Friday 26th, April 2024
canara news

ಮೊಡೇಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ 99ನೇವಾರ್ಷಿಕ ಮಹಾಸಭೆ

Published On : 27 Aug 2016   |  Reported By : Rons Bantwal


ಮಲ್ಟಿಸ್ಟೇಟ್ ಬ್ಯಾಂಕ್ ರಚನೆ ಮೊಡೇಲ್ ಬ್ಯಾಂಕ್ ಆಶಯ :ಆಲ್ಬರ್ಟ್ ಡಿ'ಸೋಜಾ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.27: ಬ್ಯಾಂಕ್‍ನ ಸದ್ಯದ ಉನ್ನತಿಯ ಬೆಳವಣಿಗೆಗೆ ಷೇರುದಾರರ ಪಾತ್ರ ಹಾಗೂ ಯೋಗದಾನ ಮಹತ್ತರದ್ದಾಗಿದೆ. ಅವರ ಮತ್ತು ಕರ್ಮಚಾರಿಗಳ ಅವಿರತ ಶ್ರಮವೇ ಬ್ಯಾಂಕ್ ಇಷ್ಟೊಂದು ಪ್ರಗತಿ ಸಾಧಿಸಲು ಕಾರಣವಾಗಿದೆ. ತಮ್ಮೆಲ್ಲರ ಅನನ್ಯ ಸೇವೆ ಕೊಂಡಾಡಿ ಅಭಿವಂದಿಸಲು ಬೇರೊಂದು ವೇದಿಕೆ ಸಿಗದು. ಪ್ರಸ್ತುತ ಈ ಪಥಸಂಸ್ಥೆ ಮಲ್ಟಿಸ್ಟೇಟ್ ಬ್ಯಾಂಕ್ ರಚನೆಯ ಆಶಯ ಹೊಂದಿದ್ದು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಮೊಡೇಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯು.ಡಿ'ಸೋಜಾ ನುಡಿದರು.

ಇಂದಿಲ್ಲಿ ಶನಿವಾರ ಸಂಜೆ ಮಾಹಿಮ್ ಪಶ್ಚಿಮದಲ್ಲಿನ ಸೈಂಟ್ ಕ್ಸೇವಿಯರ್ಸ್ ಕಾಲೇಜು ಸಭಾಗೃಹದಲ್ಲಿ ಜರುಗಿಸಲಾದ ಮೊಡೇಲ್ ಬ್ಯಾಂಕ್‍ನ 99ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನುದ್ದೇಶಿಸಿ ಡಿ'ಸೋಜಾ ಮಾತನಾಡಿದರು.

