Friday 26th, April 2024
canara news

ಮೂಲ್ಕಿ-ಬಪ್ಪನಾಡು: ದ್ವಿದಿನಗಳ ತುಳು ಸಮ್ಮೇಳನದ ಸಾಂಭ್ರಮಿಕ ಉದ್ಘಾಟನೆ

Published On : 14 Aug 2016   |  Reported By : Ronida Mumbai


ತುಳುವಿಗೆ ಸಂಸ್ಕøತಿ ಪೋಷಿಸುವ ಶಕ್ತಿಯಿದೆ: ಡಾ| ವಿರೇಂದ್ರ ಹೆಗ್ಗಡೆ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ (ಮಂಗಳೂರು-ಮೂಲ್ಕಿ), ಆ.14: ತುಳುವರು ತಮ್ಮ ಕುಟುಂಬದ ಸಾಂಪ್ರಾದಾಯಿಕ ಕಂಬಳ, ಕೃಷಿ ಹಾಗೂ ಭೂತಾರಾಧನೆ ಅಂತಹ ಮೂಲ ಪದ್ಧತಿಯನ್ನು ಇಂದಿಗೂ ಗಳಿಕೆಯನ್ನು ಲೆಕ್ಕಿಸದೇ ಉಳಿಸಿಕೊಂಡು ಬಂದಿದ್ದಾರೆ. ಅನೇಕರು ಪರವೂರಿನಿಂದ ಬಂದು ಸಂಪ್ರದಾಯ, ಸಂಸ್ಕøತಿಯನ್ನು ಉಳಿಸಿ, ಪಾಲಿಸಲು ಪ್ರಯತ್ನಿಸುತ್ತಿರುವುದು ಊರಿನ ಮಣ್ಣು ಮತ್ತು ಭಾಷೆಯ ಮೇಲೆ ಅವರಿಗಿರುವ ಪ್ರೀತಿ-ಗೌರವವನ್ನು ಬಿಂಬಿಸುತ್ತದೆ. ಇಪ್ಪತ್ತೈದು ವರ್ಷಗಳಲ್ಲಿ ತುಳುನಾಡಿನ ಸುಮಾರು ನೂರಾರು ನೆಲದಡಿ ಹೋಗಿದ್ದ ದೈವಸ್ಥಾನ ಮತ್ತು ದೇವಸ್ಥಾನಗಳು ಮತ್ತೆ ಎದ್ದು ನಿಂತಿವೆ. ಇದು ತುಳುನಾಡಿನ ಸತ್ಯಗಳ ಮಣ್ಣಿನ ರಹಸ್ಯ ಎಂದ ಅವರು, ಸುಮಾರು ಮೂವತ್ತು ದಶಕಗಳ ನಂತರ ತುಳು `ಭಾಷೆ ಮತ್ತೆ ಬೃಹದಾಕಾರವಾಗಿ ಬೆಳೆದಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವಿರೇಂದ್ರ ಹೆಗ್ಗಡೆ ತಿಳಿಸಿದರು.

ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಚತುರ್ಥ ವಾರ್ಷಿಕ ಸ್ಮರಣಾರ್ಥ ತುಳು ಸಮ್ಮೇಳನ ಸಮಿತಿ ಮೂಲ್ಕಿ ಮತ್ತು ಮುಂಬಯಿ ಸಮಿತಿಯು ಮೂಲ್ಕಿ ಅಲ್ಲಿನ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ತುಳು-ಕನ್ನಡದ ಹಿರಿಯ ವಿದ್ವಾಂಸೆ, ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಮುಂಬಯಿ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ದ್ವಿದಿನಗಳ ತುಳು ಸಮ್ಮೇಳನಕ್ಕೆ ಪಂಚ ಜೀಟಿಗೆಗಳನ್ನು ಬೆಳಗಿಸಿ ಉದ್ಘಾಟಿಸಿ ಡಾ| ಹೆಗ್ಗಡೆ ಮಾತನಾಡಿದರು.

