Friday 26th, April 2024
canara news

ಮಾಟುಂಗಾ ಪೂರ್ವದಲ್ಲಿ 99ನೇ ಶಾಖೆ ತೆರೆದ ಭಾರತ್ ಬ್ಯಾಂಕ್

Published On : 19 Aug 2016   |  Reported By : Rons Bantwal


ಹಣಕಾಸು ವ್ಯವಹಾರದಲ್ಲಿ ಸ್ಪರ್ಧೆ ಸಲ್ಲದು: ಸತೀಶ್ ಆರ್.ನಾಯಕ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.19: ಯಾವೊತ್ತೂ ಪ್ರಗತಿಯಲ್ಲಿರುವ ಇತರ ಬ್ಯಾಂಕ್‍ಗಳನ್ನು ಸಾಧನಾಶೀಲತೆಯ ಮುಖೇನ ಸ್ಪರ್ಧಾತ್ಮಕವಾಗಿಸಿದಾಗ ನಾವು ಅವರಿಕ್ಕಿಂತ ಹೆಚ್ಚುವರಿ ಸಾಧಕರಾಗಲು ಸಾಧ್ಯ. ನಾವು ಸಾಧಿಸಬೇಕಾಗಿರುವ ಧ್ಯೇಯ ಸ್ಪಷ್ಟವಾಗಿಸಿಕೊಂಡು ಆ ಬಗ್ಗೆ ಧನಾತ್ಮಕವಾಗಿ ಮುನ್ನಡೆದಾಗ ಫಲಾನುಭವ ಸಿದ್ಧಿಗೊಳ್ಳುವುದು. ಸಹಕಾರಿ ರಂಗದ ಮುನ್ನಡೆ ಅತೀ ಸೂಕ್ಷ ್ಮದಾಯಕ ವಿಚಾರವಾಗಿದ್ದು ಸಾರ್ವಜನಿಕ ರಂಗದ ಹಣಕಾಸು ವ್ಯವಹಾರದಲ್ಲಿ ಎಂದೂ ಸ್ಪರ್ಧೆ ಸಲ್ಲದು. ಜಯ ಸುವರ್ಣರು ಎಲ್ಲರಿಗೂ ಮೇರು ವ್ಯಕ್ತಿಯಾಗಿದ್ದು ಅವರೋರ್ವ ಅಪ್ರತಿಮ ಸಾಧಕರು. ಅವರ ಮುಂದಾಳುತ್ವದಲ್ಲಿ ಬಿಸಿಬಿ ಇಷ್ಟೊಂಂದು ಗಣನೀಯ ಸೇವೆ ಸಲ್ಲಿಸಿರುವುದು ಸ್ತುತ್ಯರ್ಹ. ಭಾರತ್ ಬ್ಯಾಂಕ್ ಸೇವೆಯಲ್ಲಿ ಪೈಪೆÇೀಟಿ ನಡೆಸಿ ಶೀಘ್ರವೇ 25 ಸಾವಿರ ಕೋಟಿ ವ್ಯವಹಾರ ನಡೆಸುವಲ್ಲಿ ಶ್ರೀ ಮಹಾಗಣಪತಿಯು ಅನುಗ್ರಹಿಸಿ ತಮ್ಮ ಉದ್ದೇಶಿತ ಸರ್ವ ಯೋಜನೆಗಳನ್ನು ಪೂರೈಸಲಿ ಎಂದು ಜಿಎಸ್‍ಬಿ ಸೇವಾ ಮಂಡಳ್ ಕಿಂಗ್‍ಸರ್ಕಲ್ ಇದರ ಸಂಚಾಲಕ ಹಾಗೂ ಇಂಡಿಯನ್ ಎಜ್ಯುಕೇಶನ್ ಸೊಸೈಟಿ ದಾದರ್ ಇದರ ಟ್ರಸ್ಟಿ ಸತೀಶ್ ಆರ್.ನಾಯಕ್, ಸತೀಶ್ ಆರ್.ನಾಯಕ್ ನುಡಿದರು.

ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಸಂಸ್ಥೆಯು ತನ್ನ 99ನೇ ಶಾಖೆಯನ್ನು ಇಂದಿಲ್ಲಿ ಗುರುವಾರ ಬೆಳಿಗ್ಗೆ ಮಾಟುಂಗಾ ಪೂರ್ವದ ಮಧ್ಯ ರೈಲ್ವೇ ಸನಿಹದ ಲಕ್ಷ್ಮೀನಾರಾಯಣ ಲೇನ್‍ನ ಜಮ್ನಾದಾಸ್ ಮೆನ್‍ಶನ್ ಕಟ್ಟಡಲ್ಲಿ ಸೇವಾರಂಭಿಸಿದ್ದು, ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದು ಸತೀಶ್ ನಾಯಕ್ ಮಾತನಾಡಿದರು.

ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣರು ರಿಬ್ಬನ್ ಬಿಡಿಸಿ ನೂತನ ಶಾಖೆಯನ್ನು ಶುಭಾರಂಭ ಗೊಳಿಸಿದರು. ಕಟ್ಟಡದ ಮಾಲೀಕ ಕಿಮ್‍ಜೀ ಭಾೈ ಶ್ಹಾ ಮತ್ತು ಮುಂಬಯಿ ಉಚ್ಚ ನ್ಯಾಯಲಯದ ವಕೀಲರೂ, ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಅಧ್ಯಕ್ಷ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ದೀಪ ಪ್ರಜ್ವಲಿಸಿ ಶಾಖೆಯನ್ನು ವಿಧ್ಯುಕ್ತÀವಾಗಿ ಸೇವಾರ್ಪಣೆ ಗೊಳಿಸಿದರು. ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ, ನಿರ್ದೇಶಕ ಕೆ.ಎನ್ ಸುವರ್ಣ ಭದ್ರತಾಕೋಶಕ್ಕೆ ಚಾಲನೆ ನೀಡಿದರು.

ಪ್ರಕಾಶ್ ಶೆಟ್ಟಿ ಮಾತನಾಡಿ ಇಂದು ರಕ್ಷಾ ಬಂಧನ ದಿನ. ಹಿಂದೂ ಸಂಸ್ಕೃತಿಯ ಸುದಿನ. ಭಾರತ್ ಬ್ಯಾಂಕ್ ಒಂದು ಸುರಕ್ಷಿತ ಬ್ಯಾಂಕ್. 100ರ ಶಾಖೆಗಳ ಸಂಭ್ರಮದಲ್ಲಿದೆ. ಇದು ಸಾಧಾರಣ ವಿಷಯ ಅಲ್ಲ. ಇಂತಹ ಕಾರ್ಯಸಿದ್ಧಿಗೆ ಧೈರ್ಯ ಸಿಗಬೇಕು. ಇದು ಜಯ ಸುವರ್ಣರಂತಹ ವ್ಯಕ್ತಿಗಳಿಂದಲೇ ಸಾಧ್ಯವಾಗುವುದು. ಅವರ ದಕ್ಷ ಸಾರಥ್ಯ, ಪ್ರಾಮಾಣಿಕ ಕಾರ್ಯನಿರ್ವಾಹಕ ಅಧಿಕಾರಿಗಳ ಶ್ರಮ, ನಿರ್ದೇಶಕ ಮತ್ತು ಸಿಬ್ಬಂದಿ ವರ್ಗದ ಹರಸಾಹಸ ಎಲ್ಲವೂ ಒಳಗೊಂಡಿದೆ. ತುಂಬಾ ಸ್ನೇಹಮಯಿ ವ್ಯವಹಾರ ನೀಡುವ ಬ್ಯಾಂಕ್ ಸುವರ್ಣರ ಕಾಲಾವಧಿಯಲ್ಲೇ ಬ್ಯಾಂಕ್ ಸಾವಿರದೊಂದು ಶಾಖೆಗಳನ್ನು ತೆರೆಯುವಂತಾ ಗಲಿ. ಬ್ಯಾಂಕ್‍ನ ಉದ್ಧರದೊಂದಿಗೆ ಜನತೆಯ ವಿಕಾಸವೂ ಆಗಲಿ ಎಂದು ಶುಭೇಚ್ಛ ಕೋರಿದರು.