ಬ್ಯಾಂಕ್‍ನ ಗತವಾರ್ಷಿಕ ಕಾರ್ಯಚಟುವಟಿಕೆಗಳ ಮಾಹಿತಿಯನ್ನೀಡಿ ಬ್ಯಾಂಕ್ ಈ ತನಕ 16 ಶಾಖೆಗಳನ್ನು ಹೊಂದಿದೆ ಎಂದರು. ಮಹಾನಗರದಲ್ಲಿನ ಇತರೇ ಸಹಕಾರಿ ಬ್ಯಾಂಕುಗಳಲ್ಲೇ ಮೋಡೆಲ್ ಬ್ಯಾಂಕ್ ಪ್ರತಿಷ್ಠಿತ ಸ್ಥಾನಮಾನÀದಲ್ಲಿದೆ ಎನ್ನಲು ಅಭಿಮಾನ ಅಣಿಸುತ್ತದೆ. ಉತ್ತಮ ವ್ಯವಹಾರ ಸಾಧಿಸಿ ವಿಶೇಷವಾಗಿ ವ್ಯಪಾರ, ಶಿಕ್ಷಣಕ್ಕೆ ಪೆÇ್ರೀತ್ಸ್ಸಹಿಸುತ್ತಿದೆ. ಬ್ಯಾಂಕ್‍ನ ನಿರ್ದೇಶಕ ಮಂಡಳಿ ಸದ್ಯದ ಆಥಿರ್üಕ ಸ್ಥಿತಿಗತಿ ಮತ್ತು ದೂರದೃಷ್ಠಿತ್ವದ ವ್ಯವಹಾರ ಪರಿಗಣಿಸಿ ಬ್ಯಾಂಕ್‍ನ ಮುನ್ನಡೆಗೆ ಆಳವಾಗಿ ಚಿಂತಿಸಿ ಕಾರ್ಯನಿರತವಾಗಿದ್ದು, ಧನಾತ್ಮಕ ಚಿಂತನೆ ಮೈಗೂಡಿಸಿದೆ. ಆದುದರಿಂದ ಷೇರುದಾರರು, ಗ್ರಾಹಕರ ಋಣಾತ್ಮಕ ಸಲಹೆಗಳಿಂದ ಉತ್ಸಾಹ ಕುಗ್ಗಿಸದೆ ಬ್ಯಾಂಕ್‍ನ ಜೊತೆಗೆ ಷೇರುದಾರರು, ಗ್ರಾಹಕರ ಬಲವರ್ಧನೆಗೆ ಶ್ರಮಿಸುತ್ತಿದ್ದೇವೆ. ಗ್ರಾಹಕರಿಗಾಗಿ ಬ್ಯಾಂಕ್ ಹೊಸ ಯೋಜನೆಗಳನ್ನೂ ರೂಪಿಸಿದೆ. ಈ ಬಾರಿ ಭದ್ರತಾ ಠೇವಣಿ 764.46 ಕೋಟಿ ರೂಪಾಯಿ ಹೊಂದಿದ್ದು, ಮುಂಗಡ ಠೇವಣಿ 415.41 ಕೋಟಿ ರೂಪಾಯಿ, ಸಾಂದ್ರ 76.10 ಕೋಟಿ ರೂಪಾಯಿ ಹಾಗೂ ನಿವ್ವಳ ಲಾಭ ಸುಮಾರು 88.11 ಕೋಟಿ ರೂಪಾಯಿ ಮತ್ತು ಸುಮಾರು 5.85 ಕೋಟಿ ರೂಪಾಯಿ ಹೊಂದಿದೆ. ಸುಮಾರು 32.32 ಕೋಟಿ ರೂಪಾಯಿ ಷೇರು ಬಂಡವಾಳ, 30.25 ಕೋಟಿ ರೂಪಾಯಿ ಕಾಯ್ದಿರಿಸಿದ ಹಣ, 834.72 ಕೋಟಿ ರೂಪಾಯಿ ಕಾರ್ಯನಿರ್ವಹಣಾ ಬಂಡವಾಳ ವ್ಯವಹರಿಸಿದ್ದು, 76.10 ಕೋಟಿ ರೂಪಾಯಿ ಒಟ್ಟು ಲಾಭ ಪಡೆದಿದೆ. ಈ ಬಾರಿಯೂ ಲಾಭಾಂಶದ 12%ನ್ನು ಭಾಜ್ಯಂಶವಾಗಿ ಷೆÉೀರುದಾರರಿಗೆ ಬ್ಯಾಂಕ್ ನೀಡುತ್ತಿದೆ ಎಂದು ಆಲ್ಬರ್ಟ್ ಘೋಷಿಸಿದರು.

ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿ'ಸಿಲ್ವಾ, ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ನಿರ್ದೇಶಕರುಗಳಾದ ವಿನ್ಸೆಂಟ್ ಮಥಾಯಸ್, ಫಿಲಿಪ್ ಎಲ್.ಎಸ್ ಪಿಂಟೋ, ತೋಮಸ್ ಡಿ.ಲೋಬೊ, ಲಾರೇನ್ಸ್ ಡಿ'ಸೋಜಾ, ಅಬ್ರಹಾಂ ಕ್ಲೇಮೆಂಟ್ ಲೊಬೋ, ನ್ಯಾಯವಾದಿ ಪಿಯುಸ್ ವಾಸ್, ಬೆನೆಡಿಕ್ಟಾ ರೆಬೆಲ್ಲೋ, ಮರಿಟಾ ಡಿ'ಮೆಲ್ಲೋ, ಜೆರಾಲ್ಡ್ ಕರ್ಡೋಜಾ, ಮತ್ತು ಆ್ಯನ್ಸಿ ಡಿ'ಸೋಜಾ ವೇದಿಕೆಯಲ್ಲಿ ಆಸೀನರಾಗಿದ್ದರು.

