Tuesday 20th, August 2019
canara news

ಲಕ್ಷ್ಮೀಛಾಯಾ ವಿಚಾರ ವೇದಿಕೆಯಿಂದ 22ನೇ ಜಯಂತಿ ಬಿ.ಎಸ್ ಕುರ್ಕಾಲ್ ಸಾಹಿತ್ಯ ಪ್ರಶಸ್ತಿ ಪ್ರದಾನ

Published On : 31 Aug 2016   |  Reported By : Rons Bantwal


ಜೋಶಿ ಹರಟೆಗಳಲ್ಲಿ ಕೆಣಕು ಜಾಸ್ತಿ ಇದೆ : ಡಾ| ವ್ಯಾಸರಾಯ ನಿಂಜೂರು
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.31: ಸಮಾಜದಲ್ಲಿ ವಿಶಿಷ್ಟ ಸಾಧನೆಗೈದ ಸಾಧಕರಿಗೆ, ಬುದ್ಧಿಜೀವಿಗಳಿಗೆ ಜಯಂತಿ ಕುರ್ಕಾಲ್ ಸಾಹಿತ್ಯ ಪ್ರಶಸ್ತಿಯನ್ನು ನಿರಂತರವಾಗಿ ಪ್ರದಾನಿಸುತ್ತಾ ಬಂದಿರುವ ಒಬ್ಬನೇ ಒಬ್ಬ ಹಿರಿಯ ಸಹೃದಯಿ, ಸಾಹಿತಿ, ಕವಿ ಬಿ.ಎಸ್ ಕುರ್ಕಾಲ್ ಅವರ ಕಾರ್ಯ ಸಾಧನೆಯ ಒಂದು ಚರಿತ್ರಾರ್ಹ ದಾಖಲೆಯಾಗಿದೆ. ಲಕ್ಷ್ಮೀ ಛಾಯಾ ವಿಚಾರ ವೇದಿಕೆಯ ಮೂಲಕ ಕಳೆದ ಸುಮಾರು ಎರಡುವರೆ ದಶಕಗಳಿಂದ ವರ್ಷಗಳಿಂದ ತನ್ನ ಪತ್ನಿಯ ಸ್ಮೃತಿ ನೆನಪಿಗಾಗಿ ಮಾಗಿದ ವಯಸ್ಸಿನಲ್ಲೂ ಕುರ್ಕಾಲ್ ಇನ್ನೂ ಒಬ್ಬ ಯುವಕನಂತೆ ಚುರುಕಾಗಿ ಓಡಾಡುವುದನ್ನು ಕಂಡಾಗ ನಮಗೆಲ್ಲಾ ಅಭಿಮಾನವೆನಿಸುತ್ತಿದೆ. ಸಾಹಿತಿ ಡಾ| ಜಿ.ಡಿ ಜೋಶಿ ಈ ಪ್ರಶಸ್ತಿಗೆ ಅರ್ಹ ವ್ಯಕ್ತಿ. ಜೋಶಿ ಹರಟೆ ಲೇಖನಗಳಿಗೆ ಪ್ರಸಿದ್ಧರಾಗಿದ್ದು ಅವರ ಹರಟೆಗಳಲ್ಲಿ ಕೆಣಕು ಜಾಸ್ತಿ ಇರುವುದನ್ನು ಕಾಣಬಹುದಾಗಿದೆ. ಸಾಹಿತ್ಯ ಲೋಕದಲ್ಲಿ ಮಹಿಳೆಯರಿಂದು ಪುರುಷರಷ್ಟೇ ಸಮಾನ ಸ್ತರದ ಚಿಂತನೆ-ಅಭಿವ್ಯಕ್ತಿಗೆ ಹೆಚ್ಚೆಚ್ಚು ತೊಡಗುತ್ತಿದ್ದಾರೆ ಎಂದು `ಗೋಕುಲವಾಣಿ' ಮಾಸಿಕದ ಸಂಪಾದಕ, ವಿಜ್ಞಾನಿ, ಸಂಶೋಧಕ ಡಾ| ವ್ಯಾಸರಾಯ ನಿಂಜೂರು ನುಡಿದರು.

ಇಂದಿಲ್ಲಿ ಶನಿವಾರ ಸಂಜೆ ಸಯಾನ್ ಪೂರ್ವದ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಮಹಾನಗರದಲ್ಲಿನ ಲಕ್ಷ್ಮೀ ಛಾಯಾ ವಿಚಾರ ವೇದಿಕೆ ವಾರ್ಷಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ವಿಚಾರ ವೇದಿಕೆಯ ಸಂಚಾಲಕ ಬಿ.ಎಸ್ ಕುರ್ಕಾಲ್ ಅವರನ್ನೊಳಗೊಂಡು ಲಕ್ಷ್ಮೀಛಾಯಾ ವೇದಿಕೆಯು ವಾರ್ಷಿಕವಾಗಿ ಕೊಡಮಾಡುವ ಶ್ರೀಮತಿ ಜಯಂತಿ ಬಿ.ಎಸ್ ಕುರ್ಕಾಲ್ ಸಾಹಿತ್ಯ ಪ್ರಶಸ್ತಿ 2016ನ್ನು ನಿವೃತ್ತ ಪ್ರಾಂಶುಪಾಲ, ಹಿರಿಯ ಸಾಹಿತಿ ಡಾ| ಜಿ.ಡಿ ಜೋಶಿ ಅವರಿಗೆ ಪ್ರದಾನಿಸಿ ಡಾ| ನಿಂಜೂರು ಮಾತನಾಡಿದರು.