ತುಳು ಭಾಷೆ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವಾಗ ಕಳೆದ 2009ರ ಉಜಿರೆಯ ತುಳು ಸಮ್ಮೇಳನ ತುಳು ಮಣ್ಣಿಗೆ ಚೈತನ್ಯವನ್ನು ತುಂಬಿದೆ. ಜಾತಿ, ಮತ ಗಳ ಭೆÉೀದವಿಲ್ಲದ ತುಳು ಮಾತನಾಡುವ ತುಳುವರಿಗೆ ಹೊಸ ದೃಷ್ಠಿಯನ್ನು ಕೊಟ್ಟು ಭಾಷೆಯ ಬಗ್ಗೆ ಅಭಿಮಾನವನ್ನು ಹೆಚ್ಚಿಸಿದೆ ಎಂದು ಹೇಳಿದರು. ಪ್ರಧಾನಿ ಭೇೀಟಿಯಾಗಿ ಆಗ್ರಹ ಈ ತಿಂಗಳ 17ರ ನಂತರ ತುಳು ಭಾಷೆಯನ್ನು 8ನೇ ಪರಿಚ್ಛೇದ ದಲ್ಲಿ ಸೇರಿಸುವ ಬಗ್ಗೆ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಪ್ರಧಾಯವರನ್ನು `ಭೇಟಿ ಮಾಡಿ ಒತ್ತಾಯಿಸಲಾಗುವುದು. ಸಮ್ಮೇಳನಗಳ ಮೂಲಕ ಮಲಗಿದ್ದವರನ್ನು ಎಬ್ಬಿಸುವ ಪ್ರಕ್ರಿಯೆ ನಡೆದು, ಭಾಷೆ ಜೀವಂತವಾಗಿ ಉಳಿಯಲು ಸಾಧ್ಯವಾಗುತ್ತದೆ. ತುಳು ಮಾತನಾಡುವವರ ಸಂಖ್ಯೆ ಸಾವಿರ ದಿಂದ ಲಕ್ಷದತ್ತ ಸಾಗಿಸುವ ಶಕ್ತಿಯೂ ಇಂಥ ಸಮ್ಮೇಳನಕ್ಕಿದೆ ಎಂದು ಡಾ| ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶ್ರೀ ಸದ್ಗುರು ಶಶಿಕಾಂತ ಮಣಿಸ್ವಾಮೀಜಿ ಅವರು ಮೂಲ್ಕಿಯಲ್ಲಿನ ಸಮ್ಮೇಳನ ಕಛೇರಿಯಲ್ಲಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಸಮ್ಮೇಳನದ ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ಸಮ್ಮೇಳನ ಕಚೇರಿಯಿಂದ ಸಮ್ಮೇಳನ ವೇದಿಕೆಯವರೆಗೆ ಕರೆತರಲಾಯಿತು.

ಮುಖ್ಯ ಅತಿಥಿüಯಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮವಾರ ಹಾಜರಿದ್ದು, ಮಾತನಾಡಿ, ತುಳು ಸಂಘಗಳು ಶಾಲೆಗಳಲ್ಲಿ ಆರಂಭವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಇಲ್ಲಿ ಈ ದಿನ ಉದ್ಘಾಟನೆ ಗೊಂಡ ಸಂಘಗಳು ಮೊದಲು ಆರಂಭವಾದವುಗಳಲ್ಲ. ತಪ್ಪು ಮಾಹಿತಿ ಜನರಲ್ಲಿ ಮೂಡಬಾರದು ಎಂದರು.

ಭಾಷಾ ಅಭಿಮಾನ ಹೆಚ್ಚಾಗಬೇಕು:
ಸಮ್ಮೇಳನಾಧ್ಯಕ್ಷೆ ಡಾ| ಸುನೀತಾ ಎಂ.ಶೆಟ್ಟಿ ಮಾತನಾಡಿ, ತುಳು ಭಾಷೆಯ ಬಗ್ಗೆ ಅಭಿಮಾನ ಮುಂಬಯಿಯಲ್ಲಿ ಬಹಳಷ್ಟಿದೆ. ಇಲ್ಲಿಯವರಲ್ಲೂ ತುಳು `Áಷಾ ಅಭಿಮಾನ ಹೆಚ್ಚಾಗಬೇಕು ಎಂದು ಹೇಳಿದರು. ಮೂಲ್ಕಿಯಲ್ಲಿ ಮೂರು ದಶಕಗಳ ಹಿಂದೆ ನಡೆದ ತುಳು ಸಮ್ಮೇಳನದಲ್ಲಿ ಸ್ಕ್ರಾಡ್ರನ್ ಲೀಡರ್ ಶಿವಪ್ರಸಾದ್ ರೈ ಅವರು ತಮ್ಮ ಪ್ರಬಂಧದಲ್ಲಿ ತುಳು `ಭಾಷೆಯಿಂದ ಇಂಗ್ಲಿಷ್ ಹುಟ್ಟಿತು ಎಂದಿದ್ದಾರೆ. ಕಾರ್ನಾಡು ಸದಾಶಿವ ರಾಯರು ಇಟಲಿಯಲ್ಲಿ ಆಟಿಯ ಹೂವೆ ಸೋಣದ ಹೂವೆ ಎಂಬ ಪದ್ಯವನ್ನು ರಚಿಸಿ ತುಳುವನ್ನು ಇಟಲಿಗೆ ಕೊಂಡು ಹೋಗಿದ್ದರು. ಕ್ರೈಸ್ತ ಮಿಷನರಿಗಳು 19ನೇ ಶತಮಾನದಲ್ಲೇ ತುಳುವಿನಲ್ಲಿ ತಮ್ಮ ಆರಾಧನಾ ಪದ್ಧ್ದತಿಯನ್ನು ನಡೆಸಿ `ಬೊಲ್ಪು ತೋಜಾಲ ಓ ಏಸು ದೇವಾ' ಎಂಬ ಪದ್ಯವನ್ನು ಹಾಡಿದ್ದರು. ಶಾಲೆಯಲ್ಲಿ ತುಳು ಕಲಿಸುತ್ತಿದ್ದರು. ಇದು ಸಾಹಿತ್ಯ ಸಮ್ಮೇಳನವಲ್ಲ ತುಳುವನ್ನು ಉಳಿಸಿ ಬೆಳೆಸುವಲ್ಲಿ ಪೂರಕ ಶಕ್ತಿ ಸಂಪಾದನೆ ಮೂಲ ಉದ್ದೇಶ ಎಂದರು. ಈ ಮೂಲ್ಕಿ ಸಾಧಕರನ್ನು ನೀಡಿದ ಮಣ್ಣು. ಇಲ್ಲಿಯ ಸಾಮರಸ್ಯದ ವಾತಾವರಣ, `ಭಾಷಾ ಬಾಂಧವ್ಯ ನಮ್ಮ ತುಳುವಿನಲ್ಲಿರುವ ಆದಿಯನ್ನು ತಿಳಿಸುತ್ತದೆ ಎಂದರು.

