Friday 26th, April 2024
canara news

ತಾಳ್ಮೆ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ : ಈದ್ ಸ್ನೇಹ ಸಮ್ಮಿಳನದಲ್ಲಿ ಸಚಿವ ಖಾದರ್

Published On : 16 Sep 2016   |  Reported By : Rons Bantwal


ಉಳ್ಳಾಲ: ಕೋಮು ಭಾವನೆಯಯನ್ನು ಸೃಷ್ಟಿಸುವುದು ಸಂಸ್ಕøತಿಯಲ್ಲ. ನಮ್ಮದು ಮಣ್ಣಿನ ಸಂಸ್ಕøತಿಯಾಗಿದೆ. ನ್ಯಾಯ ಅನ್ಯಾಯದ ವಿಚಾರದಲ್ಲಿ ಗಲಾಟೆ ಆಗಿದೆಯೇ ಹೊರತು ಧಾರ್ಮಿಕ ವಿಚಾರದಲ್ಲಿ ಆದದ್ದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯುಟಿಖದರ್ ಹೇಳಿದರು. ಅವರು ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ಆಶ್ರಯದಲ್ಲಿ ಗುರುವಾರ ದರ್ಗಾ ವಠಾರದಲ್ಲಿ ನಡೆದ ಈದ್ ಸ್ನೇಹಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ತಾಳ್ಮೆಯ ಕೊರತೆ ಇದೆ. ತಾಳ್ಮೆ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ. ತಾಳ್ಮೆಯ ಕೊರತೆಯಿಂದ ಉಳ್ಳಾಲದಲ್ಲಿ ಆಗಾಗ ಶಾಂತಿಗೆ ಧಕ್ಕೆ ಬರಲು ಕಾರಣ. ತಾಳ್ಮೆ ಇದ್ದರೆ ಅಂತಹ ಮನಸ್ಥಿತಿ ಆಗುವುದಿಲ್ಲ ಎಂದರು.

ಸಯ್ಯಿದ್ ಮದನಿ ಅರಬಿಕ್ ಕಾಲೇಜು ಮುದರ್ರಿಸರಾದ ಹಾಜಿ ಅಹ್ಮದ್ ಬಾವ ಮುಸ್ಲಿಯಾರ್ ದುಆಗೈದರು.

ಉಳ್ಳಾಲ ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಉಳ್ಳಾಲ್ ಮಾತನಾಡಿ ಸಣ್ಣಪುಟ್ಟ ವಿಚಾರಗಳಿಗೆ ಉಳ್ಳಾಲದಲ್ಲಿ ಸಮಾಜದಿಂದ ಹೊರಗುಳಿದವರ ನಡುವೆ ಮಾತು ಸಂಘರ್ಷ ನಡೆದರೆ ಗಲಾಟೆಗೆ ಕಾರಣ ಸಾಕಾಗುತದೆ ಅಂತಹ ಕಲಂಕವಾತವರಣದಿಂದ ಉಳ್ಳಾಲ ಮುಕ್ತವಾಗಬೇಕೆಂದು ನಮ್ಮ ಬಯಕೆ, ಜಾತಿ ಧರ್ಮ ಎಲ್ಲವನ್ನು ಬಿಟ್ಟು ನಾವು ಒಂದಾಗಿ ಶಾಂತಿ ನೆಲೆಸುವ ಕೆಲಸವನ್ನು ನಾವು ಒಟ್ಟಾಗಿ ನಿರ್ಮಾಣ ಮಾಡಬೇಕು ಎಂದರು.

ಮಾಜಿ ಶಾಸಕ ಜಯರಾಮಶಟ್ಟಿ ಮಾತನಾಡಿ, ಉಳ್ಳಾಲ ಈಗ ದೇಶದಲ್ಲಿ ಹೆಸರುಪಡೆದಿದೆ. ಕಡಲುಕೊರೆತ, ರಾಣಿಅಬ್ಬಕ್ಕ, ಉಳ್ಳಾಲ ದರ್ಗಾ ಮುಂತಾದ ಹೆಸರುಗಳಿಂದ ಪ್ರಸಿದ್ಧಿ ಪಡೆದಿದೆ. ಉಳ್ಳಾಲ ದರ್ಗಾವನ್ನು ದಕ್ಷಿಣ ಭಾರತದ ಅಜ್ಮೀರ್ ಎಂದು ಕರೆಯುತ್ತಾರೆ. ಇಲ್ಲಿ ನಾವು ಒಟ್ಟಾಗಿ ಜೀವಿಸುವ ಕಾರ್ಯ ಮಾಡಬೇಕಾಗಿದೆ.

