Friday 26th, April 2024
canara news

.15-16 ಬಿಲ್ಲವ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್‍ನಿಂದ 162ನೇ ಗುರುಜಯಂತಿ

Published On : 13 Sep 2016   |  Reported By : Rons Bantwal


ಮುಂಬಯಿ, ಸೆ.13: ತುಳು ಕನ್ನಡಿಗರ ಪ್ರತಿಷ್ಠಿತ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶದಂತೆ ಕಾರ್ಯವೆಸಗುತ್ತಿದ್ದು ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 162ನೇ ಜಯಂತಿಯನ್ನು ತಾರೀಕು 15.09.2016ರಿಂದ 16.09.2016ರ ವರೆಗೆ ಅತೀ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ.

Guru Narayana

 Ashish Shelar

Jaya C.Suvarna

Nityanand D.Kotyan

N. T Poojary

ಕೇರಳದಲ್ಲಿ ಅನಾಚಾರ, ದಬ್ಬಾಳಿಕೆ, ಮೂಡನಂಬಿಕೆ, ಜಾತೀಯ ನೆಲೆಯಲ್ಲಿ ಶೋಷಣೆ, ಮೇಲ್ವರ್ಗದ ಜನರಿಂದ ಕೆಳವರ್ಗದ ಜನರಿಗಾಗುವ ಅನ್ಯಾಯ, ದೇವಾಲಯ ಪ್ರವೇಶಕ್ಕೆ ನಿರ್ಬಂಧ, ವಿದ್ಯೆಗೆ ವಂಚನೆ ಇಂತಉÀ ಸಂದರ್ಭದಲ್ಲಿ ಜನರಿಗೆ ಆಶಾಕಿರಣವ್ಡಾ ತಿರುವನಂತಪುರ ಚಂಪಳತಿಯಲ್ಲಿ ಓಣಂ ಉÀಬ್ಬದ ಸಂದರ್ಭದಲ್ಲಿ ಶತಭಿಶ ನಕ್ಷತ್ರದಲ್ಲಿ ಲೋಕ ಕಲ್ಯಾಣಾರ್ಥವ್ಡಾ ಜನಿಸಿದವರೇ ಬ್ರಹ್ಮಶ್ರೀ ನಾರಾಯಣ ಗುರುಗಳು. ಒರ್ವ ಸಮಾಜ ಸುಧಾರಕರ್ಡಾ ಮಾನವ ಕುಲಕ್ಕೆ ಸಂಘಟನೆಯ ಬೀಜವನ್ನು ಬಿತ್ತಿ, ವಿದ್ಯೆಯಿಂದ ಸ್ವತಂತ್ರರಾಗುವ ಮೂಲ ಮಂತ್ರವನ್ನು ಜಪಿಸಿ ಸರ್ವರಿಗೂ ಸಮಬಾಳ್ವೆಯನ್ನು ಬೋಧಿಸಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಅವರ ತತ್ವ ಸಂದೇಶ ಸರ್ವ ಕಾಲಕ್ಕೂ ಸೀಮಿತವಾಗಿದ್ದು ಬಿಲ್ಲವರ ಎಸೋಸಿಯೇಶನ್ ಅವರ ಜಯಂತ್ಯುತ್ಸವವನ್ನು ಪ್ರತೀ ವರ್ಷ ಆಚರಿಸುತ್ತಿದ್ದು ಈ ವರ್ಷ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರೂ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ ಸುವರ್ಣರಿಂದ ನಿರಂತರ 24 ಗಂಟೆಗಳ ಓಂ ನಮೋ ನಾರಾಯಣಾಯ ನಮಃ ಜಪಯಜ್ಞವು 15.09.2016ರಂದು ಬೆಳಿಗ್ಗೆ 6.04ಕ್ಕೆ ಉದ್ಘಾಟನೆಗೊಂಡು ಮರುದಿನ 16.09.2016ರಂದು ಬೆಳಿಗ್ಗೆ 6.04 ಗಂಟೆಗೆ ಸಂಪನ್ನಗೊಳ್ಳಲಿದೆ. ತದನಂತರ ನವಕ ಪ್ರಧಾನ ಕಲಾಶಾಭಿಷೇಕ, ಭಜನೆ, ಮಹಾ ಮಂಗಳಾರತಿ, ಪ್ರಸನ್ನ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಜರಗಲಿದೆ. ಸನ್ಮಾನ್ಯ ಶ್ರೀ ಜಯ ಸಿ ಸುವರ್ಣರ ಮಾರ್ಗದರ್ಶನದಲ್ಲಿ ಜರಗಲಿರುವ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸೋಸಿಯೇಶನಿನ ಅಧ್ಯಕ್ಷರಾದ ನಿತ್ಯಾನಂದ ಡಿ.ಕೋಟ್ಯಾನ್ ಅವರು ವಹಿಸಲಿದ್ದು ಶ್ರೀ ರುಂಡಮಾಲಿನಿ ಮಂದಿರÀದ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಅವರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿüಯಾಗಿ ನ್ಯಾಯವಾದಿ ಆಶೀಶ್ ಶೇಲಾರ್ (ಶಾಸಕರು ಮತ್ತು ಅಧ್ಯಕ್ಷರು, ಬಿಜೆಪಿ ಮುಂಬಯಿ) ಹಾಗೂ ಎನ್.ಟಿ ಪೂಜಾರಿ (ಅಧ್ಯಕ್ಷರು,ಬಿಲ್ಲವ ಜಾಗೃತಿ ಬಳಗ ಮತ್ತು ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ) ಆಗಮಿಸಲಿದ್ದು ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

