Friday 26th, April 2024
canara news

ಬಿಲ್ಲವರ ಅಸೋಸಿಯೇಶನ್‍ನಿಂದ ಶ್ರೀ ಗುರುನಾರಾಯಣ ತುಳು ನಾಟಕ ಸ್ಪರ್ಧೆಗೆ ಚಾಲನೆ

Published On : 13 Aug 2016   |  Reported By : Rons Bantwal


ನಾಟಕ ಸ್ಪರ್ಧೆ ಕಲಾರಾಧನೆಗೆ ಸೂಕ್ತ ವೇದಿಕೆ : ಸೂರು ಕರ್ಕೇರ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.13: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸಾಂಸ್ಕೃತಿಕ ಉಪಸಮಿತಿ ಅಸೋಸಿಯೇಶ ನ್‍ನ ಸ್ಥಳೀಯ ಸಮಿತಿಗಳ ಸದಸ್ಯರಿಗಾಗಿ ಆಯೋಜಿಸಿರುವ ಮೂರು ದಿನಗಳ ಶ್ರೀ ಗುರುನಾರಾಯಣ ತುಳು ನಾಟಕ ಸ್ಪರ್ಧೆಯನ್ನು ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿüಯಾಗಿ ಬಿಲ್ಲವ ಜಾಗೃತಿ ಬಳಗದ ಸ್ಥಾಪಕಾಧ್ಯಕ್ಷ ಸೂರು ಸಿ.ಕರ್ಕೇರ ಉಪಸ್ಥಿತರಿದ್ದರು.

ಆಧುನಿಕ ಯುಗಕ್ಕೆ ಸ್ಪಂದಿಸುವ ಜನತೆಯಲ್ಲಿ ಸ್ವಾಭಿಮಾನದ ಬದುಕಿನ ಅವಶ್ಯವಿದೆ. ಇಂತಹ ಕಾಲಘಟ್ಟದಲ್ಲಿ ಬದುಕು ರೂಪಿಸಲು ಪ್ರೇರಣೆ ನೀಡುವ ನಾಟಕ ಕಲೆಗಳ ಉಳಿವು ಅಗತ್ಯವಿದೆ. ಶ್ರೀ ಗುರುನಾರಾಯಣ ತುಳು ನಾಟಕ ಸ್ಪರ್ಧೆ ಕಲಾರಾಧನೆಗೆ ಸೂಕ್ತ ವೇದಿಕೆಯಾಗಲಿಎಂದು ಸೂರು ಕರ್ಕೇರ ಶುಭಾರೈಸಿದರು.

ಬಿಲ್ಲವರ ಅಸೋಸಿಯೇಶನ್ ಲಕ್ಷಾಂತರ ಜನತೆಗೆಯ ಬದುಕಿಗೆ ದೀಪಸ್ತಂಭವಾಗಿದೆ. ಸಾಮಾಜಿಕ, ಧಾರ್ಮಿಕ, ಆಥಿರ್sಕ, ಸಾಂಸ್ಕೃತಿಕ, ರಾಜಕೀಯ ರಂಗಕ್ಕೆ ಕೊಡುಗೆಯನ್ನಿತ್ತ ಮಹಾನ್ ಸಂಸ್ಥೆ. ಕನ್ನಡ ಭವನ ಸೊಸೈಟಿ ಮೂಲಕ ಶೈಕ್ಷಣಿಕ ಸೇವೆ, ಭಾರತ್ ಬ್ಯಾಂಕ್‍ನಿಂದ ಆಥಿರ್sಕ ಸೇವೆ. ರಾಜಕೀಯ

ಕ್ವಿಟ್ ಇಂಡಿಯಾ ಚಳುವಳಿಯ ಬೊಂಬೇ ಉಚ್ಛನ್ಯಾಯಲಯದ ಮೇಲೆ ಬಾವುಟವನ್ನಾರಿಸಿದ ದಾಮೋದರ ಬಂಗೇರಾ ಅವರನ್ನು ಮಹಾತ್ಮಗಾಂಧಿಜೀ ಅವರೇ ಬಹದ್ಧೂರು ಎಂದು ಕರೆದ ಸನ್ನಿವೇಶದಿಂದ ಈ ವರೆಗೂ ರಾಜಕೀಯವಾಗಿ ಮುಂಚೂಣಿಯಲ್ಲಿದ್ದು, ಕುದ್ರೋಳಿ, ಕಟಪಾಡಿ ದೇವಸ್ಥಾನಗಳ ಮೂಲಕ ಧಾರ್ಮಿಕವಾಗಿ, ಮುನ್ನಡೆದಿದೆ. ಈ ಸ್ಪರ್ಧೆಯ ಮೂಲಕ ನಾಟಕ ಕ್ಷೇತ್ರದಲ್ಲಿ ಯುವ ಜನತೆಯನ್ನು ಪೆÇ್ರೀತ್ಸಹಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಜಯ ಸುವರ್ಣ ತಿಳಿಸಿದರು.

