Friday 26th, April 2024
canara news

ಕುಂದಾಪುರದಲ್ಲಿ ಉದಾಕ್ ಕೊಂಕಣಿ ವಿದ್ಯಾರ್ಥಿ ಸಮ್ಮೇಳನ ‘ಕೊಂಕಣಿಯನ್ನು ಉಳಿಸಿ ಬೆಳೆಸೋಣ’

Published On : 29 Aug 2016   |  Reported By : Bernard J Costa


ಕುಂದಾಪುರ ಅ.29: ಕೊಂಕಣಿ ಮಾನ್ಯತ ದಿವಸದ ಅಂಗವಾಗಿ ಜೈ ಕೊಂಕಣಿ (ರಿ) ಇವರ ಆಶ್ರಯದಲ್ಲಿ ಕೊಂಕಣಿ ವಿದ್ಯಾರ್ಥಿಗಳ ಸಮ್ಮೆಳನ ಪ.ಪೂ.ಕಾಲೇಜಿನ, ರೋಟರಿ ಲಕ್ಷ್ಮಿನರಸಿಂಹ ಕಲಾಮಂದಿರ ಸಭಾ ಭವನದಲ್ಲಿ ನೆಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ತರುಣ ಉದ್ಯಮಿ ಸುಕೇಶ್ ಭಂಡಾರ್‍ಕಾರ್ ದೀಪ ಬೆಳಗಿಸಿ ಉದ್ಘಾಟಿಸಿ ‘ಕೊಂಕಣಿ ಬಹಳ ಪುರಾತನ ಭಾಶೆಯಾಗಿದ್ದು, ಇವತ್ತು ದೇಶದಲ್ಲಿ ಮಾನ್ಯತೆ ಸಿಕ್ಕಿದ ಭಾಶೆಯಾಗಿದೆ. ಹಾಗಾಗಿ ಈ ಭಾಶೆಗೆ ಕೇಂದ್ರ, ರಾಜ್ಯ ಸರಕಾರಗಳಿಂದ ಪೆÇ್ರೀತ್ಸಹಾ ಸೌಲಭ್ಯ ದೊರಕುತ್ತದೆ, ಇದನ್ನು ನಾವು ಸೂಕ್ತವಾಗಿ ಉಪಯೋಗಿಸಿಕೊಂಡು ಸಮಾಜಕ್ಕೆ ಕೊಡುಗೆಯನ್ನು ನೀಡುವಲ್ಲಿ ಮುಂದಾಗ ಬೇಕೆಂದು’ ಅವರು ಸಂದೇಶ ನೀಡಿದರು.

ಸಮ್ಮೇಳನದ ಮಾರ್ಗದರ್ಶಕರಾಗಿ ಖ್ಯಾತ ಜಾದುಗಾರ ಕೊಂಕಣಿ/ಕನ್ನಡ ಬರಹಗಾರಾದ ಓಂ ಗಣೇಶ್ ಆಗಮಿಸಿದ್ದು ಈ ಸಮ್ಮೇಳನದ ಮುಖ್ಯ ವಿಷಯವಾದ ‘ನೀರು’ನ್ನು (ಉದಾಕ್) ಲೋಟದಲ್ಲಿ ಸುರಿಯುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿ ‘ನೀರು ಎಲ್ಲಾ ಧರ್ಮಗಳಿಗೆ ಪವಿತ್ರವಾಗಿದ್ದು, ಮನುಷ್ಯ ಜೀವಿಸಲು ಬಹಳ ಅಗತ್ಯ ಬೇಕಾದದ್ದು ನೀರಾಗಿದೆ, ನೀರು ಯಾವುದರಲ್ಲಿ ಹಾಕಿಡುತ್ತೆವೊ ಆ ಆಕಾರ ಪಡೆದುಕೊಳ್ಳುತ್ತೆ, ನೀರಿಗೆ ಮತ್ತೊಂದು ಉತ್ತಮ ಗುಣವಿದೆ ನೀರು ತಗ್ಗು ಇದ್ದಲ್ಲಿ ಹರಿಯುತ್ತದೆ, ಅಂತಹ ಗುಣವನ್ನು ನಾವು ಪಡೆದುಕೊಳ್ಳ ಬೇಕು, ತಗ್ಗಿ ಬಗ್ಗಿ ನೆಡೆಯುವುದು ಅಂದರೆ ವಿನಮ್ರತೆ, ಇದನ್ನು ನಾವು ಅಳವಡಿಸಿಕೊಂಡರೆ, ನಮಗೆ ಜೀವನದಲ್ಲಿ ಸಫಲತೆ ದೊರಕುತ್ತೆ, ಇವತ್ತು ಈ ಸಮ್ಮೇಳನದ ಗುರಿ ನಾವು ಕೊಂಕಣಿಯನ್ನು ಉಳಿಸಿ ಬೆಳೆಸಿ ಮುಂದಯ್ಯಬೇಕು, ಜಾತಿ ಮತ ಭೇದ ಪಕ್ಕದಲ್ಲಿಟ್ಟು, ಕೊಂಕಣಿಯನ್ನು ಪ್ರೀತಿಸಿ, ಸ್ವ ಪ್ರತಿಭೆಯನ್ನು ಬೆಳೆಸಿಕೊಂಡು, ಕೊಂಕಣಿಯಲ್ಲಿ ನಾವು ಸಾಧಕರಾಗಿ ಬೆಳೆಯ ಬೇಕಾಂಬುದಾಗಿದೆ’ ಎಂದು ಕೊಂಕಣಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.

