Friday 26th, April 2024
canara news

ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ವತಿಯಿಂದ ಆ.13-27 ತನಕ ಮುಂಬಯಿಯಲ್ಲಿ ತಾಳಮದ್ದಳೆ ಕಾರ್ಯಕ್ರಮ

Published On : 11 Aug 2016   |  Reported By : Rons Bantwal


ಮುಂಬಯಿ, ಆ.11: ಅಜೆಕಾರು ಕಲಾಭಿಮಾನಿ ಬಳಗ (ರಿ.) ಮುಂಬಯಿ ವರ್ಷಂಪ್ರತಿ ಮಹಾನಗರ ಮುಂಬಯಿಯಲ್ಲಿ ಆಯೋಜಿಸುತ್ತಿರುವ ತಾಳಮದ್ದಳೆ ಕಾರ್ಯಕ್ರಮವನ್ನು ಈ ಬಾರಿ ಇದೇ ಆ.13ರ ಶನಿವಾರ ದಿಂದ ಆ.27ನೇ ಶನಿವಾರ ತನಕ ನಗರದ ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.

       

Lakshmi Narayana Asranna                    Pernanankila Haridas             Umesh Shetty Polya

         

Prabhakar L.Shetty                   Suresh S. Bhandary                  Satish Shetty Patla

