Friday 26th, April 2024
canara news

ಬದಿಯಡ್ಕದ ಜಾಗತಿಕ ಮಟ್ಟದ ವಿಶ್ವ ತುಳುವೆರೆ ಆಯನೊ ಮುಂಬಯಿಯಲ್ಲಿ ಸಭೆ

Published On : 25 Sep 2016   |  Reported By : Rons Bantwal


ತುಳು ಬಹುಜನಾಂಗೀಯ ಮಾತುಭಾಷೆಯಾಗಿದೆ: ಸರ್ವೋತ್ತಮ ಶೆಟ್ಟಿ ಅಬುಧಾಬಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.25: ಡಿಸೆಂಬರ್ 9 ರಿಂದ 13ರ ವರೆಗೆ ಬದಿಯಡ್ಕದಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ವಿಶ್ವ ತುಳುವೆರೆ ಆಯನೊದ ಆಥಿರ್sಕ ಸಮಿತಿ ಸಭೆಯು ಇಂದಿಲ್ಲಿ ರವಿವಾರ ಪೂರ್ವಾಹ್ನ ಸಯಾನ್ ಪೂರ್ವದ ಪೆನಿನ್ಸುಲಾ ಸೆಂಟ್ರಾಲ್‍ನ ಸಭಾಗೃಹದಲ್ಲಿ ವಿಶ್ವ ತುಳುವೆರೆ ಆಯನೊ ಸಮಿತಿ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುಧಾಬಿ ಅಧ್ಯಕ್ಷತೆಯಲ್ಲಿ ಜರುಗಿತು.

ಜಗತ್ತಿನಾದ್ಯಂತ ಗೋಚರವಿಲ್ಲದ ತುಳುವರು ಬಹಳಷ್ಟಿದ್ದಾರೆ. ಇವರನ್ನು ಒಗ್ಗೂಡಿಸುವುದು ಕಷ್ಟಕರವಾದರೂ ಅರಬ್ ರಾಷ್ಟ್ರದಾದ್ಯಂತದ ಸರ್ವ ತುಳು ಸಂಸ್ಥೆಗಳನ್ನು ಒಗ್ಗೂಡಿಸುವ ಪ್ರಯತ್ನ ನಾವು ಮಾಡುತ್ತೇವೆ. ಈ ಬಾರಿ ಜಾಗತಿಕವಾಗಿಯೇ ಸಮ್ಮೇಳನ ವೈಶಿಷ್ಟ ್ಯತೆ ಪಡೆಯಲಿದ್ದು ಆ ಮೂಲಕ ತುಳುವರ ಅಸ್ಮಿತೆ ಮತ್ತೆ ಜಗದ್ವಾ ್ಯಪಿಯಾಗಿ ಮೆರೆಯಲಿದೆ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಸರ್ವೋತ್ತಮ ಶೆಟ್ಟಿ ಕರೆಯಿತ್ತರು.

