Friday 26th, April 2024
canara news

ಕ್ರಿಯಾಶೀಲ ಪತ್ರಕರ್ತ ಸಾಹಿತಿ ಶ್ರೀನಿವಾಸ ಜೋಕಟ್ಟೆ ಕೃತಿ ಬಿಡುಗಡೆ

Published On : 18 Sep 2016   |  Reported By : Rons Bantwal


ಬರವಣಿಗೆಯ ಚಾಕಚಕ್ಯತೆ ಜೋಕಟ್ಟೆಯಲ್ಲಿದೆ : ಮೋಹನ್ ಮಾರ್ನಾಡ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.17: ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ರಾಷ್ಟ್ರಕ್ಕೆ ಮಾದರಿ. ಇದು ಹೊಸತಲೆಮಾರಿನ ಲೇಖಕರನ್ನು ಸೃಷ್ಠಿಸಿ ಪೆÇ್ರೀತ್ಸಹಿಸಿ ಸಾಹಿತಿಕವಾಗಿ ಬೆಳೆಸುವ ಕನಸು ಪೂರ್ಣ ಗೊಳಿಸುತ್ತಿರುವುದು ಶ್ಲಾಘನೀಯ. ಮುಂಬಯಿಗರಿಗೆನೇ ಮೊದಲು ಈ ವಿಭಾಗ ಮರೀಚಿಗೆಯಾಗಿತ್ತು. ಆದರೆ ಡಾ| ಜಿ.ಎನ್.ಉಪಾಧ್ಯರ ಮುಂದಾಳುತ್ವದಲ್ಲಿ ಇದು ಕನ್ನಡಿಗರ ನಿತ್ಯ ಉಸಿರಾಗಿದೆ. ಅವರ ಪೆÇ್ರೀತ್ಸ್ಸ್ಸಾಹ ಪ್ರಜ್ಞೆ ಕರ್ತವ್ಯವಾಗಿರುವ ಕಾರಣ ಇಂತಹ ಸಾಧನೆಗೆ ಅಡಿಪಾಯವಾಗಿದೆ. ನನಗೆ ಓದುವ ತುಡಿತ ಜೋಕಟ್ಟೆಗೆ ಬರೆಯುವ ತುಡಿತ ಆದುದರಿಂದ ನಮ್ಮಿಬ್ಬರ ಸ್ನೇಹಸಂಬಂಧ ಬೆಳೆಯಿತು.

ನನ್ನಲ್ಲಿ ಓದುವ ಚಳಿ ಹಿಡಿಸಿದವೇ ಶ್ರೀನಿವಾಸ ಜೋಕಟ್ಟೆ. ಸಮಾಜದ ನೋಟಗಳನ್ನು ಓದುಗರರಿಗೆ ತಲುಪಿಸಿದ ಅವರಲ್ಲಿ ಬರವಣಿಗೆಯ ಚಾಕಚಕ್ಯತೆಯಿದೆ. ಅವರು ಮುಂಬಯಿ ಕನ್ನಡಿಗರ ವಾಚನಾಲಯಯಿದ್ದಂತೆ. ಅವರಂತಹ ಸಾಹಿತಿಗಳೇ ಸಾರ್ಥಕರು. ಇಂತಹ ಸಾಹಿತಿಗಳಿಂದ ಸಮಾಜ ಕಟ್ಟಬಹುದು ಎಂದು ಮಹಾನಗರದಲ್ಲಿನ ಪ್ರಸಿದ್ಧ ರಂಗನಟ ಮೋಹನ್ ಮಾರ್ನಾಡ್ ನುಡಿದರು.

ಸಾಂತಾಕ್ರೂಜ್ ಪೂರ್ವದ ಕಲೀನಾದಲ್ಲಿನ ವಿದ್ಯಾನಗರಿಯ ಕನ್ನಡ ವಿಭಾಗ ಮುಂಬಯಿ ವಿವಿಯ ಜೆ.ಪಿ.ನಾಯಕ್ ಭವನದಲ್ಲಿ ಆಯೋಜಿಸಿದ್ದ ಡಾ| ಜಿ.ಎನ್ ಉಪಾಧ್ಯ ರಚಿಸಿದ ಕನ್ನಡ ವಿಭಾಗ ಮುಂಬಯಿ ವಿವಿಯ ಪ್ರಕಾಶಿತ 54ನೇ ಕೃತಿ `ಕ್ರಿಯಾಶೀಲ ಪತ್ರಕರ್ತ ಸಾಹಿತಿ ಶ್ರೀನಿವಾಸ ಜೋಕಟ್ಟೆ' ಕೃತಿ ಬಿಡುಗಡೆ ಗೊಳಿಸಿ ಮಾರ್ನಾಡ್ ಮಾತನಾಡಿದರು.

ಕೃತಿಕರ್ತ ಹಾಗೂ ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಎನ್‍ಕೌಂಟರ್ ಪ್ರಸಿದ್ಧಿಯ ಮುಂಬಯಿ ಪೆÇಲೀಸ್ ಅಧಿಕಾರಿ ದಯಾ ನಾಯಕ್ ಉಪಸ್ಥಿತ ರಿದ್ದು, ಉದಯವಾಣಿ ಹಿರಿಯ ಸಂಪಾದಕ ಡಾ| ದಿನೇಶ್ ಶೆಟ್ಟಿ ರೆಂಜಾಳ ಕೃತಿ ಪರಿಚಯಿಸಿದರು.

