Friday 26th, April 2024
canara news

ತುಳು ಭಾಷೆ ಸಂಸ್ಕøತಿಯ ಸಮಗ್ರ ಶ್ರೇಯಸ್ಸಿಗೆ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆ: ಬಿ.ರಮಾನಾಥ ರೈ

Published On : 22 Aug 2016   |  Reported By : Rons Bantwal


ಬದಿಯಡ್ಕ: ತುಳು ಭಾಷೆ ಸಂಸ್ಕøತಿಯ ಸಮಗ್ರ ಶ್ರೇಯಸ್ಸಿಗೆ,ಯುವ ಸಮೂಹಕ್ಕೆ ಪ್ರಾಚೀನ ಭಾಷೆಯ ಪರಿಚಯಾತ್ಮಕ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಕರ್ನಾಟಕ ಸರಕಾರದ ನೆರವು, ಪ್ರೋತ್ಸಾಹ ನೀಡಲಾಗುವುದೆಂದು ಕರ್ನಾಟಕ ಅರಣ್ಯ ಸಚಿವ ಬಿ.ರಮಾನಾಥ ರೈ ಅಭಿಪ್ರಾಯ ವ್ಯಕ್ತಪಡಿಸಿದರು.

ಬದಿಯಡ್ಕದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಐದು ದಿನಗಳ ವಿಶ್ವ ತುಳುವೆರೆ ಆಯನೊದ ಪೂರ್ವಭಾವಿಯಾಗಿ ಭಾನುವಾರ ಕಾರ್ಯಕ್ರಮ ಆಯೋಜನಾ ಸಮಿತಿ ಸದಸ್ಯರು ಬಂಟ್ವಾಳದ ಸಚಿವರ ನಿವಾಸದಲ್ಲಿ ಭೇಟಿಯಾದ ಸಂದರ್ಭ ಅವರು ಶುಭಹಾರೈಸಿ ಮಾತನಾಡುತ್ತಿದ್ದರು.

ಪ್ರಾಚೀನ ಪ್ರಾದೇಶಿಕ ಭಾಷೆಗಳ ಅಭಿವೃದ್ದಿ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ಇಂದು ಹೆಚ್ಚಿನ ಕಾರ್ಯಯೋಜನೆಗಳ ಅಗತ್ಯವಿದ್ದು,ಈ ಕಾರ್ಯವನ್ನು ತುಳುವೆರೆ ಆಯನೊ ಕೂಟದ ಹತ್ತನೇ ವರ್ಷದ ಈ ಸಂದರ್ಭ ವಿಶ್ವ ತುಳುವೆರೆ ಆಯನೊ ಆಯೋಜಿಸಿರುವುದು ಸ್ತುತ್ಯರ್ಹವೆಂದು ಅವರು ತಿಳಿಸಿದರು.ಈ ನಿಟ್ಟಿನ ಪೂರ್ಣ ಸಹಕಾರದ ಭರವಸೆಯನ್ನು ಅವರು ನೀಡಿದರು.

ವಿಶ್ವ ತುಳುವೆರೆ ಆಯನೊ ಕೂಟದ ಕಾರ್ಯಾಧ್ಯಕ್ಷ ಪ್ರೊ.ಎ.ಶ್ರೀನಾಥ್,ಸಂಚಾಲಕ ಡಾ.ರಾಜೇಶ್ ಆಳ್ವ,ಕೋಶಾಧಿಕಾರಿ ಡಾ.ಶ್ರೀನಿಧಿ ಸರಳಾಯ, ಮಾಹಿನ್ ಕೇಳೋಟ್,ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್,ಚಂದ್ರಹಾಸ ರೈ ಪೆರಡಾಲಗುತ್ತು,ವಿಶ್ವ ತುಳುವೆರೆ ಆಯನೊದ ಬಹು ಭಾಷಾ ಸಂಗಮದ ಸಂಚಾಲಕ ರವಿಕಾಂತ ಕೇಸರಿ ಕಡಾರು,ತುಳುವೆರೆ ಆಯನೊ ಕೂಟದ ಕಾರ್ಯದರ್ಶಿ ನಿರಂಜನ ರೈ ಪೆರಡಾಲ,ಹರ್ಷ ರೈ ಪುತ್ರಕಳ ಮೊದಲಾದವರು ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here