Saturday 27th, April 2024
canara news

ಸಯಾನ್‍ನ ಗೋಕುಲದಲ್ಲಿ ಆಚರಿಸಲ್ಪಟ್ಟ ಶ್ರೀ ಕೃಷ್ಣ ಲೀಲೋತ್ಸವ-ದಹಿಹಂಡಿ

Published On : 25 Aug 2016   |  Reported By : Rons Bantwal


ಮುಂಬಯಿ, ಆ.25: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮುಂಬಯಿ ಮತ್ತು ಬಿಎಸ್‍ಕೆಬಿ ಅಸೋಸಿಯೇಶನ್ ಸಂಸ್ಥೆಗಳ ಸಹಯೋಗದೊಂದಿಗೆ ಸಯಾನ್‍ನ ಗೋಕುಲದಲ್ಲಿ ಇಂದಿಲ್ಲಿ ಗುರುವಾರ ಅಪರಾಹ್ನ ಭಗವಾನ್ ಶ್ರೀಕೃಷ್ಣ ದೇವರ ಜನ್ಮೋತ್ಸವ ನಿಮಿತ್ತ ಹರೇ ಕೃಷ್ಣ ಪಠಣದೊಂದಿಗೆ ಶ್ರೀ ಕೃಷ್ಣ ಲೀಲೋತ್ಸವ ಹಾಗೂ ಸಾಂಪ್ರದಾಯಿಕ ಶ್ರದ್ಧೆ, ಭಕ್ತಿ ಉತ್ಸಹದಿಂದ ಗೋವಿಂದ ಹಾಲಾರೆ ಹಾಲಾ... ಗೀತೆಯೊಂದಿಗೆ `ದಹಿ ಹಂಡಿ' ಆಚರಿಸಲ್ಪಟ್ಟತು.

ಗೋಕುಲ ಮಂದಿರದಲ್ಲಿನ ಶ್ರೀಕೃಷ್ಣ ದೇವರ ಪವಿತ್ರ ಸನ್ನಿಧಿಯಲ್ಲಿ ಪ್ರಧಾನ ಆರ್ಚಕ ಹರಿ ಭಟ್ ಮುಚ್ಚೂರು ಪೂಜೆ ನೆರವೇರಿಸಿ ಸಂಭ್ರಮಕ್ಕೆ ಚಾಲನೆ ನೀಡಿದರು. ಅಸೋಸಿಯೇಶನ್‍ನ ಅಧ್ಯಕ್ಷÀ ಡಾ| ಸುರೇಶ್ ಎಸ್ ರಾವ್ ಕಟೀಲು ಅವರು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಕಾರ್ಯದರ್ಶಿ ಎ.ಎಸ್‍ರಾವ್, ಪದಾಧಿಕಾರಿಗಳು ಸದಸ್ಯರು ಬಹುಸಂಖ್ಯೆಯಲ್ಲಿ ಭಾಗವಗಿಸಿದ್ದು, ಗೋಕುಲ ಭಜನಾ ಮಂಡಳಿ ಮಂಗಳ ಗೀತೆಯೊಂದಿಗೆ ಭಜನೆ ಸಂಪನ್ನಗೊಂಡಿತು.

ಅಪರಾಹ್ನ ಹುಲಿ ವೇಷ ಕುಣಿತ, ಶ್ರೀ ಕೃಷ್ಣ ಲೀಲೋತ್ಸವ ಪ್ರಾರಂಭವಾಗಿ, ಅಷ್ಟಮಿ ಕರಿವೇಷ. ಯಕ್ಷಗಾನ ವೇಷ, ಕೋಲಾಟ, ಲೇಜಿಮ್ ಇತ್ಯಾದಿಗಳಿಂದ ವೈಭವದ ಮೆರವಣಿಗೆ ಹಾಗೂ ಮೊಸರುಕುಡಿಕೆ ನಡೆಸಲಾಯಿತು. ನಡೆಸಲಾದ ಸಭಾ ಕಾರ್ಯಕ್ರಮದಲ್ಲಿ ವಿದ್ವಾನ್ ಪ್ರಹ್ಲಾದಾಚಾರ್ಯ ನಾಗರಹಳ್ಳಿ ಅವರು ಭಕ್ತಾದಿಗಳಿಗೆ ಅನುಗ್ರಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಜೆಕಾರು ಕಲಾಭಿಮಾನಿ ಬಳಗವು ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ `ಜಾಂಬವತಿ ಕಲ್ಯಾಣ' ಎಂಬ ಯಕ್ಷಗಾನ ಬಯಲಾಟ ಪ್ರದರ್ಶಿಸಿದರು. ರಾತ್ರಿ ಶ್ರೀಕೃಷ್ಣ ದೇವರಿಗೆ ಪೂಜೆ, ಮಂಗಳಾರತಿ ನಂತರ, ತೀರ್ಥ ಪ್ರಸಾದ ವಿತರಣೆ ನಡೆಸಿ 2016ನೇ ಸಾಲಿನ ಕೃಷ್ಣಾಷ್ಟಮಿ ಸಂಭ್ರಮಕ್ಕೆ ಮಂಗಳವನ್ನಾಡಲಾಯಿತು.

ಮಹಾನಗರದಲ್ಲಿನ ಉದ್ಯಮಿ, ಬಿ.ಆರ್ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಪ್ರಾಯೋಜಿಸಿದ ಸುಮಾರು 52ಅಡಿಗಳಷ್ಟು ಬಾಣೆತ್ತರಕ್ಕೆ ಕಟ್ಟಲಾದ `ದಹಿ ಹಂಡಿ'ಯನ್ನು ಸುಮಾರು ಎಂಡು ವಿಸ್ತ್ತಾರಣದ ಮಾನವ ಪಿರಮಿಡ್ ನಿರ್ಮಿಸಿದ `ಹಂಡಿ'ಯನ್ನು ಸ್ಥಾನೀಯ ಯುವಕ ತಂಡ ತನ್ನದಾಗಿಸಿ ಅತ್ಯಾಕರ್ಷಕ ಬಹುಮಾನ, ನಗದು ತನ್ನದಾಗಿಸಿ ದಹಿ ಹಂಡಿ' ಸಂಭ್ರಮಿಸಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here