ಅಸೋಸಿಯೇಶನ್ ಪ್ರಾಯೋಜಿತ ಭಾರತ್ ಕೋ. ಆಪರೇಟಿವ್ ಬ್ಯಾಂಕ್ ತಾ.20.08.2016ರಂದು ತನ್ನ 100ನೇ ಶಾಖೆಯನ್ನು ಉದ್ಘಾಟಿಸಿ ಇತಿಹಾಸ ನಿರ್ಮಾಣ ಮಾಡಿದೆ. ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರ ವಿಶೇಷ ಪರಿಶ್ರಮದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಆದ್ದರಿಂದ ಭಾರತ್ ಬ್ಯಾಂಕಿನ ಯಶಸ್ಸಿನ ರೂವಾರಿಯ ಜಯ ಸಿ.ಸುವರ್ಣ, ನಿರ್ದೇಶಕರು ಮತ್ತು ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್‍ಮೂಲ್ಕಿ ಅವರನ್ನು ಅಂದು ಬೆಳಿಗ್ಗೆ 10.30ಕ್ಕೆ ಜರಗಲಿರುವ ಸಭಾ ಕಾರ್ಯಕ್ರಮದಲ್ಲಿ ಅಭಿನಂದಿಸಿ ಗೌರವಿಸಲಾಗುವುದು. ಹಿತೈಷಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪೆÇ್ರೀತ್ಸಾಹಿಸಬೇಕಾಗಿ ವಿನಂತಿ.

ಕೇಂದ್ರ ಕಚೇರಿಯಲ್ಲಿ ಗುರುಜಯಂತ್ಯೋತ್ಸವÀದ ನಂತರ ಪ್ರತೀ ಸ್ಥಳೀಯ ಕಚೇರಿಗಳಲ್ಲಿಯೂ ವಿಜೃಂಭಣೆಯಿಂದ ಆಚರಿಸಲಿದೆ. ಸಾವಿರಾರು ಗುರು ಭಕ್ತರ ಸಮಕ್ಷಮದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅಸೋಸಿಯೇಶನಿನ ಪರವಾಗಿ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ್ ಜಿ.ಅಂಚನ್ ಸಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಮೋಹನ್‍ದಾಸ್ ಜಿ.ಪೂಜಾರಿ, ಗೌ| ಕಾರ್ಯದರ್ಶಿ ರವೀಂದ್ರ ಎ.ಅಮೀನ್ ತಿಳಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here