ಆಯನೊ ಸಮಿತಿ ಗೌರವ ಕಾರ್ಯದರ್ಶಿ ಡಾ| ರಾಜೇಶ್ ಆಳ್ವ ಬದಿಯಡ್ಕ ಪ್ರಸ್ತಾವಿಕ ನುಡಿಗಳನ್ನಾಡಿ ತುಳುವಿನ ವಿಸ್ತಾರವಾದ ವಿವರಣೆ ಯಾಕೆ ಮಾಡಬೇಕು..? ಅದರಲ್ಲಿ ಏನಾಗುತ್ತದೆ..? ಎನ್ನುತ್ತಾ ಜಾತಿಮತ, ಧರ್ಮದ ಸೌಹಾರ್ದತಾ ಉದ್ದೇಶ ಈ ಸಮ್ಮೇಳನದ್ದಾಗಿದೆ. ಆದುದರಿಂದ ಬಹುಜನಾಂಗೀಯ ಜನತೆಯ ಮಮತೆಯ ತುಳುಭಾಷೆ ಮೂಲಕ ಏಕತೆಯನ್ನು ಸಾಧಿಸಲು ಇದು ಸೂಕ್ತ ವೇದಿಕೆಯಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತ್‍ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್‍ಕುಮಾರ್ ಕಲ್ಕೂರಾ ಮಾತನಾಡಿ ತುಳುನಾಡ ಶಕ್ತಿಕೇಂದ್ರವೇ ಮುಂಬಯಿ ಆಗಿದೆ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸೇರಿದಂತೆ ಸರ್ವ ವ್ಯವಸ್ಥೆಗೆ ಭೌಗೋಳಿಕ ಕೇಂದ್ರ ಈ ಬೃಹನ್ಮುಂಬಯಿ ಆಗಿದೆ. ಮನೆಯೊಳಗೆ ಮಾತೃಭಾಷೆ ಮಾಯವಾದಂತೆ ಮತ್ತು ಸರ್ವ ಚಿಂತನೆಗಳ ಒಗ್ಗೂಡಿಸುವಿಕೆಯ ವ್ಯವಸ್ಥೆ ಈ ಜಾಗತಿಕ ಮಟ್ಟದ ವಿಶ್ವ ತುಳುವೆರೆ ಆಯನೊದ್ದಾಗಿದೆ. ಆದುದರಿಂದ ತುಳುವರಲ್ಲಿ ಮಾತವಲ್ಲ ಸಮಗ್ರ ತುಳುನಾಡ ಜನತೆಯ ವಿಶ್ವಾಸ ಭರಿಸುವ ವೈಶಿಷ್ಟ ್ಯತೆಯ ಸಮ್ಮೇಳನ ಇದಾಗಿಸೋಣ ಎಂದರು.

ಈ ಸಂದರ್ಭದಲ್ಲಿ ಜಯಕೃಷ್ಣ ಶೆಟ್ಟಿ, ರವಿ ಶೆಟ್ಟಿ ಕತಾರ್, ನಾರಾಯಣ ಶೆಟ್ಟಿ ನಂದಳಿಕೆ, ಸುರೇಶ್ ಶೆಟ್ಟಿ ಯೆಯ್ಯಾಡಿವೇದಿಕೆಯಲ್ಲಿ ಆಸೀನರಾಗಿದ್ದು ಸಂದರ್ಭೋಚಿತವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ ಸಮ್ಮೇಳನದ ಯಶಸ್ಸಿಗೆ ಶುಭಾರೈಸಿದರು.

ಸಭೆಯಲ್ಲಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಪಿ.ಡಿ ಶೆಟ್ಟಿ, ಜಿ.ಟಿ.ಆಚಾರ್ಯ, ವಿಶ್ವನಾಥ ಯು. ಮಾಡ, ಸರಳ ಬಿ.ಶೆಟ್ಟಿ, ಹಿರಿಯಡ್ಕ ಮೋಹನ್‍ದಾಸ್, ರವಿ ವಿ.ದೇವಾಡಿಗ, ತುಳಸೀದಾಸ್ ಅವಿೂನ್, ಉಷಾ ಹೆಗ್ಡೆ ಥಾಣೆ ಸಹನಿ ವಾಮನ ಶೆಟ್ಟಿ, ದಯಾಸಾಗರ್ ಚೌಟ ಮತ್ತಿತರರು ಹಾಜರಿದ್ದರು. ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಮತ್ತು ಆಯನೊ ಗೌರವಾಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಸ್ವಾಗತಿಸಿದರು. ಸುಮತಿ ಆರ್.ಶೆಟ್ಟಿ ಪ್ರಾರ್ಥನೆ ಹಾಡಿದರು. ನಿಟ್ಟೆ ಶಶಿಧರ್ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಸಭಾ ಕಲಾಪ ನಿರೂಪಿಸಿ ವಂದನಾರ್ಪಣೆಗೈದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here