ನಮಗೆ ನಾವಿರುಷ್ಟು ಕಾಲ ಶಾಂತಿ, ಸೌಹಾರ್ದತೆ ಬೇಕು. ಎಲ್ಲಾದರೂ ಒಂದು ಘಟನೆ ನಡೆದರೆ ಅದಕ್ಕೆ ಪ್ರತೀಕಾರ ತೀರಿಸುವ ಕೆಲಸ ನಮ್ಮದಾಗದಿರಲಿ ಎಂದರು.

ತೊಕ್ಕೊಟ್ಟು ನಿತ್ಯಾದರ್ ಚರ್ಚ್‍ನ ಧರ್ಮಗುರು ಫಾದರ್ ಎಲಿಯಸ್ ಡಿಸೋಜ ಮಾತನಾಡಿ, ಉಳ್ಳಾಲವನ್ನು ಗಲಭೆ ಮುಕ್ತ ಪ್ರದೇಶವನ್ನಾಗಿ ಮಾಡಬೇಕೆಂಬ ಗುರಿ ನಮ್ಮೆಲ್ಲರದ್ದು.ಕೋಮು ಸಾಮರಸ್ಯಕ್ಕೆ ಎಲ್ಲರ ಬಲ ಸಿಗಬೇಕು. ಯಾರೋ ಏನೋ ಮಾಡಿದ್ದಾರೆ ಎಂಬ ಗಾಳಿ ಮಾತಿಗೆ ಕಿವಿಗೊಟ್ಟು ಅದಕ್ಕೆ ಪ್ರತೀಕಾರ ತೀರಿಸುವ ಕೆಲಸ ಬೇಡ ಎಂದರು.

ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಉಳ್ಳಾಲ ಕೋಮು ಸೂಕ್ಷ್ಮ ಪ್ರದೇಶದ ಪಟ್ಟಿಯಲ್ಲಿದೆ. ಈ ಹೆಸರಿನ ಪಟ್ಟಿಯಿಂದ ಉಳ್ಳಾಲವನ್ನು ಅಳಿಸಿಹಾಕಬೇಕು. ವಿವಾದ ಬೇಡ. ನೀರಿನ ಸಮಸ್ಯೆ ಎದುರಾದಾಗ ಉಳ್ಳಾಲ ದರ್ಗಾ ನೀರಿನ ಸರಬರಾಜು ಮಾಡುತ್ತದೆ. ಈ ವೇಳೆ ಜಾತಿ, ಧರ್ಮ ನೋಡುವುದಿಲ್ಲ. ಎಲ್ಲರೂ ಬದುಕಬೇಕು ಎಂಬ ಗುರಿ ನಮ್ಮದು, ದಿಕ್ಕು ತಪ್ಪಿ ಹೋಗುವ ಯುವಕರಿಗೆ ಸರಿಯಾದ ದಿಕ್ಕು ತೋರಿಸುವ ಕೆಲಸ ನಾವು ಮಾಡಬೇಕು ಎಂದರು.

