಮ್ಮರಗಳನ್ನಾಗಿ ಮಾಡುವದನ್ನು ಹೆದ್ದಾರಿ ನಿರ್ಮಿಸಿದವರಿಗೆ ಅನಿವಾರ್ಯಗೊಳಿಸಬೇಕು. ಎಷ್ಟು ಮರಗಳನ್ನು ಹೆದ್ದಾರಿಗಾಗಿ ಉರುಳಿಸಲಾಗಿದೆಯೋ ಅದರ ದುಪ್ಪಟ್ಟು ಸಂಖ್ಯೆಯ ಉಪಯುಕ್ತ, ಸಹಾಯಕಾರೀ ಗಿಡಗಳನ್ನು ನೆಟ್ಟು ಮರಗಳನ್ನಾಗಿ, ಹೆಮ್ಮರಗಳನ್ನಾಗಿ ಮೊದಲಾಗಿ ಮಾಡುವಂತೆ ಒಪ್ಪಂದ ಮಾಡಿಕೊಂಡಿರಬೇಕು. ಒಪ್ಪಂದದ ಪ್ರಕಾರ ಕನಿಷ್ಠ ಪಕ್ಷ ರಸ್ತೆ ಪೂರ್ಣಗೊಂಡಾಗ ಮರಗಳನ್ನು ನಿರ್ಮಿಸಿರದಿದ್ದರೆ ಟೋಲ್ ಸಂಗ್ರಹಕ್ಕೆ ಅವಕಾಶÀವನ್ನು ನಿರಾಕರಿಸಬೇಕು. ಗಿಡ ನೆಟ್ಟು (ಪ್ರತ್ಯೇಕ ಸಂಖ್ಯೆ ನೀಡುವುದರ ಮೂಲಕ ದಾಖಲಿಸಿ) ಮರಗಳನ್ನು ಮಾಡಿದ ತರುವಾಯವೇ ಟೋಲ್ ಸಂಗ್ರಹವೆಂಬ ಅನಿವಾರ್ಯತೆಯನ್ನು ಸೃಷ್ಟಿಸಬೇಕು. ಇದರಿಂದಾಗಿ ರಸ್ತೆ ಕಾಮಗಾರಿ ವಹಿಸಿಕೊಂಡವರು ಕಾಮಗಾರಿ ವಹಿಸಿಕೊಂಡಾಕ್ಷಣವೇ ಬದಿಗಳಲ್ಲಿ ಗಿಡ ನೆಡಲು ಸೂಕ್ತ ಸ್ಥಳವನ್ನು ಹುಡುಕಿ, ಬೆಳೆಸಿ ಉಳಿದ ಸ್ಥಳಗಳಲ್ಲಿ ಸೂಕ್ತ ಕಾಮಗಾರಿಯನ್ನು ವ್ಯವಸ್ಥಿತವಾಗಿ ನಡೆಸುವಂತಾಗುತ್ತದೆ. ಇದರಿಂದಾಗಿ ಅತ್ತ ರಸ್ತೆ ನಿರ್ಮಾಣವಾಗುವಾಗ ಗಿಡವೂ ಮರವಾಗಿ ಬೆಳೆದು ಹೂ-ಹಣ್ಣು ನೀಡಲು ರೆಡಿಯಾಗಿರುತ್ತದೆ. ಇಲ್ಲದಿದ್ದಲ್ಲಿ ಈಗಿನಂತೆ ವರ್ಷಾನುಗಟ್ಟಲೆ ರಸ್ತೆ ನಿರ್ಮಾಣಕ್ಕಾಗಿ ಸಮಯ ಕಳೆದು, ಅತ್ತ ಗಿಡಗಳನ್ನೂ ನೆಟ್ಟು ಬೆಳೆಯದೇ, ನೇರವಾಗಿ ಟೋಲ್ ಸಂಗ್ರಹಿಸಿ ತಮ್ಮ ಕಿಸೆಯನ್ನು ಮಾತ್ರ ತುಂಬಿಸಿಕೊಳ್ಳುವ ಹೊಂಚು ಹಾಕುತ್ತಾರೆ.

