Thursday 23rd, May 2019
canara news

ಲಕ್ಮೇ ಫ್ಯಾಶನ್ ವೀಕ್: ಫಾರೆಸ್ಟ್ ನಾೈರ್ ಕಲೆಕ್ಷನ್ ಪ್ರಸ್ತುತಿ ಪಡಿಸಿದ ಈಶಾ ಅವಿೂನ್

Published On : 01 Sep 2016   |  Reported By : Ronida Mumbai


ಮುಂಬಯಿ, ಸೆ.01: ಇತ್ತೀಚೆಗೆ ಮಹಾನಗರನಲ್ಲಿ ನಡೆಸಲ್ಪಟ್ಟ ಲಕ್ಮೇ ಫ್ಯಾಶನ್ ವೀಕ್ ಪ್ರದರ್ಶನದಲ್ಲಿ ಪ್ರಖ್ಯಾತ ಶೈಲಿಗಾರ್ತಿ ರೂಪಿತ ಬಾಲಿವುಡ್‍ನ ವಸ್ತ್ರ ನಕ್ಷೆಗಾರ್ತಿ (ಸೆಲೆಬ್ರೆಟಿ ಸ್ಟೈಲಿಸ್ಟ್ ಟರ್ನ್‍ಡ್ ಡಿಝೈನರ್) ಈಶಾ ಎಲ್.ಅವಿೂನ್ ತನ್ನ ಫಾರೆಸ್ಟ್ ನಾೈರ್ ಕಲೆಕ್ಷನ್‍ನ್ನು ಪ್ರಸ್ತುತ ಪಡಿಸಿದರು. ಮಾಜಿ ಮಿಸ್ ವರ್ಲ್ಡ್ ಮತ್ತು ಬಾಲಿವುಡ್ ನಟಿ ಲಾರಾ ದತ್ತ ಅವರು ಈಶಾ ರೂಪಿಸಿದ ಫಾರೆಸ್ಟ್ ನಾೈರ್ ಕಲೆಕ್ಷನ್ ಧರಿಸಿ ರ್ಯಾಂಪ್‍ವಾಕ್‍ನಲ್ಲಿ ಬೆಳದಿಂಗಳ ಸೌದರ್ಯದ ವಾತಾವರಣ ಸೃಷ್ಟಿಕೃತಿಯಲ್ಲಿ ಸಾವಕಾಶವಾಗಿ ಹೆಜ್ಜೆಗಳನ್ನಿತ್ತರು.

ಬಾಲಿವುಡ್‍ನ ಡೈಸೀ ಶ್ಹಾ, ಮನಸ್ವೀ ಮಗ್‍ಮೈ, ಮಧುರಿಮಾ ತುಳಿ, ವಂದನಾ ಸಜ್ನಾನಿ, ರಾಜೇಶ್ ಖತ್ತರ್, ಗೌರವ್ ಚೋಫ್ರಾ ಮತ್ತಿತ್ತನೇಕರು ಈಶಾ ಅವಿೂನ್ ಪ್ರಸ್ತುತಿಯನ್ನು ಮೆಚ್ಚಿ ಅಭಿನಂದಿಸಿದರು. ಬಾಲಿವುಡ್ ಸೆಲೆಬ್ರೆಟಿಗಳ ಸ್ಟೈಲಿಸ್ಟ್ ಪ್ರಸಿದ್ಧಿಯ ಫ್ಯಾಶನ್ ರಂಗದ ಹೆಸರಾಂತ ಸ್ಟೈಲಿಸ್ಟ್ ಈಶಾ ಅವಿೂನ್ ಮಂಗಳೂರು ಬಜಪೆ ನಿವಾಸಿ, ಮುಂಬಯಿಯಲ್ಲಿನ ಉದ್ಯಮಿ ಎಲ್.ವಿ ಅವಿೂನ್ ಮತ್ತು ಸುಧಾ ಎಲ್.ಅವಿೂನ್ ದಂಪತಿ ಸುಪುತ್ರಿ ಆಗಿದ್ದಾರೆ.
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here