Friday 26th, April 2024
canara news

ಹಸಿರು ಪೀಠದ ತೀರ್ಪು ಜಿಲ್ಲೆಯ ಪರ ಬರಲು ಸಾಮೂಹಿಕ ಪ್ರಾರ್ಥನೆ

Published On : 16 Sep 2016   |  Reported By : Canaranews Network   |  Pic On: Photo credit : The Hindu


ಮಂಗಳೂರು: ಎತ್ತಿನಹೊಳೆ ಯೋಜನೆಯ ಕುರಿತಂತೆ ದಿಲ್ಲಿಯ ರಾಷ್ಟ್ರೀಯ ಹಸಿರು ಪೀಠದಿಂದ ಸೆ. 21ರಂದು ದ.ಕ. ಜಿಲ್ಲೆಯ ಪರವಾಗಿ ತೀರ್ಪು ಬರುವಂತೆ ಕೋರಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ವತಿಯಿಂದ ನಗರದ ದೇವಸ್ಥಾನಗಳು, ಚರ್ಚ್ ಹಾಗೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.

ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆಯ ಬಳಿಕ ಹೊರಟ ಹೋರಾಟಗಾರರ ಸಂಯುಕ್ತ ಸಮಿತಿಯ ತಂಡ ಕದ್ರಿಯ ಶ್ರೀ ಮಂಜುನಾಥ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿತು. ದೇವಸ್ಥಾನದ ಅರ್ಚಕರಾದ ಶ್ರೀರಾಮ್ ಭಟ್ ಹಾಗೂ ಪ್ರಭಾಕರ ಅಡಿಗ ವಿಶೇಷ ಪೂಜೆ ನೆರವೇರಿಸಿದರು. ನೇತ್ರಾವತಿಗೆ ಸಮಸ್ಯೆಯಾಗುವ ಎತ್ತಿನಹೊಳೆ ಯೋಜನೆ ಸ್ಥಗಿತಗೊಳ್ಳುವಂಥ ತೀರ್ಪು ನ್ಯಾಯಾಲಯದಿಂದ ಹೊರಬರಲಿ ಎಂದು ಅವರು ಪ್ರಾರ್ಥಿಸಿದರು.

ನೇತ್ರಾವತಿಯ ರಕ್ಷಣೆಗಾಗಿ
ಈ ಸಂದರ್ಭ ಉಪಸ್ಥಿತರಿದ್ದ ಸಂಸದ ನಳಿನ್ ಮಾತನಾಡಿ, ಜಿಲ್ಲೆಯ ಜನರು ತಮ್ಮ ಜೀವ ನದಿಯಾಗಿ ರುವ ನೇತ್ರಾವತಿಯ ರಕ್ಷಣೆಧಿಗಾಗಿ ಶಾಂತಿಯುತ ಪ್ರತಿಭಟನೆಗಳೊಂದಿಗೆ ಕಾನೂನು ಹೋರಾಟವನ್ನೂ ನಡೆಸುತ್ತಿದ್ದಾರೆ. ಈ ಹೋರಾಟಧಿಗಳಲ್ಲಿ ಜಿಲ್ಲೆಯ ಜನರಿಗೆ ಜಯ ದೊರಕಬೇಕಾಗಿ ಎಲ್ಲೆಡೆ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಲಾಗುತ್ತಿದೆ ಎಂದರು.

ಸಂಯುಕ್ತ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಅವರು ಮಾತನಾಡಿ, ಸೆ. 21ರಂದು ದಿಲ್ಲಿಯ ಹಸಿರು ಪೀಠದ ತೀರ್ಪು ಜಿಲ್ಲೆಯ ಪರವಾಗಿರಲಿದೆ ಎಂಬ ನಿರೀಕ್ಷೆಯಿದೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಎಲ್ಲ ಧರ್ಮೀಯರು ಒಗ್ಗೂಡಿ ರಾಜಕೀಯೇತರವಾಗಿ ಹೋರಾಟ ನಡೆಸಲಾಗುತ್ತಿದೆ ಎಂದರು.

ಬಳಿಕ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ಪದ್ಮನಾಭ ಐತಾಳ, ಶ್ರೀನಿವಾಸ್ ಐತಾಳ ಅವರು ವಿಶೇಷ ಪೂಜೆ ನೆರವೇರಿಸಿ, ಜಿಲ್ಲೆಯ ಪರವಾಗಿ ನ್ಯಾಯ ದೊರೆಯಲಿ ಎಂದು ಪ್ರಾರ್ಥಿಸಿದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಅಜಿತ್ ಕುಮಾರ್ ರೈ ಮಾಲಾಡಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ರೂಪಾ ಡಿ. ಬಂಗೇರಾ, ಕೆ.ಎನ್. ಸೋಮಶೇಖರ್, ಶಾಂತ ವೀರಪ್ಪ ಗೌಡ, ಪ್ರೇಮಾನಂದ ಶೆಟ್ಟಿ, ಡೆನ್ನಿಸ್ ಡಿ'ಸಿಲ್ವ, ರಾಧಾಕೃಷ್ಣ, ಹರಿಕೃಷ್ಣ ಬಂಟ್ವಾಳ, ಪುರುಷೋತ್ತಮ ಚಿತ್ರಾಪುರ, ದಿನಕರ ಶೆಟ್ಟಿ, ಶಶಿರಾಜ್ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಎಂ.ಜಿ. ಹೆಗಡೆ, ಸುರೇಶ್ ಶೆಟ್ಟಿ, ಅಶ್ವಿತಾ ಕೊಟ್ಟಾರಿ, ಧನುಷ್ ಶೆಟ್ಟಿ, ಪ್ರಜ್ವಲ್ ಪೂಜಾರಿ, ತುಷಾರ್ ಕದ್ರಿ, ಪ್ರತೀಕ್ ಯು. ಪೂಜಾರಿ, ರವೀಂದ್ರ ಶೆಟ್ಟಿ, ರಹೀಂ ಉಚ್ಚಿಲ, ಯೋಗೀಶ್ ಶೆಟ್ಟಿ, ವಿಘ್ನೇಶ್, ವಿಶಾಲ್ ಸಾಲ್ಯಾನ್, ಶ್ರೀಜಿತ್ ಕದ್ರಿ, ಆನಂದ ಶೆಟ್ಟಿ, ಸಿರಾಜ್ ಅಡ್ಕಕರೆ, ನಾರಾಯಣ ಬಂಗೇರ, ಅನೀಶ್ ರಾವ್, ಪ್ರಶಾಂತ್ ಕಡಬ, ನದೀಂ, ರಕ್ಷಿತ್ ಕುಡುಪು, ಸುರೇಶ್ ಬಾಬು, ಡೆನಿಸ್ ಡಿ'ಸೋಜಾ ಭಾಗವಹಿಸಿದ್ದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here