ಸಚಿವರಾದ ಯು.ಟಿ ಖಾದರ್, ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಉಳ್ಳಾಲ ನಗರಸಭೆ ಅಧ್ಯಕ್ಷ ಕುಂಞಮೋನು, ಮುಖ್ಯಾಧಿಕಾರಿ ರೇಖಾ ಶೆಟ್ಟಿ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಮ್.ಆರ್ ರಶೀದ್ ಹಾಜಿ, ಉಳ್ಳಾಲ ಪೆÇೀಲೀಸ್ ಠಾಣಾಧಿಕಾರಿ ಶಿವಪ್ರಕಾಶ್, ನರಸಿಂಹ ದೇವಸ್ಥಾನ ಅಧ್ಯಕ್ಷ ಯು, ಶ್ರೀಕರ ಕಿಣಿ, ನಿತ್ಯಾಧರ್ ಚರ್ಚ್ ಧರ್ಮಗುರು ಪಾ.ಎಲ್ಯಾಸ್ ಡಿಸೋಜ, ಮಾಜಿ ಶಾಸಕ ಕೆ. ಜಯರಾಮ್ ಶೆಟ್ಟಿ ಕೊಲ್ಯ ಬಿಲ್ಲವ ಸೇವಾ ಸಮಾಜದ ವೇಣುಗೋಪಾಲ, ಜಿ.ಪಂ. ಸದಸ್ಯೆ ಧನಲಕ್ಷ್ಮೀ, ಮಳಯಾಲ ಚಾಮುಂಡೇಶ್ವರಿ ದೇವಸ್ಥಾನ ಆಡಳಿತ ಮುಕ್ತೇಶರ ಎಚ್. ಶ್ರೀದರ, ಬಾಳಪ್ಪ ಪೂಜಾರಿ, ಸೋಮೇಶ್ವರ ಸೋಮನಾಥ ದೇವಸ್ಥಾನ ಪ್ರತಿನಿಧಿ ರಮಾನಥ ಬಂಗೇರ, ಪುದಿಯಂಗಡಿ ಕ್ಷೇತ್ರ ಒಂಬತ್ತುಕೆರೆ ಪ್ರತಿನಿಧಿ ಹರೀಶ್ ಕುಮಾರ್, ಅಕ್ಕರೆಕರೆ ಮಸೀದಿ ಅಧ್ಯಕ್ಷ ಹುಸೈನ್, ಪೆÇಲದವರ ಯಾನೆಗಟ್ಟಿಯವರ ಅಧ್ಯಕ್ಷ ವಿಶ್ವನಾಥಗಟ್ಟಿ ವಗ್ಗ, ತೊಕ್ಕೊಟು ಶಿವಾಜಿ ಪ್ರೆಂಡ್ಸ್ ಸರ್ಕಲ್ ಮುಖಂಡರಾದ ಮಾದವ ಗಟ್ಟಿ, ರೋಹನ್ ತೊಕ್ಕೋಟು ರವಿ ಭಟ್ನಗರ, ತೊಕ್ಕೋಟು ಸಾರ್ವಜನಿಕ ಗಣೇಸೋತ್ಸವ ಸೇವಾ ಸಮಿತಿ ಮುಖಂಡ ಶರತ್ ಕುಮಾರ್ ತೊಕ್ಕೋಟು, ಕೊಲ್ಯ ಮಠ ಅಧ್ಯಕ್ಷರಾದ ಮದ್‍ಸೂದನ್ ಐ.ರ್, ವಾಸುಕಿ ಸೇವಾ ಸಂಘದ ಅಧ್ಯಕ್ಷರಾದ ಹರೀಶ್ ಶೆಟ್ಟಿ, ತೊಕ್ಕೊಟು ವಾಸುಕಿ ಸೇವಾ ಸಂಘ ಮುಖಂಡ ಅಜಿತ್ ಕುಮಾರ್ ಉಳ್ಳಾಲ್, ತೊಕ್ಕೋಟು ಕೊರಗಜ್ಜಸೇವಾಸಮಿತಿ ಮುಖಂಡ ತಾರಾನಾಥ್ ಯು. ಟಿ.ಸಿ ರೋಡ್, ಕೊರಗಜ್ಜ ಸೇವಾಸಮಿತಿ ಮುಖಂಡ ಸುದೇಶ್ ಟಿ.ಸಿರೋಡ್, ಉಲಿಯ ಉಲಾಲ್ತಿ ಧರ್ಮ ಅರಸದ ಕ್ಷೇತ್ರ ಮುಖಂಡ ಯು.ಲಕ್ಷಣ್, ಆನಂದ ಉಳಿಯ, ರಾಜೇಂದ್ರ ಬಂಡಸಾಲೆ, ಯು.ಎಮ್ ಜೈನುದ್ದೀನ್, ಅಬ್ಬಕ್ಕನಗರ ರಾಹುಗುಳಿಗ ಬನದ ಅಧ್ಯಕ್ಷ ಯು.ಲಕ್ಷಣ್, ಮಾಜಿ ಪುರಸಭಾ ಅಧ್ಯಕ್ಷ ಯು.