Friday 26th, April 2024
canara news

ಶಿಕ್ಷಕರಿಗೆ ಇನ್ನೂ ಪಾವತಿಯಾಗದ ಜುಲೈ ತಿಂಗಳ ವೇತನ

Published On : 23 Aug 2016   |  Reported By : Canaranews Network


ಮಂಗಳೂರು: ದ.ಕ ಜಿಲ್ಲೆಯ ಅನುದಾನಿತ ಶಾಲಾ ಶಿಕ್ಷಕರಿಗೆ ಜುಲೈ ತಿಂಗಳ ವೇತನ ಇನ್ನೂ ಪಾವತಿಯಾಗಿಲ್ಲ. ಇದರಿಂದ ಬಾಡಿಗೆ ಮನೆಗಳಲ್ಲಿ ವಾಸವಾಗಿರುವವರು, ವಿವಿಧ ಸಾಲ ಪಡೆದವರು, ವೇತನವನ್ನೇ ಆಶ್ರಯಿಸಿ ಜೀವನ ಸಾಗಿಸುವ ಶಿಕ್ಷಕ/ಶಿಕ್ಷಕಿಯರಿಗೆ ಅನನುಕೂಲ ಆಗಿದೆ.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪರ್ಕಿಸಿದರೆ "ಅಲಾಟ್‌ಮೆಂಟ್‌ ಈಗಷ್ಟೇ ಬಂದಿದೆ; ಅಪ್‌ಲೋಡ್‌ ಮಾಡುತ್ತಾ ಇದ್ದೇವೆ' ಎಂಬ ಉತ್ತರ ಕಳೆದ ಒಂದು ವಾರದಿಂದ ಕೇಳಿ ಬರುತ್ತಿದೆ ಎಂದು ಶಿಕ್ಷಕರು ಆರೋಪಿಸಿದ್ದಾರೆ. ಆಗಸ್ಟ್‌ ತಿಂಗಳ ಪ್ರಾರಂಭದ ವೇಳೆಗೆ ಸಿಗಬೇಕಾಗಿದ್ದ ಜುಲೈ ತಿಂಗಳ ವೇತನ ಇದೀಗ ಮೂರು ವಾರ ಕಳೆದರೂ ಬಂದಿಲ್ಲ. ಇನ್ನೆರಡು ದಿನಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಬರಲಿದ್ದು, ಈ ಹಬ್ಬ ಆಚರಣೆ ಸಮಯದಲ್ಲಾದರೂ ಸಂಬಳ ಕೈಗೆ ಸಿಗಬಹುದೇ ಎಂಬ ನೀರೀಕ್ಷೆಯಲ್ಲಿದ್ದಾರೆ ಶಿಕ್ಷಕರು. ತಂತ್ರಜ್ಞಾನದಲ್ಲಿ ಇಷ್ಟೆಲ್ಲ ಬೆಳವಣಿಗೆ ಆಗಿರುವಾಗ ಅಲಾಟ್‌ಮೆಂಟ್‌ ಆಗಿರುವ ವೇತನ ಅಪ್‌ಲೋಡ್‌ ಆಗಲು ಒಂದು ವಾರದ ಅವಧಿ ಬೇಕೇ ಎಂಬುದು ಶಿಕ್ಷಕರ ಪ್ರಶ್ನೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here