Friday 26th, April 2024
canara news

ಬಿಎಸ್‍ಕೆಬಿ ಅಸೋಸಿಯೇಶನ್‍ನಿಂದ ಸಯಾನ್‍ನ ‘ಗೋಕುಲ’ದಲ್ಲಿ

Published On : 25 Aug 2016   |  Reported By : Rons Bantwal


ಶ್ರೀಕೃಷ್ಣಷ್ಟಮಿ ವಿಶೇಷ ಮಹಾಪೂಜೆ-ಅಖಂಡ ಹರಿನಾಮ ಸಂಕೀರ್ತನೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.24: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‍ಕೆಬಿ ಅಸೋಸಿಯೇಶನ್ ಸಂಸ್ಥೆಗಳ ಜಂಟಿ ಆಶ್ರಯ ಗೋಕುಲದಲ್ಲಿ ಇಂದಿಲ್ಲಿ ಬುಧವಾರ ಸಂಜೆ ಶ್ರೀಕೃಷ್ಣಷ್ಟಮಿಯ ವಿಶೇಷ ಮಹಾಪೂಜೆ ನೆರೆವೇರಿಸಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸಹಕ್ಕೆ ಆದಿಯನ್ನೀಡಲಾಯಿತು. ಗೋಕುಲ ಭವನದ ಮಂದಿರದಲ್ಲಿನ ಶ್ರೀಕೃಷ್ಣ ದೇವರ ಪವಿತ್ರ ಸಾನಿಧ್ಯದಲ್ಲಿ ಗೋಕುಲದ ಪ್ರಧಾನ ಆರ್ಚಕ ಹರಿ ಭಟ್ ಮುಚ್ಚೂರು ಪ್ರಾತಃ ಕಾಲ ಮಂದಿರದಲ್ಲಿ ನಿತ್ಯ ಪೂಜೆ ನೆರವೇರಿಸಿ ಶ್ರೀಕೃಷ್ಣಷ್ಟಮಿ ಉತ್ಸವಕ್ಕೆ ಚಾಲನೆ ನೀಡಿ ಅನುಗ್ರಹಿಸಿದರು.

ಅಸೋಸಿಯೇಶನ್‍ನ ಅಧ್ಯಕ್ಷ ಡಾ| ಸುರೇಶ್ ಎಸ್ ರಾವ್ ಕಟೀಲು ಅವರು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಕಾರ್ಯದರ್ಶಿ ಎ.ಎಸ್‍ರಾವ್ ಮತ್ತು ಪದಾಧಿಕಾರಿಗಳನ್ನೊಳಗೊಂಡು ದೀಪ ಬೆಳಗಿಸಿ 24 ಗಂಟೆಗಳ `ಅಖಂಡ ಹರಿನಾಮ ಸಂಕೀರ್ತನೆ' ಯೊಂದಿಗೆ ಶ್ರೀಕೃಷ್ಣಷ್ಟಮಿ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ನಂತರ ಭಕ್ತಾದಿಗಳ ಉಪಸ್ಥಿತಿಯಲ್ಲಿ ಗೋಕುಲ ಕಲಾವೃಂದ ಭಜನಾ ಮಂಡಳಿ, ಮಹಾನಗರ ಮತ್ತು ಉಪನಗರಗಳ ವಿವಿಧ ಭಜನಾ ಮಂಡಳಿಗಳು ಅಹೋರಾತ್ರಿಯ `ಸಂಕೀರ್ತನೆ' ನಡೆಸಿದವು. ಗೋಕುಲ ಭಜನಾ ಮಂಡಳಿ ಭಜನೆ ನಡೆಸಿತು. ರಾತ್ರಿ ಜನ್ಮಾಷ್ಟಮಿ ಪೂಜೆ, ಅರ್ಘ್ಯ, ತೀರ್ಥ, ಪ್ರಸಾದ ವಿತರಿಸಿ ಆರ್ಚಕರು ಹರಸಿದರು.

ಇಂದು ಗುರುವಾರ (ಆ.25.) ಬೆಳಿಗ್ಗೆ ಗೋಕುಲ ಭಜನಾ ಮಂಡಳಿಯ ಮಂಗಳ ಗೀತೆಯೊಂದಿಗೆ ಭಜನೆ ಸಂಪನ್ನವಾಗಲಿದ್ದು, ಅಪರಾಹ್ನ ಹುಲಿ ವೇಷ ಕುಣಿತ, ಶ್ರೀ ಕೃಷ್ಣ ಲೀಲೋತ್ಸವ ಪ್ರಾರಂಭವಾಗಿ, ಅಷ್ಟಮಿ ಕರಿವೇಷ. ಯಕ್ಷಗಾನ ವೇಷ, ಕೋಲಾಟ, ಲೇಜಿಮ್ ಇತ್ಯಾದಿಗಳಿಂದ ವೈಭವದ ಮೆರವಣಿಗೆ ಹಾಗೂ ಮೊಸರುಕುಡಿಕೆ ನಡೆಸಲಾಗುವುದು. ಸಂಜೆ ಸಭಾ ಕಾರ್ಯಕ್ರಮ ನಡೆಸಲಾಗಿ ವಿದ್ವಾನ್ ಪ್ರಹ್ಲಾದಾಚಾರ್ಯ ನಾಗರಹಳ್ಳಿಯವರು ಭಕ್ತಾದಿಗಳಿಗೆ ಆಶೀರ್ವಚನ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ ಅಜೆಕಾರು ಕಲಾಭಿಮಾನಿ ಬಳಗವು ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ `ಜಾಂಬವತಿ ಕಲ್ಯಾಣ' ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ, ರಾತ್ರಿ ಶ್ರೀಕೃಷ್ಣ ದೇವರಿಗೆ ಪೂಜೆ, ಮಂಗಳಾರತಿ ನಂತರ, ತೀರ್ಥ ಪ್ರಸಾದ ವಿತರಣೆಯಾಗಲಿದೆ ಎಂದು ಬಿಎಸ್‍ಕೆಬಿಎ ಗೌರವ ಪ್ರಧಾನ ಕಾರ್ಯದರ್ಶಿ ಪಿ.ಸಿ.ಎನ್ ರಾವ್ ತಿಳಿಸಿದ್ದಾರೆ.

ಬಿಎಸ್‍ಕೆಬಿಎ ಉಪಾಧ್ಯಕ್ಷರು ಪಿ.ಉಮೇಶ್ ರಾವ್, ಗೌ| ಪ್ರ| ಕಾರ್ಯದರ್ಶಿ ಪಿ.ಸಿ ಎನ್ ರಾವ್, ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಭಟ್, ಕಾರ್ಯಕಾರಿಸದಸ್ಯರುಗಳಾದ ಗೀತಾ ಆರ್.ಎಲ್ ಭಟ್, ಪ್ರೇಮಾ ರಾವ್, ಗುರುರಾಜ್ ಭಟ್, ಅತಿಥಿsಗಳಾಗಿ ಎಸ್.ಎಸ್.ಉಡುಪ, ವಿಜಯಲಕ್ಷ್ಮೀ ಎಸ್.ರಾವ್, ಸಹನಾ ಪೆÇೀತಿ, ಎ.ಪಿ.ಕೆ.ಪೆÇೀತಿ, ನಿರ್ಗಮನ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್, ಎಚ್.ಬಿ.ಎಲ್.ರಾವ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here