ಎ ಇಸ್ಮಾಯೀಲ್, ನಗರಸಭೆ ಸದಸ್ಯ ಮುಸ್ತಫ ಅಬ್ದುಲ್ಲ, ಸುಂದರ ಉಳಿಯ, ಮುಹಮ್ಮದ್ ಮುಕ್ಕಚ್ಚೇರಿ, ಹನೀಫ್, ಪೆÇಡಿಮೋನು, ಜೈವೀರ ಮಾರುತಿ ವ್ಯಾಯಾಮ ಶಾಲೆ ಭಟ್ನಗರ ಕೆರಾಮಚಂದ್ರ ತೊಕ್ಕೋಟು, ಕೋಟೆಪುರ ಮಸೀದಿ ಉಪಾಧ್ಯಕ್ಷ ಅನ್ವರ್, ಕೋಡಿ ಮಸೀದಿ ಕಾರ್ಯದರ್ಶಿ ಯು.ಅಹ್ಮದ್ ಬಾವ, ಉಳ್ಳಾಲ ಅಬ್ಬಕ್ಕ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್‍ಸಾಮಾಜಿಕ ಮುಖಂಡರಾದ ಬಾಬು ಬಂಗೇರ, ರವೀಂದ್ರ ಶೆಟ್ಟಿ ಉಳಿದೊಟ್ಟು, ವಿಶ್ವನಾಥ ವಗ್ಗ, ಯು. ಕೃಷ್ಟ ಜಿ.ಕೆ, ಕೆ. ಕೆ ಬುಜಂಗ ಮಾಸ್ತಿಕಟ್ಟೆ, ಭಗವಾನ್ಧಾಸ್ ತೊಕ್ಕೋಟು, ಕೆ ಸೀತಾರಾಮ ಬಂಗೇರ, ಮುನೀರ್ ಬಾವ, ರಾಮ ಪೂಜಾರಿ ಕೊಲ್ಯ, ಪಿ.ಕೆ ರಾಜು ಜೆಟ್ಟಿಯಾರ್ ತೊಕ್ಕೋಟು, ಅಲ್ಪರ್ಡ್ ಡಿಸೋಜ ತೊಕ್ಕೋಟು ರಾಜೀವ್ ಮೆಂಡನ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಪ್ರಮೋದ್, ಕೆ.ಎ ಮುಹಮ್ಮದ್ ಮುನೀರ್, ರೋಹಿತ್ ಉಳ್ಳಾಲ್, ಕೊಲ್ಯ ನಾಗರಬೃಹ್ಮ ಅನ್ನಪೂರ್ಣೇಶ್ವರಿ ಕ್ಶೇತ್ರ ಉಪಾಧ್ಯಕ್ಷ ರಾಮಚಂದ್ರ ಪಿಲಾರ್, ಪೆÇಸಕುರಲ್ ವಾಹಿನಿ ಮುಖ್ಯಸ್ಥ ವಿದ್ಯಾದರ್ ಶೆಟ್ಟಿ, ಸತೀಶ್ ಉಳ್ಳಾಲ್, ಶ್ರೀನಾಗಕನ್ನಿಕ ರಕ್ತೇಶ್ವರಿ ದೇವಸ್ಥಾನ ಮುಖಂಡರು, ಮುದ್ದು ಕೃಷ್ಣ ಸಮಿತಿ ತೊಕ್ಕೋಟು ಮುಖ್ಯಸ್ಥರು, ಮೆಲ್ವಿನ್ ಡಿಸೋಜ ಕಲ್ಲಾಪು, ರಿಚರ್ಡ್ ವೇಗಸ್, ಬೊಟ್ಟು ಮಸೀದಿ ಅಧ್ಯಕ್ಷ ಹಸೈನಾರ್ ಕಾರ್ಯದರ್ಶಿ ಉಮರ್ ಫಾರೂಕ್ ಬೊಟ್ಟು, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್, ದರ್ಗಾ ಉಪಾಧ್ಯಕ್ಷರಾದ ಯು.ಕೆಮೋನು, ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ ಹಾಜಿ, ಕೋಶಾಧಿಕಾರಿ ಯು.ಕೆ ಇಲ್ಯಾಸ್, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಹಾಜಿ ಎ.ಕೆ ಮೊಹಿಯದ್ದೀನ್ ಕೋಟೆಪುರ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ ಹಾಜಿ ಧನ್ಯವಾದಗೈದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here