 

ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ನಾಟಕ ಸ್ಪರ್ಧಾ ಉದ್ಘಾಟನಾ ಸಮಾರಂಭದಲ್ಲಿ ಗೌರವ ಅತಿಥಿüಗಳಾಗಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಕಲಾಜಗತ್ತು ಮುಂಬಯಿ ಅಧ್ಯಕ್ಷ ತೋನ್ಸೆ ವಿಜಯಕುಮಾರ್ ಶೆಟ್ಟಿ, ರಂಗ ನಿರ್ದೇಶಕ ಡಾ| ಭರತ್‍ಕುಮಾರ್ ಪೆÇಲಿಪು, ಹೆಸರಾಂತ ನಾಟಕ ಕಲಾವಿದ ಮೋಹನ್ ಮಾರ್ನಾಡ್, ಅಬುಧಾಬಿ ಕರ್ನಾಟಕ ಸಂಘದ ಕಾರ್ಯದರ್ಶಿ ಮನೋಹರ್ ತೋನ್ಸೆ ಉಪಸ್ಥಿತರಿದ್ದರು. ಪ್ರಸಿದ್ಧ ಪುರೋಹಿತ ಕೆ.ಸದಾಶಿವ ಶಾಂತಿ ಶುಭ ನುಡಿಗಳನ್ನಾಡಿದರು.

ನನ್ನ ಪಾಲಿಗೆ ಇವತ್ತಿನ ಸ್ಥಾನಮಾನ ಗುರುದಕ್ಷಿಣೆ ಅಣಿಸಿದ್ದೇನೆ. ಸಮಾಜ ಶಿಖರದ ಸಾಹಿತ್ಯ ಲೋಕದ ಮೇರು ವ್ಯಕ್ತಿಗಳÀು, ಕಲಾ ಸೂಕ್ತ ಪ್ರತಿಭೆಗಳ ಗುರುತಿಸುವಿಕೆ ಅಭಿನಂದನಾರ್ಹ. ಸಾಧನೀಯ ಮೇರು ವ್ಯಕ್ತಿಗಳ ಸೇವೆ ಯಾವತ್ತೂ ಮರೆಯಬಾರದು. ಸೇವಾ ಮನೋಭಾವಿಗಳ ಗುರುತಿಸುವಿಕೆ ಅವಶ್ಯವಿದೆ ಎಂದು ಸದಾಶಿವ ಶಾಂತಿ ನುಡಿದರು.

ಬಿಲ್ಲವರ ಅಸೋಸಿಯೇಶನ್‍ಗೆ ಇದೊಂದು ಚರಿತ್ರೆ ನಿರ್ಮಾಣ ದಿನ. ನಾಟಕ ಸ್ಪರ್ಧೆ ದೊಡ್ಡ ಮಟ್ಟದ್ದದಾರೂ ಸೇವಾರ್ಥದಲ್ಲಿ ಇದೊಂದು ಚಿಕ್ಕ ಉದಾಹರಣೆ ಅಷ್ಟೇ. ಯುವಜನತೆಯಲ್ಲಿನ ಪ್ರತಿಭೆ ಗುರುತಿಸುವಿಕೆ ಸ್ತುತ್ಯರ್ಹ. ಅಸೋಸಿಯೇಶನ್ ಸಾಮಾಜಿಕ, ಆಥಿರ್sಕ ಮತ್ತು ಸಾಂಸ್ಕೃತಿಕವಾಗಿಗೂ ಹೆಸರುಮಾಡಿದ ಪ್ರತಿಷ್ಠಿತ ಸಂಸ್ಥೆಯಾಗಿದೆ ಎಂದು ಪಾಲೆತ್ತಾಡಿ ಅಭಿಪ್ರಾಯಪಟ್ಟರು.

