Saturday 27th, April 2024
canara news

ಪತ್ರಿಕಾಗೋಷ್ಠಿಯಲ್ಲಿ ಶತಶಾಖಾ ಸಂಭ್ರಮದ ಹರ್ಷದಾಯಕ ಶುಭಾವಸರ ಬಣ್ಣನೆ

Published On : 18 Aug 2016   |  Reported By : Rons Bantwal


ಭಾರತ್ ಬ್ಯಾಂಕ್ ಭಾವನಾತ್ಮಕ ಬಾಂಧವ್ಯದ ಕೊಂಡಿಯಾಗಿದೆ-ಜಯ ಸಿ.ಸುವರ್ಣ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.18: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವೇದಿಕೆಯಲ್ಲಿ 20.08.1978ರಲ್ಲಿ ಭಾರತ್ ಬ್ಯಾಂಕ್‍ನ ಮೊತ್ತ ಮೊದಲ ಶಾಖೆಗೆ ಮಹಾರಾಷ್ಟ್ರ ರಾಜ್ಯದ ಅಂದಿನ ಹಣಕಾಸು ಸಚಿವ ಹಾಶು ಅಡ್ವ್ವಾನಿ ಪರಸ್‍ರಾಮ್ ದೀಪಹಚ್ಚಿ ಚಾಲನೆಯನ್ನೀಡಿದ್ದರು. ತದಾನಂತರ ಪ್ರಾಮಾಣಿಕ ಸಾಧನೆ, ಸಮಾನತೆಯ ಭಾವನೆ ಮತ್ತು ಎಲ್ಲೆಲ್ಲೂ ತಮ್ಮತನದ ಮಂತ್ರದ ಮೂಲಕ ಸಾಧನಾಶೀಲ ನಡಿಗೆಯಲ್ಲಿ ಮುನ್ನಡೆದು ರಾಷ್ಟ್ರೀಕೃತ ಬ್ಯಾಂಕುಗಳು ಕೊಡುವ ಸೇವೆಗಳಿಗೆ ಒಂದಿಷ್ಟೂ ಕಡಿಮೆಯಾಗಿಸದೆ ಬ್ಯಾಂಕ್ ಗ್ರಾಹಕರಿಗೆ ಸರ್ವ ಸೇವೆಗಳನ್ನು ತ್ವರಿಗತಿಯಲ್ಲಿ ಸೇವಾರ್ಪಿಸಿದ ಕಾರಣವೇ ಭಾರತ್ ಬ್ಯಾಂಕ್ ಈ ಮಟ್ಟಕ್ಕೆ ತಲುಪಲು ಸಾಧ್ಯವಾಯಿತು. ಗ್ರಾಹಕ ಬಂಧುಗಳ ವಿಶ್ವಾಸಕ್ಕೆ ಕಾರಣವಾಗಿ ಪರಿಪೂರ್ಣತೆಯನ್ನು ಪಡೆದು ಸಮಗ್ರ ಬ್ಯಾಂಕ್ ಎಂದಾಗಿಸಿದ ಕಾರಣ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‍ಬಿಐ) ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ ಗೌರವಕ್ಕೆ ಪಾತ್ರವಾಗಿದೆ. ಪಾರದರ್ಶಕತ್ವದ ಸೇವೆಯೊಂದಿಗೆ ಆರ್‍ಬಿಐ ಜೊತೆ ನಿಕಟ ಸ್ಥಾನಮಾನ (ಸ್ಟೇಟಸ್) ಗಳಿಸಿ ಉಳಿಸಿ ಸಹಕಾರಿ ಕ್ಷೇತ್ರದ ನಿಯಮಾನುಸಾರವೇ ಕಾರ್ಯಚರಿಸಿದ ಕಾರಣ ಬ್ಯಾಂಕ್ ಶತಶಾಖೆಯ ಪರವಾನಿಗೆ ಪಡೆಯುವಲ್ಲಿ ಸಶಕ್ತ ಗೊಂಡಿತು ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ, ಬಿಲ್ಲವರ ಅಸೋಸಿ0iÉುೀಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ ಹಾಗೂ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ನುಡಿದರು.

ಕಳೆದ ಬುಧವಾರ ಬೋರಿವಲಿ ಪಶ್ಚಿಮದ ಐಸಿ ಕಾಲೋನಿ ಅಲ್ಲಿನ ಅಮಿ ಜ್ಹರೊಖಾ ಕಟ್ಟಡದಲ್ಲಿ ಬಿಲ್ಲವರ ಅಸೋಸಿ0iÉುೀಶನ್ ಮುಂಬಯಿ ಸಂಚಾಲಿತ ಭಾರತ್ ಬ್ಯಾಂಕ್‍ನ ಸಂಸ್ಥಾಪನಾ ದಿನಾಚರಣೆಯೊಂದಿಗೆ ಶತಶಾಖಾ ಸಂಭ್ರಮದ ಹರ್ಷದಾಯಕ ಗಳಿಗೆಯನ್ನು ಪತ್ರಿಕಾಗೋಷ್ಠಿಯಲ್ಲಿ ಬಣ್ಣಿಸಿ ಜಯ ಸುವರ್ಣ ಮಾತನಾಡಿದರು.