ತಗ್ಗು ಪ್ರದೇಶಗಳೆಲ್ಲ ರಕ್ಷಿಸಲ್ಪಡಲಿ : ಮನುಷ್ಯರು ತಮ್ಮ ಮನೆ ಇತ್ಯಾದಿ ನಿರ್ಮಾಣಕ್ಕಾಗಿ ಭೂಮಿಯ ಅಡಿಯಲ್ಲಿರುವ ಕೆಂಪುಕಲ್ಲು, ಮಣ್ಣು ತೆಗೆದುsss ಸಾಕಷ್ಟು ತಗ್ಗು ಪ್ರದೇಶಗಳು ಉಂಟಾಗುತ್ತವೆ. ಆ ಎಲ್ಲಾ ತಗ್ಗು ಪ್ರದೇಶಗಳಲ್ಲೂ ಮಳೆಗಾಲದಲ್ಲಿ ನೀರು ಶೇಖರಣೆಗೊಳ್ಳುವದು ಸಾಮಾನ್ಯ. ಅಂತಹ ತಗ್ಗು ಪ್ರದೇಶಗಳು ರಚನೆಯಾದ ತಕ್ಷಣ ಆ ಪ್ರದೇಶದ ಸುತ್ತ ತಡೆ ಬೇಲಿಯನ್ನು ನಿರ್ಮಿಸುವದು( ತುಂಡುಕಲ್ಲು, ಮಣ್ಣು ಅಲ್ಲಿಯೇ ದೊರಕುವದರಿಂದ ಹೆಚ್ಚೇನೂ ಖರ್ಚು ಬರುವದಿಲ್ಲ) ಕಡ್ಡಾಯಗೊಳಿಸಿ ಒಪ್ಪಂದ ಮಾಡಿಕೊಳ್ಳಬೇಕು. ಒಪ್ಪಂದದಂತೆ ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಮೊತ್ತ ಮೊದಲು ತಡೆ ಬೇಲಿ ನಿರ್ಮಿಸಿಕೊಂಡು ತರುವಾಯವೇ ಕಲ್ಲು, ಮಣ್ಣು ತೆಗೆಯಲು ಒಪ್ಪಿಗೆ ನೀಡುವ ಕ್ರಮ ಜಾರಿಯಾಗಬೇಕು. ಅಧಿಕಾರಿಗಳು ನಿರ್ದಿಷ್ಟ ಪ್ರದೇಶದ ಗುರುತು ಹಾಕಿ ಮೊದಲೇ ನೀಡಲೇಬೇಕು.

ನಿರ್ಮಾಣಗೊಂಡ ತಗ್ಗು ಪ್ರದೇ±,À ತಡೆ ಬೇಲಿಯಿಂದಾಗಿ ರಕ್ಷಿÀಸಲ್ಪಟ್ಟಿರುವುದರಿಂದ ಮನುಷ್ಯರು, ಪ್ರಾಣಿಗಳು ಒಳ ಹೋಗಲು ಸಾಧ್ಯವಾಗುವುದಿಲ್ಲ. ತಗ್ಗು ಪ್ರದೇಶದಲ್ಲಿ ನೀರು ಶೇಖರಣೆಗೊಂಡು ಮಳೆಗಾಲದಲ್ಲಿ ಇಂಗುಗುಂಡಿಯ ರೀತಿಕಾರ್ಯ ನಿರ್ವಹಿಸುವದರಿಂದ ಸಾಕಷ್ಟು ಮಳೆಯ ನೀರು ಭೂಮಿಯ ಒಳಕ್ಕೆ ಇಳಿಯಲು ಅವಕಾಶÀವನ್ನು ಒದಗಿಸುತ್ತದೆ. ಆದ್ದರಿಂದ ಯಾವತ್ತೂ ಕೂಡಾ ಕಲ್ಲು, ಮಣ್ಣು ತೆಗೆದು ರಚನೆಯಾದ ತಗ್ಗುಗಳನ್ನು ಮಣ್ಣು ಹಾಕಿ ಮುಚ್ಚದೇ ತಡೆ ಬೇಲಿಯಿಂದ ರಕ್ಷಿಸಿ ಸುರಕ್ಷಿತಗೊಳಿಸಬೇಕು.

ಪ್ರಕೃತಿ ಪೂಜಕರಾಗೋಣ: ಭಾರತೀಯನು ಯಾವದೇ ಧರ್ಮ, ಜಾತಿಗಳ ವ್ಯಕ್ತಿಯಾಗಿದ್ದರೂ ಕೂಡಾ ಯಾವಾಗ ಪ್ರಕೃತಿಯನ್ನು ಪೂಜಿಸುವವನಾಗಿ, ಪ್ರಕೃತಿಯ ಪ್ರತಿಯೊಂದೂ ವಸ್ತುವಿನಲ್ಲಿ ದೇವರನ್ನು ಕಂಡು ಆರಾದಿಸುವವನÁದರೆ, ನಮ್ಮ ಪ್ರಕೃತಿ, ಪರಿಸರಗಳು ಭಯ, ಭಕ್ತಿಯಿಂದಲಾದರೂ ಉಳಿದು ಮುಂದಿನ ಪೀಳಿಗೆಗೆ ದೊರಕಿಯಾವು. ಬಹಳ ಸುಲಭದಲ್ಲಿ ಹಸುರೀಕರಣ ಸಾಧ್ಯವಾಗಿ ಮತ್ತೊಮ್ಮೆ ಭೂಮಿ ಹಚ್ಚ ಹಸುರಾಗಿ ಕಂಗೊಳಿಸಬಹುದಾಗಿದೆ. ಜೈ ಭಾರತ ಜನನಿ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here