ಅತಿಥಿüಗಳಾಗಿ ಅಖಿಲ ಭಾರÀತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‍ಚಂದ್ರ ಡಿ.ಸುವರ್ಣ, ಕಟೀಲು ದೇವಳದ ಆಡಳಿತ ಮೊಕ್ತೇಸರ ಡಾ| ಕೆ.ರವೀಂದ್ರ ಪೂಂಜ, ಮೂಲ್ಕಿ ಚರ್ಚ್‍ನ ಫಾ| ಫ್ರ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್, ಕ.ಸಾ.ಪ. ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಮೂಲ್ಕಿ ಮಸೀದಿಯ ಅಧ್ಯಕ್ಷ ಇಕ್ಬಾಲ್ ಅಹಮ್ಮದ್, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಮೂಲ್ಕಿ ಚೆನ್ನಪ್ಪ ಮತ್ತು ಡಾ| ಆಶಾ ಜ್ಯೋತಿ ರೈ ಮಾತನಾಡಿದರು.

ಜಯ ಶೆಟ್ಟಿ ಅವರು ಸ್ಟಾಲ್‍ಗಳಿಗೆ, ಎಸ್‍ಸಿಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಡಾ| ಎನ್.ಎಂ ರಾಜೇಂದ್ರ ಕುಮಾರ್ ಶೈಕ್ಷಣಿಕ ತುಳು ಸಂಘಕ್ಕೆ ಚಾಲನೆಯನ್ನೀಡಿದರು. ಯುಎಇ ತುಳುವೆರ್‍ನ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮತ್ತು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ಛಾಯಾಚಿತ್ರ ಪ್ರದರ್ಶನಕ್ಕೆ, ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ವೆಬ್‍ಸೈಟ್‍ನ್ನು ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ತುಳು ಸಮ್ಮೇಳನ ಮುಂಬಯಿ ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ್ ಎಲ್.ಶೆಟ್ಟಿ (ಅಧ್ಯಕ್ಷರು ಬಂಟರ ಸಂಘ ಮುಂಬಯಿ), ಪ್ರಧಾನ ಕಾರ್ಯದರ್ಶಿ ಜಿ.ಟಿ ಆಚಾರ್ಯ, ಮೂಲ್ಕಿ ಅರಮನೆಯ ದುಗ್ಗಣ್ಣ ಸಾವಂತರು, ಬಪ್ಪನಾಡು ದೇವಳ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ದೇವಳ ಕಾರ್ಯನಿರ್ವಹಣಾಧಿಕಾರಿ ಬಿ.ಜಯಮ್ಮ, ವೇದಿಕೆಯಲ್ಲಿ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನ ಸಮಿತಿ ಸಂಚಾಲಕ ಎಸ್.ಆರ್. ಬಂಡಿಮಾರ್ ಸ್ವಾಗತಿಸಿದರು. ಅಧ್ಯಕ್ಷ ಡಾ| ವೈ.ಎನ್.ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಹಾಗೂ ಎಸ್.ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ಎಂ.ಚಂದ್ರಶೇಖರ ಸುವರ್ಣ ಧನ್ಯವದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here