Friday 26th, April 2024
canara news

ರಂಗಭೂಮಿಯಲ್ಲಿ ಪ್ರಥಮ ಪ್ರದರ್ಶನ ಕಂಡ `ಕಾಲಾಯ ತಸ್ಮೈ ನಮಃ' ತುಳು ನಾಟಕ ನಾಡು, ಭಾಷೆ, ಸಂಸ್ಕೃತಿ ಉಳಿಸಲು ನಾಟಕಗಳು ಪ್ರೇರಣೆ: ಡಾ| ಸುನೀತಾ ಶೆಟ್ಟಿ

Published On : 14 Sep 2016   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.14: ಭಾಷೇ ಪ್ರೀತಿಸುವುದು ಮುಂಬಯಿ ವಿಶೇಷತೆ. ಮೂರು ಗುಣಗಳನ್ನು ಓರ್ವ ಕಲಾವಿದ ಮೈಗೂಡಿಸುವುದೇ ಕಲಾವಿದನ ದೊಡ್ಡತನ. ಇದು ಅರವಿಂದ್ ಶೆಟ್ಟಿ ಕೊಜಕೊಳಿ ಅವರಲ್ಲಿದೆ. ನಾಟಕ ಪ್ರದರ್ಶನವಾದಗ ಅದು ನಾಟಕಕೃರ್ತನ ನಾಟಕವಾಗಿದೆ ಪ್ರೇಕ್ಷಕರ ನಾಟಕವಾಗುವುದು. ನಾಟಕ ಹತ್ತು ಜನಮನಗಳಲ್ಲಿ ಉಳಿದರೆ ಅದೇ ನಾಟಕದ ಶ್ರೇಯಸ್ಸು ಆಗಿರುತ್ತದೆ. ನಾಡು, ಭಾಷೆ, ಸಂಸ್ಕೃತಿ ಉಳಿಸಲು ಇಂತಹ ನಾಟಕಗಳು ಪ್ರೇರಣೆಯಾಗಲಿ ಎಂದು ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು.

ಮಹಾನಗರದಲ್ಲಿನ ಪ್ರತಿಭಾನ್ವಿತ ಕಲಾಕಾರ, ಹೆಸರಾಂತ ಕಲಾವಿದ, ನಾಟಕಕಾರ, ನಿರ್ದೇಶಕ ಅರವಿಂದ್ ಶೆಟ್ಟಿ ಕೊಜಕೊಳಿ ರಚಿಸಿ ಆ್ಯಂಕರ್ ಕಲ್ಚರಲ್ ಗ್ರೂಪ್ ಮುಂಬಯಿ ತಂಡವು ಪ್ರದರ್ಶಿಸಿದ `ಕಾಲಾಯ ತಸ್ಮೈ ನಮಃ' ತುಳು ನಾಟಕದ ಪ್ರಥಮ ಪ್ರದರ್ಶನಕ್ಕೆ ಚಾಲನೆಯನ್ನಿತ್ತು ಸುನೀತಾ ಶೆಟ್ಟಿ ಮಾತನಾಡಿದರು.

ಬಂಟ್ಸ್ ಸಂಘ ಮುಂಬಯಿ ಇದರ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಸಹಯೋಗದೊಂದಿಗೆ ಇಂದಿಲ್ಲಿ ಮಂಗಳವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿ ಯೇಶನ್‍ನ ಸಭಾಗೃಹದಲ್ಲಿ ಪ್ರದರ್ಶಿಸಲ್ಪಟ್ಟ ಪ್ರಯೋಗಿಕ ಸಾಂಸರಿಕ ತುಳು ನಾಟಕ ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಹಿರಿಯ ಹೊಟೇಲು ಉದ್ಯಮಿ, ಅವೆನ್ಯೂ ಹೊಟೇಲು ಸಮೂಹದ ನಿರ್ದೇಶಕ ರಘುರಾಮ ಕೆ.ಶೆಟ್ಟಿ (ಬೆಳಗಾಂ) ಹಾಗೂ ಗೌರವ ಅತಿಥಿüಗಳಾಗಿ ಉದ್ಯಮಿಗಳಾದ ಅಮರ್‍ನಾಥ್ ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಸಿಎ| ಸಂಜೀವ ಶೆಟ್ಟಿ, ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಉಪಸ್ಥಿತರಿದ್ದರು.

ಅಮರ್‍ನಾಥ್ ಶೆಟ್ಟಿ ಮಾತನಾಡಿ ಪ್ರಸ್ತುತ ನೂರಾರು ನಾಟಕ, ಸಿನೇಮಾಗಳು ಬರುತ್ತಿದೆ. ಆದರೆ 70% ನಾಟಕಗಳಲ್ಲಿ ನೀತಿ ಬೋಧನೆಯ ಕೊರತೆಯಿದೆ. ಹಾಸ್ಯ ಪ್ರಧಾನವಾದರೂ ಸಾಮಾಜಿಕ ಕಳಕಳಿಯುಳ್ಳ ನಾಟಕಗಳು ಮೂಡಿ ಬರಲಿ. ಇಂತಹ ನಾಟಕಕ್ಕೆ ಪೆÇ್ರೀತ್ಸಾಹಿಸೋಣ ಎಂದರು.