ಭರತ್‍ಕುಮಾರ್ ಮಾತನಾಡಿ ಸ್ಪರ್ಧೆಯ ಮುಖೇನ ಸುಮಾರು 300 ಹೊಸ ರಂಗಕರ್ಮಿಗಳನ್ನು ಗುರುತಿಸಿ ಕೊಂಡ ಮಹತ್ತರವಾದ ಯೋಜನೆ ಹಾಗೂ ಯೋಚನೆ ಇದಾಗಿದೆ. ಅಸೋಸಿಯೇಶನ್‍ನ ಈ ಮೂಲಕ ಕಲಾಮಾತೆಗೆ ಅರ್ಪಣೆಗೈದ ನಾಟಕ ಸಂಭ್ರಮ ನಾಟಕಾಭಿಮಾನಿಗಳ ಅಭಿರುಚಿ ನಿರ್ಮಾಣಕ್ಕೆ ಮೂಲವಾಗಿದೆ. ಆಥಿರ್sಕ ಸಂಪತ್ತಿನಂತೆಯೇ ಸಂಸ್ಕೃತಿಯಾರಾಧನೆ ಮೂಲಕವೂ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗಿದ್ದು ಈ ಸ್ಪರ್ಧೆ ಇದಕ್ಕೆ ಪೂರಕವಾಗಿದೆ ಎಂದರು.

ವಿಜಯಕುಮಾರ್ ಶೆಟ್ಟಿ ಮಾತನಾಡಿ ಮನಸ್ಸಿಗೆ ತನ್ಮಯ ನೀಡಿ ಖುಷಿ ನೀಡುದ ಕಾರ್ಯಕ್ರಮ. ತುಳು ಜೀವಂತಿಕೆ ಮತ್ತುಂದು ಬುನಾದಿ ಇದಾಗಿದೆ. ಸಮಾಜವನ್ನು ವ್ಯವಸ್ಥೆಯಲ್ಲಿರಿಸಲು ಈ ಸ್ಪರ್ಧೆ ಉತ್ತಮ ನಿದರ್ಶನ. ನಾಟಕಗಳು ಜೀವನ ಪಾಠಕ್ಕೆ ಸಮಕಾಲೀನತೆ ನೀಡುತ್ತಿದ್ದು ಇದೊಂದು ಅಭಿನಯ ಭಾಷೆಯಾಗಿದೆ. ಇಂತಹ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸುಮಾರು 300 ಕಲಾವಿದರು ಅಭಿನಯದ ಭಿನ್ನತೆಗಳನ್ನು ಅನುಭವಿಸಬೇಕು ಎಂದರು.

ಕಲಾವಿದರಲ್ಲಿ ಪುಣ್ಯತೆ ಕಾಣುವ ಸ್ಪರ್ಧೆ ಇದಾಗಿದೆ. 600ಕ್ಕೂ ಅಧಿಕ ಕಲಾ ಮನಸ್ಸುಗಳು ಸಂಸಾರಿಕÀವಾಗಿ ಒಗ್ಗೂಡಿ ವ್ರತಧಾರಿಗಳಂತೆ ಸ್ಪರ್ಧೆಗೆ ಸಿದ್ಧತೆ ನಡೆಸುವ ರೀತಿ ಅಭಿಮಾನವನ್ನುಂಟು ಮಾಡುತ್ತಿದೆ. ಇದು ರಂಗ ಮಂದಿರ ಕಟ್ಟುವ ಕೆಲಸ. ಕಾರ್ಯಕ್ರಮ ಸಂಘಟಕರ ಶ್ರಮ ಸಾರ್ಥಕ. ಇಂತಹ ಭಾವನಾತ್ಮಕ ಏಕತೆಯಿಂದ ಸ್ವಸ್ಥ್ಯದಿಂದ ಸಮಾಜ ನಿರ್ಮಾಣ ಸಾಧ್ಯ. ಪರಮ ಹಿಂಸೆ ಅನುಭವಿಸುವ ನಾವೆಲ್ಲರೂ ಇಂತಹ ನಾಟಕ ಸಂಸ್ಕೃತಿಯನ್ನು ಮೈಗೂಡಿಸಿ ಪರಮ ಹಂಸಗಳಾಗಬೇಕು. ಇಂತಹ ಸ್ಪರ್ಧೆಗಳು ಯಾವೊತ್ತೂ ಜಾತ್ರೆಗಳಾಗದೆ ಬದುಕು ನಿರ್ಮಾಣದ ಕೊಂಡಿಗಳಾಗಿಸೋಣ ಎಂದು ಮೋಹನ್ ಮಾರ್ನಾಡ್ ಹಿತನುಡಿಗಳನ್ನಾಡಿದರು.