ದಯಾ ನಾಯಕ್ ಮಾತನಾಡಿ ಪೋಲಿಸ್ ಇಲಾಖೆಯ ಅದೂ ಕ್ರೈಂ ಬ್ರಾಂಚ್‍ನಲ್ಲಿ ರಾಷ್ಟ್ರಪ್ರೇಮಿಗಳಿಗೆ ದಯೆ ಇದ್ದೇ ಇದೆ. ಆದರೆ ಭಯೋತ್ಪದನಾ ಕಾರರಿಗೆ ದಯೆ ತೋರಿಸುವ ಅಗತ್ಯ ನನಗೆ ಕಾಣುತ್ತಿಲ್ಲ. ನಾನೊಬ್ಬ ರಾಷ್ಟ್ರಪ್ರೇಮಿ ಆಗಿದ್ದು ಭಾರತ ದೇಶದ ಹಿತವೇ ನನ್ನ ಜೀವ ಮತ್ತು ಜೀವನವಾಗಿದೆ. ದಯಾ ನಾಯಕ್ ಅಭಿಮಾನದ ಹೆಸರಾಗಿಸಿದ್ದೇನೆ. ಶ್ರೀನಿವಾಸ ಜೋಕಟ್ಟೆಯೇ ನನ್ನನ್ನು ಕನ್ನಡ ರಂಗಕ್ಕೆ ಪರಿಚಯಿಸಿದ್ದ ಪತ್ರಕರ್ತ. ಮಹಾರಾಷ್ಟ್ರ  ಪೋಲಿಸ್ನಲ್ಲಿ ಕನ್ನಡಿಗ ಸಾಧಕನೊಬ್ಬ ಇದ್ದನೆ ಎಂದು ಪರಿಚಯಿಸಿದ್ದೇ ಜೋಕಟ್ಟೆ. ಅವರೋರ್ವಸರಳ ಸ್ವಭಾವದ ಸಜ್ಜನವ್ಯಕ್ತಿತ್ವದ ಸಾಧಕರಾಗಿದ್ದಾರೆ. ಇನ್ನೂ 13 ವರ್ಷ ಈ ಇಲಾಖೆಯಲ್ಲಿದ್ದೇನೆ. ಯಾವ ಕಾರಣಕ್ಕೂ ಈ  ಪೋಲಿಸ್‍ಗಿರಿ ತೊರೆಯಲಾರೆನು. ಅವರವರ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕಾಯಕ ನಿರ್ವಹಿಸಿದರೆ ಸಾಧನೆ ಸಾಧ್ಯವಾಗುವುದು. ಕರ್ನಾಟಕದ ಸಾಧಕರಿಗೆ ಮಹಾರಾಷ್ಟ್ರದಲ್ಲಿ ಬಹಳ ಕಠಿಣವಿದೆ. ಆದರೂ ನಮ್ಮ ಆತ್ಮಸ್ಥೈರ್ಯ ನಮ್ಮ ಶ್ರೇಯಸ್ಸಿಗೆ ಶಕ್ತಿತುಂಬುತ್ತಿದೆ. ಮುಂದಿನ ದಿನಗಳಲ್ಲಿ ನಾನೂ ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಸೇವೆ ಸಲ್ಲಿಸಲು ಈ ಕಾರ್ಯಕ್ರಮ ಪ್ರೇರೆಪಿಸಿದ್ದು, ನಾನು ಒಂದಲ್ಲ ನೂರು ಶಾಲೆಗಳನ್ನು ತೆರೆದು ಶಿಕ್ಷಣಪ್ರೇಮ ಮೆರೆಯುವೆನು. ಆ ಮೂಲಕ ಎನ್‍ಕೌಂಟರ್ ಸ್ಪೆಷಲಿಸ್ಟ್ ಅಲ್ಲ ಎಜ್ಯುಕೇಶನ್ ಸ್ಪೆಷಲಿಸ್ಟ್ ಆಗುವ ಪ್ರಯತ್ನ ಮಾಡ್ತೇನೆ ಎಂದರು.

ಜೋಕಟ್ಟೆ ಓರ್ವ ಪತ್ತೆಧಾರಿ ಲೇಖಕರಾಗಿದ್ದಾರೆ. ಅವರ ಅದ್ಭುತವಾದ ಬದುಕು ಈ ಕೃತಿಯಲ್ಲಿ ಯಶೋಗಥೆÉ ಆಗಿ ಪ್ರಕಾಶಿತವಾಗಿದೆ. ಜೋಕಟ್ಟೆ ಅವರ ಸಮಗ್ರ ಸಾಹಿತ್ಯದ ಅವಲೋಕನ ಕೃತಿ ಇದಾಗಿದ್ದು, ಸಮಗ್ರ ಬರವಣಿಗೆಯ ಕೃತಿ ಇಲ್ಲಿ ಬಿಂಬಿತವಾಗಿದೆ. ಡಾ| ಉಪಾಧ್ಯರು ಈ ಕೃತಿಯನ್ನು ಮಲ್ಲಿಗೆಯ ಹಾರದಂತೆ ಪೆÇೀಣಿಸಿರುವರು ಎಂದು ಕೃತಿ ಪರಿಚಯಿಸಿ ದಿನೇಶ್ ರೆಂಜಾಳ ನುಡಿದರು.