ಸಮಾಜದ ಜನತೆಯ ಹಣಕಾಸು ವಹಿವಾಟು ಸರಳತೆಗಾಗಿಯೇ ಬ್ಯಾಂಕು ಸಕ್ರೀಯವಾಗಿದೆ. ಆದುದರಿಂದ ಗ್ರಾಹಕರ ಸಹಕಾರದ ವಿನಃ ಬ್ಯಾಂಕುಗಳು ಏನೂ ಸಾಧಿಸಲು ಅಸಾಧ್ಯ. ನಮ್ಮ ಪೂರ್ವಜರು ಬ್ಯಾಂಕ್‍ನ್ನು ಸ್ಥಾಪಿಸಿ ಭವಿಷ್ಯತ್ತಿನ ಪೀಳಿಗೆ ಅದರ ಫಲಾನುಭವ ಪಡೆಯುವಂತೆ ಯೋಜಿಸಿದ್ದು ಅವರ ಆಶಯವನ್ನು ನಾವೆಲ್ಲರೂ ಏಕತೆಯಿಂದ ಒಗ್ಗೂಡಿ ಪಡೆದು ಧನ್ಯರಾಗಬೇಕಾಗಿದೆ ಎಂದು ಜೋನ್ ಡಿ'ಸಿಲ್ವಾ ತಿಳಿಸಿದರು.

ಮಹಾಸಭೆಯ ಮುನ್ನ ಡೊನ್ ಬೊಸ್ಕೊ ಇಂಜಿನಿಯರಿಂಗ್ ಕಾಲೇಜ್ ಇದರ ನಿರ್ದೇಶಕ ರೆ| ಫಾ| ಮರಿಯೋ ವಾಸ್ ಪೂಜೆ ವಿಧಿ ವಿಧಾನಗಳನ್ನು ನೇರವೇರಿಸಿದ್ದು, ಎಡ್ವರ್ಡ್ ರಸ್ಕೀನ್ಹಾ ಬೈಬಲ್ ವಾಚಿಸಿದರು. ಕವಿತಾ ಡಿ'ಸೋಜಾ ಶ್ರದ್ಧಾಪ್ರಾರ್ಥನೆ ಸೂಚ್ಯಾಥಿರ್üಸಿದರು. ರುಬೇಣ್ ಡಬ್ಲ್ಯು.ಬುಥೆಲ್ಲೋ ಮತ್ತು ಗಾಯಕ ವೃಂದವು ಪೂಜಾ ಭಕ್ತಿಗೀತೆಗಳನ್ನಾಡಿದರು.

ಸಭೆಯಲ್ಲಿ ಬ್ಯಾಂಕ್‍ನ ಷೆÉೀರುದಾರರು, ಮಾಜಿ ನಿರ್ದೇಶಕರು, ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.

ಬ್ಯಾಂಕ್‍ನ ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್. ಡಿ'ಸೋಜಾ ಸೂಚನಾ ಪತ್ರಗಳನ್ನು ಹಾಗೂ ಗತವಾರ್ಷಿಕ ವರದಿ ಪ್ರಕಟಿಸಿದರು. ಸಭೆಯ ಆದಿಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಗತ ಸಾಲಿನಲ್ಲಿ ಸ್ವರ್ಗಸ್ಥ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಎಡ್ವರ್ಡ್ ರಸ್ಕೀನ್ಹಾ ಸಭಾ ಕಲಾಪ ನಡೆಸಿದರು. ಹೆಚ್ಚುವರಿ ಪ್ರಧಾನ ಪ್ರಬಂಧಕ ಹೆರೋಲ್ಡ್ ಎಂ.ಸೆರಾವೋ ಅಭಾರ ಮನ್ನಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here