ಕಿಮೀಜಿಭಾೈ ಮಾತನಾಡಿ ಇಂದು ರಕ್ಷಾಬಂಧನದ ಸುದಿನ. ಈ ಶುಭಾವಸರದಲ್ಲಿ ಮಾಟುಂಗಾದಲ್ಲಿ 99ನೇ ಶಾಖೆ ತೆರೆಯುತ್ತಿರುವುದು ಅಭಿನಂದನೀಯ. ಈ ಬ್ಯಾಂಕ್ ಜೀವನಾವಶ್ಯ ಬದುಕಿನೆ ಪ್ರೇರೇಪಿಸುವ ಬಗ್ಗೆ ಅನೇಕವರ್ಷಗಳಿಂದ ತಿಳಿದ ನಾನು ಇಂದು ಬ್ಯಾಂಕ್‍ನ ನಿಜಾಂಶವನ್ನು ಕಣ್ಣಾರೆ ಕಂಡು ಪುಳಕಿತನಾಗಿದ್ದೇನೆ. ಯಶಸ್ಸಿಗೆ ಶುಭಕಾಮನೆಗಳು ಎಂದರು.
ರಂಗತಜ್ಞ, ಸಂಶೋಧಕ ಡಾ| ಬಿ.ಅರ್ ಮಂಜುನಾಥ ಮಾತನಾಡಿ ನಮ್ಮ ಎನ್‍ಕೆಇಎಸ್ ಶಾಲೆಯ ವಿದ್ಯಾಥಿರ್ü ಆಗಿದ್ದ ಸುವರ್ಣರು ಇಂದು ಇದೇ ಪ್ರದೇಶಕ್ಕೆ ತನ್ನ ಸಾರಥ್ಯದ ಬ್ಯಾಂಕ್‍ನ ಶಾಖೆ ತೆರೆದು ಗುರುದಕ್ಷಿಣೆ ನೀಡಿ ಋಣ ಸಂದಾಯಿಸಿದ್ದಾರೆ. ಆ ಮೂಲಕ ಸಾಮಾಜಿಕ ದಯೆತೋರಿದ್ದಾರೆ ಎಂದರು.

ಬಿಲ್ಲವರ ಅಸೋಸಿಯೇಶನ್‍ನ ಮಾಜಿ ಗೌ| ಪ್ರ| ಕಾರ್ಯದರ್ಶಿ ಎನ್.ಪಿ ಸುವರ್ಣ ಮಾತನಾಡಿ ನಾನು ಬ್ಯಾಂಕ್‍ನ ಮೊದಲದಿನದ ಗ್ರಾಹಕ ಮತ್ತು ಷೇರುದಾರ. ಆವತ್ತಿನಿಂದ ಇಂದಿನವರೆಗೂ ನನ್ನ ಹಣಹಾಸು ವ್ಯವಹಾರ ಭಾರತ್ ಬ್ಯಾಂಕ್‍ನಲ್ಲೇ ಪೂರೈಸಿ ಧನ್ಯನೆನಿಸಿದ್ದೇನೆ. ಇದೀಗ ಹಿರಿಯ ನಾಗರೀಕನಾಗಿರುವ ಕಾರಣ ಬ್ಯಾಂಕ್ ಸಿಬ್ಬಂದಿಗಳು ಮನೆಗೆ ಬಂದು ಸೇವೆಯನ್ನೊದಗಿಸುತ್ತಿರುವುದಕ್ಕಿಂತ ದಕ್ಷಸೇವೆ ಮತ್ತೊಂದೇನಿದೆ? ಅದೇ ಸತ್ಕೀರ್ತಿ ಬ್ಯಾಂಕ್‍ನ ಶಕ್ತಿಯಾಗಿದೆ ಎಂದÀು ಅಭಿಮಾನ ವ್ಯಕ್ತ ಪಡಿಸಿದರು.

ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಕೆ.ಮಂಜುನಾಥಯ್ಯ, ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ಹಾಗೂ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ನಿರ್ದೇಶಕ ಡಿ.ಬಿ ಅವಿೂನ್, ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಜಿ.ಎಸ್ ನಾಯಕ್, ಉದ್ಯಮಿಗಳಾದ ಪ್ರಕಾಶ್ ಅಗರ್‍ವಾಲ್, ಶಾಂತಿಲಾಲ್ ಭಾಟಿಯಾ, ಪ್ರಸಾದ್ ಕೋಟ್ಯಾನ್, ಸಮೀರ್ ಪಾಟೇಲ್, ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ ರಾಜಾ ವಿ.ಸಾಲ್ಯಾನ್, ಸಮಾಜ ಸೇವಕಿಯರಾದ ಸ್ನೇಹಾ ಪ್ರಭು, ಪ್ರಭಾ ಎನ್.ಸುವರ್ಣ ಸಂದರ್ಭೋಚಿತವಾಗಿ ಮಾತನಾಡಿ ಶುಭೇಚ್ಛ ಕೋರಿದರು.