ನಾಟಕ ರಚನೆ ಸುಲಭ ಆದದ್ದು ಅಲ್ಲ. ಪ್ರೇಕ್ಷಕ, ಕಲಾಕಾರರ ಕೊರತೆ ನಾಟಕ ಬರಹಗಾರರಿಗೆ ಹಿನ್ನಡೆಯಾಗಿದೆ. ಈ ನಾಟಕದ ನೀತಿ ನಮ್ಮ ಬದುಕಿಗೆ ಮಾದರಿಯಾಗಿಸೋಣ ಎಂದು ಪ್ರವೀಣ್ ಶೆಟ್ಟಿ ತಿಳಿಸಿದರು.

ಸಂಜೀವ ಶೆಟ್ಟಿ ಮಾತನಾಡಿ ಅರವಿಂದ ಶೆಟ್ಟಿ ಪ್ರತಿಭಾನ್ವಿತÀ ಕಲಾವಿದ. ಕಲೆಯೊಂದಿಗೆ ವ್ಯವಹಾರವನ್ನು ಮುನ್ನಡೆಸಿ ಬದುಕು ಕಟ್ಟಿದ ಯುವಕ. ಇವರ ಸಾಧನೆಗೆ ಸದಾ ಯಶಸ್ಸು ಲಭಿಸಲಿ ಎಂದರು.

ನಿತ್ಯಾನಂದ ಹೆಗ್ಡೆ ಮಾತನಾಡಿ ಅಭಿರುಚಿ ಆಸಕ್ತಿ ಇದ್ದರೆ ನಾಟಕ ಸ್ವಾಧಿಷ್ಟಕರವಾಗಿರುತ್ತದೆ. ಇವರ ನಾಟಕದಲ್ಲಿ ಸಾರಂಶ ಸಂದೇಶವಿದೆ. ಪ್ರಬುದ್ಧ ಕಲಾವಿದರ ಈ ನಾಟಕ ರಂಗ ಭೂಮಿಯಲ್ಲಿ ತಾರಾಮಯವಾಗಿ ಕಂಗೋಳಿಸಲಿ ಎಂದರು.

ಇದೇ ಸಂದರ್ಭದಲ್ಲಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ಮತ್ತು ಕೃಷ್ಣರಾಜ್ ಶೆಟ್ಟಿ ಅವರನ್ನು ಸತ್ಕಾರಿಸಲಾಯಿತು.

ಅರವಿಂದ ಶೆಟ್ಟಿ ಕೊಜಕೊಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ಶೈಲಜ ಎ.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಚಂದ್ರಾವತಿ ದೇವಾಡಿಗ, ಸುನಂದ ಡಿ.ಶೆಟ್ಟಿ, ಪಿ.ಡಿ.ಶೆಟ್ಟಿ, ನವೀನ್ ಎಸ್. ಅವರು ಗಣ್ಯರಿಗೆ ಪುಷ್ಪಗುಚ್ಛ ನೀಡಿದರು. ದಯಾ ಸಾಗರ್ ಚೌಟ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಸಾಲ್ಯಾನ್ ವಂದಿಸಿದರು.

ಬಿ.ಎಸ್ ಕುರ್ಕಾಲ್ ಗೀತೆರಚನೆಯ ಹಾಡುಗಳಿಗೆ ಶ್ರೀಕಾಂತ್ ಸೂಡ ಸಂಗೀತ ನೀಡಿದ್ದು, ಸುರೇಶ್ ಸಾವಂ ತ್ ಅವರ ರಂಗಸಜ್ಜಿಕೆ, ಮಂಜುನಾಥ್ ಶೆಟ್ಟಿಗಾರ್ ಅವರ ವರ್ಣಾಲಂಕರಣೆ ನಾಟಕದಲ್ಲಿ ಹಿರಿಯ ರಂಗನಟ ಭವಾನಿ ಶಂಕರ್ ಶೆಟ್ಟಿ ಪ್ರಧಾನ ಭೂಮಿಕೆ ನಿಭಾಯಿಸಿದ್ದು, ಅರವಿಂದ ಶೆಟ್ಟಿ ಕೊಜಕೊಳಿ, ಶುಭಾಂಗಿ ಶೆಟ್ಟಿ, ಪ್ರಭಾಕರ ಶೆಟ್ಟಿ, ಕು| ದೃಷ್ಯ ಶೆಟ್ಟಿ ಅಭಿನಯದಲ್ಲಿ ಪ್ರದರ್ಶಿಸಲ್ಪಟ್ಟ `ಕಾಲಾಯ ತಸ್ಮೈ ನಮಃ' ತುಳು ನಾಟಕ ಜನಮೆಚ್ಚುಗೆ ಪಾತ್ರವಾಯಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here