ಪ್ರಾಮಾಣಿಕವಾಗಿಯೇ ಆರ್‍ಬಿಐ ಮಾನ್ಯತೆಯನ್ನು ಗಿಟ್ಟಿಸಿಕೊಳ್ಳುವ ಮೂಲಕವೇ ಭಾರತ್ ಬ್ಯಾಂಕ್ ಪ್ರಗತಿ ಪಥದಲ್ಲಿ ಮುನ್ನಡೆಯಲು ಸಾಧ್ಯವಾಯಿತು.100% ಪ್ರಾಮಾಣಿಕತೆ ಮೈಗೂಡಿಸಿದ ಕಾರಣ ಈ ಮಟ್ಟದ ಅಭಿವೃದ್ಧಿಗೆ ಕಾರಣವಾಗಿದೆ. ಅಂದಮೇಲೆ ಹಣ, ಪ್ರತಿಷ್ಠಾ ಜನರ ಪ್ರಭಾವ ಬಳಕೆಯ ಅವಶ್ಯವೇ ಒದಗದು ಎಂದು ಆರ್‍ಬಿಐ ನಿಮ್ಮ ಪರ ಇಷ್ಟೊಂದು ಹೇಗೆ ಸಾಧ್ಯವಾಯಿತು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಸಾಮಾನ್ಯ ಕರ್ಮಚಾರಿಯಿಂದ ಸಿಇಒ ವರೇಗೂ ಪ್ರಾಮಾಣಿಕ ಅಧಿಕಾರಿಗಳು ನಮ್ಮಲ್ಲಿದ್ದು ಅವರೆಲ್ಲರಲ್ಲೂ ಇದು ನಮ್ಮ ಬ್ಯಾಂಕ್, ನಮ್ಮ ಜನತೆಯ ಸೇವೆ ಒದಗಿಸುತ್ತಿದ್ದೇವೆ ಎನ್ನುವ ಭಾವನೆಯಿದೆ. ಮಾತ್ರವಲ್ಲದೆ ಕ್ಲರಿಕಲ್ ಸ್ಟಾಫ್‍ಗಳೇ ಪದೋನ್ನತಗೊಂಡು ಮೇನೆಜರ್ ಮತ್ತಿತರ ಉನ್ನತಾಧಿಕಾರಿಗಳ ತನಕವೂ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಾಗುತ್ತಿದ್ದು ಅವರಲ್ಲಿ ಬದುಕು ಭರವಸೆ ಇರುವ ಕಾರಣ ತಮ್ಮತನದಿಂದಲೇ ಸ್ವಂತಿಕೆಯಿಂದ ಶ್ರಮಿಸಿದ ಫಲವೇ ಬ್ಯಾಂಕ್‍ನ ತ್ವರಿತಗತಿಯ ಪ್ರಗತಿಗೆ ಕಾರಣವಾಗಿದೆ. ಸದ್ಯ ಬ್ಯಾಂಕ್‍ನ ಗುಣಮಟ್ಟ ಖಾದಿರಿಸುವಲ್ಲಿ ಫಿನಕಲ್ ನಂತಹ ಐಟಿ ಸರ್ವೋತ್ಕೃಷ್ಟ ತಂತ್ರಜ್ಞಾನದ ಬಳಕೆ ಮಾಡಿ ಬ್ಯಾಂಕ್‍ನ ಸ್ಟೇಟಸ್ ಉಳಿಸಿಕೊಂಡಿದ್ದೇವೆ. ದೇಶದ ಸುಮಾರು 30 ರಾಜ್ಯಗಳ 600ಕ್ಕೂ ಅಧಿಕ ಸಿಬ್ಬಂದಿಗಳು ಬ್ಯಾಂಕ್‍ನ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಇದು ನನ್ನ ಓರ್ವನ ನಾಯಕತ್ವದ ಸಮಗ್ರ ಅಭ್ಯುದಯ ಫಲವಲ್ಲ. ಸರ್ವ ಬಿಲ್ಲವರ, ಷೇರುದಾರರು, ಗ್ರಾಹಕರು, ಆಡಳಿತ ಮಂಡಳಿ, ನೌಕರವೃಂದ, ಹಿತೈಷಿಗಳ ಒಟ್ಟು ಶ್ರಮದ ಫಲವಾಗಿದೆ. ಅವರೆಲ್ಲರ ಸಹಯೋಗದಿಂದ ಬ್ಯಾಂಕ್ ಸಮರ್ಪಕ ಸೇವೆ ನೀಡುತ್ತಿದೆ. ಸ್ವದೇಶಿಯ ಜನತೆಯ ಆಥಿರ್üಕ ಆಶಯಗಳನ್ನು ಪರಿಪೂರ್ಣಗೊಳಿಸಿದ ಫಲಿತಾಂಶವೂ ಇದಾಗಿದೆ. ಶತಶಾಖೆಯ ನಂತರ ರಾಷ್ಟ್ರವ್ಯಾಪಿಯಾಗಿ ಶಾಖೆಗಳ ವರ್ಧಿಸುವಿಕೆ ನಮ್ಮ ಮುಂದಿನ ಯೋಜನೆಗಳಲ್ಲಿದೆ ಎಂದೂ ಸುವರ್ಣರು ತಿಳಿಸಿದರು.