ಕೊಂಕಣಿ ಭಾಷೆ ಸಮೃದ್ಧ ಭಾಷೆಯಾಗಿದ್ದು, ಕೊಂಕಣಿಯ ಆಗು ಹೋಗುಗಳಲ್ಲಿ ಹಿರಿಯರು ಮಾತ್ರ ಸಹಯೋಗ, ಸಹಭಾಗಿತ್ವ ಕಂಡು ಬರುತ್ತದೆ, ಆದರಿಂದ ಮಕ್ಕಳೂ ಕೊಂಕಣಿಯಲ್ಲಿ ಆಸಕ್ತಿ ಪಡೆದು ಮುಂದೆ ಕೊಂಕಣಿನಿಯನ್ನು ಬೆಳೆಸಿ ಮುನ್ನೆಡೆಸಿಕೊಂಡು ಹೋಗ ಬೇಕೆಂಬ ಇಚ್ಚೆಯಿಂದ ನಾವು ಈ ಸಮ್ಮೇಳನಗಳನ್ನು ಮಾಡುತ್ತೆವೆ’ ಎಂದು ಜೈ ಕೊಂಕಣಿಯ ಸಂಸ್ಥೆಯ ಅಧ್ಯಕ್ಷರಾದ ಯು.ಎಸ್.ಶೆಣೈ ಪ್ರಸ್ತಾವಿಕ ಮಾತುಗಳನ್ನಾಡಿದರು.

ಈ ಸಮ್ಮೇಳನದ ಅಧ್ಯಕ್ಷತೆಯನ್ನು ಡೇಲಿಟಾ ವಹಿಸಿದ್ದು ಶುಭ ಕೋರಿದರು. ಸುಷ್ಮಾ ಶೇಟ್ ಕೊಂಕಣಿಯ ಧ್ವಜವನ್ನು ಅರಳಿಸಿ ತಮ್ಮ ಅನ್ನಿಸಿಕೆಯನ್ನು ವ್ಯಕ್ತ ಪಡಿಸಿದರು. ಪ್ರಥ್ವಿ ಪ್ವೈ ಕೆ. , ಅಂಜಲಿ ಶೇಟ್, ಶಾರೋಲ್, ಶ್ರೇಯಾ, ಅಶ್ಮಿತಾ ಎಂ. ಖಾರ್ವಿ, ಕೊಂಕಣಿಯ ಬಗ್ಗೆ ಮಾತನಾಡಿದರು.

ನಂತರ ಸಾಂಸ್ಕ್ರತಿಕ ಸಂಭ್ರಮದ ಉದ್ಘಾಟನೆಯನ್ನು ಬಿ. ಸುಧೀಂದ್ರ ಶೇಟ್ ಉದ್ಘಾಟಿಸಿದರು. ತಿರ್ಪುದಾರರಾದ ಸಾಹಿತಿ ಬರ್ನಾಡ್ ಡಿ’ಕೋಸ್ತಾ, ಭಾಸ್ಕರ ಕಲೈಕಾರ್, ಪ್ರಕಾಶ್ ನಾಯಕ್ ಮತ್ತು ಅಶೋಕ್ ಶೇಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಲವಾರು ಶಾಲಾ ಕಾಲೇಜುಗಳು ಈ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಪ್ರಥಮ ಸ್ಥಾನವನ್ನು .... ದ್ವೀತಿಯ ಸ್ಥಾನವನ್ನು..... ಮತ್ತು ತ್ರತಿಯ ಸ್ಥಾನವನ್ನು .... ಪಡೆಯಿತು

ದೀಪಿಕಾ ಶ್ಯಾನುಭೋಗ್ ಸ್ವಾಗತಿಸಿದರು, ಸಂಜನಾ ಎಸ್. ಅತಿಥಿಗಳನ್ನು ಪರಿಚಯಿಸಿದರು. ಕಿರಣ್ ಭಟ್, ಶ್ರುತಿ ಪೈ ವಂದಿಸಿದರು, ಕಾರ್ಯಕ್ರಮವನ್ನು ಯು.ಸಂಗೀತಾ ಶೆಣೈ ಮತ್ತು ಸಂಜನಾ ಎಸ್. ನಿರ್ವಹಿಸಿದರು. ಬಳಿಕ ಹಲವಾರು ಗೋಷ್ಠಿಗಳು ನೆಡೆದವು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here