ಕಾರ್ಯಾಧ್ಯಕ್ಷ ಜಯ ಸುವರ್ಣ, ರೋಹಿಣಿ ಸಾಲ್ಯಾನ್, ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ, ಬ್ಯಾಂಕ್‍ನ ನಿರ್ದೇಶಕರುಗಳಾದಜೆ.ಎ ಕೋಟ್ಯಾನ್, ಯು.ಎಸ್ ಪೂಜಾರಿ, ಭಾಸ್ಕರ್ ಎಂ.ಸಾಲ್ಯಾನ್, ಚಂದ್ರಶೇಖರ ಎಸ್.ಪೂಜಾರಿ, ರೋಹಿತ್ ಎಂ.ಸುವರ್ಣ, ಹರೀಶ್ಚಂದ್ರ ಜಿ.ಮೂಲ್ಕಿ, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಜ್ಯೋತಿ ಕೆ.ಸುವರ್ಣ, ಸಿ.ಟಿ ಸಾಲ್ಯಾನ್, ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್, ಉಪಸ್ಥಿತರಿದ್ದು, ನೂತನ ಶಾಖೆಯ ಮುಖ್ಯಸ್ಥ ಅನಿಲ್ ವಿ.ಪೂಜಾರಿ, ಸಹಾಯಕ ಪ್ರಬಂಧಕಿ ಸ್ನೇಹಲತಾ ಅಂಚನ್, ಸಿಬ್ಬಂದಿಗಳಾದ ಅರುಳ್ ಚೆಟ್ಟಿಯಾರ್, ಕೆತ್ಕಿ ಅಜ್ಗೊಂನ್ಕರ್, ದಿವ್ಯಾ ಕಿರಣ್, ಸದಾನಂದ ಪೂಜಾರಿ ಅವರಿಗೆ ಪುಷ್ಫಗುಪ್ಚವನ್ನೀಡಿ ಅಭಿನಂದಿಸಿದರು.

ಅಸೋಸಿಯೇಶನ್‍ನ ವಿಕ್ರೋಲಿ ಸ್ಥಳಿಯ ಸಮಿತಿ ಕಾರ್ಯಧ್ಯಕ್ಷ ರಾಘವ ಕೆ. ಕುಂದರ್, ಜಿ.ಸಿ ಪೂಜಾರಿ, ರಂಜಿತ್ ಶೆಟ್ಟಿ, ಶಾಖಾ ಪ್ರಮುಖ ನೇತಾಜಿ ಶಿರ್ಕೆ, ದಿನೇಶ್ ರಾವ್, ಜಿ.ಸಿ.ಪೂಜಾರಿ, ಬ್ಯಾಂಕ್‍ನ ಡಿಜಿಎಂಗಳಾದ ಸುರೇಶ್ ಎಸ್.ಸಾಲ್ಯಾನ್, ನವೀನ್‍ಚಂದ್ರ ಎಸ್.ಬಂಗೇರ, ವಿಶ್ವನಾಥ ಜಿ.ಸುವರ್ಣ, ಪ್ರಭಾಕರ ಜಿ.ಸುವರ್ಣ, ದಿನೇಶ್ ಬಿ.ಸಾಲ್ಯಾನ್, ನಿತ್ಯಾನಂದ ಎಸ್. ಕಿರೋಡಿಯನ್, ಎಜಿಎಂಗಳಾದ ಡಾ| ಧನಂಜಯ ಕುಮಾರ್, ವಾಸುದೇವ ಎಂ.ಸಾಲ್ಯಾನ್, ಮಹೇಶ್ ಬಿ.ಕೋಟ್ಯಾನ್, ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ಅನಿಲ್‍ಕುಮಾರ್ ಆರ್.ಅವಿೂನ್ (ನಿವೃತ್ತ), ಮಹಾ ಪ್ರಂಬಧಕಿ ಶೋಭಾ ದಯಾನಂದ್ (ನಿವೃತ್ತ), ಅಭಿವೃದ್ಧಿ ಇಲಾಖಾಧಿಕಾರಿಗಳಾದ ಸುನೀಲ್ ಗುಜರನ್,ವಿಜಯ ಪಾಲನ್ ಸೇರಿದಂತೆ ನೂರಾರು ಗ್ರಾಹಕರು, ಷೇರುದಾರರು ಮತ್ತಿತರ ಹಿತೈಷಿಗಳು ಉಪಸ್ಥಿತರಿದ್ದರು.

ಉಳ್ಳೂರು ಧನಂಜಯ್ ಶಾಂತಿ ವಾಸ್ತುಪೂಜೆ, ಸತ್ಯನಾರಾಯಣ ಪೂಜೆ, ಉಳ್ಳೂರು ಶೇಖರ್ ಶಾಂತಿ ದ್ವಾರಪೂಜೆ ನೆರವೇರಿಸಿ ಹರಸಿದರು. ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಜಯನಂದ ಪಿ.ಪೂಜಾರಿ ಮತ್ತು ಶೋಭಾ ಜೆ.ಪೂಜಾರಿ ದಂಪತಿ ಮತ್ತು ಅನಿಲ್ ಪೂಜಾರಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ (ಡಿಜಿಎಂ) ಸ್ವಾಗತಿಸಿ, ಬ್ಯಾಂಕ್‍ನ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಸ್ನೇಹಲತಾ ಅಂಚನ್ ಅಭಾರ ಮನ್ನಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here