ಸಮಾರಂಭದಲ್ಲಿ ಗೌರವ ಅತಿಥಿüಯಾಗಿ ಅಭ್ಯುದಯ ಕೋ.ಆಪರೇಟಿವ್ ಬ್ಯಾಂಕಿನ ನೂತನ ಆಡಳಿತ ನಿರ್ದೇಶಕ ಪುನೀತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದು, ಶೋಭಾ ಪ್ರಮೋದ್ ಅವರ `ಕಾಡಿನಲ್ಲಿ ಕುಹೂ ಕುಹೂ' ಕವನ ಸಂಕಲನವನ್ನು ಹಾಗೂ ಬಿ.ಎಸ್ ಕುರ್ಕಾಲ್ ಅವರು ಕವಿತಾ ಪ್ರಕಾಶ್ ಶೆಟ್ಟಿ ಅವರ `ಸೆರೆಂದಿಪಿಟಿ' ಕೃತಿಯನ್ನು ಬಿಡುಗಡೆ ಗೊಳಿಸಿದರು.

ಪುನೀತ್ ಶೆಟ್ಟಿ ಮಾತನಾಡಿ ಹಿರಿಯರಾದ ಬಿ.ಎಸ್ ಕುರ್ಕಾಲ್ ನನ್ನ ಪತ್ನಿಗೆ ಗುರುವಾಗಿದ್ದರು. ಹಾಗಾಗಿ ಅವರನ್ನು ನಾನು ಗುರುಗಳ ಸ್ಥಾನದಲ್ಲೇ ಗೌರವಿಸುತ್ತೇನೆ. ಕುರ್ಕಾಲ್ ಸರ್ ಅವರ ಸಾಹಿತ್ಯ ಕ್ಷೇತ್ರದ ಯಾವುದೇ ಕಾರ್ಯಕ್ಕೂ ನನ್ನ ಸಂಪೂರ್ಣ ಸಹಕಾರವಿದೆ ಎಂದು ನುಡಿದರು.

ಡಾ| ಜೋಶಿ ಸನ್ಮಾನಕ್ಕೆ ಉತ್ತರಿಸಿದ ನಿಮ್ಮ ಮುಖವನ್ನು ನೋಡಿ ನಾನು ನನ್ನ ಸಂತಸವನ್ನು ಅಂಗೀಕರಿಸುವ ಪ್ರಸಂಗ ಬಂದಿರುವುದಕ್ಕೆ ಸಂತಸವಾಗಿದೆ. ಪ್ರಶಸ್ತಿ ದೊರೆತ ಸಂತಸದ ಕ್ಷಣಗಳಲ್ಲಿ ನನ್ನ ಅಭಿಮಾನಿಗಳನ್ನು, ಮಿತ್ರರನ್ನು ನೋಡುವ ಭಾಗ್ಯ ಒದಗಿದೆ. ನನ್ನಲ್ಲಿ ಮಾತನಾಡಲೂ ಏನೂ ಉಳಿದಿಲ್ಲ, ಹೃದಯ ತುಂಬಿ ಬಂದಿದೆ. ಸಾಹಿತ್ಯ ಕೃಷಿಗೆ ನನ್ನ ವಿದ್ಯಾಥಿರ್sಗಳೇ ಪ್ರೇರಣೆ. ಸಾಹಿತ್ಯ ಕ್ಷೇತ್ರದಲ್ಲಿ ಸಾರ್ಥಕ ಸೇವೆ ಮಾಡಿದ ಧನ್ಯತಾ ಭಾವ ನನ್ನಲ್ಲಿದೆ. ನೀವೆಲ್ಲರೂ ತೋರಿದ ಪ್ರೀತಿಯೇ ನನಗೆ ದೊಡ್ಡ ಪ್ರಶಸ್ತಿ. ಬದುಕಿನಲ್ಲಿ ನನ್ನೊಂದಿಗೆ ಸಹಕರಿಸಿದ ಎಲ್ಲರನ್ನೂ ನಾನು ಹೃದಯದಲ್ಲಿ ಹಾಗೇನೇ ಸ್ಥಿರವಾಗಿ ಇರಿಸಿಕೊಳ್ಳುತ್ತೇನೆ ಎಂದರು.

ಗೀತಾ ಸುಧಾಕರ್ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಸಿಎ| ಭಾಸ್ಕರ್ ಜಿ.ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಬೋಳ ಚಿತ್ತರಂಜನ್ ಶೆಟ್ಟಿ, ಪಿ ಕೆ ಸಾಲ್ಯಾನ್ ಅವರ ಆತ್ಮಕ್ಕೆ ಮೌನಪ್ರಾರ್ಥನೆಯೊಂದಿಗೆ ಚಿರಶಾಂತಿ ಕೋರಲಾಯಿತು. ಬಿ.ಎಸ್ ಕುರ್ಕಾಲ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಎಸ್ ಕೆ ಸುಂದರ್ ಮತ್ತು ಪ್ರೇಮನಾಥ ಬಿ.ಶೆಟ್ಟಿ ಮುಂಡ್ಕೂರು ದೊಡ್ಮನೆ ಅತಿಥಿüಗಳ ನ್ನು ಪರಿಚಯಿಸಿದರು. ಡಾ| ಕರುಣಾಕರ ಶೆಟ್ಟಿ ಪುರಸ್ಕೃತರನ್ನು ಪರಿಚಯಿಸಿದರು. ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು. ಪೇಟೆಮನೆ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 
More News

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ

Comment Here