ದೇಶಿಯ ಆಥಿರ್sಕತೆಯ ಸಹಕಾರಿ ರಂಗದಲ್ಲಿ ಗುಣಮಟ್ಟದ ನಿರ್ಣಾಯಕತೆ, ಗ್ರಾಹಕ ಕೇಂದ್ರಿಕೃತ, ಅತ್ಯುತ್ತಮ ಸಾಂಸ್ಥಿಕ ಆಡಳಿತ ಹೊಂದಿದ ಬ್ಯಾಂಕು ಹೆಗ್ಗಳಿಕೆಗೆ ಬ್ಯಾಂಕ್‍ನ ಬೆಳವಣಿಗೆಗೆ ವೇಗೋತ್ಕರ್ಷ ನೀಡಿರುವ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯಶೀಲತೆ ಜಯ ಸುವರ್ಣ ಅವರದ್ದು. ಬ್ಯಾಂಕ್‍ನ ಸಮಗ್ರ ಅಭಿವೃದ್ಧಿಗೆ ಅವರು ಬಳಸಿದ ತಂತ್ರಗಾರಿಕೆ ಬ್ಯಾಂಕನ್ನು ಇಷ್ಟೆತ್ತರಕ್ಕೆ ಒಯ್ಯಲು ಅನುಕೂಲವಾಗಿದೆ. ನಾಜೂಕಿನ ಸಂತಾಲನ ಸಾಧಿಸುವಲ್ಲಿ ಯಶಸ್ವಿ ಪಡೆದ ಅವರ ಬ್ಯಾಂಕ್ ಮಂಡಳಿ ಮತ್ತು ನೌಕರ ವೃಂದವು ಶತಶಾಖೆಯ ಹರ್ಷರಾಗಿದ್ದಾರೆ ಎಂದು ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ತಿಳಿಸಿದರು.

ಇದೇ ಆಗಸ್ಟ್ 21ನೇ ಭಾನುವಾರ ಬೆಳಿಗ್ಗೆ 9:00 ಗಂಟೆಗೆ ದಾದರ್ ಪೂರ್ವದ ಟಿಟಿ (ಮಧ್ಯ ರೈಲ್ವೇ ಸ್ಟೇಶನ್‍ನ ಸನಿಹದ) ಸ್ವಾಮಿ ನಾರಾಯಣ ಮಂದಿರದ ಯೋಗಿ ಸಭಾಗೃಹದಲ್ಲಿ ಭಾರತ್ ಬ್ಯಾಂಕ್ ತನ್ನ ಸಂಸ್ಥಾಪನಾ ದಿನಾಚರಣೆಯೊಂದಿಗೆ ಶತಶಾಖೆಯ ಭವ್ಯ ಸಮಾರಂಭವನ್ನು ಆಯೋಜಿಸಲಾಗಿದೆ. ಮುಖ್ಯ ಅತಿಥಿüಯಾಗಿ ಕೇಂದ್ರ ವಿತ್ತ ಹಾಗೂ ಗ್ರಾಮೀಣಾಭಿವೃದ್ಧಿ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಗೌರವ ಅತಿಥಿüಗಳಾಗಿ ಬೋರಿವಿಲಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ, ಕರ್ನಾಟಕದ ಮಾಜಿ ಸಚಿವ, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಕರ್ನಾಟಕದ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ತ್‍ನ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಸಂಸ್ಥಾಪಕರನ್ನು ಸ್ಮರಿಸಿ, 7 ಮಾಜಿ ಅಧ್ಯಕ್ಷರು, 30 ಮಾಜಿ ನಿರ್ದೇಶಕರು, 4 ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್.ಟಿ ಪೂಜಾರಿ, ಅಖಿಲ ಭಾರತೀಯ ಭಂಡಾರಿ ಸಮಾಜದ ಅಧ್ಯಕ್ಷ ನವೀನ್ ಭಾಂದೋಡ್ಕರ್, ಓರ್ವ ಪ್ರಥಮ ಗ್ರಾಹಕ, ಓರ್ವ ಚಾಲ್ತಿಖಾತೆ ಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಆ ಮೂಲಕ ಇದೊಂದು ಅಭೂತಪೂರ್ವ ಕಾರ್ಯಕ್ರಮ ಆಗಲಿದೆ ಎಂದೂ ಸಿ.ಆರ್ ಮೂಲ್ಕಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ.ಪೂಜಾರಿ, ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್, ಉಪ ಮಹಾ ಪ್ರಬಂಧಕ ಮೋಹನ್‍ದಾಸ್ ಹೆಜ್ಮಾಡಿ, ಸಹಾಯಕ ಮಹಾ ಪ್ರಂಬಧಕ ಮಹೇಶ್ ಬಿ.ಕೋಟ್ಯಾನ್ ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here