ಸಾಹಿತ್ಯದ ಉದ್ಯಮ ಇದೆಯೇ ಗೊತ್ತಿಲ್ಲ ಆದರೆ ಸಾಹಿತಿಕ ಸಾಧಕರನ್ನು ಗುರುತಿಸುವ ಜವಾಬ್ದಾರಿ ಸಮಾಜದ್ದಾಗಬೇಕು. ಒಳ್ಳೆಯ ಬರವಣಿಗೆ ರೂಢಿಸಿಕೊಳ್ಳುವ ಅಗತ್ಯ ಲೇಖಕರದ್ದಾದಾಗ ಹೊಸ ಸಾಹಿತ್ಯದ ರಚನೆ ಸಾಧ್ಯವಾಗುವುದು. ಸಾಹಿತಿಗಳು ರುಚಿಶುದ್ಧಿಯ ಅಭ್ಯಾಸವನ್ನಾಗಿಸುವ ಅಗತ್ಯವಿದ್ದು ಇದು ಹೊಸ ತಲೆ ಮಾರಿನ ಬರಹಗಾರರಿಗೆ ಮಾದರಿ ಕಾರ್ಯಕ್ರಮ ಎಂದು ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿದರು.

ದಯಾ ನಾಯಕ್ ಅವರು ಶ್ರೀನಿವಾಸ ಜೋಕಟ್ಟೆ ಮತ್ತು ಜಯಲಕ್ಷಿ ್ಮೀ ಶ್ರೀನಿವಾಸ ಜೋಕಟ್ಟೆ ದಂಪತಿಯನ್ನು ಅಭಿನಂದಿಸಿದರು. ಅಂತೆಯೇ ಕನ್ನಡ ವಿಭಾಗ ಮುಂಬಯಿ ವಿವಿ ಪರವಾಗಿ ನಾಯಕ್ ಅವರಿಗೆ ಸ್ವರ್ಣ ಪದಕವನ್ನಿತ್ತು ಡಾ| ಉಪಾಧ್ಯ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಚಂದ್ರಶೇಖರ್ ಪಾಲೆತ್ತಾಡಿ, ರತ್ನಾಕರ ಆರ್.ಶೆಟ್ಟಿ, ಅಶೋಕ್ ಎಸ್.ಸುವರ್ಣ, ಶೇಖರ ಅಜೆಕಾರು, ಡಾ| ಎಸ್.ಕೆ.ಭವಾನಿ, ಎಂ.ಎಂ.ಕೋರಿ, ಡಾ| ವಿಶ್ವನಾಥ ಕಾರ್ನಾಡ್, ಡಾ| ಕೆ.ರಘುನಾಥ, ನ್ಯಾ| ವಸಂತ ಕಲಕೋಟಿ, ರವಿ ರಾ.ಅಂಚನ್, ಶಕುಂತಲಾ ಆರ್.ಪ್ರಭು, ಎಸ್.ಕೆ.ಸುಂದರ್, ಡಾ| ವ್ಯಾಸರಾವ್ ನಿಂಜೂರು, ಡಾ| ಸುನೀತಾ ಎಂ.ಶೆಟ್ಟಿ, ಹೇಮಾ ಅಮೀನ್, ಸುರೇಖಾ ದೇವಾಡಿಗ, ಸಾ.ದಯಾ, ಗೀತಾ ಆರ್.ಎಲ್ ಭಟ್, ಪೇತ್ರಿ ವಿಶ್ವನಾಥ ಶೆಟ್ಟಿ, ಜಿ.ಟಿ.ಆಚಾರ್ಯ, ಧನಂಜಯ ಮೂಡಬಿದ್ರೆ, ಮುಂಡ್ಕೂರು ಸುರೇಂದ್ರ ಸಾಲ್ಯಾನ್, ರಮೇಶ್ ಶೆಟ್ಟಿ ಪಯ್ಯಾರ್, ಜಯಕರ ಡಿ.ಪೂಜಾರಿ, ಮಧುಸೂದನ್ ರಾವ್, ರಮಾ ಉಡುಪ, ಡಾ| ದಾಕ್ಷಾಯಣಿ ಯಡಹಳ್ಳಿ, ರೇವಣ ಸಿದ್ಧ ಬಗಲಿ, ದುರ್ಗಪ್ಪ ಕೊಟೆಯವರ್ ಮತ್ತಿತರರು ಉಪಸ್ಥಿತರಿದ್ದರು.

ಸುಶೀಲಾ ಎಸ್.ದೇವಾಡಿಗ ಸ್ವಾಗತಗೀತೆಯನ್ನಾಡಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ಅಭಾರ ಮನ್ನಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here