ಮನೋಹರ್ ತೋನ್ಸೆ ಮಾತನಾಡಿ ನಾಟಕ ಕಲಾವಿದರಿಗೆ ಇದೊಂದು ಅರ್ಥಪೂರ್ಣ ವೇದಿಕೆ. ಕಲಾ ಪೆÇೀಷಣೆಗೆ ಪೂರಕವಾದ ಈ ನಾಟಕ ಸ್ಪರ್ಧೆ ಬದುಕಿಗೆ ಶಿಸ್ತು ನೀಡುಂತಾಗಲಿ ಎಂದರು.

ಅಸೋಸಿಯೇಶನ್‍ಗೆ ಸದ್ಯ ನನ್ನ ಅಧ್ಯಕ್ಷತೆ ನನ್ನ ಭಾಗ್ಯವಾಗಿದೆ. ಜಯ ಸುವರ್ಣರ 27 ವರ್ಷಗಳ ಸುದೀರ್ಘಾವಧಿ ಸೇವೆ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಅವರೇ ಸಮಗ್ರ ಬಿಲ್ಲವರಿಗೆ ಆದರ್ಶಪ್ರಾಯರು. ಅವರ ದೂರದೃಷ್ಠಿತ್ವದ ಮಾರ್ಗದರ್ಶನದ ಶ್ರಮವು ಇದೀಗ ಪ್ರತಿಫಲ ನೀಡುತ್ತಿದೆ. ಸಮಾಜ ಇದನ್ನು ಅನುಭವಿಸಬೇಕು. ನಮ್ಮಲ್ಲಿನ ಏಕತಾ ಮನೋಭಾವ ಸಮಾಜಕ್ಕೆ ಹಿತಕರವಾಗಲಿ ಎಂದು ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯ ನುಡಿಗಳನ್ನಡಿದರು.

ಸಮಾರಂಭದಲ್ಲಿ ಹೆಸರಾಂತ ನಾಟಕ ನಿರ್ದೇಶಕರುಗಳಾದ ಶಿಮಂತೂರು ಚಂದ್ರಹಾಸ ಸುವರ್ಣ, ಸಾ.ದಯಾ (ದಯಾನಂದ ಸಾಲ್ಯಾನ್) ಮತ್ತು ಪದ್ಮನಾಭ ಸಸಿಹಿತ್ಲು ಅವರನ್ನು ಸನ್ಮಾನಿಸಿ ಗೌರವಿಸಿದರು. ಎಲ್ಲಾ ಪುರಸ್ಕೃತರು ಸನ್ಮಾನಕ್ಕೆ ಉತ್ತರಿಸಿ ಇದು ಕಲಾಸೇವೆಗೆ ಸಂದ ಗೌರವ ಎನ್ನುತ್ತಾ ಭವಿಷ್ಯತ್ತಿನ ಉದಯೋನ್ಮುಖ ಕಲಾವಿದರಿಗೆ ಆದರ್ಶ ಯೋಜನೆಯಾಗಿ ಬೆಳಗಲಿ ಎಂದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ, ಡಾ| ಯು.ಧನಂಜಯ ಕುಮಾರ್, ಗೌ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಗೌ| ಜೊತೆ ಕೋಶಾಧಿಕಾರಿ ಸದಾಶಿವ ಎ.ಕರ್ಕೇರ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರು ಹಾಗೂ ಪ್ರಥಮ ನಾಟಕದ ಪ್ರಾಯೋಜಕರುಗಳಾದ ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ನ್ಯಾ| ಎಸ್.ಬಿ ಅವಿೂನ್ ಮತ್ತು ಭಾಸ್ಕರ್ ಎಂ.ಸಾಲ್ಯಾನ್ ವೇದಿಕೆಯಲ್ಲಿ ಆಸೀನರಾಗಿದ್ದರು.