Balakrishna Shetty

ಆ.13ನೇ ಶನಿವಾರ ಸಂಜೆ 4-00 ಗಂಟೆಗೆ ವಿದ್ಯಾವಿಹಾರ್ ಪಶ್ಚಿಮದಲ್ಲಿನ ಕಲಾಯಿ ವಿಲೇಜ್‍ನಲ್ಲಿನ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಪೆರ್ಣಂಕಿಲ ಹರಿದಾಸ ಭಟ್ ಆಶೀರ್ವಚನಗೈದು ಪ್ರಥಮ ತಾಳಮದ್ದಳೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಂದು ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯ ಮುಂಬಯಿ ಧುರೀಣ ಉಮೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲಾಗುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಬಂಟ್ಸ್ ಸಂಘ ಮುಂಬಯಿ ಜೊಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಿಜಯ ಶೆಟ್ಟಿ, ಗೌರವ ಅತಿಥಿsಗಳಾಗಿ ಬಂಟ್ಸ್ ಸಂಘ ಮುಂಬಯಿ ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಭಂಡಾರಿ, ಬಂಟ್ಸ್ ಸಂಘ ಮುಂಬಯಿ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಸಿಎ| ವಿಶ್ವನಾಥ ಶೆಟ್ಟಿ, ಮಾಜಿ ಕಾರ್ಯಧ್ಯಕ್ಷ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ಯಕ್ಷಧ್ರುವ ಫೌಂಡೇಶನ್ ಟ್ರಸ್ಟ್ ಮುಂಬಯಿ ಸಮಿತಿ ಉಪಾಧ್ಯಕ್ಷ ಐಕಳ ಗಣೇಶ್ ವಿ.ಶೆಟ್ಟಿ ಆಮಿಸಲಿದ್ದಾರೆ. ದಿನೇಶ್ ಶೆಟ್ಟಿ ವಿಕ್ರೋಲಿ ಸಹಕಾರದೊಂದಿಗೆ ಪೆÇಲ್ಯ ಲಕ್ಷಿ ್ಮೀನಾರಯಣ ಶೆಟ್ಟಿ ಮತ್ತು ಗಿರೀಶ್ ರೈ ಕಕ್ಕೆಪದವು ಭಾಗವತಿಕೆಯಲ್ಲಿ `ಬಬ್ರುವಾಹನ-ವಿರವರ್ಮ ಕಾಳಗ' ಯಕ್ಷಗಾನ ತಾಳಮದ್ದಲೆ ನಡೆಯಲಿದೆ. ಸರ್ಪಂಗಳ ಈಶ್ವರ ಭಟ್, ಭಾಸ್ಕರ ರೈ ಕುಕ್ಕುವಳಿ, ಗಣರಾಜ ಕುಂಬಳೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ ಅರ್ಥಧಾರಿಗಳಾಗಿ ಪಾತ್ರವಹಿಸಲಿದ್ದಾರೆ. ಪ್ರಶಾಂತ್ ಶೆಟ್ಟಿ ವಗೆನಾಡು (ಮದ್ದಳೆ), ವಿಶ್ವನಾಥ ಶೆಟ್ಟಿ ಪಳ್ಳಿ (ಚೆಂಡೆ) ಸಹಕರಿಸಲಿದ್ದಾರೆ ಎಂದು ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಆ.14ನೇ ಆದಿತ್ಯವಾರ ಸಂಜೆ 4.00 ಗಂಟೆಗೆ ಜವಾಬ್ ಪ್ರಾಯೋಜಕತ್ವದಲ್ಲಿ ಅಂಧೇರಿ ಪಶ್ಚಿಮದಲ್ಲಿ `ಗುರುದಕ್ಷಿಣ' ತುಳು ತಾಳಮದ್ದಳೆ, ಆ.15ನೇ ಸೋಮವಾರ ಸಂಜೆ 4.00 ಗಂಟೆಗೆ ಬಂಟ್ಸ್ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯು ಠಾಕೂರ್ ಹಾಲ್, ಡೊಂಬಿವಲಿ (ಪೂರ್ವ) ಇಲ್ಲಿ `ಭಕ್ತ ಮಯೂರ ಧ್ವಜ', ಆ.16ನೇ ಮಂಗಳವಾರ ಸಂಜೆ 4.00 ಗಂಟೆಗೆ ನವೋದಯ ಕನ್ನಡ ಶಾಲೆ ಕಿಸನ್ ನಗರ ಥಾಣೆ ಇಲ್ಲಿ `ತರಣಿಸೇನ ಕಾಳಗ', ಆ.17ನೇ ಬುಧವಾರ ಸಂಜೆ 4.00 ಗಂಟೆಗೆ ಬೊಯಿಸರ್ ನಿತ್ಯಾನಂದ ಮಂದಿರದಲ್ಲಿ `ನೂತನ ಪ್ರಸಂಗ', ಆ.18ನೇ ಗುರುವಾರ ಸಂಜೆ 3.30 ಗಂಟೆಗೆ ಯಕ್ಷಪೇಮಿ ಮುಲುಂಡ್ ಇವರಿಂದ ಮರಾಠ ಸಂಸ್ಕೃತ ಹಾಲ್, ಮುಲುಂಡ್ (ಪೂರ್ವ) ಇಲ್ಲಿ `ಚವನ ಯಜ್ಞ', ಆ.19ನೇ ಶುಕ್ರವಾರ ಸಂಜೆ 4.00 ಗಂಟೆಗೆ ಬಂಟ್ಸ್ ಸಂಘ ಮುಂಬಯಿ ಕುರ್ಲಾ-ಭಾಂಡುಪ್ ಪ್ರಾದೇಶಿಕ ಸಮಿತಿಯಿಂದ ಘಾಟ್ಕೋಪರ್ ಪೂರ್ವದ ತಿಲಕ ರಸ್ತೆಯಲ್ಲಿನ ಹೊಟೇಲು ಗುರುಕೃಪ ಸಭಾಗೃಹದಲ್ಲಿ `ನೂತನ ಪ್ರಸಂಗ', ಆ.20ನೇ ಶನಿವಾರ ಸಂಜೆ 4.00 ಗಂಟೆಗೆ ಬೋಂಬೆ ಬಂಟ್ಸ್ ಅಸೋಸಿಯೇಶನ್ ಇವರಿಂದ ನಿತ್ಯಾನಂದ ಹಾಲ್, ಸಯನ್ ಪೂರ್ವ ಇಲ್ಲಿ `ಭೀಷ್ಮ ವಿಜಯ', ಆ.21ನೇ ಆದಿತ್ಯವಾರ ಸಂಜೆ 4.00 ಗಂಟೆಗೆ ಬಂಟ್ಸ್ ಸಂಘ ಮುಂಬಯಿ ಮೀರಾ-ಭಯಂಧರ್ ಪ್ರಾದೇಶಿಕ ಸಮಿತಿಯಿಂದ ಸ್ವಾಮಿ ನಾರಾಯಣ ಮಂದಿರ ಮೀರಾ ರೋಡ್ ಇಲ್ಲಿ `ಶ್ರೀ ಕೃಷ್ಣ ಸಂಧಾನ', ಆ.22ನೇ ಸೋಮವಾರ ಸಂಜೆ 5.00 ಗಂಟೆಗೆ ಶ್ರೀ ಜಗದಂಬಾ ಮಂದಿರ, ಡೊಂಬಿವಲಿ (ಪ) ಇಲ್ಲಿ `ಶ್ರೀರಾಮ ಪರಾಂದಾಯ್ಯ', ಆ.23ನೇ ಮಂಗಳವಾರ ಸಂಜೆ 4.00 ಗಂಟೆಗೆ ಬಂಟ್ಸ್ ಸಂಘ ಮುಂಬಯಿ ಜೊಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯಿಂದ ಹೊಟೇಲ್ ಅವೆನ್ಯೂ ಕಾಂದಿವಿಲಿ ಪೂರ್ವ ಇಲ್ಲಿ `ಪಾದುಕಾ ಪ್ರದಾನ-ಅತಿಕಾಯ ಮೋಕ್ಷ', ಆ.24ನೇ ಬುಧವಾರ ಸಂಜೆ 4.00 ಗಂಟೆಗೆ ಯಕ್ಷಮಿತ್ರ ಭಾಂಡೂಪ್ ಇವರಿಂದ ನಿತ್ಯಾನಂದ ಮಂದಿರ ಭಾಂಡೂಪ್ ಪಶ್ಚಿಮ ಇಲ್ಲಿ `ನೂತನ ಪ್ರಸಂಗ', ಆ.25ನೇ ಗುರುವಾರ ಸಂಜೆ 4.30 ಗಂಟೆಗೆ ಗೋಕುಲ ಹಾಲ್ ಸಯನ್ ಪೂರ್ವ ಇಲ್ಲಿ `ಜಾಂಬವತಿ ಕಲ್ಯಾಣ' ಯಕ್ಷಗಾನ ಬಯಲಾಟ, ಆ.26ನೇ ಶುಕ್ರವಾರ ಸಂಜೆ 4.00 ಗಂಟೆಗೆ ಬಂಟ್ಸ್ ಸಂಘ ಮುಂಬಯಿ ಸಿಟಿ ರಿಜನ್ ಇವರಿಂದ ಬಂಟರ ಭವನ, ಕುರ್ಲಾ ಪಶ್ಚಿಮ ಇಲ್ಲಿ `ನೂತನ ಪ್ರಸಂಗ', ನಡೆಸಲಾಗುವುದು.