ನಾಟಕಕಾರರಾದ ಬಾ.ಸುಮಾ, ಬಾಲಕೃಷ್ಣ ಕೊಡವೂರು, ಅಸೋಸಿಯೇಶನ್‍ನ ಗೌ| ಜೊತೆ ಕಾರ್ಯದರ್ಶಿಗಳಾದ ಹರೀಶ್ ಜಿ.ಸಾಲ್ಯಾನ್, ಪ್ರೇಮನಾಥ ಪಿ.ಕೋಟ್ಯಾನ್, ಆಶಾಲತಾ ಕೋಟ್ಯಾನ್, ಸೇವಾದಳದ ಮುಖ್ಯಸ್ಥ ಗಣೇಶ್ ಕೆ.ಪೂಜಾರಿ, ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್, ಸಿಎ| ಅಶ್ವಜಿತ್ ಹೆಜ್ಮಾಡಿ, ಜೆ.ವಿ ಕೋಟ್ಯಾನ್ ಗೋರೆಗಾಂ, ರಾಜಶೇಖರ್ ಎಂ.ಕೋಟ್ಯಾನ್, ಗಂಗಾಧರ್ ಜೆ.ಪೂಜಾರಿ, ಶ್ರೀನಿವಾಸ ಕರ್ಕೇರ, ದಯನಂದ ಕೌಡೂರು ಸೇರಿದಂತೆ ನೂರಾರು ಕಲಾಭಿಮಾನಿಗಳು ಹಾಜರಿದ್ದರು.

ಸಾಂಸ್ಕೃತಿಕ ಉಪ ಸಮಿತಿ ಕಾರ್ಯಾಧ್ಯಕ್ಷ ದಯಾನಂದ ಆರ್.ಪೂಜಾರಿ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಅಕ್ಷಯ ಮಾಸಿಕದ ಸಹ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಅತಿಥಿüಗಳನ್ನು ಹಾಗೂ ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಗೌರವ ಕಾರ್ಯದರ್ಶಿ ಅಶೋಕ್ ಸಸಿಹಿತ್ಲು ವಂದಿಸಿದರು.

ನಾಟಕದ ಮೊದಲ ದಿನವಾದ ಇಂದು ಮಲಾಡ್ ಸ್ಥಳಿಯ ಸಮಿತಿ ತಂಡವು ಸುಂದರ್ ಪೂಜಾರಿ ರಚಿಸಿ ನಿರ್ದೇಶಿಸಿದ `ಮಾಯಾ ಜಾಲ' ನಾಟಕವನ್ನು ನಲ್ಲಸೋಫರಾ ವಿರಾರ್ ಸ್ಥಳಿಯ ಸಮಿತಿಯು ನಾಗರಾಜ ಗುರುಪುರ ರಚಿಸಿದ, ಸುನೀತಾ ಸುವರ್ಣ ನಿರ್ದೇಶಿಸಿದ `ದೋಲು' ನಾಟಕವನ್ನು, ಚೆಂಬೂರು ಸ್ಥಳಿಯ ಸಮಿತಿಯು ಸುಮಿತ್ರಾ ಎಸ್.ಬಂಗೇರಾ ರಚಿಸಿದ ನಿಟ್ಟೆ ಸಂಜೀವ ಬಂಗೇರ ನಿರ್ದೇಶಿಸಿದ `ಸಾಹುಕಾರ್ ಗುರುವಪ್ಪೆ' ನಾಟಕವನ್ನು, ಭಾಂಡೂಪ್ ಸ್ಥಳಿಯ ಸಮಿತಿಯು ಸಿ.ಎ ಪೂಜಾರಿ ರಚಿಸಿದ ಕೃಷ್ಣರಾಜ್ ಶೆಟ್ಟಿ ನಿರ್ದೇಶಿಸಿದ `ನಾಣು' ನಾಟಕವನ್ನು, ಗೋರೆಗಾಂ ಸ್ಥಳಿಯ ಸಮಿತಿಯು ಲತೇಶ್ ಎಂ.ಪೂಜಾರಿ ರಚಿಸಿ ನಿರ್ದೇಶಿಸಿದ `ಮನ್ನಿ' ನಾಟಕವನ್ನು ಪ್ರದರ್ಶಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here