ಆ.27ನೇ ಶನಿವಾರ ಮಧ್ಯಾಹ್ನ 1.30 ಗಂಟೆಗೆ ಬಂಟರ ಭವನ, ಕುರ್ಲಾ ಪಶ್ಚಿಮ ಇಲ್ಲಿ ಶ್ರೀ ಕಟೀಲು, ಹೊಸನಗರ, ಬಪ್ಪನಾಡು ಮೇಳದ ಕಲಾವಿದರಿಂದ `ಶ್ರೀ ದೇವಿ ಮಹಾತ್ಮೆ' ಯಕ್ಷಗಾನ ಪ್ರದರ್ಶಿಸಲಾಗುವುದು. ಬಳಿಕ 2016ನೇ ವಾರ್ಷಿಕ ತಾಳಮದ್ದಳೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ಶ್ರೀ ಕ್ಷೇತ್ರ ಕಟೀಲು ಇದರ ಅನುವಂಶೀಕ ಅರ್ಚಕ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣರು ಆಶೀರ್ವಚನ ನೀಡಲಿರುವರು. ಎಸ್.ಬಿ ರಿಯಾಲಿಟಿ ಇದರ ಆಡಳಿತ ನಿರ್ದೇಶಕ, ಸಮಾಜ ಸೇವಕ, ಕೊಡುಗೈದಾನಿ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರಿಗೆ `ಗೌರವ ಯಕ್ಷರಾಕ್ಷ್ಷ ಪ್ರಶಸ್ತಿ', ಯಕ್ಷಧ್ರುವ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ, ಶ್ರೀ ಕಟೀಲು ಯಕ್ಷಗಾನ ಮೇಳದ ಪ್ರಸಿದ್ಧ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರಿಗೆ `ಪಂಚದಶ ಯಕ್ಷರಾಕ್ಷ ಪ್ರಶಸ್ತಿ' ಹಾಗೂ ನಾಡಿನ ಹೆಸರಾಂತ ಯಕ್ಷಗಾನ ಕಲಾವಿದ ಸರಪಾಡಿ ಆಶೋಕ್ ಶೆಟ್ಟಿ ಅವರಿಗೆ `ಯಕ್ಷಮಾತಾ ರಾಕ್ಷ ಪ್ರಶಸ್ತಿ' ಪ್ರಶಸ್ತಿ ಹಾಗೂ ಇತರ 14 ಯಕ್ಷಗಾನ ಕಲಾವಿದರಿಗೆ `ಯಕ್ಷರಾಕ್ಷ ಪ್ರಶಸ್ತಿ', ಪ್ರದಾನಿಸಿ ಸನ್ಮಾನಿಸಲಾಗುವುದು ಎಂದು ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸುಧಾಕರ ಶೆಟ್ಟಿ ಎಣ್ಣೆಹೊಳೆ ಮತ್ತಿತರ ಪದಾಧಿಕಾರಿಗಳು ತಿಳಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here